ಹೈ ಡೆಫಿನಿಶನ್ ಎಂದರೇನು?

7

ಹೈ ಡೆಫಿನಿಶನ್ ಎಂದರೇನು?

ಯು.ಬಿ. ಪವನಜ
Published:
Updated:
ಹೈ ಡೆಫಿನಿಶನ್ ಎಂದರೇನು?

ಒಂದಾನೊಂದು ಕಾಲದಲ್ಲಿ ಕಪ್ಪು ಬಿಳುಪು ಟಿ.ವಿ.ಗಳಿದ್ದವು. ನಂತರ ಬಣ್ಣದ ಟಿ.ವಿ.ಗಳು ಬಂದವು. ಟಿ.ವಿ.ಯಲ್ಲಿ ಬದಲಿಸಬಹುದಾದ ಒಟ್ಟು ಚಾನೆಲ್‌ಗಳ ಸಂಖ್ಯೆಯೂ ಎರಡರಿಂದ ಮುಂದುವರೆದು 8, 60, 200 ಹೀಗೇ ಬೆಳೆದಿದೆ. ನಂತರ ಮನೆಮನೆಗೂ ಕೇಬಲ್ ಬಂತು. ಕೇಬಲ್‌ವಾಲಾಗಳ ದಾದಾಗಿರಿ ತಡೆಯಲಸಾಧ್ಯ ಎಂದು ಜನ ದೂರಿಡತೊಡಗಿದಾಗ ಡಿಟಿಎಚ್ (DTH = Direct To Home) ಬಂತು. ಟಿ.ವಿ. ಪ್ರಸಾರದಲ್ಲೂ ಸುಧಾರಣೆಗಳಾಗಿವೆ. ಸಿಆರ್‌ಟಿ ಟಿ.ವಿ.ಗಳ ಕಾಲದಲ್ಲಿ ಇದ್ದುದರಿಂದ ಇತ್ತೀಚಿನ ಹೈಡೆಫಿನಿಶನ್ ಟಿ.ವಿ.ಗಳ ತನಕ ಈ ಸುಧಾರಣೆ ಆಗಿದೆ, ಇನ್ನೂ ಆಗುತ್ತಲೇ ಇದೆ.

ಮೊದಲಿಗೆ ನಮ್ಮ ಹಳೆಯ ಸಿಆರ್‌ಟಿ ಟಿ.ವಿ. ಕಾಲಕ್ಕೆ ಹೋಗೋಣ. ಇವುಗಳಲ್ಲಿ ಒಂದು ಋಣ ವಿದ್ಯುದಾತ್ಮಕ ಕಿರಣ (Cathode Ray) ಎಡದಿಂದ ಬಲಕ್ಕೆ ಚಲಿಸಿ ಪರದೆಯ ಮೇಲೆ ಚಿತ್ರ ಮೂಡಿಸುತ್ತದೆ. ಮೊದಲು ಒಂದು ಸಾಲು ಚಲಿಸಿ ಅಗತ್ಯ ಚುಕ್ಕಿಗಳನ್ನು ಸೂಕ್ತ ಬಣ್ಣದಲ್ಲಿ ಬೆಳಗುತ್ತದೆ. ನಂತರ ಕೆಳಗಿನ ಸಾಲಿನಲ್ಲಿ ಇದೇ ಕ್ರಿಯೆ ಮುಂದುವರೆಯುತ್ತದೆ. ಒಟ್ಟು ಟಿ.ವಿ. ಪರದೆಯಲ್ಲಿ ಇಂತಹ 480 ಸಾಲುಗಳಾಗಿ ವಿಭಾಗಿಸಲಾಗಿದೆ.

ಎಲ್ಲ 480 ಸಾಲುಗಳನ್ನು ಬೆಳಗಿದಾಗ ಪರದೆಯ ಮೇಲೆ ಪೂರ್ತಿ ಚಿತ್ರ ಮೂಡಿಬರುತ್ತದೆ. ಅಡ್ಡಡ್ಡಲಾಗಿ 480 ಸಾಲುಗಳಿರುವ ಹಳೆಯ ಮಾದರಿಯ ಟಿ.ವಿ.ಗಳನ್ನು ಸ್ಟಾಂಡರ್ಡ್ ಡೆಫಿನಿಶನ್ ಎಂದು ಕರೆಯುತ್ತಾರೆ. ಈ ರೀತಿ ಸಾಲುಗಳನ್ನು ಬೆಳಗುವಾಗ ಈ ಕಿರಣ ಸಾಲು ಬಿಟ್ಟು ಇನ್ನೊಂದು ಸಾಲುಗಳನ್ನು ಬೆಳಗುತ್ತದೆ. ಇದನ್ನು ಇಂಟರ್‌ಲೇಸ್ಡ್ ಎನ್ನುತ್ತಾರೆ. ಇದರಿಂದಾಗಿ ಪರದೆಯ ಮೇಲೆ ಚಿತ್ರ ಸ್ವಲ್ಪ ಮಿನುಗಿದಂತೆ (ಫ್ಲಿಕರ್) ಅನಿಸುತ್ತದೆ. ಇವೆಲ್ಲ ಅನಲಾಗ್ ಟಿ.ವಿ. ಬಗ್ಗೆ. ಈಗ ಡಿಜಿಟಲ್ ಯುಗಕ್ಕೆ ಪ್ರವೇಶ ಮಾಡೋಣ.

ಡಿಜಿಟ್ ಅಂದರೆ ಅಂಕಿ. ವಿದ್ಯುತ್‌ನ ಕ್ಷೇತ್ರದಲ್ಲಿ ಅವು ಕೇವಲ ಒಂದು ಮತ್ತು ಸೊನ್ನೆ ಅರ್ಥಾತ್ ದ್ವಿಮಾನ. ವಿದ್ಯುತ್‌ನ ಸಿಗ್ನಲ್‌ಗಳನ್ನು ಬದಲಾಗುತ್ತಿರುವ ವೋಲ್ಟೇಜ್ ಬದಲು ಸೊನ್ನೆ ಒಂದುಗಳಾಗಿ (ಅಂದರೆ ವಿದ್ಯುತ್ ಇದೆ ಅಥವಾ ಇಲ್ಲ) ಪಸರಿಸಿದರೆ ಅದುವೇ ಡಿಜಿಟಲ್.

ಟಿ.ವಿ.ಯ ಪ್ರಸಾರ ಅನಲಾಗ್‌ನಿಂದ ಡಿಜಿಟಲ್‌ಗೆ ಪರಿವರ್ತನೆಯಾಗಿ ಅದು ಡಿಟಿಎಚ್ ಮೂಲಕ ಮನೆಗಳನ್ನು ತಲುಪುತ್ತಿದೆ. ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಮಾರ್ಚ್ 31, 2013ರ ಒಳಗಾಗಿ ಪ್ರತಿ ಮನೆ ಮನೆಗೆ ಬರುವ ಕೇಬಲ್ ಕೂಡ ಡಿಜಿಟಲ್ ಆಗಿ ಪರಿವರ್ತನೆಗೊಳ್ಳಬೇಕಾಗಿದೆ.

ಡಿಜಿಟಲ್ ಪ್ರಸಾರದಲ್ಲಿ ಉತ್ತಮ ಗುಣಮಟ್ಟ ಸಾಧ್ಯ. ಕೇವಲ ಸಿಗ್ನಲ್ ಮಾತ್ರ ಇದ್ದು ಯಾವುದೇ ಕಿರಿಕಿರಿ (noise)  ಇರುವುದಿಲ್ಲ. ಡಿಜಿಟಲ್ ಪ್ರಸಾರದ ಸಾಧಕಗಳು -ಉತ್ತಮ ಗುಣಮಟ್ಟದ ಚಿತ್ರ, ಅಧಿಕ ರೆಸೊಲೂಶನ್‌ನ ಸಾಧ್ಯತೆ, ಸಾಲು ಬಿಟ್ಟು ಸಾಲುಗಳ ಬೆಳಗುವಿಕೆ (interlaced) ಮಾತ್ರವಲ್ಲ ಒಂದಾದ ಮೇಲೆ ಒಂದರಂತೆ ಸಾಲುಗಳ ಬೆಳಗುವಿಕೆ (progressive),  ಪ್ರತಿಸ್ಪಂದನಾತ್ಮಕ (interactive) ಟಿ.ವಿ.ಯ ಸಾಧ್ಯತೆ ಹಾಗೂ ಹೈಡೆಫಿನಿಶನ್ ಟಿ.ವಿ.. ಡಿಜಿಟಲ್ ಪ್ರಸಾರದ ಒಂದು ಬಹುದೊಡ್ಡ ತೊಂದರೆ ಎಂದರೆ ಹಳೆಯ ಅನಲಾಗ್ ಟಿ.ವಿ.ಗಳು ಈ ಪ್ರಸಾರವನ್ನು ಸ್ವೀಕರಿಸಲಾರವು.

ಸಿನಿಮಾ ನೋಡಿದ ಅನುಭವ ಇದೆ ತಾನೆ? ಹಳೆಯ ಸಿನಿಮಾಗಳಿಗೂ ಈಗಿನ ಸಿನಿಮಾಗಳಿಗೂ ಒಂದು ಪ್ರಮುಖ ವ್ಯತ್ಯಾಸ ಗುರುತಿಸಿರಬಹುದು. ಹಳೆಯ ಸಿನಿಮಾಗಳು ಪರದೆಯ ಅರ್ಧದಷ್ಟನ್ನು ಮಾತ್ರವೇ ಬೆಳಗುತ್ತವೆ. ಈಗಿನ ಸಿನಿಮಾಗಳು ಈಗಿನ ಪರದೆಯನ್ನು ಪೂರ್ತಿ ತುಂಬುತ್ತವೆ. ಇದಕ್ಕೆ ಕಾರಣ ಹಳೆಯ ಸಿನಿಮಾಗಳ ಉದ್ದ ಮತ್ತು ಅಗಲಗಳ (ಎತ್ತರ) ಅನುಪಾತ 4:3 ಆಗಿದ್ದವು ಮತ್ತು ಈಗಿನ ಬಹುಪಾಲು ಸಿನಿಮಾಗಳ ಅನುಪಾತ 16:9 ಅಥವಾ ಅದಕ್ಕೂ ಹೆಚ್ಚು. ಇದೇ ಸೂತ್ರ ಟಿ.ವಿ.ಗಳಿಗೂ ಅನ್ವಯಿಸುತ್ತದೆ.

ಹಳೆಯ ಟಿ.ವಿ.ಗಳ ಪರದೆಯ ಉದ್ದ ಅಗಲದ ಅನುಪಾತ 4:3 ಆಗಿದ್ದವು. ಈಗಿನ ಹೈಡೆಫಿನಿಶನ್ ಟಿ.ವಿ.ಗಳಲ್ಲಿ ಇದು 16:9 ಇದೆ. ಹೈಡೆಫಿನಿಶನ್ ಎಂದರೆ ಇಷ್ಟೇ ಅಲ್ಲ.

ಹಳೆಯ ಟಿ.ವಿ.ಗಳಲ್ಲಿ 480 ಅಡ್ಡ ಸಾಲುಗಳಿರುತ್ತಿದ್ದವು. ಡಿಜಿಟಲ್ ಪ್ರಸಾರದಲ್ಲಿ ಇವನ್ನು ಹೆಚ್ಚಿಸಲು ಸಾಧ್ಯ. ಅಂತೆಯೇ 720 ಅಥವಾ 1080 ಅಡ್ಡ ಸಾಲುಗಳಿರಬಹುದು. ಈ ಟಿ.ವಿ.ಗಳ ಉದ್ದ ಅಗಲದ ಅನುಪಾತ 16:9 ಇರುವುದರಿಂದ ಇವುಗಳ ರೆಸೊಲೂಶನ್ 1280X720 ಅಥವಾ 1920X1080 ಇರಬಹುದು. ರೆಸೊಲೂಶನ್ ಜಾಸ್ತಿ ಇದ್ದಷ್ಟು ಜಾಸ್ತಿ ಚುಕ್ಕಿಗಳಿವೆ ಅಂದರೆ ಉತ್ತಮ ಚಿತ್ರ ಮೂಡಿಬರುತ್ತದೆ ಎಂದು ಅರ್ಥೈಸಿಕೊಳ್ಳಬಹುದು. ಇದನ್ನೇ ಹೈಡೆಫಿನಿಶನ್ ಎಂದು ಹೇಳಲಾಗುತ್ತಿದೆ.

ಈ ಎರಡು ನಮೂನೆಯ ರೆಸೊಲೂಶನ್‌ಗಳಲ್ಲದೆ ಹೈಡೆಫಿನಿಶನ್‌ನಲ್ಲಿ ಇನ್ನೂ ಎರಡು ವಿಭಜನೆಗಳಿವೆ. ಅವು i  ಮತ್ತು . ಇಲ್ಲಿ i ಎಂದರೆ interlaced ಅರ್ಥಾತ್ ಸಾಲು ಬಿಟ್ಟು ಸಾಲುಗಳ ಬೆಳಗುವಿಕೆ. p ಎಂದರೆ progressive. ಇಲ್ಲಿ ಸಾಲುಗಳನ್ನು ಒಂದರ ನಂತರ ಒಂದರಂತೆ ಬೆಳಗಲಾಗುತ್ತದೆ. ಸಹಜವಾಗಿಯೇ ಪ್ರೊಗ್ರೆಸಿವ್ ಹೈಡೆಫಿನಿಶನ್ ಟಿ.ವಿ. ಇಂಟರ್‌ಲೇಸ್‌ಡ್‌ಗಿಂತ ಉತ್ತಮ. ನೀವು ಟಿ.ವಿ. ಕೊಳ್ಳುವಾಗ ಅದರ ರೆಸೊಲೂಶನ್‌ನ ಮುಂದೆ ಒಂದು ಜಿ ಅಥವಾ  ಇದೆಯೇ ಎಂಬುದನ್ನು ಗಮನಿಸಿ. ಉದಾಹರಣೆಗೆ 720ಜಿ, 720, 1080ಜಿ ಮತ್ತು 1080. ಇವುಗಳಲ್ಲಿ 720, ಮತ್ತು 1080ಉತ್ತಮ.

1080 ರೆಸೊಲೂಶನ್ ಇದ್ದರೆ ಅದು ಫುಲ್ ಎಚ್‌ಡಿ ಹಾಗೂ 720 ಇದ್ದರೆ ಅದು ಅರ್ಧ ಎಚ್‌ಡಿ. ಈ ಎಲ್ಲ ಮಾದರಿಯ ಸಿಗ್ನಲ್‌ಗಳನ್ನು ಸ್ವೀಕರಿಸಿ ಪ್ರದರ್ಶಿಸಬಲ್ಲ ಟಿ.ವಿ.ಗಳಿಗೆ ಎಚ್‌ಡಿ ರೆಡಿ ಎಂಬ ಹೆಸರಿದೆ.

ಹೈಡೆಫಿನಿಶನ್ ಟಿ.ವಿ.ಯಿಂದ ಉತ್ತಮ ಫಲಿತಾಂಶ ಪಡೆಯಬೇಕಿದ್ದರೆ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅವನ್ನು ಪಾಲಿಸಿದರೆ ಉತ್ತಮ. ಅಂಗಡಿಯಲ್ಲಿ ಕಂಡುಬಂದಂತಹ ಉತ್ತಮ ಗುಣಮಟ್ಟದ ಚಿತ್ರ ಮನೆಯಲ್ಲೂ ಮೂಡಿ ಬಾರದೆ ಇದ್ದರೆ ಅದಕ್ಕೆ ಹಲವು ಕಾರಣಗಳಿರಬಹುದು.

ಮೊದಲನೆಯದಾಗಿ ಪರದೆಯ ಕಪ್ಪು ಬಣ್ಣದ ಮಟ್ಟ. ಇದನ್ನು ತುಂಬ ಕಪ್ಪು ಮಾಡಲೂಬಹುದು ಅಥವಾ ಅತಿ ಕಡಿಮೆ ಕಪ್ಪು ಮಾಡಬಹುದು. ನಿಮ್ಮ ಮನೆಯಲ್ಲಿ ಇರುವ ಬೆಳಕಿನ ತೀವ್ರತೆಗೆ ಹೊಂದಿಕೊಂಡು ಇದನ್ನು ಆಯ್ಕೆ ಮಾಡಿಕೊಳ್ಳಬೇಕು. ಇದೇ ಸೂತ್ರ ಪರದೆಯ ಕಾಂಟ್ರಾಸ್ಟ್ ಮತ್ತು ಬ್ರೈಟ್‌ನೆಸ್‌ಗೂ ಅನ್ವಯಿಸುತ್ತದೆ. ಡಿಟಿಎಚ್ ಪೆಟ್ಟಿಗೆಯಿಂದ ಟಿ.ವಿ.ಗೆ ಜೋಡಿಸಲು ಎಚ್‌ಡಿಎಂಐ ಕೇಬಲ್ ಬಳಸುವುದು ಒಳ್ಳೆಯದು.

ಕೇಬಲ್‌ನ ಕನೆಕ್ಟರ್ ತುಂಬ ಒಳ್ಳೆಯದಿರಬೇಕು. ನಿಮ್ಮ ಮನೆಯಲ್ಲಿ ಹೈಫೈ ಆಡಿಯೋ ಸಿಸ್ಟಮ್ ಇದ್ದಲ್ಲಿ ಡಿಟಿಎಚ್ ಪೆಟ್ಟಿಗೆಯಿಂದ ಎಚ್‌ಡಿಎಂಐ ಕೇಬಲ್ ಅನ್ನು ಆಡಿಯೋ ಸಿಸ್ಟಮ್‌ಗೆ ಜೋಡಿಸಿ ಅದರ ವೀಡಿಯೋ ಔಟ್‌ಪುಟ್ ಅನ್ನು ಇನ್ನೊಂದು ಎಚ್‌ಡಿಎಂಐ ಕೇಬಲ್ ಮೂಲಕ ಟಿ.ವಿ.ಗೆ ಜೋಡಿಸಿದಲ್ಲಿ ನಿಮ್ಮ ಮನೆಯ ಹೋಮ್ ಥಿಯೇಟರ್ ಸಿದ್ಧ.

ಟಿ.ವಿ. ಏನೋ ಪೂರ್ತಿ ಹೈಡೆಫಿನಿಶನ್ (1080) ಕೊಂಡುಕೊಂಡಿದ್ದೀರಿ ಎಂದಿಟ್ಟುಕೊಳ್ಳೋಣ. ಆದರೆ ಡಿಟಿಎಚ್? ಅದರ ಗುಣವೈಶಿಷ್ಟ್ಯಗಳ ಕಡೆ ಎಚ್ಚರಿಕೆಯಿಂದ ಗಮನಹರಿಸಿ. ಕೆಲವು ಕಂಪೆನಿಯ ಡಿಟಿಎಚ್‌ಗಳು ಪೂರ್ತಿ ಎಚ್‌ಡಿ ಇರುವುದಿಲ್ಲ.

ಇನ್ನು ಕೆಲವು 1080ಜಿ ಮಾತ್ರ ಇರುತ್ತವೆ, 1080 ಇರುವುದಿಲ್ಲ. ಇತ್ತೀಚೆಗಷ್ಟೆ ಡಿಟಿಎಚ್ ಖರೀದಿಸಿದಾಗ ಈ ಅಂಶಗಳು ನನ್ನ ಗಮನಕ್ಕೆ ಬಂದವು. ಟಿ.ವಿ. ಪೂರ್ತಿ ಎಚ್‌ಡಿ ಇದ್ದು ಡಿಟಿಎಚ್ ಹಾಗಿಲ್ಲದಿದ್ದಲ್ಲಿ ನಿಮ್ಮ ಟಿ.ವಿ.ಯ ಪೂರ್ತಿ ಶಕ್ತಿಯ ಬಳಕೆ ಆದಂತಾಗುವುದಿಲ್ಲ.

ಗ್ಯಾಜೆಟ್ ಸಲಹೆ

ಮಡಿಕೇರಿಯ ಹರಿ ಅವರ ಪ್ರಶ್ನೆ: ನಿಕಾನ್ ಕ್ಯಾಮರಾಗಳಲ್ಲಿ ಊಗಿ ಮತ್ತು ಈಗಿ ಎಂದರೆ ಏನು? ಅವುಗಳ ವ್ಯತ್ಯಾಸವೇನು?

ಉ: ಊಗಿ ಎಂದರೆ ಹಳೆಯ 35ಮಿಮೀ ಫಿಲ್ಮ್ ಕ್ಯಾಮರಾಗಳಿಗೆ ಸಮಾನಾರ್ಥಕ. ಅಂದರೆ 36X24ಮಿಮೀ ಗಾತ್ರದ ಸಂವೇದಕ (ಸೆನ್ಸರ್). ಈಗಿ ಎಂದರೆ ಚಿಕ್ಕದಾದ 24X16 ಮಿಮೀ ಗಾತ್ರದ ಸಂವೇದಕ ಇರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry