ಜ.11ರಿಂದ ವುಮೆನ್ಸ್ ಅಲೆಯನ್ಸ್‌ ಕಾಫಿ ಸಂತೆ

7

ಜ.11ರಿಂದ ವುಮೆನ್ಸ್ ಅಲೆಯನ್ಸ್‌ ಕಾಫಿ ಸಂತೆ

Published:
Updated:

ಬೆಂಗಳೂರು: ನಗರದ ಒರಾಯನ್‌ ಮಾಲ್‌ ಆವರಣದಲ್ಲಿನ ಕೊಳದ ಪ್ರದೇಶದಲ್ಲಿ ಜ.11, 12 ಮತ್ತು 13ರಂದು ಕಾಫಿಯ ಘಮ ತುಂಬಿರಲಿದೆ. ಕಾರಣ, ವುಮೆನ್ಸ್ ಕಾಫಿ ಅಲೆಯನ್ಸ್‌ ಇಂಡಿಯಾ ಸಮೂಹವು ಕಾಫಿ ತೋಟಗಳ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ‘ಕಾಫಿ ಸಂತೆ’ ಆಯೋಜಿಸುತ್ತಿದೆ.

ಈ ಸಂತೆಯಲ್ಲಿ ಘಮ–ಘಮಿಸುವ, ಸ್ವಾದಿಷ್ಟವಾದ, ಬಗೆ–ಬಗೆಯ ಕಾಫಿ ಪೇಯಗಳನ್ನು ನೀವು ಹೀರಬಹುದು. ಯಂತ್ರೋಪಕರಣಗಳನ್ನು ಬಳಸಿಕೊಂಡು ರುಚಿಕಟ್ಟಾದ ಕಾಫಿಗಳನ್ನು ತಯಾರಿಸುವ ಸ್ಪರ್ಧೆಗಳನ್ನು ನೋಡಬಹುದು. ಕಾಫಿ ಗಿಡದ ಒಣ ಕಾಂಡಗಳಿಂದ ರಚಿಸಲಾದ ಕಲಾಕೃತಿಗಳನ್ನು ಕಾಣಬಹುದು. ಕಾಫಿ ಬೀಜಗಳಿಂದ ತಯಾರಿಸಿದ ಆಭರಣಗಳನ್ನು ಧರಿಸಬಹುದು. 

ಹುರಿದ ಮತ್ತು ಹಸಿ ಕಾಫಿ ಬೀಜಗಳನ್ನು, ವಿಧ–ವಿಧವಾದ ಬ್ರಾಂಡ್‌ಗಳ ಕಾಫಿ ಪುಡಿಗಳನ್ನು ಕೊಳ್ಳಬಹುದು. ಈ ಸಂತೆಯಲ್ಲಿ ಸಂಗೀತ, ನೃತ್ಯ ಮತ್ತು ಯೋಗ ಪ್ರದರ್ಶನಗಳು ಇರಲಿವೆ. ಮಕ್ಕಳಿಗಾಗಿ ಚಿತ್ರಕಲಾ ರಚನಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

‘ಕಾಫಿ ಬೆಳೆಗಾರರ ಮತ್ತು ಕಾರ್ಮಿಕರ ಸ್ಥಿತಿಗಳ ಕುರಿತ ವಿಚಾರ ಗೋಷ್ಠಿಗಳನ್ನು ಸಂತೆಯಲ್ಲಿ ಆಯೋಜಿಸಿದ್ದೇವೆ’ ಎಂದು ಸಮೂಹದ ಸ್ಥಾಪಕಿ ಎನ್‌.ಸುನಾಲಿನಿ ಮೇನನ್‌ ಅವರು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

‘ಈ ಸಂತೆಯಲ್ಲಿ ಭಾಗವಹಿಸುವ ಮಳಿಗೆಗಳಿಂದ ಸಂಗ್ರಹಿಸಿದ ಮೊತ್ತವನ್ನು ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕಾಫಿ ತೋಟಗಳಲ್ಲಿನ ಕಾರ್ಮಿಕರು ಮತ್ತು ಅವರ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣಕ್ಕೆ ವಿನಿಯೋಗಿಸುತ್ತೇವೆ’ ಎಂದು ಅವರು ಮಾಹಿತಿ ನೀಡಿದರು. 

‘ಈ ಸಂತೆಯಲ್ಲಿ 100ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಈ ಬಾರಿ ಸುಮಾರು 10,000 ಜನ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಸಮೂಹದ ಖಜಾಂಚಿ ಊರ್ವಶಿ ಮಲ್ಹೋತ್ರಾ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !