ಬಿ.ಪಿ. ಏರಿದ್ಯಾಕೆ?

ಗುರುವಾರ , ಜೂನ್ 27, 2019
29 °C

ಬಿ.ಪಿ. ಏರಿದ್ಯಾಕೆ?

Published:
Updated:
Prajavani

ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದುಬಿದ್ದ ತೆಪರೇಸಿಯನ್ನು ಅವನ ಹೆಂಡತಿ ಪಮ್ಮಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಬಿ.ಪಿ. ಪರಿಶೀಲಿಸಿದರು. ಅವರಿಗೆ ಗಾಬರಿಯಾಯಿತು. ‘ಏನ್ರೀ ಇದೂ... ಬಿ.ಪಿ. ಯದ್ವಾತದ್ವಾ ಏರಿಬಿಟ್ಟಿದೆಯಲ್ಲ? ಟ್ಯಾಬ್ಲೆಟ್ ಬಿಟ್ಟುಬಿಟ್ಟಿದ್ದೀರಾ’ ಎಂದರು.

‘ಇಲ್ಲ, ಮಾತ್ರೆ ತಗೊಳ್ಳೋದು ಯಾವತ್ತಿಗೂ ಬಿಟ್ಟಿಲ್ಲ...’ ತೆಪರೇಸಿ ಮುಲುಗುತ್ತ ಹೇಳಿದ.

‘ಊಟದಲ್ಲೇನಾದ್ರು ಹೆಚ್ಚು ಕಮ್ಮಿ ಆಯ್ತಾ?’

‘ಇಲ್ಲ, ನಾನು ತಿನ್ನೋದೇ ಎರಡು ಚಪಾತಿ, ಸ್ವಲ್ಪ ಅನ್ನ ಅಷ್ಟೆ...’

‘ಇವರಿಗೋಸ್ಕರ ಅಡುಗೆಗೆ ಉಪ್ಪು ಕಡಿಮೆ ಮಾಡಿಬಿಟ್ಟಿದೀನಿ ಸಾರ್, ಸಪ್ಪೆ ಊಟ ನಂಗೂ ಅಭ್ಯಾಸ ಆಗಿಹೋಗಿದೆ’ ಪಮ್ಮಿ ಹೇಳಿದಳು.

‘ಹೌದಾ? ಮತ್ಯಾಕೆ ಇಷ್ಟೊಂದು ಬಿ.ಪಿ? ಏನೋ ಯೋಚನೆ ಮಾಡ್ತೀರಿ ಅನ್ಸುತ್ತೆ. ಎನಿ ಪ್ರಾಬ್ಲಂ?’ ವೈದ್ಯರು ಪಮ್ಮಿ ಮುಖ ನೋಡಿದರು.

‘ಏನೂ ಇಲ್ಲ ಸಾರ್, ನಮಗೆ ಯಾವ ಸಮಸ್ಯೆನೂ ಇಲ್ಲ. ಮಕ್ಕಳೆಲ್ಲ ಸೆಟ್ಲ್ ಆಗಿದಾರೆ. ಆದಾಯಕ್ಕೆ ಕೊರತೆಯಿಲ್ಲ. ಆರಾಮಾಗಿ ಊಟ ನಿದ್ರೆ ಮಾಡ್ತಾರೆ. ಟಿ.ವಿ ನೋಡ್ತಾ ಕೂತಿರ್ತಾರೆ...’ ಪಮ್ಮಿ ವಿವರಿಸಿದಳು.

‘ಟಿವೀಲಿ ಏನು ನೋಡ್ತಾರೆ? ಧಾರಾವಾಹಿ? ಮ್ಯೂಸಿಕ್? ಅಥ್ವಾ ನ್ಯೂಸ್?’

‘ಅಯ್ಯೋ ಯಾವಾಗ್ಲೂ ನ್ಯೂಸ್ ನೋಡ್ತಾ ಕೂತಿರ್ತಾರೆ ಸಾರ್, ನಮಗೆ ರಿಮೋಟೇ ಕೊಡಲ್ಲ. ಬರೀ ರಾಜಕೀಯ, ರಾಜಕೀಯ...’

ವೈದ್ಯರಿಗೆ ಅರ್ಥವಾಗಿ ಹೋಯಿತು. ‘ಮೊನ್ನೆ ಎಲೆಕ್ಷನ್ ಸಮೀಕ್ಷೆ ನೋಡಿದ್ರಾ?’

‘ಹ್ಞೂ ಸಾರ್, ಅದು ನೋಡ್ತಾ ಕೂತಿದ್ದಂಗೇ ಹಿಂಗೆ ಆಗಿದ್ದು. ಮಂಡ್ಯದಲ್ಲಿ ಯಾರು ಗೆಲ್ತಾರೋ, ಸೆಂಟ್ರಲ್‍ನಲ್ಲಿ ಮೆಜಾರಿಟಿ ಬರುತ್ತೋ ಇಲ್ವೋ, ರಾಜ್ಯದಲ್ಲಿ ಮೈತ್ರಿ ಸರ್ಕಾರದ ಗತಿ ಏನಾಗುತ್ತೋ... ಬರೀ ಇವೇ ಸಾರ್...’ ಪಮ್ಮಿ ವಿವರಿಸಿದಳು.

ವೈದ್ಯರು ಆಸ್ಪತ್ರೆ ಸಿಬ್ಬಂದಿಯನ್ನು ಕರೆದು ‘ಇವರನ್ನು ಮೇ 23 ಮುಗಿಯೋವರೆಗೆ ಟಿ.ವಿ. ಇಲ್ಲದ ಸ್ಪೆಶಲ್ ವಾರ್ಡ್‍ನಲ್ಲಿ ಅಡ್ಮಿಟ್ ಮಾಡ್ಕೊಳ್ಳಿ. ಮೊಬೈಲ್ ಕೊಡಬೇಡಿ, ಹೊರಗಿನವರು ಭೇಟಿ ಮಾಡದಂಗೆ ನೋಡ್ಕೊಳ್ಳಿ. ಈಗ ಈ ಇಂಜೆಕ್ಷನ್ ಕೊಡಿ’ ಎನ್ನುತ್ತಾ ಮೇಲಕ್ಕೆದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !