ಊದಿನಕಡ್ಡಿಯಲ್ಲಿ ಬಿರಿಯಾನಿ ಸ್ಮೆಲ್ಲು!

7

ಊದಿನಕಡ್ಡಿಯಲ್ಲಿ ಬಿರಿಯಾನಿ ಸ್ಮೆಲ್ಲು!

Published:
Updated:
Deccan Herald

ಹಬ್ಬಕ್ಕೆಂದು ಊದಿನಕಡ್ಡಿ ತಂದಿದ್ದೆ‌. ‘ಇದನ್ನು ಹಚ್ಚಿ ನೋಡಿ ಸರ್, ಘಮ್‌ ಅಂತ ಕಮಲದ ಹೂವಿನ ವಾಸನೆ ಬರುತ್ತೆ’ ಎಂದು ಅಂಗಡಿಯನು ಹೇಳಿದ್ದ. ‘ಕೈ’ ಕೂಡ ಘಮ ಘಮ ಅನ್ನಲಿ ಅಂತ ಊದಿನಕಡ್ಡಿಯನ್ನು ಗಟ್ಟಿಯಾಗಿ ಹಿಡ್ಕೊಂಡೇ ಬಂದಿದ್ದೆ. ಮನೆಗೆ ಹೋದವನೇ ಮೂಗಿನ ಎರಡೂ ಹೊರಳೆಗಳನ್ನು ಅಗಲ ಮಾಡ್ಕೊಂಡು, ‘ಕೈ’ ಹತ್ತಿರ ತಗೊಂಡು ಉಸಿರೆಳೆದುಕೊಂಡೆ. ಆಶ್ಚರ್ಯ, ಪರಮಾಶ್ಚರ್ಯ. ‘ಕಮಲ’ದ ಹೂವಿನ ವಾಸನೆ ಬದಲು ‘ಕೈ’ಯಿಂದ ಬಿರಿಯಾನಿ ಸ್ಮೆಲ್ ಬರತೊಡಗಿತು! ಅದೂ ‘ರಾಮ’ನಗರದ ಊದಿನಕಡ್ಡಿಯಲ್ಲಿ ಬಿರಿಯಾನಿ ಸ್ಮೆಲ್ಲೇ! ಅಕಟಕಟಾ...

ಮತ್ತೊಂದು ಸಲ ದೀರ್ಘವಾಗಿ ಉಸಿರೆಳೆದುಕೊಂಡೆ. ‘ಒಕ್ಕಲಿಗರ’ ಮನೆಯ ಪಕ್ಕಾ ಬಾಡೂಟದ ಘಾಟು ಮೂಗಿಗೆ ರಾಚಿತು. ಛೇ, ಹಬ್ಬ ಇನ್ನು ಎರಡೇ ದಿನ ಇರುವಾಗ ಇದೇನಿದು ಊದಿನಕಡ್ಡಿ ಈ ರೀತಿ ವಾಸನೆ ಬದಲಿಸ್ತಿದೆಯಲ್ಲ ಎಂದುಕೊಂಡು ಅದರ ಕವರ್ ನೋಡಿದೆ. ‘ಡಿಕೆಎಸ್’ ಫ್ಯಾಕ್ಟರಿ ಅಂತ ಇತ್ತು. ಇದರ ಮಾಲು ನಾಳೆ ಯಾವ ರೀತಿ ವಾಸನೆ ಬದಲಿಸುತ್ತೋ ಅಂತ ಅನುಮಾನ ಬಂದು ಮನೆಯ ಮೂಲೆಯಲ್ಲಿಟ್ಟಿದ್ದ ಮುಸುಕಿನ ಜೋಳದ ‘ತೆನೆ’ಗೆ ಚುಚ್ಚಿದೆ. ‘ತೆನೆ’ಗೆ ತುರಾಯಿ ಮೂಡಿದಂತಾಯಿತು.

‘ಸಂಕಟ’ ಬಂದಾಗ ಮಾತ್ರ ‘ರಾಮ’ ನಾಮವನ್ನು ‘ನಮೋ’ ‘ನಮೋ’ ಎಂದು ಜಪಿಸುವ ಆ ಅಂಗಡಿಯ ಮಾಲೀಕನ ಮಾತಿಗಾದರೂ ಮರ್ಯಾದೆ ಕೊಟ್ಟು ‘ಹಬ್ಬ’ ಮುಗಿಯುವವರೆಗಾದರೂ ಈ ಊದಿನಕಡ್ಡಿ ತನ್ನತನ ಕಾಯ್ದುಕೊಳ್ಳಬಾರದಿತ್ತಾ ಅಂತ ಅನಿಸಿತು.

ಆದರೂ, ತುಂಬಾ ಯೋಚಿಸಿದಾಗ ಸತ್ಯ ಹೊಳೀತು. ಇಲ್ಲಿ ಎಲ್ಲವೂ ‘ಅಡ್ಜಸ್ಟ್‌ಮೆಂಟ್’. ‘ರಾಮ’ನಿಗೂ, ಫ್ಯಾಕ್ಟರಿ ಓನರ್‌ಗೂ, ಊದಿನಕಡ್ಡಿಗೂ, ಆ ತೆನೆಗೂ... ಮೂರ್ಖನಾಗಿದ್ದು ಮಾತ್ರ ನಾನು, ಅಂದ್ರೆ ‘ಭಕ್ತ’.

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !