ಶುಕ್ರವಾರ, ನವೆಂಬರ್ 22, 2019
26 °C

ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಪ್ರಭಾವ

ಕೆ. ಜಿ. ಕೃಪಾಲ್
Published:
Updated:

ಷೇರುಪೇಟೆಯಲ್ಲಿ ಹಣವನ್ನು ಹೆಚ್ಚು ವೇಗವಾಗಿ ಕರಗಿಸುವ ಸ್ಪರ್ಧೆ ನಡೆಯುತ್ತಿರುವಂತೆ ಬಾಸವಾಗುತ್ತಿದೆ. ಇದುವರೆಗೂ ಮಧ್ಯಮ ಹಾಗೂ ಕೆಳಮಧ್ಯಮ ಶ್ರೇಣಿಯ ಷೇರುಗಳಲ್ಲಿ ಮಾತ್ರ ಕಾಣುತ್ತಿದ್ದ ಈ ಗುಣವು ಕಳೆದ ವಾರದ ಅಂತ್ಯದಲ್ಲಿ ಪ್ರಭಾವಿಯಾಯಿತು. ಐ.ಟಿ ವಲಯದ ಅಗ್ರಮಾನ್ಯ ಕಂಪೆನಿ ಇನ್‌ಫೋಸಿಸ್ ಇದಕ್ಕೆ ಉದಾಹರಣೆ. ಕಂಪೆನಿಯ ಷೇರಿನ ಬೆಲೆಯು ಫಲಿತಾಂಶ ಪ್ರಕಟಣೆಯ ಹಿಂದಿನ ದಿನ ಯುಗಾದಿ ಹಬ್ಬದಂದು ಗಣನೀಯ ಏರಿಕೆಯಿಂದರೂ2,917.85 ರಲ್ಲಿತ್ತು. ಶುಕ್ರವಾರ ಫಲಿತಾಂಶದ ಕಾರಣ ಆರಂಭದಿಂದಲೇ ಕುಸಿತ ಕಂಡು,ರೂ2,268 ರವರೆಗೂ ಕುಸಿದು  ರೂ 2,295 ರಲ್ಲಿ ವಾರಾಂತ್ಯ ಕಂಡುರೂ622 ಕುಸಿತ ದಾಖಲಿಸಿತು. ಕಂಪೆನಿಯ ಷೇರಿನ ಬೆಲೆಯು ಕಳೆದ ಜನವರಿಯಲ್ಲಿ ತ್ರೈಮಾಸಿಕ ಫಲಿತಾಂಶಕ್ಕೆ ಮುನ್ನ ಇದೇ ಹಂತದ ಬೆಲೆಯಲ್ಲಿ ವಹಿವಾಟಾಗುತ್ತಿತ್ತು. ಇಲ್ಲಿ ವಾಸ್ತವಾಂಶಕ್ಕಿಂತ ಭವಿಷ್ಯದ ಬೆಳವಣಿಗೆಗೆ ಹೆಚ್ಚು ಒತ್ತು ನೀಡಿ, ಮುಂದೆ ಕಂಪೆನಿಯ ವಹಿವಾಟು ಶೇ 6 ರಿಂದ ಶೆ 10 ರಷ್ಟು ಬೆಳವಣಿಗೆಯ ಮುನ್ಸೂಚನೆಯು ನಾಸ್ಕಾಂನ ಅಂಕಿ-ಅಂಶಗಳಿಗಿಂತ ಕಡಿಮೆ ಇರುವ ಕಾರಣ ಭರ್ಜರಿ ಮಾರಾಟ ಕಂಡಿತು.ಮತ್ತೊಂದು ಕಂಪೆನಿ ಆಂಜನೇಯ ಲೈಫ್‌ಕೇರ್ ಲಿ. ಕಳೆದ ಫೆಬ್ರವರಿ ಮಧ್ಯೆರೂ800ರ ಸಮೀಪ ವಹಿವಾಟಾಗುತ್ತಿದ್ದು ಶುಕ್ರವಾರ 12 ರಂದುರೂ79.30ಕ್ಕೆ ಕೊಳ್ಳುವವರಿಲ್ಲದೆ ಆವರಣ ಮಿತಿಯ ಬಂಧನದಲ್ಲಿತ್ತು. ಆದರೆ ದಿನದ ವಹಿವಾಟು ಅಂತ್ಯದ ವೇಳೆಗೆ ಮುಂಚೆ ಅಂದರೆ ಸುಮಾರು ಎರಡೂವರೆ ಗಂಟೆಯಲ್ಲಿ ರಭಸದ ಕೊಳ್ಳುವಿಕೆ ಪ್ರದರ್ಶಿತವಾಗಿ ಗರಿಷ್ಠಮಟ್ಟದ ಆವರಣ ಮಿತಿರೂ87.60ನ್ನು ತಲುಪಿ ಅದೇ ವೇಗದಲ್ಲಿ ಕುಸಿಯಿತಾದರೂ ಅಂತ್ಯದಲ್ಲಿರೂ81.10 ರಲ್ಲಿತ್ತು. ಆ ಸಮಯದಲ್ಲಿ ನಡೆದ ವಹಿವಾಟಿನ ಗಾತ್ರದ ಕಾರಣ ಅಂದು ಒಟ್ಟು 13.73 ಲಕ್ಷ ಷೇರು ವಹಿವಾಟಾಗಿದೆ. ಆದರೂ ಕೊಳ್ಳುವಿಕೆಗೆ ಮುಂಚೆ ಎಚ್ಚರದ ಅವಶ್ಯಕತೆ ಇದೆ. ಈ ಕಂಪೆನಿಯ ಪ್ರವರ್ತಕರು ಶೇ 27 ರಷ್ಟರ ಷೇರನ್ನು ಮಾರ್ಚ್ 2012 ರಲ್ಲಿ ಅಡವಿಟ್ಟಿದ್ದರೆ ಜೂನ್ 2012 ರಲ್ಲಿ ಇದು ಶೇ 52.46 ಕ್ಕೇರಿದೆ. ಇದು ಸೆಪ್ಟೆಂಬರ್ 2012ರ ತ್ರೈಮಾಸಿಕದಲ್ಲಿ ಶೇ 87.70ಕ್ಕೆ ಏರಿಕೆ ಕಂಡಿದೆ. ಡಿಸೆಂಬರ್ 2012ರ ತ್ರೈಮಾಸಿಕದಲ್ಲಿ ಪ್ರವರ್ತಕರ, ಅಡವಿಟ್ಟ ಪ್ರಮಾಣವು ಶೇ 94.40ಕ್ಕೆ ಹೆಚ್ಚಿದೆ. ಪ್ರತಿ ತ್ರೈಮಾಸಿಕದಲ್ಲಿ ಏರಿಕೆ ಕಂಡಿರುವ ಈ ಅಂಶವು ಕಳೆದೆರಡು ತಿಂಗಳಲ್ಲಿ ಕಂಡಂತಹ ಅಗಾದ ಬೆಲೆ ಕುಸಿತವು ಫೈನಾನ್ಶಿಯರ್ಸ್‌ಗಳು ಮಾರಾಟದ ಒತ್ತಡ ಹೆಚ್ಚಾಗಲೂಬಹುದು. ಹೆಚ್ಚಿನ ಎಚ್ಚರ ಅಗತ್ಯ.ಒಟ್ಟಾರೆ ಹಿಂದಿನವಾರ 207 ಅಂಶಗಳನ್ನು ಸಂವೇದಿ ಸೂಚ್ಯಂಕ ಕಳೆದುಕೊಂಡರೆ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕಗಳು ಕ್ರಮವಾಗಿ 44 ಮತ್ತು 42 ಅಂಶಗಳಷ್ಟು ಹಾನಿ ಅನುಭವಿಸಿದವು. ವಿದೇಶಿ ವಿತ್ತೀಯ ಸಂಸ್ಥೆಗಳು ಅಂಶಗಳನ್ನು 780 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ಅಂಶಗಳನ್ನು 1,143 ಕೋಟಿ ಹೂಡಿಕೆ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ಅಂಶಗಳನ್ನು 63.39 ಲಕ್ಷ ಕೋಟಿಯಿಂದ ಅಂಶಗಳನ್ನು63.08 ಲಕ್ಷ ಕೋಟಿಗೆ ಇಳಿದಿದೆ.ಹೊಸ ಷೇರಿನ ವಿಚಾರ

4ಆಶಾಪುರ ಇಂಟಿಮೇಟ್ ಫ್ಯಾಷನ್ ಲಿ. ಕಂಪೆನಿಯು ಇತ್ತೀಚೆಗೆ ಪ್ರತಿ ಷೇರಿಗೆ ಅಂಶಗಳನ್ನು40 ರಂತೆ, ಎಸ್‌ಎಂಇ ವಿಭಾಗದಲ್ಲಿ, ಸಾರ್ವಜನಿಕ ವಿತರಣೆ ಮಾಡಿದ್ದು, ಈ ಷೇರುಗಳು ಏಪ್ರಿಲ್ 15 ರಿಂದ `ಎಂ.ಟಿ.' ಗುಂಪಿನಲ್ಲಿ 3,000 ಷೇರುಗಳ ವಹಿವಾಟು ಗುಚ್ಚದಲ್ಲಿ ವಹಿವಾಟಾಗಲಿದೆ.4ಸಂವೃದ್ಧಿ ರಿಯಾಲ್ಟಿ ಲಿ. ಇತ್ತೀಚೆಗೆ ಪ್ರತಿ ಷೇರಿಗೆ ಅಂಶಗಳನ್ನು12 ರಂತೆ ಎಸ್.ಎಂ.ಇ. ವಿಭಾಗದಲ್ಲಿ ಸಾರ್ವಜನಿಕ ವಿತರಣೆ ಮಾಡಿದೆ. ಈ ಷೇರುಗಳು ಏಪ್ರಿಲ್ 12 ರಿಂದ 10,000 ಷೇರುಗಳ ವಹಿವಾಟು ಗುಚ್ಚದಲ್ಲಿ `ಎಂ.ಟಿ.' ಗುಂಪಿನಲ್ಲಿ ವಹಿವಾಟಾಗುತ್ತಿದೆ.ಬಂಡವಾಳ ಕಡಿತದ ವಿಚಾರ

ಇಂಟೆನ್ಸ್ ಟೆಕ್ನಾಲಜೀಸ್ ಲಿ. ಕಂಪೆನಿಯು ತನ್ನ ಅಂಶಗಳನ್ನು10ರ ಮುಖಬೆಲೆಯ ಷೇರನ್ನು ಅಂಶಗಳನ್ನು 2ಕ್ಕೆ ಮೊಟಕುಗೊಳಿಸುವುದರ ಮೂಲಕ ಶೇ 80 ರಷ್ಟು ಬಂಡವಾಳ ಕಡಿತಕ್ಕೆ ಮುಂದಾಗಿದ್ದು ಈ ಕ್ರಮಕ್ಕೆ ಏಪ್ರಿಲ್ 17 ನಿಗದಿತ ದಿನವಾಗಿದೆ.ಎ ಗುಂಪಿಗೆ ಬಡ್ತಿ

ಕಂಪೆನಿಗಳಾದ ಅಮರರಾಜ ಬ್ಯಾಟರೀಸ್, ಬಜಾಜ್ ಫೈನಾನ್ಸ್ ಲಿ., ಸೌತ್ ಇಂಡಿಯನ್ ಬ್ಯಾಂಕ್, ಶ್ರೀರಾಂ ಸಿಟಿ ಯೂನಿಯನ್ ಫೈನಾನ್ಸ್, ಕರ್ನಾಟಕ ಬ್ಯಾಂಕ್, ಶೋಭಾ ಡೆವೆಲಪರ್ಸ್, ಟಿವಿ 18 ಬ್ರಾಡ್‌ಕ್ಯಾಸ್ಟ್, ಇಂಡಿಯಾ ಬುಲ್ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ಸ್ ಮತ್ತು ಭಾರತಿ ಇನ್‌ಫ್ರಾಟೆಲ್ ಕಂಪೆನಿಗಳು ಏಪ್ರಿಲ್ 15 ರಿಂದ `ಎ' ಗುಂಪಿಗೆ ವರ್ಗಾಯಿಸಲಾಗಿದೆ. ಈ ಕಂಪೆನಿಗಳಿಗೆ ಅವಕಾಶ ಮಾಡಿಕೊಡಲು ಗುಜರಾತ್ ಪ್ಲೊರೋ ಕೆಮಿಕಲ್ಸ್, ಟೋರೆಂಟ್ ಫಾರ್ಮಾಸ್ಯುಟಿಕಲ್ಸ್, ವೋಲ್ಟಾಸ್ ಬಾಯರ್ ಕ್ರಾಪ್ ಸೈನ್ಸಸ್, ಅಸ್ಟ್ರಾಜೆನಿಕಾ ಫಾರ್ಮಾ, ಕೋರ್ ಎಜುಕೇಷನ್ ಅಂಡ್ ಟೆಕ್ನಾಲಜೀಸ್, ಹೆಕ್ಸಾವೇರ್ ಟೆಕ್ನಾಲಜೀಸ್, ಆಪ್ಟೊ ಸರ್ಕ್ಯುಟ್ಸ್, ಲ್ಯಾರಿಕೋ ಇನ್‌ಫ್ರಾಟೆಕ್, ಎಸ್‌ಜೆವಿಎಸ್ ಲಿ. ಕಂಪೆನಿಗಳು `ಎ' ಗುಂಪಿನಿಂದ `ಬಿ' ಗುಂಪಿಗೆ ಅಂದೇ ವರ್ಗಾವಣೆಗೊಳ್ಳಲಿವೆ.ವಹಿವಾಟಿಗೆ ಬಿಡುಗಡೆ

ಮೈಂಡ್ ವಿಷನ್ ಕ್ಯಾಪಿಟಲ್ ಲಿ. ಕಂಪೆನಿಯ ಷೇರಿನ ಮುಖ ಬೆಲೆಯನ್ನು ಅಂಶಗಳನ್ನು 5 ರಿಂದ ಅಂಶಗಳನ್ನು10ಕ್ಕೆ ಕ್ರೋಡೀಕರಿಸಲಾಗಿದ್ದು ಅಂಶಗಳನ್ನು 10ರ ಮುಖ ಬೆಲೆಯ ಹೊಸ ಅವತಾರದ ಷೇರುಗಳು 15 ರಿಂದ ವಹಿವಾಟಿಗೆ ಬಿಡುಗಡೆಯಾಗಲಿದೆ.ವ್ಯವಸ್ಥಿತ ಯೋಜನೆ

ಈ ಯೋಜನೆಯ ಪ್ರಕಾರ ಈ ಕಂಪೆನಿಯಿಂದ ಪೀಟರ್ ಇಂಗ್ಲೆಂಡ್ ಫ್ಯಾಷನ್ಸ್ ಅಂಡ್ ರೀಟೇಲ್ ಲಿ. ಕಂಪೆನಿಯನ್ನು ಬೇರ್ಪಡಿಸಿ, ಪ್ರತಿ 5 ಪೂಚರ್ ರಿಟೇಲ್ ಲಿ. ನ ಷೇರಿಗೆ ಒಂದು ಪೀಟರ್ ಇಂಗ್ಲೆಂಡ್ ಫ್ಯಾಷನ್ಸ್ ಷೇರನ್ನು ನೀಡಲಾಗುವುದು ಈ ಪ್ರಕ್ರಿಯೆಗೆ ಏಪ್ರಿಲ್ 18 ನಿಗದಿತ ದಿನವಾಗಿದೆ. ಪೆಂಟಲೂನ್ ರೀಟೇಲ್ ಲಿ. ಕಂಪೆನಿ ಹೆಸರನ್ನು ಪ್ಯೂಚರ್ ರೀಟೇಲ್ ಲಿ. ಎಂದು ಇತ್ತೀಚೆಗಷ್ಟೆ ಬದಲಿಸಲಾಗಿದೆ. ಈ ಕಂಪೆನಿಯ ಷೇರಿನಲ್ಲಿ ಮೂಲಾಧಾರಿತ ಪೇಟೆಯಲ್ಲಿ ಏಪ್ರಿಲ್ 15ರ ವರೆಗೂ ನಡೆಸಿದ ವಹಿವಾಟು ಚುಕ್ತಾಗೊಳ್ಳುವುದು. ಹೊಸ ಅವತಾರದಲ್ಲಿ ಏಪ್ರಿಲ್ 17 ರಿಂದ ವಹಿವಾಟಾಗಲಿದೆ.ಲಾಭಾಂಶ ವಿಚಾರ

ಗೋವಾ ಕಾರ್ಬನ್ ಶೇ 25, ಗೃಹ ಫೈನಾನ್ಸ್ ಶೇ 125 (ಮು. ಬೆ.ರೂ2), ಇನ್‌ಫೋಸಿಸ್ ಶೇ 540 (ಮು. ಬೆ.ರೂ5), ಆರ್. ಎಸ್. ಸಾಫ್ಟ್‌ವೇರ್ ಶೇ 20, ರಿಲೈಯನ್ಸ್ ಇಂಡಸ್ಟ್ರಿಯಲ್ ಇನ್‌ಫ್ರಾ ಶೇ 35.ಬಯೋಕಾನ್ ಕಂಪೆನಿಯು 25 ರಂದು ಫಲಿತಾಂಶ ಮತ್ತು ಲಭಾಂಶ ಪ್ರಕಟಿಸಲಿದೆ.ಬೋನಸ್ ಷೇರಿನ ವಿಚಾರ

ರಾಸ್ ರಿಸಾರ್ಟ್ಸ್ ಅಂಡ್ ಅಪಾ   ರ್ಟ್ ಹೋಟೆಲ್ಸ್ ಲಿ. ಕಂಪೆನಿಯು ಸಾರ್ವಜನಿಕರಿಗೆ ಮಾತ್ರ 1:5ರ ಅನುಪಾತದ ಬೋನಸ್ ಷೇರು ವಿತರಿಸಲು ನಿರ್ಧರಿಸಿದ್ದು ಈ ಮೂಲಕ ಪ್ರವರ್ತಕರ ಭಾಗಿತ್ವವನ್ನು ಶೇ 75ಕ್ಕೆ ಇಳಿಸಿ ಶೇ 25ರ ಸಾರ್ವಜನಿಕ ಭಾಗಿತ್ವಕ್ಕೆ ಅನುವು ಮಾಡಿಕೊಡಲಿದೆ. ಪ್ರವರ್ತಕರು ಬೋನಸ್ ಷೇರು ಪಡೆಯುವುದಿಲ್ಲ.

ವಾರದ ವಿಶೇಷ

ಬಾಂಬೆ ಷೇರು ವಿನಿಮಯ ಕೇಂದ್ರವು 2050 ಕಂಪೆನಿಗಳನ್ನು ಸುಲಭವಾಗಿ ವ್ಯವಹರಿಸಲಾಗದ ಕಂಪೆನಿಗಳೆಂದು ಪ್ರಕಟಿಸಿದೆ. ಇದರಲ್ಲಿ ಸಿ.ಎಂ.ಐ. ಎಫ್.ಪಿ.ಇ. ಕೈನೆಟಿಕ್ ಎಂಜಿನಿಯರಿಂಗ್, ಯೂನಿಫಾಸ್ ಎಂಟರ್‌ಪ್ರೈಸಸ್, ಎಕ್ಸೆಲ್ ಇಂಡಸ್ಟ್ರೀಸ್, ಬೊರೋಸಿಲ್ ಗ್ಲಾಸ್‌ವರ್ಕ್ಸ್, ಲಕ್ಷ್ಮಿ ಮಿಲ್ಸ್; ವಿಕ್ಟೋರಿಯಾ ಮಿಲ್ಸ್, ಝಡ್ ಎಫ್ ಸ್ಟೀರಿಂಗ್ ಗೇರ್ಸ್‌ ಎಬಿಸಿ ಬೇರಿಂಗ್ಸ್, ಬೈಮೆಟಲ್ ಬೇರಿಂಗ್ಸ್, ದೀಪಕ್ ನೈಟ್ರೈಟ್, ಫುಲ್‌ಫೋರ್ಡ್, ಗುಜರಾತ್ ಹೋಟೆಲ್, ಬನಾರಸ್ ಹೋಟೆಲ್, ರಾಣೆಬೈಕ್ ಲೈನಿಂಗ್, ರಾಣೆ ಎಂಜಿನ್ ಗ್ಲೊಸ್ಟರ್ ಲಿ. ಮುಂತಾದ ಕಂಪೆನಿಗಳು ಸೇರಿವೆ. ಅನೇಕ ಹೂಡಿಕೆದಾರರ ಸ್ನೇಹಿ ಕಂಪೆನಿಗಳಿವೆ.

ದಿನ ನಿತ್ಯ ವಹಿವಾಟಾಗುವುದಿಲ್ಲವೆಂದ ಮಾತ್ರಕ್ಕೆ ಅವನ್ನು ಕಡೆಗಣಿಸಿ ಈ ಗುಂಪಿಗೆ ಸೇರಿಸಲಾಗಿದೆ, ಹೀಗಾಗಿ ಅವಶ್ಯಕತೆ ಇದ್ದಾಗ ತಕ್ಷಣ ಮಾರಾಟದ ವಿಶೇಷ ಗುಣದಿಂದ ವಂಚಿತರಾಗಿವೆ. ಈ 2050 ಕಂಪೆನಿಗಳಲ್ಲಿ ವಹಿವಾಟು ನಡೆಸಲು ಒಂದೊಂದು ಗಂಟೆಯ ಕಾಲ್ ಆಕ್ಷನ್ ಅವಧಿಯನ್ನು ನೀಡಲಾಗಿದ್ದು ಮೊದಲ ಅವಧಿಯು 9-30 ರಿಂದ ಆರಂಭವಾಗುವುದು. ಒಟ್ಟು 6 ಬಾರಿ ಕಾಲ್ ಆಕ್ಷನ್ ನಡೆಯುವುದು ಮೊದಲ 45 ನಿಮಿಷ ಆರ್ಡರ್‌ಗಳನ್ನು ನೊಂದಾಯಿಸಬಹುದು. ಬದಲಾಯಿಸಬಹುದು, ರದ್ದುಗೊಳಿಸಬಹುದು.

ನಂತರ ಆರ್ಡರ್‌ಗಳು `ಮ್ಯಾಚ್' ಮಾಡಿ ಟ್ರೇಡ್ ಕನ್‌ಫರ್ಮೆಷನ್ ಮಾಡಲಾಗುವುದು. ನಂತರದ ಸುಮಾರು 7 ನಿಮಿಷದ ಅವಧಿಯು ಮುಂದಿನ ಕಾಲ್ ಆಕ್ಷನ್ ಸೆಷನ್‌ಗೆ ಸಾಗಲು ಅನುಕೂಲ ಮಾಡಿಕೊಡುವ ಬಫರ್ ಅವಧಿಯಾಗಿದೆ. ಪ್ರತಿಯೊಂದು ಸೆಷನ್ ನಂತರ ಉಳಿದುಕೊಂಡ ಆರ್ಡರ್‌ಗಳು ರದ್ದಾಗುತ್ತವೆ. ಮುಂದಿನ ಸೆಷನ್‌ಗಳಲ್ಲಿ ಬೇಕಾದರೆ ಹೊಸದಾಗಿ ಆರ್ಡರ್ ನೋಂದಾಯಿಸಬಹುದು. ಈ ಪದ್ಧತಿಯಿಂದ ಸಹಜ ಚಟುವಟಿಕೆಗೆ ಮರಳ ಬೇಕಾದರೆ ಎರಡು ತ್ರೈಮಾಸಿಕಗಳು ಈ ಕಾಲ್ ಆಕ್ಷನ್ ಮಾದರಿಯಲ್ಲಿರಬೇಕಾಗುತ್ತದೆ.

ಪ್ರತಿ ತ್ರೈಮಾಸಿಕದಲ್ಲಿ ದಿನ ನಿತ್ಯ ಸರಾಸರಿ ಹತ್ತು ಸಾವಿರಕ್ಕೂ ಕಡಿಮೆ ಷೇರುಗಳು ವಹಿವಾಟಾದಲ್ಲಿ ಅಥವಾ ದಿನ ನಿತ್ಯ ಸರಾಸರಿ 50 ಟ್ರೇಡ್‌ಗಳಿಗೂ ಕಡಿಮೆ ಇದ್ದಲ್ಲಿ ಆ ಕಂಪೆನಿಯ ಷೇರುಗಳನ್ನು       `ಇಲ್ವಿಕಿಡ್' - ಸುಲಭವಾಗಿ ವ್ಯವಹರಿಸಲಾಗದ ಷೇರುಗಳ ಗುಂಪಿಗೆ ಸೇರಿಸಲಾಗುವುದು. ಇದು ಒತ್ತಾಯ ಪೂರ್ವಕ ವಹಿವಾಟಿಗೆ ದಾರಿ ಮಾಡಿಕೊಡುತ್ತದೆಯಲ್ಲವೆ?

ಪ್ರತಿಕ್ರಿಯಿಸಿ (+)