ನಾಯಕರ ‘ಸಂಕಲ್ಪ’ನೆ

7

ನಾಯಕರ ‘ಸಂಕಲ್ಪ’ನೆ

Published:
Updated:
Prajavani

‘ಇನ್ಮುಂದೆ ಆಪರೇಷನ್ ಕಮಲ ಮಾಡೋದಿಲ್ಲ, ಇದೇ ನನ್ ಹೊಸ ವರ್ಷದ್ ಸಂಕಲ್ಪ’ ದೃಢ ಧ್ವನಿಯಲ್ಲಿ ಯಡಿಯೂರಪ್ನೋರು ಹೇಳ್ತಿದ್ದಂಗೆ, ಹೊಸ ವರ್ಷಕ್ಕೆ ಹೊಸ ಸರ್ಕಾರ ಬರುತ್ತೆ, ಸಚಿವರಾಗಬಹುದು ಅಂತಾ ಸೂಟ್ ಹೊಲಿಸಿಕೊಂಡು ಕಾಯ್ತಿದ್ದವರ ಕನಸು ಹೊಳೆಯಲ್ಲಿ ಜಾರ್ಕೊಂಡ್ ಹೋದಂತಾಯ್ತು...

ಪರ ಪಕ್ಷದಲ್ಲಿನ ರಾಜಕಾರಣಿಗಳು ಏನ್ ಹೇಳಿದರೂ ವಿರೋಧಿಸಬೇಕು, ಟಾಂಗ್ ಕೊಡಬೇಕು ಎಂಬ ಅಘೋಷಿತ ನಿಯಮ ಹೊಳೀತಿ
ದ್ದಂತೆ, ‘ನಾನೂವೆ ಇನ್ಮೇಲಿಂದ ರಾಹುಕಾಲ, ಗುಳಿಕ ಕಾಲ ನೋಡಾಕಿಲ್ಲ’ ಎಂದು ಘೋಷಿಸಿಯೇಬಿಟ್ರು ರೇವಣ್ಣ!

ಇದನ್ನ ಕೇಳಿ ಕಿಸಕ್ಕೆಂದು ನಕ್ಕ ಸಿದ್ರಾಮಣ್ಣ, ‘ಓ ಭ್ರಮೆ... ರೇವಣ್ಣ ನಿನ್ನ ಕೈಲಿ ಇದೆಲ್ಲ ಆದಾತಾ... ಪ್ರಾಕ್ಟಿಕಲ್ ಆಗಿ ಯೋಚ್ನೆ ಮಾಡು, ಈ ಸಂಕಲ್ಪಗಳೆಲ್ಲ ನಮ್ ಪ್ರಧಾನಿಗೋಳ್ಗೆ ಸರಿ...’ ಅಂದ್ರು.

ಈ ಮಾತು ಕೇಳಿ, ‘ರಾಮ ಮಂದಿರ ನಿರ್ಮಾಣ ಮಾಡುತ್ತೇವೆ’ ಎಂದು ಐದು ವರ್ಷಗಳ ಹಿಂದೆ ಮಾಡಿಕೊಂಡಿದ್ದ ಸಂಕಲ್ಪ ಮೋದಿ
ಯವರಿಗೆ ನೆನಪಾಯ್ತು... ಅದಿನ್ನೂ ಅನುಷ್ಠಾನಕ್ಕೆ ಬಂದಿಲ್ಲ ಅನ್ನೋದೂ ಅರಿವಿಗೆ ಬಂತು. ‘ಈ ನ್ಯೂ ಇಯರ್‌ಗೂ ಇದೇ ನನ್ ರೆಸಲ್ಯೂಷನ್ನು... ರಾಮ ಮಂದಿರ ನಿರ್ಮಾಣ ಖಚಿತ’ ಝೇಂಕರಿಸಿದರು ನಮೋ.

‘ಅನ್ಯಾಯ... ಅನ್ಯಾಯ, ಎರಡು ವರ್ಷದ ಹಿಂದಿನ ಕಾಂಗ್ರೆಸ್ ಸಂಕಲ್ಪವನ್ನೇ ಜೆಡಿಎಸ್‌ ನೋರು ಕಾಪಿ ಹೊಡೀತಾವ್ರೆ’ ಎಂದು ಸೀಟಿ ಊದಲು ಆರಂಭಿಸಿದ್ರು ರವಿ.

‘ನಾವೇನ್ ಕಾಪಿ ಮಾಡಿದೀವ್ರಿ’ ಸಿ.ಎಂ. ಕುಮಾರಸ್ವಾಮಿ ಗರಂ ಆದ್ರು... ‘ಉಕ್ಕಿನ್ ಸೇತುವೆ ಮಾಡ್ತೀವಿ ಅಂತಾ ಎರಡು ವರ್ಷದ ಹಿಂದೆ ಅವ್ರು ಸಂಕಲ್ಪ ಮಾಡಿದ್ರು... ಅದೆಲ್ಲ ಆಗಾಕಿಲ್ಲ ಅಂದವ್ರು, ಈಗ್ ನೀವೇ ಆ ರೆಸಲ್ಯೂಷನ್ ಮಾಡ್ಕೊಂಡಿದೀರಲ್ಲ...’ ರವಿ ಕೆಂಪಾದರು.

ಸಿ‌.ಎಂ, ಡಿಸಿಎಂ ಮೌನ ಸಂಕಲ್ಪಕ್ಕೆ ಶರಣಾದರು.

ಅಷ್ಟಕ್ಕೂ ಈ ಸಂಕಲ್ಪ ಎಂದರೇನು? ಕೇಳಿದ ವಿಜಿ. ‘ಯಾವುದನ್ನು ಕಾರ್ಯರೂಪಕ್ಕೆ ತರಲಾಗದೋ ಅದೇ ಸಂಕಲ್ಪ’ ಉತ್ತರಿಸಿದ ಮುದ್ದಪ್ಪ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !