ಸೋಮವಾರ, ಏಪ್ರಿಲ್ 19, 2021
25 °C

ಸೆಬಿ ಮಾರುಕಟ್ಟೆ ಸುಧಾರಣೆ

ಕೆ. ಜಿ. ಕೃಪಾಲ್ Updated:

ಅಕ್ಷರ ಗಾತ್ರ : | |

ಷೇರುಪೇಟೆಯ ನಿಯಂತ್ರಕ ಸಂಸ್ಥೆ `ಸೆಬಿ~ ಹಲವಾರು ಸುಧಾರಣಾ ಕ್ರಮಗಳನ್ನು ಪ್ರಕಟಿಸಿದೆ. ಇದರಲ್ಲಿ ಆರಂಭಿಕ ಷೇರು ವಿತರಣೆಗಾಗಿ ಹಂಚಿಕೆದಾರರ ಜಾಲವನ್ನು ವಿಸ್ತರಿಸುವ ಬಗ್ಗೆ ಪ್ರಸ್ತಾಪಿಸಿದೆ. ಜೂನ್ 2012 ರವರೆಗೂ ಸೆಬಿ ನೋಂದಾಯಿತ ಉಪದಲ್ಲಾಳಿಗಳ  ಸಂಖ್ಯೆಯು 76177 ರಷ್ಟಿದೆ.

 

ಈ ವೃಂದವು ದೇಶದ ಉದ್ದಗಲಕ್ಕೂ ಹರಡಿಕೊಂಡಿರುವುದರಿಂದ, ಇವರ ಜತೆಗೆ ಕ್ಯಾಶ್ ವಿಭಾಗದ ಹತ್ತು ಸಾವಿರಕ್ಕೂ ಹೆಚ್ಚಿನ ದಲ್ಲಾಳಿಗಳನ್ನು ಸೇರಿಸಿ ವೃತ್ತಿಪರ ಸೇವನೆಗೆ ಅನುವು ಮಾಡಿಕೊಡುವುದು ಸೂಕ್ತವಾಗಿದೆ. ಆರಂಭಿಕ ಷೇರು ವಿತರಣೆಯಲ್ಲಿ ಅರ್ಜಿ ಸಲ್ಲಿಸುವ ಕನಿಷ್ಠ ಮಟ್ಟವನ್ನು ರೂ.10 ರಿಂದ 15 ಸಾವಿರದವರೆಗೂ ಏರಿಸಲಾಗಿದೆ.ಇದು ಹಿನ್ನಡೆಯ ಕ್ರಮವಾಗಿದೆ. ನಮ್ಮ ಆರ್ಥಿಕ ಪೇಟೆಯ ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂದರೆ ಪೇಟೆಯ ಬಂಡವಾಳ ಮೌಲ್ಯವು ಭರ್ಜರಿ ರೂ.62 ಲಕ್ಷ ಕೋಟಿಯ ಸಮೀಪವಿದ್ದರೂ ದಿನನಿತ್ಯದ ವಹಿವಾಟಿನ ಗಾತ್ರವು ಮಾತ್ರ ಸುಮಾರು ರೂ. 2 ಸಾವಿರ ಕೋಟಿ ಮಾತ್ರ.ಅಂದರೆ ಚಟುವಟಿಕೆಯಲ್ಲಿ ಭಾಗವಹಿಸುವವರ ಸಂಖ್ಯೆ ಬಹಳ ಕ್ಷೀಣಿತವಾಗಿದೆ. ಇಂತಹ ವಾತಾವರಣದಲ್ಲಿ ಕನಿಷ್ಠ ಮಟ್ಟದ ಮಿತಿ ಏರಿಕೆ ಸರಿಯಲ್ಲ ಎನ್ನಬಹುದಾಗಿದೆ.

 

ಮೂಲತಃ ಹೂಡಿಕೆ ಮಾಡಿದ ಹಣದ ಸುರಕ್ಷತೆಗೆ ಆದ್ಯತೆ ಕೊಟ್ಟಲ್ಲಿ ಸಣ್ಣ ಹೂಡಿಕೆದಾರರ ಒಲವು ಪೇಟೆಗಳತ್ತ ತಿರುಗುವುದು ನಿಸ್ಸಂದೇಹ. ಸರಿಯಾದ ಪ್ರೀಮಿಯಂನಲ್ಲಿ ವಿತರಣೆ ಮಾಡುವುದು ಕಂಪೆನಿಗಳ ಜವಾಬ್ದಾರಿ.ಒಟ್ಟಾರೆ ಹಿಂದಿನ ವಾರ ಸಂವೇದಿ ಸೂಚ್ಯಂಕವು 133 ಅಂಶಗಳಷ್ಟು ಏರಿಕೆಯೊಂದಿಗೆ ಸ್ಥಿರತೆ ಮೂಡಿಸಿ ಮಧ್ಯಮ ಶ್ರೇಣಿ ಸೂಚ್ಯಂಕದ ಹಾಗೂ ಕೆಳಮಧ್ಯಮ ಸೂಚ್ಯಂಕಗಳನ್ನು ಕ್ರಮವಾಗಿ 58 ಹಾಗೂ 65 ಅಂಶಗಳಷ್ಟು ಏರಿಕೆ ಕಾಣುವಂತೆ ಮಾಡಿದವು.

 

ವಿದೇಶಿ ವಿತ್ತೀಯ ಸಂಸ್ಥೆಗಳು ರೂ.1,001 ಕೋಟಿ ಹೂಡಿಕೆ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ. 164 ಕೋಟಿ ಹೂಡಿಕೆಯಿಂದ ವಾತಾವರಣವನ್ನು ಸಕಾರಾತ್ಮಕಗೊಳಿಸಿದವು. ಷೇರುಪೇಟೆ ಬಂಡವಾಳ ಮೌಲ್ಯವು ರೂ.61.51 ಲಕ್ಷ ಕೋಟಿಯಿಂದ ರೂ.61.91 ಲಕ್ಷ ಕೋಟಿಗೆ ಏರಿಕೆ ಕಂಡಿದೆ.ಹೊಸ ಷೇರಿನ ವಿಚಾರ

*ಇತ್ತೀಚೆಗೆ ಪ್ರತಿ ಷೇರಿಗೆ ರೂ.20 ರಂತೆ ಸಾರ್ವಜನಿಕ ವಿತರಣೆ ಮಾಡಿದ ಜುಪಿಟರ್ ಇನ್ಫೋ ಮೀಡಿಯಾ ಲಿ. ಕಂಪೆನಿಯು 16 ರಿಂದ ಸಣ್ಣ ಮತ್ತು ಮಧ್ಯಮ ಉದ್ಯಮ ವಲಯದ ಎಂ.ಟಿ. ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

 

ವಹಿವಾಟು ಗುಚ್ಚವು 6,000 ಷೇರುಗಳಾಗಿವೆ. ಸಣ್ಣ ಮತ್ತು ಮಧ್ಯಮ ಉದ್ಯಮ ವಲಯದಲ್ಲಿ ಜಾಯಿಂಟಿಕಾ ಎಜುಕೇಷನ್ ಸೊಲೂಷನ್ಸ್ ಲಿ. ಕಂಪೆನಿಯು 16 ರಿಂದ ಸಾರ್ವಜನಿಕ ಷೇರು ವಿತರಣೆ ಆರಂಭಿಸಿದೆ. ಪ್ರತಿ ಷೇರಿಗೆ ರೂ.15 ರಂತೆ 8,000 ಷೇರುಗಳ ಗುಚ್ಚದಲ್ಲಿ ವಿತರಣೆಯಾಗಲಿದ್ದು 21 ರವರೆಗೂ ತೆಗೆದಿರುತ್ತದೆ.ಬೋನಸ್ ಷೇರಿನ ವಿಚಾರ

*ಹೆಸ್ಟರ್ ಬಯೋ ಸೈನ್ಸಸ್ ಲಿ. ಕಂಪೆನಿಯು 1:2ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.*ಅನಿಲ್ ಸ್ಪೆಷಲ್ ಸ್ಟೀಲ್ ಇಂಡಸ್ಟ್ರೀಸ್‌ಲಿ. ಕಂಪೆನಿಯು 1:1ರ ಅನುಪಾತದ ಬೋನಸ್ ಷೇರು ಘೋಷಿಸಿದೆ.* ಅತ್ರಿಸಿಲ್ ಲಿ. ಕಂಪೆನಿಯು 1:2ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.ಲಾಭಾಂಶ ವಿಚಾರ

ಎರೀಸ್ ಆಗ್ರೊ ಶೇ 15, ಅನ್ಸಾಲ್ ಬ್ಯುಲ್ಡ್‌ವೆಲ್ ಶೇ 15, ಬಜಾಜ್ ಸ್ಟೀಲ್ ಶೇ 30, ಅಶೀಶ್ ಪೊಲಿಪ್ಲಾಸ್ಟ್ ಶೇ 16.5. ಕಾಕ್ಸ್ ಅಂಡ್ ಕಿಂಗ್ಸ್ ಶೇ 20 (ಮು.ಬೆ. ರೂ.5), ಕೊರಲ್ ಲ್ಯಾಬ್ ಶೇ 50 ಡೈಮಂಡ್ ಪವರ್ ಶೇ 40, ಎಂ ಸನ್ಸ್ ಇಂಟರ್‌ನ್ಯಾಶನಲ್ ಶೇ 25, ಇಂಡಕ್ಟೊ ಸ್ಟೀಲ್ ಶೇ 30, ಕೆಸರ್ ಟರ್ಮಿ   ನಲ್ಸ್ ಶೇ 25, ಗುಜರಾತ್ ಅಪೊಲೊ ಇಂಡ       ಸ್ಟ್ರೀಸ್ ಶೇ 25, ಜೆ. ಕುಮಾರ್ ಇನ್‌ಫ್ರಾ ಶೇ 22.5, ಜೈನ್ ಇರ‌್ರಿಗೇಷನ್ ಶೇ 50 (ಮು. ಬೆ. ರೂ.21), ರೂಬಿ ಮಿಲ್ಸ್ ಶೇ 50 ಸಿಂಪ್ಲೆಕ್ಸ್ ಕ್ಯಾಸ್ಟಿಂಗ್ಸ್ ಶೇ 25, ವೈಜ್‌ಮೆನ್ ಫಾರೆಕ್ಸ್ ಶೇ 20, ವಿಪುಲ್ ಲಿ. ಶೇ 15 (ಮು.ಬೆ. ರೂ. 1).ಸ್ಮಾಲ್ ಕ್ಯಾಷ್ ಇಂಡೆಕ್ಸ್‌ನಿಂದ ಹೊರಕ್ಕೆ

ಐವಿಆರ್‌ಸಿಎಲ್ ಅಸೆಟ್ಸ್ ಅಂಡ್ ಹೋಲ್ಡಿಂಗ್ಸ್ ಲಿ. ಕಂಪೆನಿಯಲ್ಲಿನ ರಿಯಲ್ ಎಸ್ಟೇಟ್ ವಿಭಾಗವನ್ನು ಡಿ-ಮರ್ಜ್ ಮಾಡಲಿರುವುದರಿಂದ 16ನೇ ಆಗಸ್ಟ್‌ನಿಂದ ಈ ಕಂಪೆನಿಯನ್ನು ಸ್ಮಾಲ್‌ಕ್ಯಾಷ್ ಇಂಡೆಕ್ಸ್‌ನಿಂದ ಹೊರಹಾಕಲಾಗಿದೆ.ಹಕ್ಕಿನ ಷೇರಿನ ವಿಚಾರ

*ಕೇಸರ್ ಎಂಟರ್‌ಪ್ರೈಸಸ್ ಲಿ. ಕಂಪೆನಿಯು ಹದಿನೈದು ಕೋಟಿ ರೂಪಾಯಿಯವರೆಗೂ ಹಕ್ಕಿನ ಷೇರು ವಿತರಿಸಲಿದ್ದು ಈ ಕಾರ್ಯಕ್ಕಾಗಿ ನಿಯಮಾವಳಿ ರೂಪಿಸಲು ಸಮಿತಿ ರಚಿಸಿದೆ.*ಕೇಸೋರಾಂ ಇಂಡಸ್ಟ್ರೀಸ್ ಕಂಪೆನಿಯು 17 ರಂದು ಪರಿಶೀಲಿಸಬೇಕಿದ್ದ ಹಕ್ಕಿನ ಷೇರು ವಿತರಣೆ ವಿಚಾರವನ್ನು 22ಕ್ಕೆ ಮುಂದೂಡಿದೆ.ಮುಖಬೆಲೆ ಸೀಳಿಕೆ ವಿಚಾರ

*ಗೋಯೆಂಕಾ ಡೈಮಂಡ್ ಕಂಪೆನಿ ಷೇರಿನ ಮುಖಬೆಲೆ ರೂ.10 ರಿಂದ ರೂ.1ಕ್ಕೆ ಸೀಳಲಿದೆ.ವಾರದ ಪ್ರಶ್ನೆ

ಕೆಂರಾಕ್ ಇಂಡಸ್ಟ್ರೀಸ್ ಅಂಡ್ ಎಕ್ಸ್‌ಪೋರ್ಟ್ಸ್ ಲಿ. ಕಂಪೆನಿಯ ಷೇರಿನ ಬೆಲೆಯು ಕಳೆದ ಒಂದು ತಿಂಗಳ ಹಿಂದೆ ರೂ.478 ರಲ್ಲಿದ್ದು ಅಲ್ಲಿಂದ ಸತತವಾದ ಕುಸಿತ ಕಂಡಿದೆ. ಒಂದು ವಾರದ ಹಿಂದೆ ಷೇರಿನ ಬೆಲೆಯು ರೂ.386 ಇದ್ದು ಈಗ ರೂ.184 ರೂಪಾಯಿಗಳಿಗೆ ಕುಸಿದಿದೆ.

 

ಕಳೆದ ಮಾರ್ಚ್ ಅಂತ್ಯದಲ್ಲಿ ಈ ಕಂಪೆನಿಯು ಉತ್ತಮ ಫಲಿತಾಂಶ ಪ್ರಕಟಿಸಿದೆ. ಮಾರ್ಚ್ ಅಂತ್ಯದಲ್ಲಿ ರೂ.20.33 ಕೋಟಿ ಬಂಡವಾಳದಿಂದ ರೂ.14.51 ಕೋಟಿ ಲಾಭ ಪ್ರಕಟಿಸಿತ್ತು.

 

ಕಂಪೆನಿಯ ಪ್ರವರ್ತಕರು ಶೇ 27.07ರ ಭಾಗಿತ್ವ ಹೊಂದಿದ್ದು, ವಿದೇಶಿ ವಿತ್ತೀಯ ಸಂಸ್ಥೆಗಳು ಕಳೆದ ಜೂನ್ ತ್ರೈಮಾಸಿಕ ಅಂತ್ಯದಲ್ಲಿ ಶೇ 0.48ರ ಭಾಗಿತ್ವ ಹೊಂದಿವೆ ಸ್ವದೇಶೀ ವಿತ್ತೀಯ ಸಂಸ್ಥೆಗಳು ಶೇ 2.87ರ ಭಾಗಿತ್ವ ಹೊಂದಿವೆ.

 

ಕಳೆದ ತಿಂಗಳ ಅಂತ್ಯದಲ್ಲಿ ಕಂಪೆನಿಯ ಪ್ರವರ್ತಕರು ತಮ್ಮ ಭಾಗಿತ್ವದ ಹೆಚ್ಚಿನ ಭಾಗವನ್ನು ಒತ್ತೆ ಇಟ್ಟು ಸಾಲ ಪಡೆದಿರುವ ಅಂಶ ಪ್ರಕಟವಾಯಿತು. ತದ ನಂತರದಲ್ಲಿ ಷೇರಿನ ಬೆಲೆ ಧರೆಯತ್ತ ತಿರುಗಿದೆ.ಕಳೆದ ಒಂದು ತಿಂಗಳಲ್ಲಿ ಸುಮಾರು ಅರ್ಧಕ್ಕೂ ಹೆಚ್ಚು ಕುಸಿತ ಕಂಡಿರುವುದರಿಂದ ಸಾಲ ಕೊಟ್ಟಿರುವ ಕಂಪೆನಿಗಳು ಮಾರ್ಜಿನ್ ಹಣ ಸರಿಪಡಿಸಲು ಮಾರಾಟ ಮಾಡಿರಲೂಬಹುದು. ಹೆಚ್ಚಿನ ಕುಸಿತ ಕಂಡಲ್ಲಿ ಕಂಪೆನಿಯು ಉತ್ತಮ ಹೂಡಿಕೆಗೆ ಯೋಗ್ಯವಾಗಬಹುದು. ಸಂದರ್ಭವನ್ನಾಧರಿಸಿ ನಿರ್ಧರಿಸಿರಿ.ಇತ್ತೀಚೆಗೆ ಅನಿರೀಕ್ಷಿತ ಕುಸಿತ ಕಂಡ ಅಮರ್ ರೆಮೆಡೀಸ್, ಪಿಪವಾವ್ ಡಿಫೆನ್ಸ್ ಅಂಡ್ ಆಫ್‌ಷೋರ್ ಇಂಜಿನಿಯರಿಂಗ್‌ಗಳು ಸಹ ಇಂತಹುದೇ ಕಾರಣದಿಂದ ಮಾರಾಟದ ಒತ್ತಡವನ್ನೆದುರಿಸಿದವು. ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಐಡಿಆರ್‌ಗಳು.ಬ್ಯಾಂಕ್‌ನ ಇರಾನಿನ ವ್ಯವಹಾರ ಸುದ್ದಿಯಿಂದ ಕಳೆದ ಒಂದು ತಿಂಗಳ ಗರಿಷ್ಠ ರೂ.104 ರಿಂದ ರೂ.82 ರವರೆಗೂ ಕುಸಿದು ಶುಕ್ರವಾರ ರೂ.96 ರವರೆಗೂ ಪುಟಿದೆದ್ದಿತು. ಒಟ್ಟಿನಲ್ಲಿ ಕಂಪೆನಿಯ ಮೂಲಭೂತಗಳು ಉತ್ತಮವಾಗಿದ್ದರೆ ಬೆಲೆ ಕುಸಿತ ಕಂಡಾಗ ಆಪತ್ತಿನಲ್ಲಿ ಅವಕಾಶ ಕಲ್ಪಿಸಿಕೊಡುತ್ತದೆ.

.........ಲೇಖಕರ ಸಂಪರ್ಕ: 98863-13380

 (ಮಧ್ಯಾಹ್ನ 4.30ರ ನಂತರ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.