ನಗರ ಸ್ವಚ್ಛತೆಗೆ ಕ್ಲೀನಥಾನ್‌ ಪರಿಕಲ್ಪನೆ

7
ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಚರ್ಚೆ

ನಗರ ಸ್ವಚ್ಛತೆಗೆ ಕ್ಲೀನಥಾನ್‌ ಪರಿಕಲ್ಪನೆ

Published:
Updated:
ಸೌಮ್ಯಾರೆಡ್ಡಿ, ಶಾಸಕಿ

ಬೆಂಗಳೂರು: ಕ್ಲೀನಥಾನ್‌ ಪರಿಕಲ್ಪನೆಯಲ್ಲಿ ನಗರವನ್ನು ಸ್ವಚ್ಛವಾಗಿಡುವ ಯೋಜನೆಯನ್ನು ಚಾಲನೆಗೆ ತರಲಾಗಿದೆ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಶಿವರಾಜು ಸಮರ್ಥಿಸಿಕೊಂಡರು.

ಶನಿವಾರ ಸಾಮಾನ್ಯ ಸಭೆಯಲ್ಲಿ ಕಸ ವಿಲೇವಾರಿ ಸಂಬಂಧಿಸಿದಂತೆ ನಡೆದ ಬಿರುಸಿನ ಚರ್ಚೆಯಲ್ಲಿ ಪಾಲಿಕೆ ಆಡಳಿತವನ್ನು ಅವರು ಸಮರ್ಥಿಸಿಕೊಂಡರು.

‘ಕ್ಲೀನಥಾನ್‌ ಅಡಿ ಸ್ಮಾರ್ಟ್‌ ಕಸದ ಡಬ್ಬಿಗಳನ್ನು ಸ್ಥಾಪಿಸಲಾಗುವುದು. ಚಿಂದಿ ಆಯುವವರಿಗೂ ಗುರುತಿನ ಚೀಟಿ ನೀಡಿ ಸ್ವಚ್ಛತೆಗೆ ಅವರ ನೆರವು ಪಡೆಯಲಾಗುತ್ತದೆ. ಕಾಂಪೋಸ್ಟ್ ಘಟಕಗಳ ರಕ್ಷಣೆಗೆ ಸಿಬ್ಬಂದಿ ನೇಮಿಸಿದ್ದೇವೆ’ ಎಂದು ಅವರು ವಿವರಿಸಿದರು. 

‘ಪಾಲಿಕೆ ಇಷ್ಟೊಂದು ಶ್ರಮ ವಹಿಸುತ್ತಿದ್ದರೂ ಸ್ವಚ್ಛ ನಗರಗಳ ರ‍್ಯಾಂಕಿಂಗ್‌ ನೀಡುವಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡಿದೆ. ಸ್ವಚ್ಛತಾ ಸಂದೇಶವಿರುವ ಬ್ಯಾನರ್‌ಗಳಲ್ಲಿ ಮುಖ್ಯಮಂತ್ರಿ ಭಾವಚಿತ್ರ ಹಾಕಿದ್ದಕ್ಕೆ ಈ ರ‍್ಯಾಂಕಿಂಗ್‌ ಕಡಿಮೆಯಾಗಿರಬಹುದು’ ಎಂದು ಅವರು ಸಂದೇಹ ವ್ಯಕ್ತಪಡಿಸಿದರು.  

‘ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ಮಂಡೂರು ಕಸ ಸಂಸ್ಕರಣಾ ಘಟಕಕ್ಕೆ ಬೆಂಕಿ ಬಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಈಗ ಸಮ್ಮಿಶ್ರ ಆಡಳಿತವಿದೆ. ಸ್ವಚ್ಛತೆ ನಿರ್ವಹಣೆ ಚೆನ್ನಾಗಿಯೇ ನಡೆದಿದೆ’ ಎಂದು ಅವರು ಹೇಳಿದರು.

***

ಶಾಸಕಿ ಸೌಮ್ಯಾರೆಡ್ಡಿ, ಕಸದ ವಿಷಯ ಪ್ರಸ್ತಾಪಿಸಿ, ‘ನಗರದಲ್ಲಿ ಶೇ 60ರಷ್ಟಿದ್ದ ಕಸದ ನಿರ್ವಹಣೆ ಶೇ 50ಕ್ಕಿಳಿದಿದೆ. ಕಪ್ಪು ಪ್ರದೇಶಗಳ ಸಂಖ್ಯೆ ಹೆಚ್ಚಾಗಿದೆ’ ಎಂದು ಹೇಳಿದರು.

ನಗರದಲ್ಲಿ ಪ್ರಾಣಿಜನ್ಯ ಘನ ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಘಟಕಗಳ ಅಗತ್ಯವಿದೆ.
-ಸೌಮ್ಯಾರೆಡ್ಡಿ, ಶಾಸಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !