ಕ್ರಿಕೆಟ್ಟು, ಫ್ಲಡ್‌ಲೈಟು, ಕಾಫಿ ಕಮಟು...

7
ಚುರುಮುರಿ

ಕ್ರಿಕೆಟ್ಟು, ಫ್ಲಡ್‌ಲೈಟು, ಕಾಫಿ ಕಮಟು...

Published:
Updated:
Prajavani

ಮಗ: ಅಪ್ಪಾ ನಾ ಮಾಡಿ ಬಂದೆ... ಅಪ್ಪಾ ನಾ ಮಾಡಿ ಬಂದೆ...

ಅಪ್ಪ: ಅದೇನ್ ಮಾಡಿ ಬಂದಿಲೇ ರಾಹು, ಹಾರ್ದಿಕವಾಗಿ ಹೇಳ್ಬಿಡು. ಅದ್ಯಾಕ್ ಹಂಗ್ ಬಡಕೊಳಾಕ್ಕತ್ತಿ. ಏ ಕೇಳ ನಿನ್ ಮಗನ್. ಕಾಫಿ ಕುಡ್ಯೋ ಹೊತ್ತನ್ಯಾಗ ಕರಣ ಕಠೋರವಾಗಿ ವದರ್ತಾನ್.

ಅಮ್ಮ: ಅಂವಾ ಏನ್ ಹೇಳ್ತಾನ್ ಮೊದ್ಲ ಕೇಳರಿ. 18 ದಾಟಿರೋ ಮಗನ್ ಹಂಗ್ ಎಲ್ಲಾ ಬೈಬಾರ್ದರೀ. ಮೊನ್ನೆ ನೋಡಿರಿಲ್ಲೊ ಅವನ್ ಕಿಸೆದಾಗ್ ಏನ್‌ ಇತ್ತಂತ!

ಅಪ್ಪ: ಗೊತ್ತೈತಿ. ಅವ್ನ್ ವಯಸ್ಸಿನ್ಯಾಗ್ ನಾ ಮಾಡಲಾರದ್ದು, ನೋಡಲಾರದ್ದೆಲ್ಲ ಅವನ್ ಕಿಸೆದಾಗ್ ಸಿಗ್ತಾವ್. ಚೋಟುದ್ದ ಬೆಳದಿಲ್ಲ. ನಮ್ ಮುಂದ ದೊಡ್ಡ ಬಲೂನ್ ಹಾರಸ್ತಾನ್ ಮಗಾ.

ಅಮ್ಮ: ಏ... ಅವರೆಲ್ಲ ಈಗಿನ್ ಕಾಲದ್ ಹುಡಗೋರು. ಅಂವಾ ಎಷ್ಟ್ ಫೇಮಸ್ ಅದಾನಂತ್ ಫೇಸ್‌ಬುಕ್, ವಾಟ್ಸ್‌ ಆ್ಯಪ್ ನೋಡ್ರಿ ಗೋತ್ತಾಗ್ತದ. ಅವ್ನ್ ಸುತ್ತಮುತ್ತ ಎಷ್ಟ್ ಚಂದ್‌, ಚಂದ್‌ ಹುಡುಗೀರ್ ಇರ್ತಾರ. ಅಲ್ರಿ ಮೊನ್ನೆ ಇಂವಾ ಮತ್ತು ಇವನ್ ಗೆಳೆಯಾ ಆ ಟಿ.ವಿ. ಸೀರಿಯಲ್‌ನಾಗ್ ಏನೆಲ್ಲಾ ಮಾತಾಡಿದ್ರಲಾ. ನಂಗಂತೂ ಭಾಳ್...

ಅಪ್ಪ: ನಾಚಕೀ ಆತೋ. ಖುಷಿ ಆತೋ? ಕ್ರಿಕೆಟ್‌ ಆಡಲೇ ಚೆಂದಾಗಿ ಅಂದ್ರ, ಬ್ಯಾರೇನ ಆಡ್ತಾನ್ ಅನ್ನೂದು ಗೊತ್ತಾತಿಲ್ಲೊ. ಫ್ಲಡ್‌ಲೈಟ್ ಪ್ರಾಕ್ಟಿಸ್‌ಗೆ ಹೊಕ್ಕೇನಿ ಅಂತಿರ್ತಾನಲ್ಲ. ಈಗ ಗೊತ್ತಾತು ಹಂಗಂದ್ರ ಏನಂತ. ಅದಕ್ಕ ಇತ್ತಿತ್ತಲಾಗಿ ಆಡಿದ್ ಮ್ಯಾಚ್‌ನ್ಯಾಗ್ ಸಿಂಗಲ್ ನಂಬರ್‌ ತಗೊಂಡ್ ಬರಾಕತ್ತಾನ. ನಮ್ಮನ್ನೂ ಭಾಳ ಲಿಬರಲ್ ಅಂತ್ ಬ್ಯಾರೆ ಹೇಳ್ತಾನ.

ಅಮ್ಮ: ಹೋಗ್ಲಿ ಬಿಡ್ರಿ. ಅಂವಾ ಏನ್ ಮಾಡಿ ಬಂದಾನ್ ಅದನ್ನರ ಕೇಳ್ರಿ.

ಮಗ: ಇವತ್ ಮೂರ್ ಸಿಕ್ಸರ್ ಹೊಡ್ದೆ. ಒಬ್ಬ ಹುಡ್ಗಿ ಬಂದ್ ನನ್ನ ಕೂಡ್ ಸೆಲ್ಫಿ ತೊಗಂಡ್ಲು. ಆದ್ರ ನಾ ಹೆಸರ್ ಕೇಳ್ಲಿಲ್ಲ.

ಅಪ್ಪ: ಅದೆಲ್ಲ ಮಾಮೂಲಿ. ನೀ ಏನ್ ಮಾಡ್ದಿ ಹೇಳಲೇ ಲಗೂನ...

ಮಗ: ಅಕೀಗ್ ಹ್ಯಾಪಿ ನ್ಯೂ ಇಯರ್ ಅಂತ ವಿಷ್ ಮಾಡಿ ಬಂದೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !