ಮೋದೀನೇ ಸ್ಟ್ರಾಂಗು!

7

ಮೋದೀನೇ ಸ್ಟ್ರಾಂಗು!

Published:
Updated:
Deccan Herald

ಯಂಕ್ಟೇಶ, ಏನೋ  ಇದು... ಗ್ಯಾಸ್‌ಗೆ 940 ದಾಟಿದೆ?

ಬಿಡಿ ಸ್ಸಾ.. ಟೈಮ್‌ಗೆ ಕರೆಕ್ಟಾಗಿ ಸಿಗ್ತಿದೆ ತಾನೆ? ಹಿಂದೆಲ್ಲಾ ಸಿಲಿಂಡರ್‌ ಸಿಗದೆ ಪರದಾಡ್ತಿದ್ವಿ...

ಅಲ್ಲಪ್ಪಾ ಪೆಟ್ರೋಲ್‌, ಡೀಸೆಲ್‌ ಬೆಲೇನೂ ಏರಿದೆ?

ಓಡಾಟ ಕಡಿಮೆ ಮಾಡಿ ಸ್ಸಾ. ಸ್ಕೂಟರ್‌ ಟೈರೂ ಬಾಳಿಕೆ ಬರುತ್ತೆ. ಹೊಗೆ ಕುಡಿಯೋದ್‌ ಕಡಿಮೆ ಆದ್ರೆ ಆರೋಗ್ಯಕ್ಕೂ ಒಳ್ಳೇದು!

ಅಲ್ಲಯ್ಯಾ, ನೋಟ್‌ ಬ್ಯಾನ್‌ ಮಾಡಿ ವ್ಯಾಪಾರ ಬಿದ್ದೋಯ್ತು. ಕಪ್ಪು ಹಣಾನೂ ಈಚೆಗೆ ಬರಲಿಲ್ಲ?

ಸ್ಸಾ... ಸುಮ್ನೆ ತಕರಾರು ತೆಗೀಬೇಡಿ. ನೋಟ್‌ ಬ್ಯಾನ್‌ ಮಾಡೋ ಮುಂಚೆ ನಿಮ್‌ ಸಂಬಳ ಎಷ್ಟಿತ್ತೋ ಈಗಲೂ ಅಷ್ಟೇ ಇದೆ. ಆಗ್ಲೂ ನಿಮ್ಹತ್ರ ದುಡ್ಡಿರಲಿಲ್ಲ, ಈಗಲೂ ದುಡ್ಡಿಲ್ಲ. ಕಪ್ಪು ಹಣ ತಗೊಂಡು ನೀವೇನ್ಮಾಡ್ತೀರಿ. ಅದು ದೊಡ್ಡೋರ್‌ ವಿಷ್ಯ, ಅವರವ್ರು ನೋಡ್ಕೋತಾರೆ.

ಅಲ್ಲಪ್ಪಾ, ಸ್ವಿಝರ್ಲಂಡಿನಿಂದ ಕಪ್ಪು ಹಣ ಬಂದ್ರೆ ನನ್ ಅಕೌಂಟಿಗೆ 14 ಲಕ್ಷ ಬರ್ತಿತ್ತಲ್ವೆ?

2014ರ ಪೇಪರ್‌ನಲ್ಲಿ  ಓದಿದ್ದನ್ನೇ ಈಗ್ಲೂ ಜಗೀತಿದೀರಲ್ವ! ಅದೆಲ್ಲ ಮರೆತ್ಬಿಡಿ. ದಿನಾ ಪೇಪರ್ ಓದಿ ಅಪ್‌ಡೇಟ್‌ ಆಗಿ. ಈಗೇನಿದ್ರೂ ರಾಮಮಂದಿರ, ಶಬರಿಮಲೆ, ಮೀ ಟೂ.. ಇವುಗಳ ಬಗ್ಗೆ ಮಾತಾಡ್ಬೇಕು. ರಜನಿಕಾಂತೂ ಏನಂದವ್ರೆ ಗೊತ್ತಾ?

ಏನಂತೆ?

ಒಬ್ಬ ಮೋದಿ ವಿರುದ್ಧ ಹತ್ತು ಜನ ಒಟ್ಟಾಗಿ ಹೋರಾಡೋದು ಸರಿಯಲ್ಲ. ಇದನ್ನು ನೋಡಿ
ದರೆ ಮೋದೀನೇ ಸ್ಟ್ರಾಂಗು ಗುರೂ ಅಂದವ್ರೆ!

ಎಲ್ಲಿಯ ಸ್ಟ್ರಾಂಗು? ಮೋದಿ ಆಡಳಿತದಲ್ಲಿ ಡಾಲರ್‍ರೇ ಸ್ಟ್ರಾಂಗು. ರೂಪಾಯಿ ನೆಲ ಕಚ್ಚಿದೆ. ಹೀಗಾದ್ರೆ ದೇಶ ಮುಂದೆ ಸಾಗೋದು ಹೇಗೆ? 

ಸ್ಸಾ... ನಿಮ್ಹತ್ರ ಡಾಲರ್‌ ಎಷ್ಟಿದೆ?

ನನ್ಹತ್ರ ಎ‌ಲ್ಲಿಂದ ಬರುತ್ತಪ್ಪಾ? ಪೇಪರ್‌
ನಲ್ಲಷ್ಟೇ ಡಾಲರ್ ನೋಡಿರೋದು.

ಮತ್ಯಾಕೆ ಇಲ್ಲದ ಉಸಾಬರಿ?

ಸರಿ ಬಿಡಪ್ಪಾ. ಈಗ್ಹೇಳು, ನೀನೇನ್‌ ಈ ಕಡೆ?

ಏನಿಲ್ಲ ಸ್ಸಾ... ಎರಡು ಸಾವ್ರ ಬೇಕಿತ್ತು. ಮುಂದಿನ ತಿಂಗ್ಳು ವಾಪಸ್‌ ಕೊಡ್ತೀನಿ. ಹೋಂ ಫೈನಾನ್ಸು ಬಾಳಾ ಟೈಟಾಗಿದೆ. ನಿಮ್ಗೇ ಗೊತ್ತಲ್ಲಾ... ದಿನಸಿ ದುಬಾರಿ. ಪೆಟ್ರೋಲು, ಕರೆಂಟ್‌ ಬಿಲ್‌, ಸ್ಕೂಲ್‌ ಫೀಸ್‌ ಎಲ್ಲ ಏರ್ತಿದೆ...

ಬರಹ ಇಷ್ಟವಾಯಿತೆ?

 • 69

  Happy
 • 22

  Amused
 • 2

  Sad
 • 2

  Frustrated
 • 11

  Angry

Comments:

0 comments

Write the first review for this !