ಭೈರವಾಡಗಿ ಗ್ರಾಮ: ಶಾಲೆಗೆ ಆವರಣಗೋಡೆ ನಿರ್ಮಿಸಿಕೊಡಿ

ಸೋಮವಾರ, ಏಪ್ರಿಲ್ 22, 2019
31 °C

ಭೈರವಾಡಗಿ ಗ್ರಾಮ: ಶಾಲೆಗೆ ಆವರಣಗೋಡೆ ನಿರ್ಮಿಸಿಕೊಡಿ

Published:
Updated:
Prajavani

ದೇವರಹಿಪ್ಪರಗಿ: ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ಜಿ.ಎಚ್.ಪಾಟೀಲ ಸರ್ಕಾರಿ ಪ್ರೌಢಶಾಲೆಯಿದೆ. 8–9 ವರ್ಷದ ಹಿಂದೆಯೇ ಈ ಶಾಲೆಯ ಮೈದಾನದ ಸುತ್ತಲಿನ ಆವರಣ ಗೋಡೆ ಬಿದ್ದಿದೆ. ಇದರ ಪರಿಣಾಮ ಹಲವು ಸಮಸ್ಯೆ ಸೃಷ್ಟಿಯಾಗಿವೆ.

ದನ–ಕರು ಉಪಟಳ, ನಾಯಿ ಕಾಟ ಹೆಚ್ಚಿದೆ. ಮಕ್ಕಳಿಗೆ ಭದ್ರತೆ ಎಂಬುದೇ ಇಲ್ಲವಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗಕ್ಕೆ ಈ ಸಂಬಂಧ ಹಲವು ಮನವಿ ಸಲ್ಲಿಸಿದರೂ ಸ್ಪಂದನೆ ಸಿಗದಾಗಿದೆ. ಇನ್ನಾದರೂ ಸಮಸ್ಯೆಗೆ ಇತಿಶ್ರೀ ಬೀಳಲಿದೆಯಾ ?

ಅಶೋಕ ಬಿರಾದಾರ, ಭೈರವಾಡಗಿ ಗ್ರಾಮಸ್ಥ ಪ್ರತಿಕ್ರಿಯೆ

ಮಾರ್ಚ್‌ 28ರ ‘ಪ್ರಜಾವಾಣಿ’ ಸಂಚಿಕೆಯ ಕುಂದು–ಕೊರತೆ ಅಂಕಣದಲ್ಲಿ ದೇವರಹಿಪ್ಪರಗಿ ಗ್ರಾಮದ ಪ್ರೌಢಶಾಲೆಗಳಿಗೆ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸುವಂತೆ ಒತ್ತಾಯ ಕೇಳಿ ಬಂದಿತ್ತು. ಇದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು, ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಎಸ್.ಬಿ.ಹೊಕ್ಕುಂಡಿ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !