ಬುಧವಾರ, ಡಿಸೆಂಬರ್ 11, 2019
24 °C

ಎಫ್‌ಡಿಐ: ಹೆಚ್ಚುತ್ತಿರುವ ಅವಕಾಶ

ಕೆ. ಜಿ. ಕೃಪಾಲ್
Published:
Updated:
ಎಫ್‌ಡಿಐ: ಹೆಚ್ಚುತ್ತಿರುವ ಅವಕಾಶ

ಷೇರುಪೇಟೆಯಲ್ಲಿನ ಏರಿಳಿತಗಳು ಊಹೆಗೂ ನಿಲುಕದಂತೆ ಸಾಗುತ್ತಿವೆ. 2012ರ ಆರಂಭದಿಂದಲೂ ಏಕಮುಖ ಏರಿಕೆಯನ್ನು ಪ್ರದರ್ಶಿಸುತ್ತಿರುವ ಸಂವೇದಿ ಸೂಚ್ಯಂಕವು ಹಿಂದಿನವಾರ ಒಟ್ಟು 584 ಅಂಶಗಳಷ್ಟು  ಮುನ್ನಡೆ ಸಾಧಿಸಿ16,739 ಅಂಶಗಳಲ್ಲಿ ವಾರಾಂತ್ಯ ಕಂಡಿದೆ. ಎಸ್ಸಾರ್ ಆಯಿಲ್ ಕಂಪೆನಿಯ ರೂ6,300 ಕೋಟಿ ಮಾರಾಟ ತೆರಿಗೆಯ ಬಗೆಗಿನ ಮೇಲ್ಮನವಿ ತಿರಸ್ಕೃತವಾದುದು, ಭಾರತಿ ಏರ್‌ಟೆಲ್ ಕಂಪೆನಿಗೆ ರೂ1,067 ಕೋಟಿ ತೆರಿಗೆ ಪಾವತಿಸುವಂತೆ  ಆದಾಯ ತೆರಿಗೆ ಇಲಾಖೆ ನೋಟೀಸ್ ಜಾರಿಗೊಳಿಸಿದ್ದು,  ವೊಡಾಫೋನ್ ಪರವಾದ ನ್ಯಾಯಾಲಯದ ತೀರ್ಪು ಇತ್ಯಾದಿ ಸಂಗತಿಗಳು ವಹಿವಾಟಿನ ಮೇಲೆ ಪ್ರಭಾವ ಬೀರಿದವು.ವಿಮಾನಯಾನದಲ್ಲಿ ಶೇ 49 ರಷ್ಟು ವಿದೇಶೀ ನೇರ ಬಂಡವಾಳ ಹೂಡಿಕೆ ಮುಂತಾದ ಬೆಳವಣಿಗೆಗಳಿಂದ ಷೇರು ದರಗಳಲ್ಲಿ ಹೆಚ್ಚಿನ ಏರಿಳಿತ ಕಂಡುಬಂತು.ಕಳೆದ ವಾರದ ಬೆಳವಣಿಗೆ ಗಮನಿಸಿದಾಗ ಬ್ಯಾಂಕಿಂಗ್ ವಲಯದ ಷೇರುಗಳ ಏರಿಕೆ ಕಾಣಬಹುದು. ಬಂಡವಾಳ ಕೊರತೆ, ಅಧಿಕ ಬಡ್ಡಿದರ ಮುಂತಾದ ಒತ್ತಡಗಳಿಂದ ಕುಗ್ಗಿದ್ದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಕ್ರಮಗಳು ಉತ್ತೇಜನ ನೀಡಿವೆ.  ಭಾರತೀಯ ಸ್ಟೇಟ್ ಬ್ಯಾಂಕ್‌ಗೆ (ಎಸ್‌ಬಿಐ) ಮಾರ್ಚ್ ಅಂತ್ಯದೊಳಗೆ ರೂ6,000 ದಿಂದ ರೂ8,000 ಕೋಟಿ ಬಂಡವಾಳದ ನೆರವನ್ನು  ಕೇಂದ್ರ ಸರ್ಕಾರ ನೀಡಲಿದೆ. ಜನವರಿ 24 ರಂದು ಭಾರತೀಯ     ರಿಸರ್ವ್ ಬ್ಯಾಂಕ್ ಪ್ರಕಟಿಸಲಿರುವ ಆರ್ಥಿಕ ನೀತಿಯಲ್ಲಿ, ಬಡ್ಡಿದರ ಇಳಿಸುವ ಸಾಧ್ಯತೆಗಳು ಹೆಚ್ಚಿವೆ. ಈ ಅಂಶಗಳು ಬ್ಯಾಂಕಿಂಗ್  ವಲಯದ ಷೇರುಗಳ ಬೆಲೆ ಗಗನಕ್ಕೆ ಚಿಮ್ಮಲು ಕಾರಣವಾಯಿತು.ವಿದೇಶಿ ವಿತ್ತೀಯ ಸಂಸ್ಥೆಗಳು ಒಟ್ಟು ರೂ3,367 ಕೋಟಿ ಮೌಲ್ಯದ ಹೂಡಿಕೆ ಮಾಡಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ಒಟ್ಟು ರೂ2,110 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ರೂ57.40 ಲಕ್ಷ ಕೋಟಿಯಿಂದ ರೂ 58.91 ಲಕ್ಷಕ್ಕೆ ಏರಿಕೆ ಕಂಡಿದೆ.ಲಾಭಾಂಶ ವಿಚಾರ

ಸರ್ಕಾರಿ ಸ್ವಾಮ್ಯದ ಕಂಪೆನಿಗಳಾದ ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ 25 ರಂದು ಪ್ರಕಟಿಸುವ ಲಾಭಾಂಶಕ್ಕೆ ಜನವರಿ 31 ನಿಗದಿತ ದಿನವಾಗಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿ. 27 ರಂದು, ಗೇಲ್ ಇಂಡಿಯಾ 28 ರಂದು ಎನ್‌ಎಂಡಿಸಿ 30 ರಂದು ತಮ್ಮ ತ್ರೈಮಾಸಿಕ ಫಲಿತಾಂಶದೊಂದಿಗೆ ಲಾಭಾಂಶ ಪ್ರಕಟಿಸಲಿವೆ. ಮೊಯಿಲ್ ಇಂಡಿಯಾ ಫೆಬ್ರುವರಿ 17ರಂದು ಲಾಭಾಂಶ ವಿತರಿಸಲಿದೆ.  ಕಾರ್‌ಮೊಬೈಲ್ಸ್ 22 ರಂದು, ಎಸ್‌ಕೆಎಫ್ ಇಂಡಿಯಾ ಮತ್ತು ಕೋರ್‌ಮಂಡಲ್ ಇಂಟರ್‌ನ್ಯಾಷನಲ್ 23 ರಂದು, ಹೈದರಾಬಾದ್ ಇಂಡಸ್ಟ್ರೀಸ್, ಇಂಡಿಯನ್ ಕಾರ್ಡ್ ಕ್ಲಾತಿಂಗ್, ರಾಣಿ ಎಂಜಿನ್ಸ್ ಝೆನ್ಸಾರ್ ಟೆಕ್ನಾಲಜಿ ಕಂಪೆನಿಗಳು 24 ರಂದು, ಆಟೋಮೊಬೈಲ್ ಕಾರ್ಪೊರೇಷನ್ ಆಫ್ ಗೋವಾ, ಸೀಸಾ ಗೋವಾ, ನಿಲಾಮಲೈ ಆಗ್ರೊ ಇಂಡಸ್ಟ್ರೀಸ್‌ಗಳು 25ರಂದು, ಸುಂದರಂ ಫೈನಾ ನ್ಸ್, ಎವಿಟಿ ನ್ಯಾಚುರಲ್ ಪ್ರಾಡಕ್ಟ್ಸ್‌ಗಳು 27 ರಂದು, ಬ್ಲೂಡಾರ್ಟ       ಎಕ್ಸ್‌ಪ್ರೆಸ್, ಇಷ್ಕಾಲ್ಯಾಬ್, ಫೈನಾನ್ಶಿಯಲ್ ಟೆಕ್ನಾಲಜಿ 31 ರಂದು ಲಾಭಾಂಶ ವಿತರಣೆ ಪರಿಶೀಲಿಸಲಿವೆ. ಹಾಗೆಯೇ ಎಡಿಲ್‌ವೈಸ್ ಕ್ಯಾಪಿಟಲ್ 24 ರಂದು ಫಲಿತಾಂಶದ ಜೊತೆಗೆ ಲಾಭಾಂಶ ಘೋಷಿಸಲಿದೆ. ಫೆಬ್ರುವರಿ ಒಂದರಂದು ಟ್ಯೂಬ್ ಇನ್ವೆಸ್ಟ್‌ಮೆಂಟ್ಸ್ ಮತ್ತು 4 ರಂದು ಕಾರ್ಜೊರೆಂಡಂ ಯೂನಿವರ್ಸಲ್‌ಗಳು ಲಾಭಾಂಶ ಪ್ರಕಟಿಸುವ ಕಾರ್ಯಸೂಚಿ ಹೊಂದಿವೆ.ಪೋಲಾರಿಸ್ ಫೈನಾನ್ಶಿಯಲ್ ಟೆಕ್ನಾಲಜಿ ಶೇ 40 (ಮು.ಬೆಲೆ ರೂ5), ಟಿ.ಸಿ.ಎಸ್. ಶೇ 300 (ಮು.ಬೆಲೆ ರೂ 1), ವಿಪ್ರೊ ಶೇ 100 (ಮು.ಬೆಲೆ ರೂ 2) ಲಾಭಾಂಶ ಪ್ರಕಟಿಸಿವೆ.ವಹಿವಾಟಿಗೆ ಬಿಡುಗಡೆ

*ಮೇ 2002 ರಿಂದ ಅಮಾನತ್ತಿನಲ್ಲಿದ್ದ ಗಣೇಶ್ ಹೋಲ್ಡಿಂಗ್ಸ್ ಲಿ. 27 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.*ಸೆಪ್ಟೆಂಬರ್ 1998ರಿಂದಲೂ ಇದ್ದ ಅಮಾನತನ್ನು ತೆರವುಗೊಳಿಸಿಕೊಂಡು 27 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ, ಆಶೀ ಇನ್ಫೋಟೆಕ್ ಲಿ. ಬಿಡುಗಡೆಯಾಗಲಿದೆ. ನವೆಂಬರ್ 1998ರಿಂದ  ಅಮಾನತ್ತಿನಲ್ಲಿರುವ ಇಂಡಿಯಾ ಇನ್‌ಫ್ರಾಸ್ಪೇಸ್ ಕಂಪೆನಿಯು ಅಮಾನತು ತೆರವುಗೊಳಿಸಿಕೊಂಡು 20 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು.ಗ್ಯಾಲಕ್ಸಿ ಅಗ್ರಿಕೊ ಎಕ್ಸ್‌ಪೋರ್ಟ್ಸ್ ಲಿ. ಕಂಪೆನಿಯ ಮೇಲೆ ಡಿಸೆಂಬರ್ 2004 ರಿಂದ ವಿಧಿಸಿದ್ದ ಅಮಾನತು ತೆರವುಗೊಳಿಸಿದ ಕಾರಣ 23 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.*ಮಹಾವೀರ್ ಇಂಪೆಕ್ಸ್ ಲಿ. ಕಂಪೆನಿಯು ಜುಲೈ 2000ದಿಂದಲೂ ಇದ್ದ ಅಮಾನತನ್ನು ತೆರವುಗೊಳಿಸಿಕೊಂಡು 23 ರಿಂದ ಟಿ ಗುಂಪಿನಲ್ಲಿ ವಹಿವಾಟಾಗಲಿದೆ.*ಪ್ಲಾಂಟರ್ ಪೊಲಿಸಾಕ್ಸ್ ಲಿ. ಕಂಪೆನಿಯು ಜುಲೈ 2003 ರಿಂದ ಅಮಾನತುಗೊಂಡಿದ್ದು 23 ರಿಂದ `ಟಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ. ಸೆಪ್ಟೆಂಬರ್ 2001 ರಿಂದ ಅಮಾನತ್ತಿನಲ್ಲಿದ್ದ ಅಸೋಸಿಯೇಟೆಡ್ ಫಿನ್‌ಲೀಸ್ ಲಿ, ಅಮಾನತು ತೆರವುಗೊಳಿಸಿಕೊಂಡು ಜನವರಿ 24 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.`ಎಫ್‌ಡಿಐ~ಗೆ ಅವಕಾಶ

ವಿದೇಶಿ ನೇರ ಬಂಡವಾಳ  ಹೂಡಿಕೆದಾರರಿಗೆ ಭಾರತೀಯ ಷೇರುಪೇಟೆಗಳಲ್ಲಿ ಹೂಡಿಕೆ ಮಾಡಲು `ಸೆಬಿ~ ಅನುಮತಿ ನೀಡಿದೆ. ಈ ಸುತ್ತೋಲೆ ಆಧರಿಸಿ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ  23 ರಿಂದ ವಹಿವಾಟು ನಡೆಸಲು ಅನುಮತಿ ನೀಡಿದೆ. ಆಸಕ್ತ ಸದಸ್ಯರು ಹೊಸ ಸಾಫ್ಟ್‌ವೇರ್ ಅಳವಡಿಸಿಕೊಂಡು ಈ ಚಟುವಟಿಕೆ ನಡೆಸಬಹು.ವಿಮಾನಯಾನ ವಲಯದಲ್ಲಿ ಶೇ 49ರಷ್ಟು ವಿದೇಶಿ ನೇರ ಬಂಡವಾಳಕ್ಕೆ  ಅನುಮತಿ ನೀಡಲಾಗಿದೆ. ಇದರಿಂದ ವಿದೇಶಿ ವಿಮಾನಯಾನ ಕಂಪೆನಿಗಳು ನಮ್ಮ ದೇಶೀಯ ವೈಮಾನಿಕ ಸೇವೆಯಲ್ಲಿ ಬಂಡವಾಳ ತೊಡಗಿಸಬಹುದು. ಆರ್ಥಿಕ ಒತ್ತಡದಲ್ಲಿರುವ ದೇಶೀಯ ವಿಮಾನಯಾನ ಕಂಪೆನಿಗಳಿಗೆ ಸಂಪನ್ಮೂಲ ಸಂಗ್ರಹಣೆಗೆ ಈ ಕ್ರಮವು ಅವಕಾಶ  ಮಾಡಿಕೊಡುತ್ತದೆ.ಟಾಟಾ ಸನ್ಸ್ ಲಿ. ಸಂಸ್ಥೆಯು ಹೊಂದಿರುವ ರೂ1.20 ಕೋಟಿ ಟಾಟಾ ಸ್ಟೀಲ್ ಲಿ ಕಂಪೆನಿಯ ವಾರಂಟನ್ನು ರೂ 594 ರಂತೆ 1.20 ಕೋಟಿ ಷೇರಿಗೆ ಪರಿವರ್ತಿಸಿದೆ. 98863-13380

 (ಮಧ್ಯಾಹ್ನ 4.30ರ ನಂತರ)

ಪ್ರತಿಕ್ರಿಯಿಸಿ (+)