‘ಎಲ್ಲರೂ ಮೋದಿ ಅನುಸರಿಸಿ’

ಶನಿವಾರ, ಏಪ್ರಿಲ್ 20, 2019
31 °C

‘ಎಲ್ಲರೂ ಮೋದಿ ಅನುಸರಿಸಿ’

Published:
Updated:
Prajavani

ವಿಜಯಪುರ: ನಗರದ ಆಶ್ರಮ ರಸ್ತೆಯಲ್ಲಿರುವ ಕಚ್ಚಿ ಸಮುದಾಯ ಭವನದಲ್ಲಿ ಭಾನುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾನು ಚೌಕಿದಾರ ನೇರ ಸಂವಾದ ಕಾರ್ಯಕ್ರಮ ನಡೆಯಿತು.

ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಗೋವಿಂದ ಕಾರಜೋಳ ಮಾತನಾಡಿ, ‘ಪ್ರತಿಯೊಬ್ಬರು ಒಂದಲ್ಲ ಒಂದು ಕಡೆ ಕಾವಲುಗಾರರಾಗಿರುತ್ತಾರೆ. ಜವಾಬ್ದಾರಿಯುತ ನಂಬಿಕೆಗೆ ಅರ್ಹರಾಗಿರುವ ನರೇಂದ್ರ ಮೋದಿ ನಾನೊಬ್ಬ ಚೌಕಿದಾರ ಎಂದು ಹೇಳಿದ್ದಾರೆ. ಅವರನ್ನು ಭಾರತೀಯರಾದ ನಾವೆಲ್ಲ ಅನುಸರಿಸಬೇಕು. ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ, ‘ಪ್ರತಿಯೊಬ್ಬರು ಕಾವಲುಗಾರರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯವರು ಆರಂಭಿಸಿದ ಮೈ ಬಿ ಚೌಕಿದಾರ ಅಭಿಯಾನ ದೇಶದೆಲ್ಲೆಡೆ ಜನಪ್ರಿಯವಾಗಿದೆ’ ಎಂದರು.

ವಿಧಾನ ಪರಿಷತ್‌ ಅರುಣ ಶಹಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ, ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ.ಬೆಳ್ಳುಬ್ಬಿ, ಗೋಪಾಲ ಕಾರಜೋಳ, ರವಿಕಾಂತ ಬಗಲಿ, ವಿವೇಕಾನಂದ ಡಬ್ಬಿ, ಸಂಗರಾಜ ದೇಸಾಯಿ, ಗೂಳಪ್ಪ ಶೆಟಗಾರ, ವಿಜುಗೌಡ ಪಾಟೀಲ ಹಾಗೂ ಮಾಜಿ ಸೈನಿಕರು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !