ರಾಜಕಾಲುವೆ ಒತ್ತುವರಿ ತೆರವುಗೊಳಿಸಿ

7
ಆರ್‌.ಆರ್ ನಗರ ವಲಯ ಉಸ್ತುವಾರಿ ಅಧಿಕಾರಿ ತ್ರಿಲೋಕಚಂದ್ರ ಸೂಚನೆ

ರಾಜಕಾಲುವೆ ಒತ್ತುವರಿ ತೆರವುಗೊಳಿಸಿ

Published:
Updated:
Deccan Herald

ಬೆಂಗಳೂರು: ‘ರಾಜಕಾಲುವೆಗೆ ಸಂಬಂಧಪಟ್ಟ ಸರ್ಕಾರಿ ಭೂಮಿಯನ್ನು ಯಾರೇ ಒತ್ತುವರಿ ಮಾಡಿದ್ದರೂ, ಹೆದರದೆ ತೆರವುಗೊಳಿಸಿ’ ಎಂದು ಪಾಲಿಕೆಯ ರಾಜರಾಜೇಶ್ವರಿನಗರ ವಲಯ ಉಸ್ತುವಾರಿ ಅಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಸೂಚಿಸಿದರು.

ಜಂಟಿ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಕೆಂಗೇರಿ, ಉಳ್ಳಾಲ, ದೊಡ್ಡಬಸ್ತಿ ಕೆರೆಗಳು ಮಲಿನಗೊಂಡಿವೆ. ಒತ್ತುವರಿ ಮಾಡಿಕೊಳ್ಳಲಾಗಿದೆ. ತ್ಯಾಜ್ಯ ಹಾಗೂ ಒಳಚರಂಡಿಯ ನೀರು ಕೆರೆಯ ಒಡಲು ಸೇರುತ್ತಿದೆ. ಆದರೂ ಕ್ರಮಕ್ಕೆ ಮುಂದಾಗಿಲ್ಲ ಏಕೆ’ ಎಂದು ಪ್ರಶ್ನಿಸಿದರು.

‘ವಿಶ್ವೇಶ್ವರಯ್ಯ ಬಡಾವಣೆ ಸುತ್ತಮುತ್ತ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ನೀರುಗಾಲುವೆ ಮುಚ್ಚಿಹಾಕಿ ಚರಂಡಿ ನೀರನ್ನು ಮಾತ್ರ ಉಳ್ಳಾಲ ಕೆರೆಗೆ ಹರಿ ಬಿಡಲಾಗಿದೆ. ಬಡಾವಣೆ ನಿರ್ಮಾಣದ ಸಂದರ್ಭದಲ್ಲಿ ಯಾವ ಅಧಿಕಾರಿ ನಿರ್ಲಕ್ಷ ತೋರುತ್ತಾರೋ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಮುಖ್ಯ ಎಂಜಿನಿಯರ್ ನಾಗರಾಜು ಹೇಳಿದರು.

‘ರಘುವನಹಳ್ಳಿ ಬಿಸಿಎಂಸಿ ಬಡಾವಣೆ, ಚನ್ನಸಂದ್ರ ಬಿಎಂಟಿಸಿ ಡಿಪೋ ಹಿಂಭಾಗ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಅಂಗಡಿಗಳ ನಿರ್ಮಾಣ ಮಾಡಿ ವ್ಯಾಪಾರ ನಡೆಸುತ್ತಿದ್ದಾರೆ. ಕೊಟ್ಟಿಗೆಪಾಳ್ಯ ಪಿ.ಎನ್.ಟಿ ಬಡಾವಣೆಯಲ್ಲಿ ರಾಜಕಾಲುವೆಗೆ ನೇರವಾಗಿ ಕಲುಷಿತ ನೀರು ಬಿಡಲಾಗುತ್ತಿದೆ’ ಎಂದು ಅವರು ಹೇಳಿದರು.

ತ್ರಿಲೋಕಚಂದ್ರ ಅವರು ಮಾತನಾಡಿ ‘ಎಲ್ಲಾ ಇಲಾಖೆಯ ಅಧಿಕಾರಿಗಳು ಏನೇನು ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಇನ್ನುಮುಂದೆ ಏನು ಮಾಡಬೇಕು ಎಂಬುದರ ಕುರಿತು ಸ್ಪಷ್ಠ ಮಾಹಿತಿ ನೀಡಬೇಕು. ಮುಂದಿನ ಸಭೆಗೆ ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿ, ಜಲಮಂಡಳಿ, ಬಿಡಿಎ, ಬೆಸ್ಕಾಂ ಮುಖ್ಯ ಎಂಜಿನಿಯರ್‍ಗಳನ್ನು ಸಭೆಗೆ ಕರೆಸಿ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡುತ್ತೇನೆ’ ಎಂದರು. 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !