ಸ್ಮೋಕ್‌ ಹೌಸ್‌ನಲ್ಲಿ ಕ್ರಿಸ್‌ಮಸ್‌ ಖಾದ್ಯ

7

ಸ್ಮೋಕ್‌ ಹೌಸ್‌ನಲ್ಲಿ ಕ್ರಿಸ್‌ಮಸ್‌ ಖಾದ್ಯ

Published:
Updated:
Prajavani

ಕ್ರಿಸ್‌ಮಸ್‌ ಸಂಭ್ರಮ ನಗರದೆಲ್ಲೆಡೆ ಆವರಿಸಿದೆ. ಬಹುತೇಕ ಎಲ್ಲ ಹೋಟೇಲುಗಳು ಕ್ರಿಸ್‌ಮಸ್‌ ವಿಶೇಷ ತಿನಿಸುಗಳ ಮಾಸಾಚರಣೆ ಆರಂಭಿಸಿವೆ. ಲ್ಯಾವೆಲ್ಲೆ ರಸ್ತೆಯಲ್ಲಿರುವ ’ಸ್ಮೋಕ್‌ ಹೌಸ್‌ ಡೆಲಿ‘ ನಲ್ಲಿ ಕ್ರಿಸ್‌ಮಸ್‌ನ ವಿಶೇಷ ಖಾದ್ಯಗಳ ಉತ್ಸವ ಆರಂಭವಾಗಿದೆ. ಇದೇ 30ರವರೆಗೆ ಮಾಂಸಾಹಾರ ಖಾದ್ಯ ಮತ್ತು ವೈನ್‌ಗಳನ್ನು ಆಹಾರಪ್ರಿಯರಿಗೆ ಉಣಬಡಿಸಲಿದೆ.

ಸಂಜೆಯಾಗುತ್ತಿದ್ದಂತೆ ಚುಮುಚುಮು ಚಳಿಗೆ ಕೈ ಕೈ ಹಿಸುಕುತ್ತಾ ಸ್ಮೋಕ್‌ಹೌಸ್‌ ಗೆ ಕಾಲಿಟ್ಟರೆ ಅಲ್ಲಿ ನಿಮ್ಮನ್ನು ಬಿಸಿಬಿಸಿ ‘ಮೋಲ್ಡ್‌ ವೈನ್’ ಸ್ವಾಗತಿಸುತ್ತದೆ. ಬಿಸಿಬಿಸಿ ವೈನ್ ನಿಜಕ್ಕೂ ಕ್ರಿಸ್ಮಸ್‌ ವಿಶೇಷವೇ. ಚಕ್ಕೆ, ಲವಂಗ, ಮರಾಠಿ ಮೊಗ್ಗು ಮುಂತಾದ ಹಲವು ಬಗೆಯ ಮಸಾಲೆ, ಹಣ್ಣಿನ ರಸ, ಸೇಬು ಹೋಳುಗಳನ್ನು ಬಳಸಿ ತಯಾರಿಸಿದ ವೈನ್‌ ಮೈ ಬೆಚ್ಚಗಾಗಿಸುತ್ತದೆ. ಇದು ಸ್ಮೋಕ್‌ಹೌಸ್‌ನ ಸಿಗ್ನೇಚರ್‌ ವೈನ್‌. ಇದರ ಜೊತೆಗೆ ಹಲವು ಬಗೆಯ ವೈನ್‌ಗಳನ್ನು ಕ್ರಿಸ್‌ಮಸ್‌ಗೆಂದೇ ತಯಾರಿಸಲಾಗಿದೆ ಎನ್ನುತ್ತಾರೆ ಅಲ್ಲಿನ ಮ್ಯಾನೇಜರ್ ಕೌಶಿಕ್‌ ಪಾತ್ರ. 

ಸ್ಮೋಕ್ ಹೌಸ್ ಡೆಲಿ - ಇಂಪ್ರೆಷರಿಯೊ  ಇಂದಿರಾನಗರ ಮತ್ತು ಲವೆಲ್ಲೆ ರಸ್ತೆಯಲ್ಲಿ ಎರಡು ಹೋಟೇಲುಗಳಿವೆ. ಹೊಟೇಲಿನ ಗೋಡೆಗಳ ಮೇಲೆ, ಒಟ್ಟು ಒಳಾಂಗಣ ವಿನ್ಯಾಸವೇ ಆಕರ್ಷಕವಾಗಿದೆ. ವಿಶೇಷವೆಂದರೆ ಎಲ್ಲವೂ ಕೈಯಲ್ಲಿ ಬಿಡಿಸಿದ ಚಿತ್ತಾರಗಳಿಂದ ಕೂಡಿವೆ. ಸ್ಮೋಕ್ ಹೌಸ್ ಡೆಲಿ ತಿನಿಸುಗಳೂ ಅಷ್ಟೇ, ತಾಜಾ ಪದಾರ್ಥಗಳನ್ನು ಬಳಸಿ ಸಾಂಪ್ರದಾಯಿಕ ಖಾದ್ಯಗಳನ್ನು ಸಿದ್ದಪಡಿಸಲಾಗುತ್ತದೆ. ಡೆಸರ್ಟ್‌ಗಳು, ಮಾಂಸಾಹಾರ ಖಾದ್ಯಗಳು, ವೈನ್‌ ಇಲ್ಲಿನ ವಿಶೇಷ. ಖಾದ್ಯಗಳನ್ನು  ಚಿಕ್ಕಚಿಕ್ಕ ಸೊಪ್ಪಿನ ಸಸಿಗಳಿಂದ ಅಲಂಕಾರ ಮಾಡುವುದು ಇವರ ವಿಶೇಷ. ತಾಜಾ ಮಸಾಲೆ ಪದಾರ್ಥಗಳನ್ನು ಬಳಸಿ ತಮ್ಮದೇ ರೆಸಿಪಿಗಳನ್ನು ಸಿದ್ಧಪಡಿಸಲಾಗುತ್ತದೆ. ಇರುವ ರೆಸಿಪಿಗಳನ್ನು ಮತ್ತಷ್ಟು ಉತ್ತಮಗೊಳಿಸುತ್ತಾ ಬದಲಾಯಿಸುತ್ತಿರುತ್ತೇವೆ ಎಂದು ಅಲ್ಲಿನ ಯುವ ಬಾಣಸಿಗ ಪಶ್ಚಿಮ ಬಂಗಾಳದ ದೇಬಷಿಶ್ ಹೇಳುತ್ತಾರೆ. 

ಕ್ರಿಸ್‌ಮಸ್‌ ವಿಶೇಷವೆಂದರೆ ಮೇಲೆ ಎಲ್ಲ ಖಾದ್ಯಗಳಲ್ಲೂ ಕ್ರಿಸ್‌ಮಸ್‌ ಟಚ್ ಇರಲೇಬೇಕು. ಅದಕ್ಕಾಗಿ ಈ ಇಡೀ ಮಾಸ ನಮ್ಮ ಅಡುಗೆಗಳಲ್ಲಿ ಕ್ರಿಸ್‌ಮಸ್‌ನ ವಿಶೇಷ ಸ್ವಾದ ಇರುವಂತೆ ಮಾಡಿದ್ದೇವೆ ಎನ್ನುತ್ತಾರೆ ಅವರು. ಕ್ರಿಸ್‌ಮಸ್ ಕಾಲದ ವಿಶೇಷ ಹಣ್ಣುಗಳಾದ ಬೆರ್ರಿ, ಚೆರಿ ಹಣ್ಣುಗಳನ್ನು ಸಲಾಡ್‌ಗಳಲ್ಲಿ ಬಳಸಿದ್ದಾರೆ.

ಹುರಿದ ತರಕಾರಿ, ಶುಂಠಿ,ಸೊಪ್ಪುಗಳನ್ನು ಬಳಸಿದ ‘ಮರ್ಮಲೇಡ್‌ ಸಲಾಡ್‌’ ಕ್ರಿಸ್ಮಸ್‌ ವಿಶೇಷಗಳಲ್ಲಿ ಒಂದು. ತರಕಾರಿಯ ಜೊತೆ ಫೆಟಾ ಚೀಸ್‌ ಬಳಸಿದ ಸ್ಮೋಕ್‌ಡ್‌ ಟೋಫು ಜೊತೆಗೆ ರೋಸ್ಟೆಡ್‌ ಆಲೂ ಮಕ್ಕಳಿಗೆ, ಚಾಟ್ಸ್‌ ಪ್ರಿಯರಿಗೆ ಇಷ್ಟವಾಗುತ್ತದೆ. 

ಪಾನ್‌ ಸೀಯರ್ಡ್‌ ವೈಟ್‌ ಸ್ನಾಪ್ಪರ್‌ ಮೀನಿನ ಖಾದ್ಯ. ಹದವಾಗಿ ಬೆಂದ ಬೋನ್‌ಲೆಸ್‌ ವೀನಿನ ತುಂಡನ್ನು ಆಲೂಗೆಡ್ಡೆಯ ಪ್ಯೂರಿಯ ಮೇಲಿಟ್ಟು, ಕೆಂಪಗಿನ ಪಿಮೆಂಟೋ ಸಾಸ್‌ ಜೊತೆ ನೀಡುತ್ತಾರೆ. ಬಾಯಲ್ಲಿಟ್ಟ ತಕ್ಷಣ ಕರಗಿಬಿಡುತ್ತದೆ. ಹೆಚ್ಚು ಮಸಾಲೆ ಬಳಸದ ಈ ಖಾದ್ಯ ಮಕ್ಕಳಿಗೂ ಇಷ್ಟವಾಗುತ್ತದೆ. ಬಿಸಿ ವೈನ್‌ ಜೊತೆ ಮೀನಿನ ಈ ಖಾದ್ಯ ಸರಿಯಾದ ಜೋಡಿ.

ಹೊಗೆಯ ಪರಿಮಳದಿಂದ ಕೂಡಿದ ಹರ್ಬ್‌ ಕ್ರಸ್ಟೆಡ್‌ ಚಿಕನ್‌,ಅದರ ಜೊತೆಗೆ ಕ್ಯಾರೆಟ್‌ ಮತ್ತು ಆಲೂಗೆಡ್ಡೆಯ ಸಲಾಡ್‌ ರುಚಿಕರವಾಗಿದೆ. ಎಣ್ಣೆಯಲ್ಲಿ ಕರಿಯದೆ ಹಬೆಯಲ್ಲಿ ಬೇಯಿಸಿದಂತಿರುವ ಈ ಎಲ್ಲ ಮಾಂಸದ ಖಾದ್ಯಗಳೂ ಕ್ರಿಸ್‌ಮಸ್‌ನ ವಿಶೇಷ. ಪೋರ್ಕ್‌ ಟೆಂಡರ್‌ಲಯನ್‌ ಹಂದಿ ಮಾಂಸದ ವಿಶೇಷ ಖಾದ್ಯ.

ವೈಟ್‌ ಕ್ರಿಸ್‌ಮಸ್‌, ಕ್ರಿಸ್‌ಮಸ್‌ ಪಂಚ್‌, ಬೆರ್ರಿ ಕ್ರಿಸ್‌ಮಸ್‌, ಟ್ರಾಪಿಕಲ್‌ ಪೈನ್‌ ಫಾರೆಸ್ಟ್‌, ಶುಗರ್‌ ಅಂಡ್‌ ಸ್ಪೈಸ್‌ ಇವೆಲ್ಲ ಕ್ರಿಸ್‌ಮಸ್‌ಗೆಂದೇ ತಯಾರಿಸಿದ ವಿಶೇಷ ವೈನ್‌ಗಳು. 

ಕ್ರಿಸ್‌ಮಸ್‌ ಎಂದ ಮೇಲೆ ಮಾಂಸದ ಖಾದ್ಯ, ವೈನ್‌ ಮಾತ್ರವಿದ್ದರೆ ಸಾಲದು. ಕೇಕ್‌, ಚಾಕೊಲೇಟ್‌, ಡೆಸರ್ಟ್‌ ಇರಲೇಬೇಕು. ಸ್ಮೋಕ್‌ ಹೌಸ್‌ನಲ್ಲಿ ವಿವಿಧ ಬಗೆಯ ಸ್ವಾದದ ಡೆಸರ್ಟ್‌ಗಳಿವೆ. ಕ್ಲಾಸಿಕ್‌ ಯುಲೆ ಲೋಗ್, ಸಿನಮಸ್‌ ಸ್ಪೈಸ್ಡ್‌ ಮೌಸೆ, ಚಾಕೊಲೇಟ್‌ ಕೇಕ್‌ ಬಳಸಿದ ಡೆಸರ್ಟ್‌ಗಳು ಇನ್ನೂ ಹಲವು ಬಗೆಯ ಡೆಸರ್ಟ್‌ಗಳಿವೆ. ಜೊತೆಗೆ ಚಾಲೋಲೆಟ್‌ಗಳೂ ಇವೆ.

***

ವಿಳಾಸ: ಸ್ಮೋಕ್‌ ಹೌಸ್‌ ಡೆಲಿ, ನಂ.52,53, ಲ್ಯಾವೆಲ್ಲೆ ರಸ್ತೆ.

ಸಮಯ:
ಮಧ್ಯಾಹ್ನ 12ರಿಂದ ರಾತ್ರಿ 1

ಸಂಪರ್ಕ: 08041277980

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !