ವಾರ್ಷಿಕ ಗರಿಷ್ಠ ಮಟ್ಟಕ್ಕೆ ಸೂಚ್ಯಂಕ

7

ವಾರ್ಷಿಕ ಗರಿಷ್ಠ ಮಟ್ಟಕ್ಕೆ ಸೂಚ್ಯಂಕ

ಕೆ. ಜಿ. ಕೃಪಾಲ್
Published:
Updated:

ಷೇರುಪೇಟೆಯ ಸಂವೇದಿ ಸೂಚ್ಯಂಕ 19 ಸಾವಿರದ ಗಡಿ ದಾಟಿ ಎಲ್ಲರ ಗಮನ ಸೆಳೆದಿದ್ದು ತನ್ನೊಂದಿಗೆ ಮಧ್ಯಮ, ಕೆಳಮಧ್ಯಮ ಶ್ರೇಣಿ ಸೂಚ್ಯಂಕದ ಕಂಪೆನಿಗಳನ್ನುಸೆಳೆದುಕೊಂಡಿದ್ದು ಉತ್ತಮ ಬೆಳವಣಿಗೆ.ಇದೇ ವೇಗದ ಚಟುವಟಿಕೆ ಮುಂದುವರೆದರೆ ವರ್ಷಾಂತ್ಯದ ವೇಳೆಗೆ 20 ಸಾವಿರದ ಗಡಿ ದಾಟುವುದು ಅಸಾಧ್ಯವೇನಲ್ಲ. ಈ ರೀತಿಯ ವೇಗದ ಏರಿಕೆಗೆ ಪ್ರಮುಖ ಕಾರಣ ವಿದೇಶಿ ವಿತ್ತೀಯ ಸಂಸ್ಥೆಗಳಿಂದ ಬಂದ ಒಳಹರಿವು. ಜೊತೆಗೆ ಕೇಂದ್ರ ಸರ್ಕಾರ ಜಾರಿಗೊಳಿಸಬೇಕೆಂದಿರುವ ಚಿಲ್ಲರೆ ಮಾರಾಟದಲ್ಲಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆ.ಅಂತರರಾಷ್ಟ್ರೀಯ ರೇಟಿಂಗ್ ಏಜೆನ್ಸಿ ಮೂಡೀಸ್‌ದೇಶದ ಆರ್ಥಿಕತೆಯು ಸ್ಥಿರತೆಯತ್ತ ತಿರುಗಿದ್ದು ರಾಜಕೀಯ ಇಚ್ಚಾಶಕ್ತಿ ಬಲವಾಗಿದೆ ಎಂಬ ಅಭಿಪ್ರಾಯ ಪೇಟೆಯಲ್ಲಿ ಮೂಡಿದೆ. ಕಳೆದ ಗುರುವಾರ ಮೂಲಾಧಾರಿತ ಪೇಟೆಯ ಚುಕ್ತಾ ದಿನವಾಗಿದ್ದು ಅಂದಿನ ಒಟ್ಟು ವಹಿವಾಟಿನ ಗಾತ್ರ ರೂ3.51 ಲಕ್ಷ ಕೋಟಿ ತಲುಪಿದ್ದು ಅಚ್ಚರಿಯುಂಟು ಮಾಡಿದರೂ ಅದು ಅಲ್ಪಕಾಲೀನ ಪ್ರಭಾವಿಯಾಗಿದೆ.ಸಣ್ಣ ಹೂಡಿಕೆದಾರರು ಷೇರುಪೇಟೆಯಲ್ಲಿ ಆಸಕ್ತಿ ಮೂಡಿಸಿಕೊಂಡು ಉತ್ತಮ ಕಂಪೆನಿಗಳಲ್ಲಿ ಹೂಡಿಕೆಗೆ ಮುಂದಾಗಬಹುದಾಗಿದೆ. ಈ ಹಿಂದೆ ಎಫ್‌ಡಿಎ ಗೊಂದಲದ ಕಾರಣ ಮಾರಾಟಕ್ಕೊಳಗಾದ ಇಪ್ಕಾಲ್ಯಾಬ್, ಅಲ್ಲದೆ ಸಿಪ್ಲಾ, ಪ್ಲೆಥಿಕೋ ಫಾರ್ಮಾಗಳಲ್ಲದೆ ಟೈಟಾನ್ ಇಂಡಸ್ಟ್ರೀಸ್, ಕೆನರಾ ಬ್ಯಾಂಕ್, ಪೆಂಟಲೂನ್ ರೀಟೇಲ್‌ಗಳ ಜೊತೆಗೆ ಯೂನಿಟೆಕ್, ವಿಡಿಯೋಕಾನ್ ಇಂಡಸ್ಟ್ರೀಸ್ ಏರಿಕೆಯಿಂದ ವಿಜೃಂಭಿಸಿದವು.ಒಟ್ಟಾರೆ 833 ಅಂಶಗಳಷ್ಟು ಏರಿಕೆಯಿಂದ ಸೆನ್ಸೆಕ್ಸ್, 304 ಅಂಶಗಳಷ್ಟು ಮುನ್ನಡೆಯಿಂದ ಮಧ್ಯಮಶ್ರೇಣಿ ಸೂಚ್ಯಂಕ 218ಅಂಶಗಳಷ್ಟು ಏರಿಕೆಯನ್ನು ಕೆಳಮಧ್ಯಮ ಶ್ರೇಣಿ ಸೂಚ್ಯಂಕ ಪಡೆದವು. ವಿದೇಶಿ ವಿತ್ತೀಯ ಸಂಸ್ಥೆಗಳು ಒಟ್ಟು ರೂ4,437 ಕೋಟಿ ಹೂಡಿಕೆ ಮಾಡಿದರೆ ಸ್ಥಳೀಯ ಸಂಸ್ಥೆಗಳು ರೂ2,099 ಕೋಟಿ ಮೊತ್ತದ ಷೇರು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ಹಿಂದಿನ ವಾರದ ರೂ64.89 ಲಕ್ಷ ಕೋಟಿಯಿಂದರೂ67.38 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಈ ಜಿಗಿತವು ಪೇಟೆಯ ವಾತಾವರಣಬಿಂಬಿಸುತ್ತದೆ.ಲಾಭಾಂಶ ವಿಚಾರ

ಆಟೋ ಮೊಟಿವ್ ಆಕ್ಸಲ್ಸ್ ಶೇ 100, ಜೈಪುರ್ ಶುಗರ್ಸ್ ಶೇ 25, ಎಂ.ಆರ್.ಎಫ್. ಶೇ 190, ಪಿಕ್ಸ್ ಟ್ರಾನ್ಸ್‌ಮಿಷನ್ ಶೇ 30 (ನಿಗದಿತ ದಿನಾಂಕ: 8.12.12), ವಾಲ್‌ಚಂದ್ ನಗರ್ ಇಂಡಸ್ಟ್ರೀಸ್ ಶೇ 50 (ಮು.ಬೆ. ರೂ1).ದಾಖಲೆಯ ಏರಿಕೆ

ಸಂವೇದಿ ಸೂಚ್ಯಂಕ, ಮಧ್ಯಮ ಶ್ರೇಣಿ, ಕೆಳಮಧ್ಯಮ ಶ್ರೇಣಿ, ಬ್ಯಾಂಕೆಕ್ಸ್ ಸೂಚ್ಯಂಕಗಳು 30 ರಂದು ವಾರ್ಷಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡರೆ ಎಫ್.ಎಂ.ಸಿ.ಜಿ. ಸೂಚ್ಯಂಕ 29 ರಂದು ವಾರ್ಷಿಕ ಗರಿಷ್ಠ ದಾಖಲಿಸಿತು.ಬಿಎಸ್‌ಇ-ಕಾರ್ಬೊನೆಕ್ಸ್

ಬಾಂಬೆ ಷೇರು ವಿನಿಮಯ ಕೇಂದ್ರವು ಶುಕ್ರವಾರದಂದು ಬಿಎಸ್‌ಇ ಕಾರ್ಬೊನೆಕ್ಸ್ ಸೂಚ್ಯಂಕವನ್ನು ಆರಂಭಿಸಿತು. ಈ ಸೂಚ್ಯಂಕವು ಭಾರತದಲ್ಲಿ ಮಾತ್ರವಲ್ಲದೆ ಅಭಿವೃದ್ಧಿಶೀಲ ದೇಶಗಳಲ್ಲಿ ಪ್ರಥಮ ವಾಗಿದೆ ಇದರ ಮೂಲಕ ವಾತಾವರಣ ಕಲುಷಿತತೆಯನ್ನು ತಡೆಗಟ್ಟಲು ಸಹಕಾರಿಯಾಗಿದೆ.ಮೊದಲಿಗೆ ಬಿಎಸ್‌ಇ 100ರ ಕಂಪೆನಿಗಳನ್ನು ಈ ಸೂಚ್ಯಂಕದಲ್ಲಿ ಸೇರಿಸಲಾಗುವುದು. ಈ ಕೈಗಾರಿಕೆಗಳು ಹೊರಸೂಸುವ ಹಸಿರು ಅನಿಲ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಈ ಸೂಚ್ಯಂಕವು ಸಹಕಾರಿಯಾಗುತ್ತದೆ.ವಾತಾವರಣ ಬದಲಾವಣೆಯ ನಿಯಂತ್ರಣಕ್ಕೆ ಕಂಪೆನಿಗಳು ಕೈಗೊಂಡ ಕ್ರಮಗಳು ಈ ಕಾರ್ಬೊನೆಕ್ಸ್ ಸೂಚ್ಯಂಕದಿಂದ ತಿಳಿದುಬರುವುದು ಹಾಗೂ ಇಂತಹ ಕಂಪನಿಗಳು ತಮ್ಮ ಸಂಪನ್ಮೂಲ ಸಂಗ್ರಹಣೆಯ ಕಾರ್ಯದಲ್ಲಿ ಉತ್ತಮವಾದ ಸ್ಪಂದನವು ಅಂತರರಾಷ್ಟ್ರೀಯ ಪೇಟೆಯಲ್ಲಿ ಲಭ್ಯವಾಗುವುದು.ಆರಂಭಿಕ ಷೇರು ವಿತರಣೆ ವಿಚಾರ

ರೇಟಿಂಗ್ ಕಂಪೆನಿ ಕ್ರೆಡಿಟ್ ಅನಲಿಸಿಸ್ ಅಂಡ್ ರಿಸರ್ಚ್ ಲಿ. ಡಿಸೆಂಬರ್ 7 ರಿಂದ 71.99 ಲಕ್ಷ ಷೇರನ್ನು ಮಾರಾಟದ ಕರೆ ಮೂಲಕ ಆರಂಭಿಕ ಷೇರು ವಿತರಣೆಗೆ ಮುಂದಾಗಿದೆ. ವಿತರಣೆಯು ಡಿಸೆಂಬರ್ 11 ರವರೆಗೂ ತೆರೆದಿದ್ದು ವಿತರಣೆಯ ಬೆಲೆ ರೂ700 ರಿಂದ ರೂ750. ಎನ್‌ಎಸ್‌ಇ ಮತ್ತು ಬಿಎಸ್‌ಇಗಳಲ್ಲಿ ವಹಿವಾಟಿಗೆ ನೋಂದಾಯಿಸಿಕೊಳ್ಳಲಿರುವ ಈ ಕಂಪೆನಿಗೆ ಸಣ್ಣ ಹೂಡಿಕೆದಾರರಿಗೆ ಗರಿಷ್ಠ ಎರಡು ಲಕ್ಷ ರೂಪಾಯಿಗಳ ಮಿತಿ ಇದೆ. ಪಿ ಸಿ ಜುವೆಲ್ಲರ್ಸ್ ಲಿಮಿಟೆಡ್ಈ ಕಂಪೆನಿಯು ಡಿಸೆಂಬರ್ 10 ರಿಂದ 12 ರವವರೆಗೆ 4.47 ಲಕ್ಷ ಷೇರನ್ನು ಸಾರ್ವಜನಿಕ ವಿತರಣೆ ಮಾಡಲಿದೆ. ಇದರಲ್ಲಿ 1.56 ಕೋಟಿ ಷೇರನ್ನು ಸಣ್ಣ ಹೂಡಿಕೆದಾರರಿಗೆ ವಿತರಿಸಲಿದೆ. ಎನ್‌ಎಸ್‌ಇ ಮತ್ತು ಬಿಎಸ್‌ಇ ಗಳಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿರುವ ಈ ಕಂಪೆನಿಗೆ ರೇಟಿಂಗ್ ಸಂಸ್ಥೆಗಳಾದ ಕೇರ್ ಮತ್ತು ಕ್ರಿಸಿಲ್‌ಗಳು ಮೂರರ ಗ್ರೇಡಿಂಗ್ ನೀಡಿವೆ. ವಿತರಣೆ ಬೆಲೆಯು 5 ದಿನ ಮುಂಚಿತವಾಗಿ ಪ್ರಕಟಿಸಲಿದೆ.4 ಭಾರತಿ ಇನ್‌ಫ್ರಾಟೆಲ್ ಲಿ. ಕಂಪೆನಿಯು ಡಿಸೆಂಬರ್ 11 ರಿಂದ 14ರ ವರೆಗೆ ಪ್ರತಿ ಷೇರಿಗೆ ರೂ210 ರಿಂದ ರೂ240 ರ ವರೆಗಿನ ಅಂತರದಲ್ಲಿ ಆರಂಭಿಕ ಷೇರು ವಿತರಣೆ ಮಾಡಲಿದೆ. ಸಣ್ಣ ಹೂಡಿಕೆದಾರರಿಗೆ ರೂ10ರ ರಿಯಾಯಿತಿಯನ್ನು ಕಂಪೆನಿ ನೀಡಲಿದೆ. ಸಣ್ಣ ಹೂಡಿಕೆದಾರರ ಮಿತಿ ರೂ2 ಲಕ್ಷ .ಕನಿಷ್ಠ 50 ಷೇರು ಮತ್ತು ಗುಣಕಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.ಹೊಸ ಷೇರಿನ ವಿಚಾರ

ಸ್ಟೀಲ್ ಎಕ್ಸ್‌ಚೇಂಜ್ ಆಫ್ ಇಂಡಿಯಾ ಡಿಸೆಂಬರ್ 3 ರಿಂದ ಬಾಂಬೆ ಷೇರು ವಿನಿಮಯ ಕೇಂದ್ರದ `ಬಿ' ಗುಂಪಿನಲ್ಲಿ ವಹಿವಾಟಾಗಲಿದೆ.ಮುಖ ಬೆಲೆ ಸೀಳಿಕೆ ವಿಚಾರ

4ಏಶಿಯನ್‌ಲಾಕ್ ಕ್ಯಾಪಿಟಲ್ ಅಂಡ್ ಫೈನಾನ್ಸ್ ಷೇರಿನ ಮುಖ ಬೆಲೆ ರೂ10 ರಿಂದ ರೂ1ಕ್ಕೆ ಸೀಳಲು ಡಿಸೆಂಬರ್ 14 ನಿಗದಿತ ದಿನ.* ಎಚ್.ಡಿ.ಎಫ್.ಸಿ. ಫೈನಾನ್ಸ್ ಲಿ. ಕಂಪೆನಿಯು ಷೇರಿನ ಮುಖ ಬೆಲೆ ಸೀಳಿಕೆ ರೂ10 ರಿಂದ ರೂ. 5ಕ್ಕೆ ಮಾಡಲಿದ್ದು ಇದಕ್ಕಾಗಿ ಡಿಸೆಂಬರ್ 7 ನಿಗದಿತ ದಿನವಾಗಿದೆ.* ಗುಜರಾತ್ ಫ್ಲೈ ಆಶ್ ಲಿ. ಕಂಪೆನಿಯು ಷೇರಿನ ಮುಖ ಬೆಲೆಯನ್ನುರೂ10 ರಿಂದ ರೂ5ಕ್ಕೆ ಸೀಳಲಿದ್ದು ಡಿಸೆಂಬರ್ 10 ನಿಗದಿತ ದಿನ.*ಸನ್‌ಬ್ರೈಟ್ ಸ್ಟಾಕ್ ಬ್ರೋಕಿಂಗ್ ಲಿ. ಕಂಪೆನಿ ಷೇರಿನ ಮುಖ ಬೆಲೆಯನ್ನು ರೂ10 ರಿಂದರೂ5ಕ್ಕೆ ಸೀಳಲು ಡಿಸೆಂಬರ್ 10 ನಿಗದಿತ ದಿನ.* ಪ್ರೀತಿ ಮರ್ಕಂಟೈಲ್ ಕಂಪೆನಿಯು ಷೇರಿನ ಮುಖ ಬೆಲೆ ರೂ10 ರಿಂದರೂ5ಕ್ಕೆ ಸೀಳಲಿದೆ.* ಪ್ರಂಟ್ ಲೈನ್ ಬ್ಯುಸಿನೆಸ್ ಸೊಲೂಷನ್‌ಸ್ ಕಂಪೆನಿಯ ಷೇರಿನ ಮುಖ ಬೆಲೆಯನ್ನು ರೂ10 ರಿಂದ ರೂ5ಕ್ಕೆ ಸೀಳಲಿದೆ.ವಾರದ ಪ್ರಶ್ನೆ

ಇತ್ತೀಚಿನ ದಿನಗಳಲ್ಲಿ ಆಫರ್ ಫಾರ್ ಸೇಲ್‌ಗಳು ಹೆಚ್ಚಾಗುತ್ತಿರಲು ಕಾರಣವೇನು? ದಯವಿಟ್ಟು ತಿಳಿಸಿರಿ.ಉತ್ತರ:
ಇತ್ತೀಚೆಗೆ ಸಾರ್ವಜನಿಕ ವಲಯದ ಕಂಪೆನಿ ಹಿಂದೂಸ್ಥಾನ್ ಕಾಪರ್ ಲಿ. ಕಂಪೆನಿಯ ಷೇರನ್ನು ಇ-ಗವಾಕ್ಷಿಯ ಮೂಲಕ ಷೇರು ವಿನಿಮಯ ಕೇಂದ್ರಗಳಲ್ಲಿ ಮಾರಾಟ ಮಾಡಿ ಬಂಡವಾಳ ಹಿಂತೆಗೆತಕ್ಕೆ ಚಾಲನೆ ನೀಡಿತು. ಕೇವಲ ಒಂದೇ ದಿನದಲ್ಲಿ ವಿತರಣೆ ಕಾರ್ಯ ಪೂರ್ಣಗೊಂಡಿತು. ಇದು ಒಂದು ಕ್ಷಿಪ್ರವಾದ ಕ್ರಮವಾದ್ದರಿಂದ ಈ ವಿಧಾನಕ್ಕೆ ಮುಂದಾಗಬಹುದು.ಈ ಆಫರ್ ಫಾರ್ ಸೇಲ್ ವಿಧಾನಕ್ಕೆ ಅವಕಾಶ ಕಲ್ಪಿಸಲು ಮತ್ತೊಂದು ಪ್ರಮುಖ ಕಾರಣವಿದೆ. ಸದ್ಯ ಲಿಸ್ಟಿಂಗ್ ಆಗಿರುವ ಅನೇಕ ಕಂಪೆನಿಗಳಲ್ಲಿ ಆಯಾ ಕಂಪೆನಿ ಪ್ರವರ್ತಕರು ಶೇ 75ಕ್ಕೂ ಹೆಚ್ಚಿನ ಭಾಗಿತ್ವ ಹೊಂದಿದ್ದು ಇದನ್ನು ಶೇ 75ಕ್ಕೆ ಇಳಿಸಿಕೊಳ್ಳಲು ಜೂನ್ 2013ರ ವರೆಗೂ ಕಾಲಾವಕಾಶ ನೀಡಲಾಗಿದೆ.ಈ ಕ್ರಮದಿಂದ ಕನಿಷ್ಠ ಶೇ 25 ರಷ್ಟರ ಭಾಗಿತ್ವವನ್ನು ಸಾರ್ವಜನಿಕರು ಹೊಂದಿರಬೇಕೆಂಬ `ಸೆಬಿ' ನಿಯಮ ಪಾಲನೆಯಾಗಲಿದೆ. ಪ್ರಮುಖ ಕಂಪೆನಿಗಳಾದ ವಿಪ್ರೊ, ಜೆಟ್ ಏರ್‌ವೇಸ್, ರಿಲೈಯನ್ಸ್ ಪವರ್, ಡಿಎಲ್‌ಎಫ್ ನಂತಹ ಕಂಪೆನಿಗಳೂ ಸಹ ಈ ಆಫರ್ ಫಾರ್ ಸೇಲ್ ಮೂಲಕ ಷೇರು ವಿತರಣೆಗೆ ಮುಂದಾಗುವ ಸಾಧ್ಯತೆ ಸಾಧ್ಯತೆ ಇದೆ.ಸಾರ್ವಜನಿಕ ವಲಯ ಕಂಪೆನಿಗಳಲ್ಲಿ ಈ ನಿಯಮವು ಶೇ 90 ರ ವರೆಗೂ ನಿಗದಿಗೊಳಿಸಲಾಗಿದೆ. ಅಂದರೆ ಶೇ 90ರ ವರೆಗೂ ಸರ್ಕಾರ ಹೊಂದಿರಬಹುದು. ಉಳಿದ ಭಾಗ ಸಾರ್ವಜನಿಕರಿಗಾಗಿ ವಿತರಿಸಲು ಆಗಸ್ಟ್ 2013ರ ವರೆಗೂ ಕಾಲಾವದಿ ನೀಡಲಾಗಿದೆ.ಈ ಕಾರಣದಿಂದಾಗಿ ಫ್ರೆಸಿನಿಯಸ್ ಕಬಿ ಆಂಕಾಲಜಿ, ಬ್ಲೂಡಾರ್ಟ್ ಎಕ್ಸ್‌ಪ್ರೆಸ್, ದಿಸಾ ಇಂಡಿಯಾ ನಂತಹ ಕಂಪೆನಿಗಳೂ ಸಹ ಆಫರ್ ಫಾರ್ ಸೇಲ್ ಮೂಲಕ ಪ್ರವರ್ತಕರ ಭಾಗಿತ್ವ ನಿಯಮ ಪಾಲನೆಗೆ ಮುಂದಾಗಿವೆ. ಇಂತಹ ಸಂದರ್ಭಗಳಲ್ಲಿ ಆಯಾ ಕಂಪೆನಿಯ ಷೇರಿನ ಬೆಲೆಯು ಹತ್ತಾರು ಅವಕಾಶ ಕಲ್ಪಿಸುತ್ತವೆ. ಪ್ರೆಸಿನಿಯಸ್ ಕಬಿ ಆಂಕಾಲಜಿ ಷೇರಿನ ಬೆಲೆಯು ವಿತರಣೆ ಸಂದರ್ಭದಲ್ಲಿ ರೂ80 ರೊಳಗೆ ಕುಸಿದಿದ್ದು ನಂತರ ಪುಟಿದೆದ್ದಿತು.ಹಿಂದೂಸ್ಥಾನ್ ಕಾಪರ್ ಷೇರಿನ ಬೆಲೆಯು ರೂ270ರ ಹಂತದಿಂದ ್ಙ155ರ ಹಂತಕ್ಕೆ ಕುಸಿದಿದ್ದು ಹೂಡಿಕೆದಾರರಿಗೆ ಅವಕಾಶ ಕಲ್ಪಿಸಿದೆ. ಮುಂದಿನ ದಿನಗಳಲ್ಲಿ ಈ ವಿಧಾನದಲ್ಲಿ ಹೆಚ್ಚಿನ ಕಂಪೆನಿಗಳು ವಿತರಣೆಗೆ ಮುಂದಾಗುವ ಸಾಧ್ಯತೆ ಇದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry