ವಾರ್ಷಿಕ ದಾಖಲೆ ನಿರ್ಮಿಸಿದ ಸೂಚ್ಯಂಕ

7

ವಾರ್ಷಿಕ ದಾಖಲೆ ನಿರ್ಮಿಸಿದ ಸೂಚ್ಯಂಕ

ಕೆ. ಜಿ. ಕೃಪಾಲ್
Published:
Updated:

ಷೇರು ಪೇಟೆಯು ವಾರದ ಪಕ್ಷಿನೋಟ­ದಲ್ಲಿ 530 ಅಂಶಗಳಷ್ಟು ಏರಿಳಿತವನ್ನು ಪ್ರದರ್ಶಿಸಿದ್ದು ಹೆಚ್ಚು ಅಚ್ಚರಿಯ ವಿಷಯವಲ್ಲ. ಆದರೆ, ಅಂತರಾಳದಲ್ಲಿ ಹೊಕ್ಕು ಪರಿಶೀಲಿಸಿದಾಗ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಅಂಶಗಳಷ್ಟು ಏರಿಳಿತ, ಉಬ್ಬರವಿಳಿತ­ದಂತೆ ಒಂದೇ ವಾರದಲ್ಲಿ ಕಂಡಿದೆ.ಗುರುವಾರದಂದು ಅಮೆರಿಕದ ಫೆಡ­ರಲ್ ರಿಸರ್ವ್ ತನ್ನ ನೀತಿಯನ್ನು ಬದಲಾ­ವಣೆ ಮಾಡದೆ ಮುಂದು­ವರೆಸಿದ ಕಾರಣ ಪೇಟೆಗಳು ಉನ್ಮತ್ತತೆ­ಯಿಂದ ಮೆರೆದವು. ಸಂವೇದಿ ಸೂಚ್ಯಂ­ಕವು ಭಾರಿ 684 ಅಂಶಗಳಷ್ಟು ಏರಿಕೆ ಕಂಡಿತು. ಅಲ್ಲದೆ ಅಂದು ಮಧ್ಯಮ ಶ್ರೇಣಿ ಸೂಚ್ಯಂಕವು 123 ಅಂಶಗಳಷ್ಟು, ಕೆಳಮಧ್ಯಮ ಶ್ರೇಣಿ ಸೂಚ್ಯಂಕವು 63 ಅಂಶಗಳಷ್ಟು ಏರಿಕೆ ಕಂಡವು. ಇಂತಹ ಬೃಹನ್ನಡೆಯ ಹಿಂದೆ ಅಡಕವಾಗಿರುವ ಪ್ರೇರಕ ಶಕ್ತಿ ಎಂದರೆ ರೂಪಾಯಿಯ ಬೆಲೆಯು ಡಾಲರ್‌ ವಿರುದ್ಧ ₨ 61ರ ಸಮೀಪಕ್ಕೆ ಚೇತರಿಕೆ ಕಂಡಿದ್ದು ಮತ್ತು ವಿದೇಶ ವಿತ್ತೀಯ ಸಂಸ್ಥೆಗಳು ₨3,543 ಕೋಟಿ ಮೊತ್ತದ ಹೂಡಿಕೆ ಮಾಡಿ­ದ್ದಾಗಿದೆ. ಈ ಸಂದರ್ಭವನ್ನು ನಮ್ಮ ಸ್ಥಳೀಯ ವಿತ್ತೀಯ ಸಂಸ್ಥೆಗಳು ಲಾಭದ ನಗದೀಕರಣಕ್ಕೆ ಉಪಯೋಗಿಸಿಕೊಂಡು ಅಂದು ಸುಮಾರು ₨ 1829 ಕೋಟಿ ಮೌಲ್ಯದ ಷೇರನ್ನು ಮಾರಾಟ ಮಾಡಿದವು.ಗುರುವಾರದ ಪೇಟೆಯು ಎಷ್ಟು ಚುರುಕಾಗಿತ್ತೆಂದರೆ ಅಂದು ಎಸ್‌ ಅಂಡ್‌ ಪಿ ಸಂವೇದಿ ಸೂಚ್ಯಂಕವು 20,739 ಅಂಶ­ಗಳಷ್ಟು ವಾರ್ಷಿಕ ದಾಖಲೆ ನಿರ್ಮಿಸಿತು. ಹಿಂದಿನ ಶುಕ್ರವಾರ ಅಂದರೆ 13 ರಂದು ಸಂವೇದಿ ಸೂಚ್ಯಂಕವು 19,732 ರಲ್ಲಿದ್ದು ಈ ವಾರದ ಅಂತ್ಯದಲ್ಲಿ ಅದು 20,263ನ್ನು ತಲುಪಿದೆ. ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್‌ ಆರ್ಥಿಕ ನೀತಿಯಲ್ಲಿ ರೆಪೊ ದರವನ್ನು ಶೇ 7.5ಕ್ಕೆ ಹೆಚ್ಚಿಸಿದೆ ಮತ್ತು ಮಾರ್ಜಿನಲ್‌ ಸ್ಟಾಂಡಿಂಗ್‌ ಫೆಸಿಲಿಟಿ ದರವನ್ನು ಶೇ 9.5ಕ್ಕೆ ಇಳಿಸಿದೆ. ಕಳೆದ ಒಂದು ತಿಂಗಳಲ್ಲಿ ಬ್ಯಾಂಕ್‌ಗಳು ಶೇ 39 ರಷ್ಟನ್ನು ರೆಪೊ ದರದಲ್ಲಿ ಹಣ ಪಡೆದರೆ ಉಳಿದ ಭಾಗವನ್ನು ಮಾರ್ಜಿ­ನಲ್‌ ಸ್ಟಾಂಡಿಂಗ್‌ ಫೆಸಿಲಿಟಿ ಮೂಲಕ ಪಡೆದಿವೆ. ಈಗ ಎಂಎಸ್‌ಎಫ್‌ ದರ ಕಡಿಮೆ ಮಾಡಿರುವುದು ಅನುಕೂಲಕರ ಬೆಳವಣಿಗೆಯಾಗಿದೆ. ಆರ್‌ಬಿಐನ ಈ ಕ್ರಮವು ಮುಂದಿನ ದಿನಗಳಲ್ಲಿ ಹಣದುಬ್ಬರ ನಿಯಂತ್ರಕ್ಕೆ ದಾರಿಯಾ­ಗಲಿದೆ ಎಂದು ವಿಶ್ಲೇಷಿಸಲಾಗಿದೆ.ಒಟ್ಟಾರೆ ಈ ವಾರ ಎಸ್‌ ಅಂಡ್‌ ಸಿ ಸಂವೇದಿ ಸೂಚ್ಯಂಕವು 530 ಅಂಶಗಳಷ್ಟು ಏರಿಕೆಯಿಂದ ಮೆರೆದರೆ, ಮಧ್ಯಮ ಶ್ರೇಣಿಯ ಸೂಚ್ಯಂಕವು 48 ಅಂಶ  ಏರಿಕೆ ಕಂಡಿತು ಆದರೆ ಕೆಳಮಧ್ಯಮ ಶ್ರೇಣಿ ಸೂಚ್ಯಂಕವು 24 ಅಂಶಗಳಷ್ಟು ಹಾನಿ ಕಂಡಿದೆ. ವಿದೇಶ ವಿತ್ತೀಯ ಸಂಸ್ಥೆಗಳು ಸತತವಾಗಿ ವಾರದ ಎಲ್ಲಾ ದಿನಗಳು ಖರೀದಿಯಲ್ಲಿ ತೊಡಗಿದ್ದು ಒಟ್ಟಾರೆ ₨5,670 ಕೋಟಿ ಹೂಡಿಕೆ ಮಾಡಿವೆ. ಸ್ಥಳೀಯ ವಿತ್ತೀಯ ಸಂಸ್ಥೆಗಳು ವಾರದ ಎಲ್ಲಾ ದಿನಗಳು ಮಾರಾಟದ ಹಾದಿಯಲ್ಲಿದ್ದು ಒಟ್ಟಾರೆ ₨4,054 ಕೋಟಿ ಮೌಲ್ಯದ ಷೇರು­ಗಳನ್ನು ಮಾರಾಟ ಮಾಡಿವೆ. ಷೇರು­ಪೇಟೆಯ ಬಂಡವಾಳೀಕರಣ ಮೌಲ್ಯವು ₨64.07 ಲಕ್ಷ ಕೋಟಿಯಿಂದ ₨65.80 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಗುರು­ವಾರ ಸಂವೇದಿ ಸೂಚ್ಯಂಕವು ವಾರ್ಷಿಕ ದಾಖಲೆ ನಿರ್ಮಿಸಿದ ದಿನ ಬಂಡವಾಳೀ­ಕರಣ ಮೌಲ್ಯವು ₨66.53 ಲಕ್ಷ ಕೋಟಿ ಇತ್ತು ಅಂದರೆ ಶುಕ್ರವಾರದ 382 ಅಂಶಗಳ ಇಳಿಕೆಯು ₨0.73 ಲಕ್ಷ ಕೋಟಿ ಬಂಡವಾಳ ಕರಗಿಸಿದೆ.ಚಮತ್ಕಾರಿ ಅಂಶ

ಗುರುವಾರ ಸಂವೇದಿ ಸೂಚ್ಯಂಕವು 684 ಅಂಶಗಳಷ್ಟು ಏರಿಕೆಯ ಹಿಂದೆ ಐಸಿಐಸಿಐ ಬ್ಯಾಂಕ್‌ 85 ಅಂಶ, ಐಟಿಸಿಯು 76 ಅಂಶ, ಎಚ್‌ಡಿಎಫ್‌ಸಿ ಬ್ಯಾಂಕ್ 74 ಅಂಶ, ಲಾರ್ಸನ್‌ ಅಂಡ್‌ ಟೋಬ್ರೊ 50 ಅಂಶ ಹಿಂದೂಸ್ಥಾನ್ ಯುನಿ ಲೀವರ್‌ 43 ಅಂಶ , ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ ಹಾಗೂ ರಿಲೈಯನ್‌್ಸ ಇಂಡಸ್ಟ್ರೀಸ್‌­ಗಳು ತಲಾ 42 ಅಂಶಗಳಷ್ಟು ಕೊಡುಗೆ ನೀಡಿದರೆ ಶುಕ್ರವಾರದ 382 ಅಂಶ ಇಳಿಕೆಗೆ ಐಸಿಐಸಿಐ ಬ್ಯಾಂಕ್ 66 ಅಂಶ , ಎಚ್‌­ಡಿಎಫ್‌ಸಿ ಬ್ಯಾಂಕ್ 55 ಅಂಶ ಲಾರ್ಸನ್‌ ಅಂಡ್‌ ಟೋಬ್ರೊ 39 ಅಂಶ, ಹಿಂದೂಸ್ಥಾನ್ ಯೂನಿಲೀವರ್‌ 32 ಅಂಶಗಳಷ್ಟು ಇಳಿಕೆಯನ್ನು ಕೊಡುಗೆ ನೀಡಿ, ತ್ವರಿತ ಲಾಭದ ನಗದೀಕರಣದ ಅವಶ್ಯಕತೆಯನ್ನು ಒತ್ತಿ ಹೇಳುತ್ತದೆ.ಬೋನಸ್‌ ಷೇರಿನ ವಿಚಾರ

*ಅಲೆಂಬಿಕ್‌ ಲಿಮಿಟೆಡ್‌ ಪ್ರಕಟಿಸಿ­ರುವ 1:1ರ ಅನುಪಾತದ ಬೋನಸ್‌ ಷೇರು ವಿತರಣೆಗೆ ಸೆಪ್ಟೆಂಬರ್ 30 ನಿಗದಿತ ದಿನವಾಗಿದೆ.*ಎ.ವಿ.ಟಿ. ನ್ಯಾಚುರಲ್‌ ಪ್ರಾಡಕ್‌ಟ್ಸ ಲಿ. ವಿತರಿಸಲಿರುವ 1:1ರ ಅನುಪಾತದ ಬೋನಸ್‌ ಷೇರಿಗೆ 28ನೇ ಸೆಪ್ಟೆಂಬರ್‌ ನಿಗದಿತ ದಿನವಾಗಿದೆ.*ಬಿ.ಎಸ್‌. ಲಿಮಿಟೆಡ್‌ ವಿತರಿಸಲಿ­ರುವ 1:1ರ ಅನುಪಾತದ ಬೋನಸ್‌ ಷೇರಿಗೆ ಅಕ್ಟೋಬರ್‌ 1 ನಿಗದಿತ ದಿನವಾಗಿದೆ.* ಪಿಕಟ್‌ ಕಾರ್ಬೈಡ್‌ ವಿತರಿಸಲಿರುವ 3:2 ಅನುಪಾತದ ಬೋನಸ್‌ಗೆ 23ನೇ ಸೆಪ್ಟೆಂಬರ್‌ ನಿಗದಿತ ದಿನವಾಗಿದೆ.ಹಕ್ಕಿನ ಷೇರಿನ ವಿಚಾರ

ಐಎಲ್‌ ಅಂಡ್‌ ಎಫ್‌ಎಸ್‌ ಟ್ರಾನ್‌ಸ­ಪೋರ್ಟೇಷನ್‌ ನೆಟ್‌ವರ್ಕ್‌್ಸ ಕಂಪೆನಿ­ಯು ₨550 ಕೋಟಿ ಮೌಲ್ಯದವರೆಗೂ ಹಕ್ಕಿನ ಷೇರು ವಿತರಿಸಲು ನಿರ್ಧರಿಸಿದೆ.ಮುಖಬೆಲೆ ಸೀಳಿಕೆ ವಿಚಾರ

*ಫೆಡರಲ್‌ ಬ್ಯಾಂಕ್‌ ತನ್ನ ಷೇರಿನ ಮುಖಬೆಲೆಯನ್ನು ಸದ್ಯದ ₨ 10 ರಿಂದ 2ಕ್ಕೆ ಸೀಳಲು 18ನೇ ಅಕ್ಟೋಬರ್‌ ನಿಗದಿತ ದಿನವಾಗಿದೆ.

*ಅರಿಸೆಂಟ್‌ ಇನ್‌ಫ್ರಾ ಲಿ. ಕಂಪೆನಿಯು ಷೇರಿನ ಮುಖಬೆಲೆಯನ್ನು ₨10 ರಿಂದ ₨ 5ಕ್ಕೆ ಸೀಳಲಿದೆ.

*ಧನಲೀಲಾ ಇನ್ವೆಸ್‌ಟಮೆಂಟ್‌ಸ ಅಂಡ್‌ ಟ್ರೇಡಿಂಗ್‌  ಕಂಪೆನಿಯು ಷೇರಿನ ಮುಖಬೆಲೆಯನ್ನು ₨10 ರಿಂದ ₨2ಕ್ಕೆ ಸೀಳಲು ಅಕ್ಟೋಬರ್‌ 12 ನಿಗದಿತ ದಿನವಾಗಿದೆ.ಅಮೆರಿಕ ಎಫ್‌ಡಿಎ

ಅಮೆರಿಕಾದ ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ ಭಾರತೀಯ ಫಾರ್ಮ ಕಂಪೆನಿಗಳಿಗೆ ಎಚ್ಚರಿಕೆ ನೋಟಿಸ್‌ ನೀಡಿದೆ ಎಂದರೆ ಷೇರುಪೇಟೆಯಲ್ಲಿ ಆ ಕಂಪೆನಿ­ಗಳ ಷೇರಿನ ಬೆಲೆಗಳು ತರಗೆಲೆಯಂತೆ ಕುಸಿಯುತ್ತವೆ. ರಾನ್‌ಬಾಕ್ಸಿ ಲ್ಯಾಬೊ­ರೆಟ­ರೀಸ್‌ ಕಂಪನಿಯು ಈ ಹಿಂದೆ ತನ್ನ ಎರಡು ಘಟಕಗಳ ಉತ್ಪಾದನೆಗಳು ಅಮೆರಿಕಕ್ಕೆ ರಫ್ತು ನಿಷೇಧಕ್ಕೊಳಪಟ್ಟಿದ್ದು ಈ ಹಿಂದೆ ಷೇರಿನ ಬೆಲೆಯು ₨254 ರವರೆಗೂ ಕುಸಿದು ನಂತರ ಅಲ್ಲಿಂದ ₨ 480 ರವರೆಗೂ ಪುಟಿದೆದ್ದಿತ್ತು. ಈ ವಾರ ಈ ಕಂಪೆನಿಯ ಮೊಹಾಲಿ ಘಟಕವು ಎಚ್ಚರಿಕೆಯ ನೋಟೀಸನ್ನು ಪಡೆದಿದೆ ಎಂಬ ಕಾರಣಕ್ಕಾಗಿ ಷೇರಿನ ಬೆಲೆಯು ₨480ರ ಸಮೀಪದಿಂದ ₨ 318 ರವರೆಗೂ ಕುಸಿಯಿತು. ನಂತರ ಚುರುಕಾದ ಏರಿಕೆಯಿಂದ ₨ 350ನ್ನು ತಲುಪಿ ₨ 333ರ ಸಮೀಪ ಅಂತ್ಯಗೊಂ­ಡಿತು.ಹಾಗೆಯೇ ಇತ್ತೀಚೆಗೆ ಅಮೆರಿಕದ ಮೈಲಾನ್‌ ಇಂಕ್‌ನೊಂದಿಗೆ ವ್ಯವಹಾರಿಕ ಸಂಬಂಧಕ್ಕೆ ಒಡಂಬಡಿಕೆ ಮಾಡಿಕೊಂಡ ಸ್ಟ್ರೈಡ್‌್ಸ ಅರ್ಕೊಲ್ಯಾಬ್‌ ಕಂಪನಿಯ ಅಂಗಸಂಸ್ಥೆ ಎಜಿಲ್ಲಾ ಸ್ಪೆಷಲಿಟೀಸ್‌ಗೆ ಎಫ್‌ಡಿಎ ಎಚ್ಚರಿಕೆಯ ನೋಟೀಸನ್ನು ನೀಡಿದೆ. ಈ ಕಾರಣದಿಂದ ಷೇರಿನ ಬೆಲೆ ಕುಸಿದು ನಂತರ ಚೇತರಿಕೆ ಕಂಡಿದೆ. ವೊಕಾರ್ಡ್ ಕಂಪನಿಯು ಸಹ ಇಂತಹುದೇ ಕಾರಣದಿಂದ ಕುಸಿತ ಕಂಡಿದೆ. ಈ ಹಿಂದೆ ಅರವಿಂದೋ ಫಾರ್ಮ ಮೇಲೆ ವಿಧಿಸಿದ್ದ ಇಂಪೋರ್ಟ್ ಅಲರ್ಟ್‌ನ್ನು ತೆರವುಗೊಳಿಸಿದರೂ ಷೇರಿನ ಬೆಲೆ ಏರಿಕೆ ಕಾಣದಾಗಿದೆ.ವಾರದ ವಿಶೇಷ

ಈಗಿನ ದಿನಗಳಲ್ಲಿ ನಿಶ್ಚಿತ ಆದಾಯದ ಹೂಡಿಕೆ ಯೋಜನೆಗಳು ಪೋಸ್‌ಟ ಆಫೀಸ್‌ ಮತ್ತು ಬ್ಯಾಂಕ್‌ ಡಿಪಾಜಿಟ್‌­ಗಳು ಹೊರತುಪಡಿಸಿದರೆ ಯಾವುದೇ ಸುರಕ್ಷಿತ ಯೋಜನೆಗಳು ಲಭ್ಯವಿಲ್ಲ ಇತರೆ ಎಲ್ಲಾ ಯೋಜನೆಗಳಲ್ಲಿ ಅನಿಶ್ಚತೆಯು ತಾಂಡವವಾಡುತ್ತಿರುತ್ತದೆ. ನಿಶ್ಚಿತ ಆದಾ­ಯದ ಯೋಜನೆಯು ವಿಶೇಷವಾಗಿ ಹಿರಿಯ ನಾಗರೀಕರು, ನಿವೃತ್ತರು ಮುಂತಾದ­ವರಿಗೆ ಅತ್ಯವಶ್ಯಕವಾಗಿದೆ. ನಿಶ್ಚಿತ ಇಳುವರಿ ಯೋಜನೆಗೆ ಜನಸಾ­ಮಾನ್ಯರ ಸ್ಪಂದನವೂ ಉತ್ತಮವಾಗಿ­ರುತ್ತದೆ.ಷೇರುಪೇಟೆಯಲ್ಲಿಯೂ ಸಹ ಅಸ್ಥಿರ­ತೆಯು ಹೆಚ್ಚಾಗಿದ್ದು ಇಲ್ಲಿ ಚಟುವಟಿಕೆ ನಡೆಸುವವರು ಹೂಡಿಕೆಯ ದೃಷ್ಠಿ­ಯಿಂದ ನಿರ್ವಹಿಸಿದರೆ ಅಧಿಕ ಆದಾಯ ಗಳಿಸಲು ಸಾಧ್ಯ. ಆದರೆ ಇಲ್ಲಿ ಅಪಾಯದ ಅಂಶವು ಅಡಕವಾಗಿ­ರುತ್ತದೆ. ಸಣ್ಣ ಹೂಡಿಕೆದಾರರು ಲೀವರೇಜ್‌ ಟ್ರೇಡಿಂಗ್‌, ಮಾರ್ಜಿನ್‌ ಟ್ರೇಡಿಂಗ್‌, ಮೂಲಾಧಾರಿತ ಪೇಟೆ ಮುಂತಾದವುಗಳಲ್ಲಿ ಅಡಕವಾಗಿರುವ ಅಪಾಯದ ಅಂಶಗಳನ್ನರಿತು ಚಟು­ವಟಿಕೆ ನಡೆಸಬೇಕು. ಸುರಕ್ಷಿತವಾಗಿ ಚಟುವಟಿಕೆ ನಿರ್ವಹಿಸಬೇಕಿದ್ದಲ್ಲಿ ವಿಲೇ­ವಾರಿ ಆಧಾರಿತ ವ್ಯವಹಾರ ಉತ್ತಮ. ಬೃಹತ್‌ ಬಂಡವಾಳದ ಅಗ್ರಮಾನ್ಯ ಕಂಪನಿಗಳನ್ನು ಮಾತ್ರ ಹೂಡಿಕೆಗೆ ಆಯ್ಕೆ ಮಾಡಿಕೊಂಡು ಅತಿಹೆಚ್ಚಿನ ಲಾಭಕ್ಕೆ ಆಸೆಪಡದೆ ಚಟುವಟಿಕೆಯು ಉತ್ತಮ ಫಲಿತಾಂಶ ಗಳಿಸಿಕೊಡುತ್ತದೆ. ಇತ್ತೀಚೆಗೆ ಬ್ಯಾಂಕಿಂಗ್‌ ವಲಯ ಅತಿಹೆಚ್ಚು ಕ್ಷಿಪ್ರಗತಿ­ಯಲ್ಲಿ ಅಧಿಕ ಲಾಭ ಗಳಿಸಿಕೊಟ್ಟಿದೆ.ಶುಕ್ರವಾರದಂದು ‘ಆರ್‌ಬಿಐ’ ನೀತಿ ಪ್ರಕಟವಾದಾಗ ಷೇರಿನ ಬೆಲೆಗಳು ನಿಶೇಷವಾಗಿ ಬ್ಯಾಂಕಿಂಗ್‌ ಷೇರುಗಳು ಅಧಿಕ ಒತ್ತಡದಿಂದ ಕುಸಿದವು ನಂತರ ಚೇತರಿಸಿಕೊಂಡವು. ಗುರುವಾರದ ಬೆಲೆಗಳಿಗೆ ಹೋಲಿಸಿದಲ್ಲಿ ಕೆಲವು ಬ್ಯಾಂಕಿಂಗ್‌ ಷೇರುಗಳು ಶೇ 7 ರಿಂದ ಶೇ 9 ರಷ್ಟು ಕುಸಿತ ಕಂಡು ಹೂಡಿಕೆಗೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿವೆ. ಇಂಡಸ್‌ ಇಂಡ್‌ ಬ್ಯಾಂಕ್‌, ಯೂನಿ­ಯನ್‌ ಬ್ಯಾಂಕ್‌, ಎಸ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ ಮುಂತಾದವು. ಆಕರ್ಷಕವಾದ ಅವಕಾಶಗಳನ್ನು ಕಲ್ಪಿಸಿದವು. ಈ ರೀತಿಯ ಅಸಹಜ ಏರಿಳಿತಗಳ ಹಿಂದೆ ವಿತ್ತೀಯ ಸಂಸ್ಥೆಗಳ ಚಟುವಟಿಕೆಯ ಪ್ರಭಾವವೇ ಹೆಚ್ಚಾಗಿರುವುದಲ್ಲದೆ, ಬ್ಯಾಂಕಿಂಗ್‌ ವಲಯದ ಷೇರು­ಗಳು ಹೆಚ್ಚು ಕುಸಿದಿರುವ ಹಿನ್ನೆಲೆಯಲ್ಲಿ ಮೌಲ್ಯಾ­ಧಾರಿತ ಕೊಳ್ಳುವಿಕೆಯೂ ಕಾರಣವಾಗಿದೆ.ಲಾರ್ಸನ್‌ ಅಂಡ್‌ ಟೋಬ್ರೊ ಕಳೆದ ಒಂದು ತಿಂಗಳಲ್ಲಿ ವಾರ್ಷಿಕ ಕನಿಷ್ಠ ದರ ₨658 ರಿಂದ ₨895 ರವರೆಗೂ ಏರಿಕೆ ಕಂಡಿದೆ. ಜೆಎಸ್‌ಡಬ್ಲು ಸ್ಟೀಲ್‌ ಕಳೆದ ಒಂದು ವಾರದಲ್ಲಿ ಶೇ 18 ರಷ್ಟು ಏರಿಕೆ ಕಂಡಿದೆ. ಎಲ್‌ಐಸಿ ಹೌಸಿಂಗ್‌ ಫೈನಾನ್‌ಸ ಸುಮಾರು ಶೇ 14 ರಷ್ಟು ಹೆಚ್ಚಾಗಿದೆ. ಬ್ಯಾಂಕಿಂಗ್‌ ವಲಯದ ಷೇರುಗಳ ಏರಿಳಿ­ತಕ್ಕೆ ಹಣದುಬ್ಬರ, ಆರ್‌ಬಿಐ ಆರ್ಥಿಕ ನೀತಿ, ಜಿಡಿಪಿ ಬೆಳವಣಿಗೆ, ಮುಂತಾದವು ಏರಿಳಿತಕ್ಕೆ ಕಾರಣವಾದರೆ, ಸ್ಟೀಲ್‌ ಮತ್ತು ಸೀಮೆಂಟ್‌ ಕಂಪನಿಗಳು ಮೂಲ­ಸೌಕರ್ಯ ವಲಯ ಸುದ್ದಿಗಳು, ಅಂತರ­ರಾಷ್ಟ್ರೀಯ ಪರಿಸ್ಥಿತಿ ಆಧರಿಸಿ ಏರಿಳಿತ ಪ್ರದರ್ಶಿಸುತ್ತವೆ. ಫಾರ್ಮಾ ಕಂಪನಿಗಳು ಅಮೆರಿಕಾದ ಎಫ್‌ಡಿಎ ಕ್ರಮದಿಂದ ಹೆಚ್ಚಿನ ಏರಿಳಿತಕ್ಕೊಳಗಾಗುತ್ತವೆ. ವಜ್ರಾಭರಣ ಕಂಪನಿಗಳು ಸರ್ಕಾರದ ಆಮದು ನಿಯಂತ್ರಣ ಕಾರಣದಿಂದ ಏರಿಳಿತ ಕಾಣುತ್ತವೆ.ಗುರುವಾರದಂದು ಚಿನ್ನ–ಬೆಳ್ಳಿಗಳು ಅತ್ಯಂತ ವೇಗವಾದ ಬೆಲೆ ಏರಿಕೆ ಕಂಡರೆ ಶುಕ್ರವಾರ ಅದಕ್ಕೆ ವಿರುದ್ಧವಾಗಿ ಅಷ್ಟೇ ವೇಗವಾಗಿ ಇಳಿಕೆ ಕಂಡಿವೆ. ಇವೂ ಸಹ ಸುರಕ್ಷಿತ ಹೂಡಿಕೆ ಪಟ್ಟಿಯಿಂದ ಹೊರಬ­ಂದಿವೆ. ಅಗ್ರಮಾನ್ಯ ಕಂಪನಿಗಳು ಈ ಹಿಂದೆ ವಿತರಿಸಿದ ಲಾಭಾಂಶವನ್ನು ಗಮನ­ದಲ್ಲಿರಿಸಿ ಪೇಟೆಯ ಆಗುಹೋಗು­ಗಳನ್ನಾಧರಿಸಿ ಉತ್ತಮ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ಬಂಡಾಳ ವೃದ್ಧಿಯು ವಿಳಂಬವಾದಲ್ಲಿ ತೆರಿಗೆ ಮುಕ್ತ ಲಾಭಾಂಶವಾದರೂ ದೊರೆಯುವುದು. ನೆನಪಿನಲ್ಲಿಡಬೇಕಾದ ಅಂಶವೆಂದರೆ ಬಂಡ­ವಾಳ ಸುರಕ್ಷಿತವಾದರೆ ಬೆಳೆಯ­ಬಲ್ಲದು ಹಾಗಾಗಿ ಸೂಕ್ತ ಮಾರ್ಗ­ದರ್ಶನದಲ್ಲಿ ಅರಿತು ಹೂಡಿಕೆ ಮಾಡಿ­ದಲ್ಲಿ ಅಪಾಯದಿಂದ ದೂರವಾಗಬ­ಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry