ಬಿಡಾಡಿ ದನಗಳಿಗೆ ಗೋಶಾಲೆಯಲ್ಲಿ ಆಸರೆ ಕಲ್ಪಿಸಿ

ಬುಧವಾರ, ಮೇ 22, 2019
29 °C
ಕುಂದು–ಕೊರತೆ

ಬಿಡಾಡಿ ದನಗಳಿಗೆ ಗೋಶಾಲೆಯಲ್ಲಿ ಆಸರೆ ಕಲ್ಪಿಸಿ

Published:
Updated:

ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿಡಾಡಿ ದನಗಳ ಉಪಟಳ ಹೆಚ್ಚಿದೆ. ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ಬಡಾವಣೆಗಳಲ್ಲೂ ಬಿಡಾಡಿ ದನಗಳ ಹಾವಳಿ. ರಸ್ತೆಗಳ ಮೇಲೆ, ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ಈ ದನಗಳು ತಿರುಗಾಡುವುದು ದ್ವಿಚಕ್ರ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ.

ಬಂಜಾರಾ ಕ್ರಾಸ್‌, ಪಾಟೀಲ ಪ್ಲಾನೆಟ್ ಹಿಂಬದಿಯ ಬಡಾವಣೆಯಲ್ಲಿ ಹಿಂಡು ಹಿಂಡಾಗಿ ಬಿಡಾಡಿ ದನಗಳು ದಾಂಗುಡಿ ಇಡುತ್ತವೆ. ನಿವಾಸಗಳ ಮುಂಭಾಗವೇ ಸೆಗಣಿ ಹಾಕುವುದು ಸಾಮಾನ್ಯವಾಗಿದೆ. ಇದನ್ನು ಸ್ವಚ್ಛಗೊಳಿಸುವುದು ಆಯಾ ಮನೆಯವರ ಕರ್ಮವಾಗಿದೆ.

ಮಹಾನಗರ ಪಾಲಿಕೆ ಆಡಳಿತಕ್ಕೆ ಇದಕ್ಕೆ ಸಂಬಂಧಿಸಿದಂತೆ ದೂರಿದರೂ ಪ್ರಯೋಜನವಾಗದಾಗಿದೆ. ನಮಗೂ ಇದ್ಯಾವುದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಪಾಲಿಕೆಯ ಆಯುಕ್ತರು ಇನ್ನಾದರೂ ಇತ್ತ ಗಮನಹರಿಸಲಿ.

ವಾಸ್ತವವಾಗಿ ಈ ಬಿಡಾಡಿ ದನಗಳಿಗೆ ಇದೀಗ ಕುಡಿಯಲು ನೀರಿಲ್ಲ. ತಿನ್ನಲು ಮೇವಿಲ್ಲ. ನಿಕೃಷ್ಟ ಸ್ಥಿತಿಯಲ್ಲಿ ದಿನದೂಡುತ್ತಿವೆ. ಈ ಎಲ್ಲ ದನಗಳನ್ನು ಹಿಡಿದು, ಸಮೀಪದ ಗೋಶಾಲೆಗೆ ಸ್ಥಳಾಂತರಿಸಿ, ಪುಣ್ಯದ ಕೆಲಸವನ್ನು ಮಹಾನಗರ ಪಾಲಿಕೆ ಆಡಳಿತ ನಿರ್ವಹಿಸಲು ಮುಂದಾಗಲಿ.

–ಜೆ.ಜೆ.ದೊಡ್ಡಮನಿ, ಜೋರಾಪುರ ಬಡಾವಣೆ, ಪಾಟೀಲ ಪ್ಲಾನೆಟ್ ಹಿಂಭಾಗ, ವಿಜಯಪುರ

ಅಧಿಕಾರಿಗಳ ಪ್ರತಿಕ್ರಿಯೆ

ದೇವರಹಿಪ್ಪರಗಿ ತಾಲ್ಲೂಕಿನ ಭೈರವಾಡಗಿ ಗ್ರಾಮದ ಅಂಬೇಡ್ಕರ್ ಓಣಿಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದ ಸಮಸ್ಯೆ ಕುರಿತಂತೆ ಏ.25ರ ‘ಪ್ರಜಾವಾಣಿ’ ಸಂಚಿಕೆಯ ಕುಂದು–ಕೊರತೆ ಅಂಕಣದಲ್ಲಿ ಗಮನ ಸೆಳೆಯಲಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ ಬಸವನಬಾಗೇವಾಡಿ ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಿರಿಯ ಎಂಜಿನಿಯರ್‌ ಡಿ.ಬಿ.ಕಲಬುರ್ಗಿ ಪ್ರತಿಕ್ರಿಯಿಸಿದ್ದು, ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ, ಘಟಕದ ದುರಸ್ತಿ ನಡೆಸಿ, ನೀರು ಕೊಡಲು ಆರಂಭಿಸಲಾಗಿದೆ ಎಂದು ಹೇಳಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !