ದತ್ತಾಂಶ ಪ್ರಸಾರಕ್ಕೆ ಉಪಗ್ರಹ ಉಡಾವಣೆ

ಶನಿವಾರ, ಏಪ್ರಿಲ್ 20, 2019
24 °C

ದತ್ತಾಂಶ ಪ್ರಸಾರಕ್ಕೆ ಉಪಗ್ರಹ ಉಡಾವಣೆ

Published:
Updated:

ಬೀಜಿಂಗ್‌: ದತ್ತಾಂಶ ಪ್ರಸಾರಕ್ಕೆ ಅನುಕೂಲವಾಗುವ ದ್ವಿತೀಯ ಪೀಳಿಗೆ ಉಪಗ್ರಹವನ್ನು ಚೀನಾ ಯಶಸ್ವಿಯಾಗಿ ಭಾನುವಾರ ರಾತ್ರಿ ಉಡಾವಣೆ ಮಾಡಿದೆ.

ಸಿಚೌನ್ವ ಪ್ರಾಂತ್ಯದ ಷಿಚಾಂಗ್‌ ಉಪಗ್ರಹ ಉಡಾವಣೆ ಕೇಂದ್ರದಿಂದ ’ಮಾರ್ಚ್‌–3ಬಿ’ ರಾಕೆಟ್‌ ಮೂಲಕ ‘ಟಿಯಾನ್‌ ಲಿಯಾನ್‌ ll-01' ಉಪಗ್ರಹವನ್ನು ಉಡಾವಣೆ ಮಾಡಲಾಯಿತು. 

ಪ್ರಸಾರ ಸೇವೆಗಳಿಗೂ ಈ ಉಪಗ್ರಹವನ್ನು ಬಳಸಲು ಉದ್ದೇಶಿಸಲಾಗಿದೆ. ಚೀನಾದ ಬಾಹ್ಯಾಕಾಶ ತಂತ್ರಜ್ಞಾನ ಅಕಾಡೆಮಿ ಈ ಉಪಗ್ರವನ್ನು ಅಭಿವೃದ್ಧಿಪಡಿಸಿದೆ. 2008ರಲ್ಲಿ ಚೀನಾ ಪ್ರಥಮ ದತ್ತಾಂಶ ಪ್ರಸಾರದ ಉಪಗ್ರಹ ’ಟಿಯಾನ್‌ ಲಿಯಾನ್‌ l–01’ ಉಡಾವಣೆ ಮಾಡಿತ್ತು.
 
 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !