ಅಮೆರಿಕಾದಲ್ಲಿ ಭಾರತದಲ್ಲಿರುವಂತೆ ಜಾತಿ ಮತ್ತು ಮೀಸಲಾತಿ ವ್ಯವಸ್ಥೆ ಇದೆಯೇ?

7

ಅಮೆರಿಕಾದಲ್ಲಿ ಭಾರತದಲ್ಲಿರುವಂತೆ ಜಾತಿ ಮತ್ತು ಮೀಸಲಾತಿ ವ್ಯವಸ್ಥೆ ಇದೆಯೇ?

ಯು.ಎಸ್.ಕಾನ್ಸುಲೇಟ್, ಚೆನ್ನೈ
Published:
Updated:
ಅಮೆರಿಕಾದಲ್ಲಿ ಭಾರತದಲ್ಲಿರುವಂತೆ ಜಾತಿ ಮತ್ತು ಮೀಸಲಾತಿ ವ್ಯವಸ್ಥೆ ಇದೆಯೇ?

1. ಡಾ. ಮಲ್ಲಿಕಾರ್ಜುನ ಕುಂಬಾರರಾಜೂರ (ತಾ:ರೋಣ, ಜಿ: ಗದಗ)

ಅಮೆರಿಕಾದಲ್ಲಿ ಭಾರತದಲ್ಲಿರುವಂತೆ ಜಾತಿ ಮತ್ತು ಮೀಸಲಾತಿ ವ್ಯವಸ್ಥೆ ಇದೆಯೇ? ಅಮೆರಿಕಾದವರು ದೇವರ ಅಸ್ತಿತ್ವವನ್ನು ಒಪ್ಪುತ್ತಾರೆಯೇ? ಅಸ್ತಿತ್ವವನ್ನು ಒಪ್ಪದಿದ್ದರೆ, ಭಾರತಕ್ಕೆ ಬಂದಾಗ ಮೂಢತನವನ್ನು ಪ್ರದರ್ಶಿಸುತ್ತಾರೆ ಏಕೆ?


ಅಮೆರಿಕದಲ್ಲಿ ಜಾತಿಪದ್ಧತಿಯಿಲ್ಲ. ಸರ್ವರಿಗೂ ಸಮಾನ ಹಕ್ಕು ನೀಡಲು ನಮ್ಮ ದೇಶ ಸದಾ ಬದ್ಧ. ಹಲವಾರು ವಿಶೇಷ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ, ಈ ಹಕ್ಕನ್ನು ಜಾರಿಗೊಳಿಸಲು ಹಾಗೂ ತುಳಿತಕ್ಕೊಳಗಾದ ಸಮದಾಯಗಳಿಗೆ ರಕ್ಷಣೆ ಒದಗಿಸಲು ಹಲವಾರು ವಿಶೇಷ ಕಾನೂನುಗಳನ್ನು ಹಾಗೂ ವಿಶೇಷ ಕ್ರಮಗಳನ್ನು ಅಮೆರಿಕ ಕೈಗೊಂಡಿರುವುದನ್ನು ನಾವು ಇತಿಹಾಸದುದ್ದಕ್ಕೂ ಕಾಣಬಹುದು. “ಸರ್ವರನ್ನೂ ಸಮಾನರನ್ನಾಗಿ ಸೃಷ್ಟಿಸಲಾಗಿದೆ” ಎಂದು ನಮ್ಮ ಸಂವಿಧಾನದಲ್ಲಿಯೇ 200 ವರ್ಷಕ್ಕಿಂತಲೂ ಹಿಂದೆಯೇ ಬರೆಯಲಾಗಿದೆ ಹಾಗೂ ಆ ಆಶಯವನ್ನು ನನಸಾಗಿಸಲು, ನಮ್ಮ ಸರ್ಕಾರ ಹಾಗೂ ಸಮಾಜಗಳು ಯತ್ನಿಸುತ್ತಿವೆ.ಅಮೆರಿಕಾದ ಶೇ. 80ಕ್ಕೂ ಹೆಚ್ಚು ಜನರು ನಿರ್ದಿಷ್ಟ ಧರ್ಮವೊಂದರ ಜೊತೆ -ಕ್ರಿಶ್ಚಿಯನ್ನರು  ಗುರುತಿಸಿಕೊಳ್ಳುತ್ತಾರೆ. ಅಮೆರಿಕದಲ್ಲೀಗ ಮೂವತ್ತು ಲಕ್ಷಕ್ಕೂ ಹೆಚ್ಚು ಭಾರತೀಯ ಮೂಲದವರು ಇರುವುದರಿಂದ ಹಿಂದೂ, ಇಸ್ಲಾಂ ಸೇರಿದಂತೆ ಭಾರತದಲ್ಲಿರುವ ಎಲ್ಲ ಧರ್ಮಗಳನ್ನು ಅಲ್ಲಿಯೂ ಕಾಣಬಹುದು.2. ಜೈವಿಠ್ಠಲ ರಾವ್, ಮೈಸೂರು

ಭಾರತದಲ್ಲಿರುವಂತೆ ಅಮೆರಿಕದಲ್ಲಿಯೂ ಪ್ರಮುಖ ಸ್ಥಳಗಳಿಗೆ ಮುಖಂಡರ ಹೆಸರಿಡುವ ಪದ್ಧತಿ ಇದೆಯೇ? ಉದಾಹರಣೆಗೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ರಾಜೀವ್ ಗಾಂಧಿ ಕ್ರೀಡಾ ಮೈದಾನ, ಗಾಂಧಿನಗರ ಇತ್ಯಾದಿ. ಇದೇ ರೀತಿ ಅಮೆರಿಕಾದಲ್ಲಿಯೂ ಗತಿಸಿದ ಮುಖಂಡರ ಹೆಸರಿನಿಂದ ಅಲ್ಲಿಯ ಪ್ರಮುಖ ಸ್ಥಳಗಳಿಗೆ ನಾಮಕರಣ ಮಾಡಿದ್ದಾರೆಯೇ?


ಹೌದು, ಭಾರತದಂತೆಯೇ, ಅಮೆರಿಕದಲ್ಲೂ ಪ್ರಮುಖ ಕಟ್ಟಡಗಳು ಹಾಗೂ ಸ್ಥಳಗಳಿಗೆ ಖ್ಯಾತ ವ್ಯಕ್ತಿಗಳ ಹೆಸರನ್ನಿಡಲಾಗುತ್ತದೆ.  ಉದಾಹರಣೆಗೆ, ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, (ಜಾನ್ ಎಫ್ ಕೆನಡಿ ಅವರು ಅಮೆರಿಕಾದ 35ನೇ ಅಧ್ಯಕ್ಷರು) ರೋನಾಲ್ಡ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣ, (ರೋನಾಲ್ಡ್ ರೇಗನ್ ಅವರು ಅಮೆರಿಕಾದ 40ನೇ ಅಧ್ಯಕ್ಷರು). ಅಮೆರಿಕದ ಪ್ರಥಮ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ವಾಷಿಂಗ್ಟನ್ ಅವರ ನೆನಪಿಗಾಗಿಯೇ ಅಮೆರಿಕ ರಾಜಧಾನಿಯನ್ನು ಅವರ ಹೆಸರಿನಿಂದಲೇ ಕರೆಯಲಾಗಿದೆ.3. (ಈ ಕುರಿತು ಹಲವಾರು ಓದುಗರು ಪ್ರಶ್ನೆಗಳನ್ನು ಕೇಳಿದ್ದಾರೆ.)

ವಿಸಾ ನಿರಾಕರಣೆಯ ಕಾರಣಗಳೇನು?


ಆಯ್ದ ಕೆಲ ವರ್ಗಗಳನ್ನು ಹೊರತುಪಡಿಸಿದರೆ, ಪ್ರತಿಯೊಬ್ಬ ವಿಸಾ ಅರ್ಜಿದಾರರನ್ನು ಅಮೆರಿಕಾದ ರಾಯಭಾರ ಕಚೇರಿ ಅಥವಾ ದೂತಾವಾಸಗಳಲ್ಲಿ ರಾಜತಾಂತ್ರಿಕ ಅಧಿಕಾರಿಯೊಬ್ಬರು ಸಂದರ್ಶಿಸಿ, ಅಮೆರಿಕ ವಲಸೆ ಕಾಯ್ದೆಯನ್ನು ಆಧರಿಸಿ, ನಿರ್ಣಯ ಕೈಗೊಳ್ಳುತ್ತಾರೆ.  ವಿಸಾ ಅರ್ಜಿಯೊಂದನ್ನು ಹಲವಾರು ಕಾರಣಗಳಿಗಾಗಿ ತಿರಸ್ಕರಿಸಬಹುದು. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಮುಂದೆ ಕಾಣಿಸಲಾಗಿರುವ ವೆಬ್ ಸೈಟಿನಲ್ಲಿ ಪಡೆಯಬಹುದು: http://chennai.usconsulate.gov/refused-or-pending-visa.html
4. ಕೊಕ್ಕಡ ವೆಂಕಟ್ರಮಣ ಭಟ್, ಮಂಡ್ಯ

ಅಮೆರಿಕ ಸಂಯುಕ್ತ ಸಂಸ್ಥಾನದ ಲಾಂಛನ, ಧ್ಯೇಯವಾಕ್ಯ ಹಾಗೂ ಅಮೆರಿಕ ಧ್ವಜದ ಬಗೆಗೆ ಸಚಿತ್ರ ವಿವರಣೆ ನೀಡುವಿರಾ 


 ಅಮೆರಿಕ ಸಂಯುಕ್ತ ಸಂಸ್ಥಾನದ ಧ್ವಜ ಸ್ವಾತಂತ್ರ್ಯದ ಸಂಕೇತ. ಇದನ್ನು ಎಲ್ಲ ಸಾರ್ವಜನಿಕ ಹಾಗೂ ಕಟ್ಟಡಗಳ ಮೇಲೆ ಹಾರಿಸಲಾಗುತ್ತದೆ. ಅಮೆರಿಕ ಧ್ವಜದಲ್ಲಿ ಹದಿಮೂರು  ಅಡ್ಡ ಪಟ್ಟಿಗಳು ಹಾಗೂ ಆಯತಾಕಾರದ ನೀಲಿ ಹಿನ್ನೆಲೆಯಲ್ಲಿ 50 ಬಿಳಿ ನಕ್ಷತ್ರಗಳನ್ನು ಕಾಣಬಹುದು.

 

ಅಮೆರಿಕದಲ್ಲಿರುವ 50 ರಾಜ್ಯಗಳನ್ನು ಈ ನಕ್ಷತ್ರಗಳು ಪ್ರತಿನಿಧಿಸುತ್ತವೆ. ಇದರಲ್ಲಿರುವ 13 ಕೆಂಪು ಮತ್ತು ಬಿಳಿ ಪಟ್ಟಿಗಳು, ಅಮೆರಿಕ ಸಂಯುಕ್ತ ಸಂಸ್ಥಾನದ ಉಗಮಕ್ಕೆ ಕಾರಣವಾದ  13 ಬ್ರಿಟೀಷ್ ವಸಾಹಾತುಗಳನ್ನು ಪ್ರತಿನಿಧಿಸುತ್ತವೆ.ಧ್ವಜದ ಮೊದಲ ಆವೃತ್ತಿ ಸಿದ್ಧವಾಗಿದ್ದು 1777ರಲ್ಲಿ. ಆ ಬಳಿಕ ಸೇರ್ಪಡೆಯಾದ ರಾಜ್ಯಗಳಿಗೂ ಪ್ರಾತಿನಿಧ್ಯ ಕಲ್ಪಿಸಲು, ಧ್ವಜದಲ್ಲಿನ ನಕ್ಷತ್ರಗಳ ಸಂಖ್ಯೆಯನ್ನು 13 ರಿಂದ 50ಕ್ಕೇರಿಸಲಾಯಿತು. ಈ 50 ನಕ್ಷತ್ರಗಳ ಧ್ವಜಕ್ಕೆ ಅಧ್ಯಕ್ಷ ಡೈಟ್ ಡಿ. ಐಸೆನ್ಹೋವರ್ ಅವರು 1959ರಲ್ಲಿ ಅನುಮೋದನೆ ನೀಡಿದರು.~ದೇವರಲ್ಲಿ ನಮ್ಮ ನಂಬುಗೆ~ (“In God we trust”) ಎಂಬ ಪದಗುಚ್ಛಕ್ಕೆ ರಾಷ್ಟ್ರದ ಧ್ಯೇಯ ವಾಕ್ಯದ ಸ್ಥಾನ ನೀಡಿದವರು ಅಧ್ಯಕ್ಷ ಡೈಟ್ ಡಿ. ಐಸೆನ್ಹೋವರ್. ಈ ಪದಗುಚ್ಛವನ್ನು ಫ್ರಾನ್ಸಿಸ್ ಸ್ಕಾಟ್ ಕೀ ಅವರು 1812ರ ಯುದ್ಧದ ಸಂದರ್ಭದಲ್ಲಿ ಬರೆದ ಕವನವೊಂದರಿಂದ ಆಯ್ದುಕೊಳ್ಳಲಾಗಿದೆ. ಅಮೆರಿಕ ರಾಷ್ಟ್ರಗೀತೆಗೆ ಫ್ರಾನ್ಸಿ ಸ್ಕಾಟ್ ಕೀ ಅವರ ಕವನವೇ ಆಧಾರ.ಅಮೆರಿಕ ರಾಷ್ಟ್ರ ಲಾಂಛನವನ್ನು ~ದಿ ಗ್ರೇಟ್ ಸೀಲ್~ ಎಂದು ಕರೆಯಲಾಗುತ್ತದೆ. ಅಮೆರಿಕ ಸ್ವತಂತ್ರವಾದ ಸ್ವಲ್ಪ ಕಾಲದಲ್ಲಿಯೇ ಇದನ್ನು 1782ರಲ್ಲಿ ವಿನ್ಯಾಸಗೊಳಿಸಲಾಯಿತು. ಇದನ್ನು ಈಗಲೂ ನಾಣ್ಯಗಳು, ಅಂಚೆ ಚೀಟಿಗಳು ಹಾಗೂ ಪಾಸ್ ಪೋರ್ಟುಗಳಲ್ಲಿ ಕಾಣಬಹುದು.

 

ರೆಕ್ಕೆಗಳನ್ನು ಹರಡಿಕೊಂಡಿರುವ ಬಿಳಿ ತಲೆಯ ಹದ್ದು ವಿಶೇಷ ಗುರಾಣಿಯೊಂದಕ್ಕೆ ಆಸರೆಯಾಗಿದೆ. ಒಂದು ಕಾಲಿನಲ್ಲಿ ಬಾಣಗಳನ್ನು, ಮತ್ತೊಂದರಲ್ಲಿ ಶಾಂತಿ ಸೂಚಕವಾದ ಆಲೀವ್ ಟೊಂಗೆಯನ್ನು ಹಿಡಿದಿದೆ. ~ದಿ ಗ್ರೇಟ್ ಸೀಲ್~ ಮತ್ತೊಂದು ಬದಿಯಲ್ಲಿ (ಹಿಂಬದಿ) ಪಿರಮಿಡ್ ಇದೆ. ಅಮೆರಿಕ ವಿದೇಶಾಂಗ ಇಲಾಖೆಯ ಸಭಾಂಗಣದಲ್ಲಿ ಈಗಲೂ ~ದಿ ಗ್ರೇಟ್ ಸೀಲ್~ ಪ್ರದರ್ಶಿಸಲಾಗಿದೆ. ಹಲವಾರು ಅಧಿಕೃತ ದಾಖಲೆಗಳಲ್ಲಿ ಇದನ್ನು ಬಳಸಲಾಗುತ್ತದೆ.5. ಎಚ್. ಎಸ್. ರಾಜಶೇಖರ್,ಹಣಿಯೂರು, ಚನ್ನಪಟ್ಟಣ ತಾಲೂಕು

ಅಂಗವಿಕಲರ ಸ್ವಾವಲಂಬನೆಗಾಗಿ ಅಮೆರಿಕ ಸರಕಾರ ಕೈಗೊಂಡಿರುವ ಕಾರ್ಯಕ್ರಮಗಳು ಮತ್ತು ಸವಲತ್ತುಗಳಾವುವು? ಅವರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಅಂತರರಾಷ್ಟ್ರಿಯ ಸಂಸ್ಥೆಗಳಾವುವು ತಿಳಿಸಿ?


ಅಮೆರಿಕ ದೇಶದ ರಾಜ್ಯ ಹಾಗೂ ಸ್ಥಳೀಯ ಸರ್ಕಾರಗಳು, ಸಾರ್ವನಿಜಕ ವಸತಿ, ವಾಣಿಜ್ಯ ಸೌಕರ್ಯಗಳು, ಸಾರಿಗೆ ಹಾಗೂ ದೂರ ಸಂಪರ್ಕ ಇಲಾಖೆಗಳಲ್ಲಿ ಅಂಗ ವೈಕಲ್ಯದ ಆಧಾರದ ಮೇಲೆ ಉದ್ಯೋಗ ನಿರಾಕರಿಸುವುದನ್ನು The Americans with Disabilities Act (ADA) ನಿಷೇಧಿಸಿದೆ. ಇದು ಅಮೆರಿಕಾದ ಸಂಸತ್ತಿಗೂ ಅನ್ವಯಿಸುತ್ತದೆ.ಈ ಕಾಯ್ದೆಯ ಶೀರ್ಷಿಕೆ 1ರ ಅನ್ವಯ, ಹದಿನೈದು ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಉದ್ಯೋಗದಾತರು ಇತರರಿಗೆ ಲಭ್ಯವಿರುವ ಸಮಸ್ತ ಅವಕಾಶಗಳನ್ನು ಅರ್ಹ ಅಂಗವಿಕಲರಿಗೂ ಕಲ್ಪಿಸಬೇಕು. ಸಿಟಿ ಬಸ್ಸು, ರೈಲು ಹಾಗೂ ಇತರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಸೇವೆಗಳನ್ನು ಅಂಗವಿಲಕರಿಗೂ ನೀಡಬೇಕು.ಅವರನ್ನು ಹೊರಗಿಡುವ, ತಾರತಮ್ಯ ಮಾಡುವ ಹಾಗೂ ಅಸಹಜವಾಗಿ ವರ್ತಿಸುವುದನ್ನು ನಿಷೇಧಿಸಲು ಅನುವಾಗುವಂತೆ ಸೂಕ್ತ ಸೌಲಭ್ಯಗಳನ್ನು ಸಾರ್ವಜನಿಕ ಸೌಕರ್ಯಗಳು ಹೊಂದಿರಬೇಕು. ಅಲ್ಲದೇ, ವಿಕಲ ಚೇತನರಿಗೂ ಅನುಕೂಲವಾಗುವಂತೆ ವಾಸ್ತುಶಿಲ್ಪ, ಸರ್ಕಾರದ ನೀತಿ, ಪ್ರಕ್ರಿಯೆಗಳನ್ನು ರೂಪಿಸಬೇಕು. ದೃಷ್ಟಿ, ಧ್ವನಿ ಹಾಗೂ ಶ್ರವಣ ಶಕ್ತಿಯಿಲ್ಲದವರಿಗೂ ಸಂವಹನಕ್ಕೆ ಅನುಕೂಲವಾದ ವ್ಯವಸ್ಥೆ ಮಾಡಬೇಕು ಎಂದು ವಿಧಿಸಲಾಗಿದೆ.ಸಂವಹನ, ದೂರಸಂಪರ್ಕ, ನ್ಯಾಯಬೆಲೆಯ ವಸತಿ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅಂಗವಿಕಲರಿಗೆ ನೆರವು ಒದಗಿಸಲು ಹಲವಾರು ಅವಕಾಶಗಳನ್ನೂ ಕಲ್ಪಿಸಲಾಗಿದೆ.6. ರುಕ್ವಿಂದರ್, ಬೆಂಗಳೂರು

ಮಾನ್ಯರೆ, ನಾನು ಇಂಜಿನಿಯರಿಂಗ್ ವ್ಯಾಸಂಗವನ್ನು ಪೂರ್ಣಗೊಳಿಸಿರುವೆ. ನಾನು ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇಚ್ಛಿಸಿರುವೆ. ಮುಂಬರುವ ಜನವರಿಯಲ್ಲಿ ಸ್ನಾತಕೋತ್ತರ ವ್ಯಾಸಂಗ ಮುಂದುವರಿಸಲು ಯೋಚಿಸಿದ್ದೇನೆ. ಇದು ಸಕಾಲವೆ? ಸ್ಕಾಲರ್‌ಶಿಪ್ ದೊರಕುವ ಸಾಧ್ಯತೆಗಳ ಬಗ್ಗೆ ತಿಳಿಸಿ ಹಾಗೂ ಇಂಥ ಸ್ಕಾಲರ್ ಶಿಪ್ ಪಡೆಯಲು ಜಿ.ಆರ್.ಇ. ಹಾಗೂ ಐಇಎಲ್ ಟಿಎಸ್ ಪರೀಕ್ಷೆಗಳಲ್ಲಿ ಎಷ್ಟು ಅಂಕ ಪಡೆದಿರಬೇಕು ?


ಮುಂಬರುವ ಜನವರಿ ತಿಂಗಳಲ್ಲಿ ಶಿಕ್ಷಣ ಮುಂದುವರಿಸಬೇಕೆಂದಿದ್ದರೆ, ತಾವು ಈಗಾಗಲೇ ಜಿಆರ್ ಇ ಮತ್ತು ಟೋಫೆಲ್/ ಐಇಎಲ್ ಟಿಎಸ್ ಪರೀಕ್ಷೆಗಳನ್ನು ಪೂರ್ಣಗೊಳಿಸಿರಬೇಕು. ಅಲ್ಲದೇ, ಈ ಅಂಕಗಳನ್ನು ನೀವು ಸಂಬಂಧಿಸಿದ ವಿಶ್ವವಿದ್ಯಾಲಯಗಳಿಗೆ ಕಳುಹಿಸಿರಬೇಕು.

ಆರ್ಥಿಕ ನೆರವು ಅಥವಾ ಸ್ಕಾಲರ್‌ಶಿಪ್ ಕುರಿತ ಮಾಹಿತಿಗಾಗಿ ಸಂಬಂಧಿಸಿದ ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ. ಉನ್ನತ ಶಿಕ್ಷಣದ ಹೆಚ್ಚಿನ ಮಾಹಿತಿಗಾಗಿ, ಅಮೆರಿಕ-ಭಾರತ ಶಿಕ್ಷಣ ಪ್ರತಿಷ್ಠಾನ (ಇಈ)ದ ಚೆನ್ನೈ ಕಚೇರಿಯನ್ನು (044) 2857 4423/4131 ಅಥವಾ ಅಖಿಲ ಭಾರತ ಟೋಲ್ ಫ್ರಿ ದೂರವಾಣಿ ಸಂಖ್ಯೆ: 1-800-103-1231 ಈಮೇಲ್: usiefchennai@usief.org.in ಸಂಪರ್ಕಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry