ನಾಗರಿಕ ಸುರಕ್ಷತಾ ಕಾಯ್ದೆಗೆ ಅಧಿಸೂಚನೆ

7

ನಾಗರಿಕ ಸುರಕ್ಷತಾ ಕಾಯ್ದೆಗೆ ಅಧಿಸೂಚನೆ

Published:
Updated:

ಬೆಂಗಳೂರು: ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನಾಗರಿಕರಿಗೆ ಹೆಚ್ಚಿನ ಭದ್ರತೆ ನೀಡುವ ಸಲುವಾಗಿ ‘ಕರ್ನಾಟಕ ನಾಗರಿಕ ಸುರಕ್ಷತಾ ಕಾಯ್ದೆ-2017’ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರವು, ಅದಕ್ಕೆ ನಿಯಮಾವಳಿ ರೂಪಿಸಿ ಅಧಿಸೂಚನೆ ಹೊರಡಿಸಿದೆ.

ಈ ಕಾಯ್ದೆಯನ್ನು 2017ರ ಚಳಿಗಾಲದ ವಿಧಾನಸಭಾ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು. ಈಗ ಕಾಯ್ದೆಗೆ ನಿಯಮ ರೂಪಿಸಿ ಸರ್ಕಾರವು ಅನುಷ್ಠಾನಗೊಳಿಸಲು ಮುಂದಾಗಿದ್ದು, ಜುಲೈ 26ಕ್ಕೆ ಅನ್ವಯವಾಗುವಂತೆ ಜಾರಿಗೆ ಬರಲಿದೆ.

ಒಂದೇ ಸಮಯಕ್ಕೆ 100 ಅಥವಾ ಒಂದು ದಿನದಲ್ಲಿ 500 ಜನ ಸೇರುವಂತಹ ಸ್ಥಳಗಳಿಗೆ ಕಾಯ್ದೆ ಅನ್ವಯವಾಗಲಿದೆ. ಅದರಂತೆ, ಈ ಕಾಯ್ದೆ ವ್ಯಾಪ್ತಿಗೆ ವಾಣಿಜ್ಯ ಸಂಸ್ಥೆ, ಕೈಗಾರಿಕಾ, ಧಾರ್ಮಿಕ, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ರೈಲು ಮತ್ತು ಬಸ್ ನಿಲ್ದಾಣಗಳು ಬರಲಿವೆ ಎಂದು ಪ್ರಕಟಣೆ ತಿಳಿಸಿದೆ.

ಸಾರ್ವಜನಿಕರ ಸುರಕ್ಷತಾ ಕ್ರಮಗಳು

* ಸಾರ್ವಜನಿಕ ಸ್ಥಳಗಳು, ಪಾರ್ಕಿಂಗ್ ಸ್ಥಳಗಳಲ್ಲಿ ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ ಪ್ರವೇಶ ನಿಯಂತ್ರಣಗಳು, ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆ ಕಡ್ಡಾಯ

* ದೈಹಿಕವಾಗಿ ಮತ್ತು ತಾಂತ್ರಿಕ ಯಂತ್ರೋಪಕರಣಗಳ ಮೂಲಕ ತಪಾಸಣೆ

* ವಿಡಿಯೊ ತುಣುಕುಗಳನ್ನು 30 ದಿನಗಳು ಶೇಖರಿಸುವ ಸಾಮರ್ಥ್ಯವುಳ್ಳ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು

* ಸರ್ಕಾರವು ಸುರಕ್ಷಾ ಕಾಯ್ದೆಯಲ್ಲಿ ಸೂಚಿಸಿರುವ ಯಂತ್ರೋಪಕರಣಗಳ ಅಳವಡಿಕೆ

ನಿಯಮ ಉಲ್ಲಂಘಿಸಿದರೆ ದಂಡ

* ಕಾಯ್ದೆ ಜಾರಿಗೆ ಬಂದ ತಿಂಗಳಿಗೆ ನಿಯಮ ಪಾಲಿಸದಿದ್ದರೆ ₹ 5 ಸಾವಿರ ದಂಡ

* 2ನೇ ತಿಂಗಳಲ್ಲಿ ನಿಯಮ ಪಾಲನೆ ಮಾಡದೆ ಹೋದರೆ ₹ 10 ಸಾವಿರ ದಂಡ

* 3ನೇ ಬಾರಿ ನಿಯಮಗಳನ್ನು ಉಲ್ಲಂಘಿಸಿದರೆ ಆ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ತಾತ್ಕಾಲಿಕವಾಗಿ ಮುಚ್ಚಿಸುವುದು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !