ಬೆಕ್ಕಣ್ಣನ ಇ–ಮೇಲ್

ಬುಧವಾರ, ಜೂನ್ 19, 2019
23 °C

ಬೆಕ್ಕಣ್ಣನ ಇ–ಮೇಲ್

Published:
Updated:
Prajavani

ಬೆಕ್ಕಣ್ಣ ಸಣ್ಣಚೀಲ ಕೈಯಲ್ಲಿ ಹಿಡಿದು ಒಳಗೋಡಿ ಬಂತು. ನಾನು ಕೇಳುವ ಮೊದಲೇ ‘ನೋಡವಾ...’ ಎಂದು ಫೋಟೊ ಒಂದನ್ನು ತೆಗೆದು ತೋರಿಸಿತು. ಕಲರ್ ಫೋಟೊ... ದೊಡ್ಡ ಹೆಗ್ಗಣವೊಂದನ್ನು ಬಾಯಲ್ಲಿ ಹಿಡಿದು ಬೆಕ್ಕು ಫೋಟೊಗೆ ಮಸ್ತ್ ಪೋಸ್ ಕೊಟ್ಟಿತ್ತು.

‘ಯಾರಲೇ ಇದು... ನೋಡಾಕ ಜರಾ ನಿನ್ನಂಗೇ ಐತಿ’ ಎಂದೆ. ‘ಹಳೇ ಇ–ಮೇಲ್ ಹುಡುಕಿ ಪ್ರಿಂಟ್ ಹಾಕಿಸಿದೆ. ನಾ ಒಂದ್ ದೊಡ್ಡ ಹೆಗ್ಗಣ ಹಿಡಿದಿದ್ದೆ. ನಮ್ ಮಂದಿ ಎಲ್ಲ ಸೇರಿ ದೊಡ್ಡ ಕಾರ್ಯಕ್ರಮ ಮಾಡಿ ನನಗ ಸನ್ಮಾನ ಮಾಡಿ, ನಂದೇ ಹೊಸಾ ಡಿಜಿಟಲ್ ಕ್ಯಾಮೆರಾದಾಗ ಫೋಟೊ ತೆಗೆದಿದ್ರು, ನಮ್ಮ ಗುಜರಾತ್ ಮಾಮಾಗ ಈ ಫೋಟೊ ಇ–ಮೇಲ್ ಮಾಡಿದ್ದೆ, ಅದು 1988 ಅಥವಾ 89ರಾಗ ಇರಬಕು’ ಘನಗಂಭೀರವಾಗಿ ಹೇಳಿತು.

ನನಗೆ ನಗು ತಡೆಯಲಾಗಲಿಲ್ಲ. ‘ಛಲೋ ಬುಲೆಟ್ ರೈಲೇ ಬಿಡ್ತೀಯಲ್ಲ... ಮಂಗ್ಯಾ... ನಿಂಗೀಗ ಎರಡು ವರ್ಷ... ಮೂವತ್ ವರ್ಷದ ಕೆಳಗೆ ನೀ ಹುಟ್ಟೇ ಇರಲಿಲ್ಲ... ಆವಾಗ ನಮ್ಮಲ್ಲಿ ಬಿಡು, ಇಡೀ ವಿಶ್ವದಾಗೇ ಡಿಜಿಟಲ್ ಕೆಮರಾ, ಇ–ಮೇಲ್ ಗೊತ್ತೇ ಇರಲಿಲ್ಲ’.

‘ನಿಂಗೊತ್ತದಿಲ್ಲೋ... ಬೆಕ್ಕುಗೋಳಿಗೆ ಒಂಬತ್ ಜನ್ಮ ಅದಾವು... ಅದ್ ನನ್ ಮೊದಲನೇ ಜನ್ಮ... ಈಗ ನಾಕನೇ ಜನ್ಮ... ಇನ್ನಾ ಐವತ್ ವರ್ಷ ಭರತಖಂಡದಲ್ಲಿ ಕಮಲಗಳೇ ಅರಳ್ತಾವು ಅಂತ ‘ಶಾ’ಣ್ಯಾ ಹೇಳ್ಯಾನ. ಒಂಬತ್ತನೇ ಜನ್ಮದಾಗೆ ನಾ ಮಂಗಳಯಾನನೇ ಮಾಡ್ತೀನೇನೋ. ವಿಶ್ವದಾಗ ಯಾರಿಗೂ ವಿಮಾನ ಅಂತ ಕಲ್ಪನಾನೂ ಇಲ್ಲದಿದ್ದಾಗ ನಮ್ಮಲ್ಲಿ ಪುಷ್ಪಕವಿಮಾನ ಇತ್ತಲ್ಲ... ಹಂಗೇ ಡಿಜಿಟಲ್ ಕ್ಯಾಮೆರಾ, ಇ–ಮೇಲೂ ಆವಾಗೇನೆ ಇತ್ತು’ ಗಟ್ಟಿಗಂಟಲಿನಲ್ಲಿ ವಾದಿಸಿತು.

ಕೊನೆಗೆ ಚೀಲದಿಂದ ಮೆತ್ತಗೆ ನಾಕು ಬಳೆ ತೆಗೆಯಿತು. ‘ಕೆಲಸ ಮಾಡಕ್ಕಾಗದಿದ್ದರೆ ಬಳೆ ತೊಟ್ಟುಕೋರಿ ಅಂತ ಶೋಭಕ್ಕ ‘ಕೈ’ಗಳಿಗೆ ಹಂಚಾಕ ಹತ್ತಿದ್ದಳು... ಇನ್ ಬಳೆಗೋಳು ತುಟ್ಟಿ ಆಗ್ತಾವು, ನೀ ಯಾವಾಗನ ಫಂಕ್ಷನ್ನಿಗಿ ಹೋಗೂ ಮುಂದ ಬಳೆ ಹುಡುಕ್ತಾ ಕೂಡ್ತಿ, ಅದಕ್ಕ ನಾಕ್ ಇಸ್ಕಂಡು ಬಂದೆ’ ಎಂದು ಕಳ್ಳನಗು ಬೀರಿತು!

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !