ದಾರಿಗಾಗಿ ಕಾಲೇಜು ಕಾಂಪೌಂಡ್‌ ಒಡೆದರು: ಆರೋಪ

7

ದಾರಿಗಾಗಿ ಕಾಲೇಜು ಕಾಂಪೌಂಡ್‌ ಒಡೆದರು: ಆರೋಪ

Published:
Updated:
ಹೆಸರಘಟ್ಟದಲ್ಲಿ ಕಾಲೇಜು ಆವರಣ ಗೋಡೆ ಕೆಡವಿರುವ ನೋಟ

ಬೆಂಗಳೂರು: ಹೆಸರಘಟ್ಟ ಗ್ರಾಮದ ಪ್ರಥಮದರ್ಜೆ ಕಾಲೇಜಿನ ಕಾಂಪೌಂಡ್ ಒಡೆದು ಭೂ ಮಾಲೀಕರು ಬಡಾವಣೆಗೆ ದಾರಿ ನಿರ್ಮಿಸಿಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ಕಾಲೇಜಿಗೆ ಸೇರಿದ ಒಂದು ಎಕರೆ ಜಾಗದಲ್ಲಿ ಆವರಣ ಗೋಡೆ ನಿರ್ಮಿಸಲಾಗಿತ್ತು. ಕೆಲವು ಭೂ ಮಾಲೀಕರು ಸುತ್ತಮುತ್ತ ಬಡಾವಣೆ 
ನಿರ್ಮಿಸಿಕೊಂಡಿದ್ದಾರೆ. ಅಲ್ಲಿಗೆ ಹೋಗಲು ದಾರಿಗಾಗಿ ಆವರಣ ಗೋಡೆಯನ್ನೇ ಒಡೆದಿದ್ದಾರೆ. ಬಡಾವಣೆಯು ಮಾಜಿ ಶಾಸಕರೊಬ್ಬರ ಸಂಬಂಧಿಗೆ ಸೇರಿದೆ. ಅವರ ಪ್ರಭಾವ ಬಳಸಿ ಗೋಡೆ ಒಡೆಯಲಾಗಿದೆ. ಇದರಿಂದಾಗಿ ಆಟದ ಮೈದಾನಕ್ಕೆ ಜಾಗ ಕೊರತೆ ಉಂಟಾಗಿದೆ’ ಎಂದು ವಿದ್ಯಾರ್ಥಿಗಳು ಹೇಳಿದರು.

ಹೆಸರಘಟ್ಟ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಬಿ.ಕೃಷ್ಣಯ್ಯ ಅವರು ‘ಕಾಲೇಜು ಪಕ್ಕದಲ್ಲಿ ಕೃಷಿ ಭೂಮಿ ಇದೆ ಎಂದು ಸುಳ್ಳು ಹೇಳಿ ಕಾಂಪೌಂಡನ್ನು ಭೂ ಮಾಲೀಕರು ಒಡೆದಿದ್ದಾರೆ. ನಿಜಕ್ಕೂ ಇದು ವಿಷಾದನೀಯ’ ಎಂದು ಹೇಳಿದರು.

‘ಕಾಂಪೌಂಡ್‌ ಮರು ನಿರ್ಮಾಣ ಮಾಡಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ’ ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು. 

ಕಾಲೇಜಿನ ಪ್ರಾಂಶುಪಾಲ ಎಚ್. ಹರೀಶ್‌ ಪ್ರತಿಕ್ರಿಯಿಸಿ, ‘ಕಾಲೇಜಿನ ಭೂಮಿ ಸಂಪೂರ್ಣವಾಗಿ ಒತ್ತುವರಿಯಾಗಿದೆ. ಮತ್ತೆ ಭೂಮಿಯನ್ನು ಅಳತೆ ಮಾಡಿಕೊಡಲು ಎಂದು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದೇನೆ. ಕಾಂಪೌಂಡ್ ಒಡೆಯುವಾಗ ಯಾರೂ ನನ್ನನ್ನು ಕೇಳಿಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 4

  Happy
 • 3

  Amused
 • 1

  Sad
 • 1

  Frustrated
 • 4

  Angry

Comments:

0 comments

Write the first review for this !