ಆಮ್ ಆದ್ಮಿಯ ಏಳು ರಾಜ್ಯಸಭಾ ಸದಸ್ಯರು ಬಿಜೆಪಿಗೆ ಸೇರ್ಪಡೆ ಆಗಿರುವ ವಿದ್ಯಮಾನ ಅಪಾಯಕಾರಿಯಾದುದು. ಇದು ವಿರೋಧ ಪಕ್ಷಗಳನ್ನು ಇಲ್ಲವಾಗಿಸಿ ಏಕಚಕ್ರಾಧಿಪತ್ಯ ಸ್ಥಾಪಿಸುವ ಪ್ರಯತ್ನವನ್ನು ಸಂಕೇತಿಸುವಂತಹದ್ದು. ಆದರೆ, ಈ ಅನೈತಿಕ ರಾಜಕಾರಣದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಗಿರುವ ಯುವಜನರ ಪ್ರತಿರೋಧವು ದೂರದ ಸಾಧ್ಯತೆಯೊಂದರ ಸೂಚನೆಯಂತಿದೆ.