ಬ್ರೈಮ್ ನಿಮಿಸ್ಟರ್ ಡಿಸ್ಲೆಕ್ಸಿಯಾ!

ಬುಧವಾರ, ಮಾರ್ಚ್ 27, 2019
22 °C

ಬ್ರೈಮ್ ನಿಮಿಸ್ಟರ್ ಡಿಸ್ಲೆಕ್ಸಿಯಾ!

Published:
Updated:
Prajavani

‘ಬಚ್ಚೇ ಬಿನ್... ಬಚ್ಚೇ ಬಿನ್...’ ಮುದ್ದಣ್ಣ ತೊದಲುತ್ತಿದ್ದ. ‘ಇದೇನ್ರೀ ನಿಮ್ದು ಹೊಸ ವರಸೆ... ಅದು ಅಚ್ಛೇ ದಿನ್ ಅಲ್ವಾ’ ಕೇಳ್ದ ವಿಜಿ. ‘ನನಗದೆಂಥದೋ ಡಿಸ್‌ಲೆಕ್ಸಿಯಾ ಕಾಯಿಲೆ ಅಂತೆ ಸಾರ್... ಓದೋವಾಗ, ಕೆಲವು ಪದ ಹೇಳೋವಾಗ ಹೀಗೆ ಎಡವಟ್ಟು ಆಗಿಬಿಡುತ್ತೆ’ ಮುಖ ಸಣ್ಣಗೆ ಮಾಡಿ ಉತ್ತರಿಸಿದ ಮುದ್ದಣ್ಣ. ‘ಅದು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳೋ ಸಮಸ್ಯೆ ರೀ... 40 ದಾಟಿರೋ ನಿಮಗೆ ಹೇಗ್ ಬರುತ್ತೆ?’

‘ನಮ್ ಬ್ರೈಮ್ ನಿಮಿಸ್ಟರ್‌ಗಿಂತಾ ನೀವು ಬುದ್ಧಿವಂತ್ರಾ... ಅವರೇ ಕೇಳವ್ರೆ... 40 ವರ್ಷದ ಡಿಸ್ಲೆಕ್ಸಿಕ್ ಮಕ್ಕಳಿಗೆ ಪರಿಹಾರ ಇದೆಯಾ ಅಂತ... ಅವರ ಆ ಪರಮಾದ್ಭುತ ಮಾತು ಕೇಳಿದ ಮೇಲೇನೇ ನಂಗೆ ಡಿಸ್ಲೆಕ್ಸಿಯಾ ಕಾಣಿಸಿಕೊಂಡಿದ್ದು...’ ಸೋಫಾಗೆ ಒರಗಿ ಕೂತ ಮುದ್ದಣ್ಣ ಮಾತು ಮುಂದುವರಿಸಿದ.

‘ಎಂತೆಂಥ ವಿಚಿತ್ರ ಕಾಯಿಲೆ ಇವೆ ಗೊತ್ತಾ ಸಾರ್... ವಿಡಿಯೊದಲ್ಲಿ ಪೇಷಂಟ್‌ಗಳ ಒಂದೊಂದು ಮಾತು ಕೇಳ್ತಿದ್ದಂಗೆ ಇದು ಇಂಥದ್ದೇ ಕಾಯಿಲೆ ಅಂತಾ ಡಾಕ್ಟ್ರು ಹೇಳೋವ್ರು’ ಎನ್ನುತ್ತಾ ವಿಡಿಯೊ ತೋರಿಸತೊಡಗಿದ. ‘28 ಕ್ಷೇತ್ರಗಳಲ್ಲಿ 120 ಸ್ಥಾನ ಗೆಲ್ತೇವೆ...’- ಇದು ಡಿಸ್ ಕ್ಯಾಲ್ಕುಲಿಯಾ.

‘ನಾನು ನಿಷ್ಠಾವಂತ ಕಾರ್ಯಕರ್ತ. ಪಕ್ಷ ತೊರೆಯುವುದಿಲ್ಲ’- ಇದು ಲೈಕ್‌ಸಿಯಾ. ‘ಅಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಹಾಗಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ’- ಇದು ‘ಡಿಸ್‌ಲೈಕ್‌’ಸಿಯಾ. ‘ಈ ಕ್ಷೇತ್ರದಲ್ಲಿ ಮಗ, ಅಲ್ಲಿ ದೊಡ್ಡಮಗ. ಪಕ್ಕದಲ್ಲೇ ಸೊಸೆ, ಅದರ ಹತ್ತಿರದಲ್ಲೇ ಮೊಮ್ಮಗ’- ಇದು ಫ್ಯಾಮಿಲಿ ಪಾಲಿಟಿಕ್ಸ್ ಫೋಬಿಯಾ!

‘ದೊಡ್ಡವರ ವಿಷಯ ನಮಗ್ಯಾಕೆ ಮುದ್ದಣ್ಣ, ನಡೀ ಹೋಗೋಣ’.

‘ಸಾರ್ ನಿಮಗೂ ಕಾಯಿಲೆ ಇದೆ’.

‘ಏನು!’.

‘ನಮಗ್ಯಾಕ್ ಬೇಕ್ಸಿಯಾ’!

 

Tags: 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !