ಮಾರಿಷಸ್‌ ಬಾಲಕಿಗೆ ಅಸ್ತಿಮಜ್ಜೆ ಕಸಿ

ಶನಿವಾರ, ಮಾರ್ಚ್ 23, 2019
24 °C
ಆಸ್ಟರ್ ಸಿಎಂಐ ಆಸ್ಪತ್ರೆ ವೈದ್ಯರಿಂದ ಚಿಕಿತ್ಸೆ

ಮಾರಿಷಸ್‌ ಬಾಲಕಿಗೆ ಅಸ್ತಿಮಜ್ಜೆ ಕಸಿ

Published:
Updated:

ಬೆಂಗಳೂರು: ‘ಕಾಂಪ್ಲಿಮೆಂಟ್ ಡಿಫಿಷಿಯನ್ಸಿ’ (ರೋಗ ಪ್ರತಿರೋಧ ವ್ಯವಸ್ಥೆಯ ನ್ಯೂನತೆ)ಯಿಂದಾಗಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದ ಮಾರಿಷಸ್‌ ದೇಶದ 13 ವರ್ಷದ ಬಾಲಕಿಗೆ ನಗರದ ಆಸ್ಟರ್ ಸಿಎಂಐ ಆಸ್ಪತ್ರೆ ವೈದ್ಯರು ಅಸ್ತಿಮಜ್ಜೆ ಕಸಿ ನಡೆಸಿದ್ದಾರೆ.

ಇದೊಂದು ಅಪರೂಪದ ಆನುವಂಶಿಕ ಕಾಯಿಲೆಯಾಗಿದ್ದು, ಈವರೆಗೂ ವಿಶ್ವದಲ್ಲಿ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆದಿರುವ ಹತ್ತಕ್ಕೂ ಕಡಿಮೆ ಮಂದಿಯಲ್ಲಿ ಈ ಬಾಲಕಿಯೂ ಒಬ್ಬಳು. ಏಷ್ಯಾದಲ್ಲಿಯೇ ಪ್ರಥಮ ಮೊದಲ ಬಾಲಕಿ ಎಂದು ಆಸ್ಪತ್ರೆಯ ಇಮ್ಯುನಾಲಜಿ ಮತ್ತು ರುಮಟಾಲಜಿ ವಿಭಾಗದ ಸಲಹಾ ತಜ್ಞ ಡಾ.ಸಾಗರ್ ಭಟ್ಟಾದ್ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘2014ರಲ್ಲಿ ಬ್ರಿಟನ್‌ನಲ್ಲಿ ಮೊದಲ ಬಾರಿಗೆ ಕಾಂಪ್ಲಿಮೆಂಟ್ ಡಿಫಿಷಿಯನ್ಸಿಗೆ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ಮಾಡಲಾಗಿತ್ತು’ ಎಂದರು.

‘ಬೋಲಾ ಅಬ್ದುಲ್ ಮತ್ತು ನಜೀರಾ ಬೋಲಾ ದಂಪತಿಯ ಮಗಳು ಸಿಯಾರ(ಹೆಸರು ಬದಲಿಸಲಾಗಿದೆ), 3 ವರ್ಷದವಳಿದ್ದಾಗಿನಿಂದ ಈ ಸಮಸ್ಯೆಗೆ ಒಳಗಾಗಿದ್ದಳು. ಹತ್ತು ವರ್ಷಗಳಿಂದ ಚರ್ಮದ ಸೋಂಕು, ಶ್ವಾಸಕೋಶದ ಸೋಂಕು, ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ತೊಂದರೆಗಳನ್ನು ಅನುಭವಿಸಿದ್ದಳು. ಇದಕ್ಕಾಗಿ ಮಾರಿಷಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅದು ಫಲಕಾರಿಯಾಗದ ಕಾರಣ ಬಾಲಕಿಯನ್ನು ಆಸ್ಟರ್ ಸಿಎಂಐ ಆಸ್ಪತ್ರೆಗೆ ಕರೆ ತರಲಾಯಿತು’ ಎಂದು ತಿಳಿಸಿದರು. 

‘ತಂದೆಯ ಅಸ್ತಿಮಜ್ಜೆ ಪಡೆದು ಬಾಲಕಿಗೆ ಕಸಿ ಮಾಡಲಾಗಿದೆ. ಆರು ತಿಂಗಳಲ್ಲಿ ಸಂಪೂರ್ಣ ಗುಣ ಹೊಂದಲಿದ್ದಾಳೆ’ ಎಂದು ವೈದ್ಯರು ಹೇಳಿದರು.

ಡಾ.ಸ್ಟಾಲಿನ್ ಮಾತನಾಡಿ, ‘ಪ್ರತಿ 2 ಸಾವಿರ ಮಂದಿಯಲ್ಲಿ ಒಬ್ಬರು ಇಂಥ ಸಮಸ್ಯೆಗೆ ಒಳಗಾಗುತ್ತಾರೆ. ಬೆಂಗಳೂರಿನ ಜನಸಂಖ್ಯೆಗೆ ಹೋಲಿಸಿದರೆ 5 ಸಾವಿರ ಮಂದಿಯಲ್ಲಿ ಈ ಸಮಸ್ಯೆ ಇರುತ್ತದೆ. ಆದರೆ, ಇದನ್ನು ಸರಿಯಾಗಿ ಗುರುತಿಸಿ ಚಿಕಿತ್ಸೆ ನೀಡುವ ಅಗತ್ಯವಿದೆ’ ಎಂದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !