ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ ನಿರೂಪಕನಿಂದ ಸುದ್ದಿವಾಚನ

7

ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ ನಿರೂಪಕನಿಂದ ಸುದ್ದಿವಾಚನ

Published:
Updated:
Deccan Herald

ಬೀಜಿಂಗ್‌: ಚೀನಾದಲ್ಲಿ ವಿಶ್ವದ ಮೊದಲ ಕೃತಕ ಬುದ್ಧಿಮತ್ತೆಯ (ಎಐ) ನಿರೂಪಕ ಜನ್ಮತಾಳಿದ್ದಾನೆ. ಇಲ್ಲಿನ ಝೇಜಿಯಾಂಗ್‌ನಲ್ಲಿ  ನಡೆಯು
ತ್ತಿರುವ ಐದನೇ ಅಂತರ್ಜಾಲ ಸಮಾವೇಶದಲ್ಲಿ ಸುದ್ದಿ ಓದುವ ಮೂಲಕ ಮಾಧ್ಯಮ ಜಗತ್ತಿಗೆ ಪದಾರ್ಪಣೆ ಮಾಡಿದ್ದಾನೆ. 

ಯೋಚಿಸಿ ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುವ ಈ ಯಂತ್ರ ಅಥವಾ ತಂತ್ರಾಂಶವು ಮನುಷ್ಯರಂತೆಯೇ ಕಾರ್ಯನಿರ್ವಹಿಸಲಿದೆ. ಪುರುಷ ನಿರೂಪಕನ ಚಹರೆ ಮತ್ತು ಧ್ವನಿಯನ್ನು ಹೊಂದಿರುವ ಈ ‘ಎಐ’ ಮನುಷ್ಯರಿಗೆ ತಕ್ಕ ಮುಖಭಾವವನ್ನೂ ಹೊಂದಿದೆ. 

ನೇರಪ್ರಸಾರದ ವಿಡಿಯೊವನ್ನು ನೋಡಿ ಸುದ್ದಿ ವಾಚನವನ್ನು ಕಲಿತಿರುವ ಇದು, ವಾಕ್ಯಗಳನ್ನು ವೃತ್ತಿಪರ ನಿರೂಪಕರಂತೆಯೇ ವಾಚಿಸಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ಕ್ಸಿನುವಾ ಮಾಧ್ಯಮ ಸಂಸ್ಥೆ ಮತ್ತು ಚೀನಾದ ಸರ್ಚ್‌ ಎಂಜಿನ್‌ Sogou.com ಸಂಶೋಧಕರ ತಂಡ ಇದನ್ನು ಅಭಿವೃದ್ಧಿಪಡಿಸಿವೆ. ದಿನದ 24 ಗಂಟೆ, ವರ್ಷದ 365 ದಿನವೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದರಿಂದ ಸುದ್ದಿ ಪ್ರಸಾರದ ವೆಚ್ಚ ಕಡಿಮೆಯಾಗುವುದಲ್ಲದೆ, ಸುದ್ದಿ ಓದುವವವರ ದಕ್ಷತೆಯೂ ಹೆಚ್ಚಲಿದೆ ಎಂದು ತಜ್ಞರು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !