ತ.ರಾ.ಸು ಬಂಡಾಯ ಪ್ರವೃತ್ತಿಯ ಪ್ರಗತಿಶೀಲ ಸಾಹಿತಿ

ಸೋಮವಾರ, ಮೇ 20, 2019
32 °C

ತ.ರಾ.ಸು ಬಂಡಾಯ ಪ್ರವೃತ್ತಿಯ ಪ್ರಗತಿಶೀಲ ಸಾಹಿತಿ

Published:
Updated:
Prajavani

ಚಿಂತಾಮಣಿ: ತ.ರಾ.ಸು ಬಂಡಾಯ ಪ್ರವೃತ್ತಿಯ ಪ್ರಗತಿಶೀಲ ಸಾಹಿತಿಯಾಗಿದ್ದರು ಎಂದು ಕನ್ನಡ ಸಾಹಿತ್ಯ ಬಳಗದ ತಾಲ್ಲೂಕು ಘಟಕದ ಅಧ್ಯಕ್ಷ ನಂಜಪ್ಪರೆಡ್ಡಿ ನುಡಿದರು.

ಸಾಹಿತ್ಯ ಬಳಗವು ಬುಧವಾರ ನಗರದಲ್ಲಿ ಆಯೋಜಿಸಿದ್ದ ತ.ರಾ.ಸು ಜನ್ಮ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.

ತ.ರಾ.ಸು ಅವರು 9ನೇ ವರ್ಷ ವಯಸ್ಸಿನಲ್ಲೇ ಅಸ್ಪೃಶ್ಯತೆ ವಿರುದ್ಧ ಭಾಷಣ ಮಾಡಿ ಗಮನ ಸೆಳೆದಿದ್ದರು. 17ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲೊಂಡಿದ್ದರು. 1937ರಲ್ಲಿ ನಿಜಲಿಂಗಪ್ಪನವರ ಜೊತೆಯಲ್ಲಿ ಧ್ವಜಸತ್ಯಾಗ್ರಹದಲ್ಲಿ ಭಾಗವಹಿಸಿ ಬಂಧನಕ್ಕೊಳಗಾಗಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಜೈಲು ಸೇರಿದ್ದರು ಎಂದು ತಿಳಿಸಿದರು.

ರಾಜಕಾರಣ ಮತ್ತು ಸ್ವಾತಂತ್ರ್ಯ ಚಳವಳಿಯ ನಂಟನ್ನು ಹೊಂದಿದ್ದ ತ.ರಾ.ಸು ಸಾಹಿತ್ಯದ ಬಗೆಗೂ ಅಪಾರ ಒಲವು ಉಳ್ಳವರಾಗಿದ್ದರು. ಬಾಲ್ಯದಿಂದಲೇ ಬಂಡಾಯ ಪ್ರವೃತ್ತಿ ತೋರುತ್ತಾ ಸಮಾಜದಲ್ಲಿ ನೆಲೆಯೂರಿದ್ದ ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತಿದ್ದರು. ಪ್ರಗತಿಶೀಲ ಸಾಹಿತ್ಯ ರಚನೆಯ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದರು ಎಂದು ನುಡಿದರು.

ಪ್ರತಿಕೋದ್ಯಮದಲ್ಲೂ ತೊಡಗಿಸಿಕೊಂಡಿದ್ದ ತ.ರಾ.ಸು ಅವರು ‘ಜೀವನ’, ‘ವಿಶ್ವ ಕರ್ನಾಟಕ’, ‘ಪ್ರಜಾಮತ’, ‘ವಾಹಿನಿ’, ‘ಚೇತನ’, ‘ಪ್ರಜಾವಾಣಿ’ ಮತ್ತಿತರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು ಎಂದರು.

ತ.ರಾ.ಸು 70 ಕಾದಂಬರಿಗಳು, 4 ಕಥಾಸಂಗ್ರಹ, 3 ರೇಡಿಯೊ ರೂಪಕ, 2 ಐತಿಹಾಸಿಕ ನಾಟಕ, 1 ಭಾಷಾಂತರ ಕೃತಿ ರಚಿಸಿದ್ದಾರೆ. ಅವರ ಹಲವು ಕಾದಂಬರಿಗಳು ಚಲನಚಿತ್ರಗಳಾಗಿ ಜನಮನ್ನಣೆ ಗಳಿಸಿವೆ. ‘ದುರ್ಗಾಸ್ತಮಾನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟಗಳ ನಡುವೆಯೂ ಉತ್ತಮ ಸಾಹಿತ್ಯ ರಚಿಸಿ ಜನಮಾನಸದಲ್ಲಿ ಉಳಿದಿರುವ ತ.ರಾ.ಸು ಕನ್ನಡ ಸಾಹಿತ್ಯ ಲೋಕದ ಮೇರು ಶಿಖರ ವಾಗಿದ್ದರು ಎಂದು ಹೇಳಿದರು.

ಚುಟುಕು ಕವಿ ಶಿ.ಮ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಬಿ.ವಿ.ರಾಮಚಂದ್ರಾರೆಡ್ಡಿ ಮಾತನಾಡಿದರು. ಗಾಯಕರಾದ ಜಿ.ವಿ.ಗುರುನಾಥ್ ಮತ್ತು ಇಪ್ಜಾನ್ ಕನ್ನಡ ಗೀತೆಗಳನ್ನು ಗಾಯನ ಮಾಡಿದರು.

ಬಳಗದ ಪದಾಧಿಕಾರಿಗಳಾದ ಜಿ.ವಿ.ರಾಮಕೃಷ್ಣ, ಕೆ.ವಿ.ಸುರೇಶ್, ಜೀನತ್ ಉನ್ನೀಸಾ, ಸುನಿಲ್ ಕುಮಾರ್, ಕೆ.ಎನ್.ಅಕ್ರಂಪಾಷಾ, ಸಿ.ಎನ್.ಕೃಷ್ಣಪ್ಪ ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !