Ask ಅಮೆರಿಕ | ಯು.ಎಸ್.ಕಾನ್ಸುಲೇಟ್, ಚೆನ್ನೈ

7

Ask ಅಮೆರಿಕ | ಯು.ಎಸ್.ಕಾನ್ಸುಲೇಟ್, ಚೆನ್ನೈ

ಯು.ಎಸ್.ಕಾನ್ಸುಲೇಟ್, ಚೆನ್ನೈ
Published:
Updated:
ಕರ್ನಾಟಕ ಹಾಗೂ ವಿಶ್ವದಾದ್ಯಂತ ವ್ಯಾಪಿಸಿರುವ ಪ್ರಜಾವಾಣಿ ಓದುಗರಿಗೆ ಶುಭಾಶಯಗಳು. ಅಮೆರಿಕ ದೂತಾವಾಸದಲ್ಲಿ ಹೊಸ ಕಾನ್ಸಲ್ ಜನರಲ್ ಆಗಿ ಕಳೆದ ತಿಂಗಳಷ್ಟೇ ಚೆನ್ನೈಗೆ ಬಂದಿರುವೆ.ಕನ್ನಡದ ಪ್ರತಿಷ್ಠಿತ ಪತ್ರಿಕೆ `ಪ್ರಜಾವಾಣಿ~ಯಲ್ಲಿ ಈಚೆಗಷ್ಟೇ ಆರಂಭಿಸಲಾದ ಅಮೆರಿಕ ಕುರಿತ ಪ್ರಶ್ನೋತ್ತರ ಮಾಲಿಕೆಯ ಅಂಕಣ ನನಗೂ ತುಂಬ ಖುಷಿ ನೀಡಿದೆ. ಓದುಗರ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ, ಈ ಅಂಕಣವನ್ನು ಮುಂದುವರಿಸಲು ಉತ್ಸುಕಳಾಗಿದ್ದೇನೆ.ಕಳೆದ ತಿಂಗಳಿನಂತೆಯೇ, ಈ ತಿಂಗಳೂ ನಮಗೆ ಅನೇಕ ಆಸಕ್ತಿದಾಯಕ ಹಾಗೂ ಮಹತ್ವದ ಪ್ರಶ್ನೆಗಳು ಬಂದಿವೆ. ರಾಜಕಾರಣದಿಂದ ಹಿಡಿದು ಸಂಸ್ಕೃತಿ ಪ್ರವಾಸಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳು ಇವೆ. ಆದರೆ ಪ್ರಾತಿನಿಧಿಕವಾದ ಕೆಲವನ್ನು ಮಾತ್ರ ಆಯ್ದು ಉತ್ತರ ನೀಡುತ್ತಿದ್ದೇವೆ.ಪ್ರತಿ ತಿಂಗಳೂ ಅಮೆರಿಕ ಕುರಿತ ವೈವಿಧ್ಯಮಯ ಪ್ರಶ್ನೆಗಳನ್ನು ಉತ್ತರಿಸಲು ಯತ್ನಿಸುತ್ತೇವೆ. ನಿಮ್ಮ ಪ್ರಶ್ನೆ, ಅಭಿಪ್ರಾಯ ಹಾಗೂ ಯಾವುದೇ ಪ್ರತಿಕ್ರಿಯೆಗಳನ್ನು ನಾವು ಕೇಳಲು ಕಾತರರಾಗಿದ್ದೇವೆ.

 

ಪ್ರಶ್ನೆಯನ್ನು ಕಳುಹಿಸಲು ದಯವಿಟ್ಟು ಈ ಮುಂದಿನ ವಿಳಾಸಕ್ಕೆ askamerica@prajavani.co.in ಇ-ಮೇಲ್ ಮಾಡಿ. ನಮ್ಮ ವೆಬ್‌ಸೈಟ್  http://chennai. ಗೂ ಭೇಟಿ ಕೊಡಿ ಮತ್ತು ಫೇಸ್‌ಬುಕ್‌ನಲ್ಲೂ http://www.facebook.com/ ನಮ್ಮ ಗೆಳೆಯರಾಗಿ.

1.ಶಿವಶಂಕರ ಎಲ್. ಬೆನ್ನೂರು, ಹಾವೇರಿಪ್ರಶ್ನೆ: ಅಮೆರಿಕ ಬಲಾಢ್ಯ ರಾಷ್ಟ್ರ ಎಂಬುದರಲ್ಲಿ ಸಂಶಯವಿಲ್ಲ. ಪ್ರಪಂಚದ ಯಾವುದೇ ಮೂಲೆಯಲ್ಲಿ ಭಯೋತ್ಪಾದನೆ ತಲೆಯೆತ್ತಿದರೆ, ಅದನ್ನು ಮಟ್ಟ ಹಾಕಲು ಮುಂದಾಗುತ್ತೀರಾ?

 

ಸಹಸ್ರಾರು ಕೋಟಿ ಡಾಲರುಗಳನ್ನು ಹೀಗೆ ವ್ಯಯಿಸುವುದರ ಬದಲು ಹಸಿವಿನಿಂದ ಬಳಲುತ್ತಿರುವ (ಉದಾಹರಣೆಗೆ ಸೂಡಾನ್, ಕೀನ್ಯಾ ಇತ್ಯಾದಿ) ದೇಶಗಳಿಗೆ ಮಾನವೀಯ ದೃಷ್ಟಿಯಿಂದ ಸಹಾಯ ಹಸ್ತ ನೀಡುವ ಕುರಿತು ಯೋಚಿಸಿರುವಿರಾ?ಉತ್ತರ: ಭಯೋತ್ಪಾದನೆ ಈಗ ಇಡೀ ವಿಶ್ವಕ್ಕೆ ಬೆದರಿಕೆಯೊಡ್ಡುತ್ತಿದೆ. ಇದರ ವಿರುದ್ಧದ ಹೋರಾಟದಲ್ಲಿ ಅಮೆರಿಕ ಹಾಗೂ ಭಾರತ ಒಟ್ಟಿಗೆ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ.ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಎರಡೂ ದೇಶಗಳ ಜಂಟಿ ಮಾತುಕತೆಯಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಯೋಜನೆಗಳ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಬದ್ಧತೆ ವ್ಯಕ್ತಪಡಿಸಲಾಯಿತು.

 

ಗುಪ್ತಚರ ಮಾಹಿತಿ ಹಂಚಿಕೆ, ಮಾಹಿತಿ ವಿನಿಮಯ, ಕಾರ್ಯಾಚರಣೆಗಳಲ್ಲಿ ಸಹಕಾರ ಹಾಗೂ ಉಗ್ರರ ನಿಗ್ರಹಕ್ಕೆ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನ ಮತ್ತು ಸಲಕರಣೆಗಳ ಬಳಕೆಯೂ ಸೇರಿದಂತೆ ಹಲವಾರು ಮಜಲುಗಳಲ್ಲಿ ಈ ಸಹಕಾರ ಮುಂದುವರಿಯಲಿದೆ.ವಿಪತ್ತುಗಳಿಂದ ಚೇತರಿಸಿಕೊಳ್ಳುತ್ತಿರುವ, ಬಡತನದ ವಿರುದ್ಧ ಹೋರಾಡುತ್ತಿರುವ ಹಾಗೂ ಪ್ರಜಾತಂತ್ರ ಸುಧಾರಣೆಯಲ್ಲಿ ತೊಡಗಿಸಿಕೊಂಡಿರುವ ದೇಶಗಳಿಗೆ ಮಾನವೀಯ ನೆರವು ನೀಡುವ ಮಹತ್ವದ ಕಾರ್ಯವನ್ನು United States Agency for International Development (USAID) ಮಾಡುತ್ತಿದೆ.2009ರ ಆರ್ಥಿಕ ವರ್ಷದಲ್ಲಿ 184 ದೇಶಗಳಿಗೆ ಒಟ್ಟು 34 ಬಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವ ಮೂಲಕ ಅತಿ ದೊಡ್ಡ ದ್ವಿಪಕ್ಷೀಯ ದಾನಿಯಾಗಿ ಅಮೆರಿಕ ಮುಂದುವರಿದಿದೆ. ಅಮೆರಿಕದ ಮಾನವೀಯ ನೆರವು ಪ್ರಯತ್ನಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು http://www.usaid.gov/index.html  ವೆಬ್‌ಸೈಟ್‌ಗೆ ಭೇಟಿ ನೀಡಿ.2.ಕೃಷ್ಣಮೂರ್ತಿ ಉಪಾಧ್ಯ, ಬೆಂಗಳೂರುಪ್ರಶ್ನೆ: ನಾನು ಬೆಂಗಳೂರಿನಲ್ಲಿ ಒಬ್ಬ ವ್ಯವಹಾರಸ್ಥ. ನನ್ನ ಪತ್ನಿಯೊಂದಿಗೆ ನಾನು ಅಮೆರಿಕ ಪ್ರವಾಸ ಮಾಡಬೇಕೆಂದಿದ್ದೇನೆ. ನನ್ನ ಬಂಧುಗಳ ಪ್ರಕಾರ, ಅಮೆರಿಕ ವೀಸಾ ಪಡೆಯುವುದು ಅತ್ಯಂತ ಕಷ್ಟದಾಯಕ.ಅನೇಕ ಸಂದರ್ಭಗಳಲ್ಲಿ ಗಂಡನಿಗೆ ವೀಸಾ ಸಿಕ್ಕರೆ, ಹೆಂಡತಿಗೆ ಸಿಗದು, ಇಲ್ಲವೇ, ಹೆಂಡತಿಗೆ ಸಿಕ್ಕರೆ, ಗಂಡನಿಗೆ ನಿರಾಕರಿಸಲಾಗುತ್ತದೆಯಂತೆ. ಇದು ನಿಜವೆ?ಉತ್ತರ: ತಾವು ತಾತ್ಕಾಲಿಕವಾಗಿ ಅಮೆರಿಕೆಗೆ ಭೇಟಿ ನೀಡಬೇಕೆಂದಿದ್ದರೆ, ತಮಗೆ ನಾನ್ ಇಮಿಗ್ರೆಂಟ್ ವೀಸಾ ಬೇಕು. ಪ್ರಯಾಣದ ಉದ್ದೆೀಶವನ್ನು ಆಧರಿಸಿ ಈ ಬಗೆಯ ವೀಸಾಗಳನ್ನು ನೀಡಲಾಗುತ್ತದೆ.

 

ಪ್ರವಾಸಿಗಳು/ ವ್ಯವಹಾರದ ಉದ್ದೆೀಶದ ಪ್ರವಾಸಿಗಳು B1/B2), ಹಂಗಾಮಿ ಕೆಲಸಗಾರರು (H or L), ವಿದ್ಯಾರ್ಥಿಗಳು ಹಾಗೂ ವಿನಿಮಯ ಕಾರ್ಯಕ್ರಮಗಳಡಿ ಭೇಟಿ ನೀಡುವವರು (F, J, and M), ಹಡಗು ಅಥವಾ ವಿಮಾನಗಳ ತಂಡದ ಸದಸ್ಯರು (C1/D),  ಧಾರ್ಮಿಕ ಕಾರ್ಯಕರ್ತರು (R), ಹಾಗೂ ಅವಲಂಬಿತರ ವೀಸಾಗಳು (H4, F2, J2, L2, and R2) ಈ ವಿಭಾಗದಲ್ಲಿ ಬರುವ ಪ್ರಮುಖ ವರ್ಗಗಳು.ಪ್ರತಿ ವಿಭಾಗದ ವೀಸಾದ ಅಗತ್ಯ ಹಾಗೂ ಅರ್ಹತೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ನಮ್ಮ ವೆಬ್‌ಸೈಟ್‌ನಲ್ಲಿ http://chennai.usconsulate.gov/temporary-visitors.html  ಪಡೆಯಬಹುದು.ಕಳೆದ ವರ್ಷ ಸುಮಾರು 6 ಲಕ್ಷ (-ವಿಶ್ವದಲ್ಲಿ ಮೂರನೇ ಹೆಚ್ಚು ಸಂಖ್ಯೆಯ ಅರ್ಜಿಗಳು) ನಾನ್ ಇಮಿಗ್ರೆಂಟ್ ವೀಸಾ ಅರ್ಜಿಗಳನ್ನು ಭಾರತದಲ್ಲಿ ಅಮೆರಿಕ ರಾಯಭಾರ ಕಚೇರಿ ಪರಿಶೀಲಿಸಲಿದೆ. ಏನೇ ಆಗಲಿ, ಸತ್ಯವನ್ನೇ ಹೇಳಿ ಎಂಬುದು ಅರ್ಜಿದಾರರಿಗೆ ನಮ್ಮ ಸಲಹೆ. ಸುಳ್ಳು ಹೇಳಿದರೆ, ನಿಮ್ಮ ಇಡೀ ಅರ್ಜಿಯ ಕುರಿತೇ ಸಂಶಯಗಳು ಏಳುತ್ತವೆ.3. ಜಿ. ನಾರಾಯಣ ರಾವ್, ಮೈಸೂರುಪ್ರಶ್ನೆ: ಅಮೆರಿಕದಲ್ಲಿ ಹಿಂದೂ ದೇವಸ್ಥಾನಗಳು ಎಷ್ಟಿವೆ? ಕೆಲ ಪ್ರಮುಖ ದೇವಸ್ಥಾನಗಳ ಕುರಿತು ವಿವರ ನೀಡಿ. ಭಾರತದ ಪುರಾತನ ಗ್ರಂಥ ಭಗವದ್ಗೀತೆಯನ್ನು ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಲಾಗುತ್ತದೆಯಂತೆ ನಿಜವೇ?
ಉತ್ತರ: ಅಮೆರಿಕದಲ್ಲಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಹಿಂದೂಗಳಿದ್ದಾರೆ ಎಂದು ಅಂದಾಜಿಸಲಾಗಿದೆ. ಅಲ್ಲದೇ, ಇಲ್ಲಿ ನೂರಾರು ಹಿಂದೂ ದೇವಾಲಯಗಳಿವೆ. ಪಿಟ್ಸ್ ಬರ್ಗ್‌ನಲ್ಲಿರುವ ಶ್ರೀವೆಂಕಟೇಶ್ವರ ದೇವಾಲಯವು ಅತಿ ಹಳೆಯದು ಹಾಗೂ ಅತಿ ಹೆಚ್ಚು ಖ್ಯಾತಿಯನ್ನು ಹೊಂದಿದೆ.

 

ಅದು ಪ್ರತಿಷ್ಠಾಪನೆಯಾಗಿದ್ದು 1975ರಲ್ಲಿ. ಮಾಲಿಬೂ ಹಿಂದೂ ದೇವಾಲಯವನ್ನು 1981ರಲ್ಲಿ ನಿರ್ಮಿಸಲಾಗಿದ್ದು, ಇಲ್ಲಿಗೆ ದಕ್ಷಿಣ ಕ್ಯಾಲಿಫೋರ್ನಿಯಾದಾದ್ಯಂತವಿರುವ ಹಿಂದೂಗಳು ಹಾಗೂ ಇತರ ಧರ್ಮೀಯರು ಭೇಟಿ ನೀಡುತ್ತಾರೆ.ಭಗವದ್ಗೀತೆ ಅಮೆರಿಕದ ಅನೇಕ ವಿಶ್ವವಿದ್ಯಾಲಯಗಳ ಪಠ್ಯಕ್ರಮದ ಭಾಗವಾಗಿದೆ. ಇಲ್ಲಿನ ಬಹುತೇಕ ವಿಶ್ವವಿದ್ಯಾಲಯಗಳು ವಿಶ್ವದ ಧರ್ಮಗಳು ಎಂಬ ಕೋರ್ಸ್ ಗಳನ್ನು ಹೊಂದಿದ್ದು, ಅದರಲ್ಲಿ, ಹಿಂದೂ ಧರ್ಮ ಹಾಗೂ ಭಗವದ್ಗೀತೆ ಅಧ್ಯಯನಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತದೆ.4. ಪೂರ್ಣಪ್ರಜ್ಞ ಕುಲಕರ್ಣಿಪ್ರಶ್ನೆ: ನಾನು ಮನಃಶಾಸ್ತ್ರ ಅಧ್ಯಯನದ ವಿದ್ಯಾರ್ಥಿಯಾಗಿದ್ದು, ಅಂತಿಮ ಪದವಿಯಲ್ಲಿ ಇದ್ದೇನೆ. ಸ್ನಾತಕೋತ್ತರ ಪದವಿಯನ್ನು ನರ ವಿಜ್ಞಾನದಲ್ಲಿ ಮುಂದುವರಿಸಲು ಯೋಚಿಸುತ್ತಿರುವೆ.

 

ಬಿಹೇವಿರಿಯಲ್ ನ್ಯೂರೋಸೈನ್ಸ್ ವಿಷಯದಲ್ಲಿ ಸ್ಟ್ಯಾನ್‌ಫೋರ್ಡ್ ಹಾಗೂ ಬರ್ಕಲೇ ವಿಶ್ವವಿದ್ಯಾಲಯಗಳು ಅತ್ಯುತ್ತಮ ಎಂದು ತಿಳಿದುಕೊಂಡಿರುವೆ. ಪ್ರವೇಶ ಪರೀಕ್ಷೆ, ವಿದ್ಯಾರ್ಥಿ ವೇತನ, ಅರ್ಜಿ ಹಾಕುವ ವಿಧಾನಗಳ ಕುರಿತು ದಯವಿಟ್ಟು ವಿವರ ನೀಡಿ.ಉತ್ತರ: ಪ್ರಸ್ತುತ ಅಮೆರಿಕದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ನೀವು ಅವರ ಸಮೂಹವನ್ನೇ ಸೇರಲು ಹೊರಟಿದ್ದೀರಿ. ನೀವೇ ಹೇಳಿರುವಂತೆ ಬರ್ಕಲೇ ಹಾಗೂ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳು ಅತ್ಯುತ್ತಮವಾದ ನ್ಯೂರೋಸೈನ್ಸ್ ವಿಭಾಗವನ್ನು ಹೊಂದಿವೆ.ಇವಲ್ಲದೇ, ಅಮೆರಿಕದಾದ್ಯಂತ ಇರುವ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಇನ್ನೂ ಅನೇಕ ಉತ್ತಮ ಕೋರ್ಸ್‌ಗಳೂ ಉಂಟು. ಈ ವಿದ್ಯಾಲಯಗಳ ಕಾರ್ಯಕ್ರಮಗಳ ಕುರಿತು ಹೆಚ್ಚಿನ ಸಂಶೋಧನೆ ನಡೆಸುವುದು ಸೂಕ್ತ.ಆಸಕ್ತ ವಿದ್ಯಾರ್ಥಿಗಳು ಆಯಾ ಕಾಲೇಜಿನ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಪ್ರವೇಶಾವಕಾಶ, ಅರ್ಹತೆಗಳ ಕುರಿತ ಮಾಹಿತಿಯನ್ನು ಪಡೆಯಬಹುದು. ಅಮೆರಿಕದಲ್ಲಿ ವಿದ್ಯಾಭ್ಯಾಸದ ಕುರಿತು ದಯವಿಟ್ಟು ಅಮೆರಿಕ ಭಾರತ ಶಿಕ್ಷಣ ಪ್ರತಿಷ್ಠಾನದ Educational Foundation (USIEF) ವೆಬ್‌ಸೈಟ್ www.usief.org.in ಭೇಟಿ ನೀಡಿ5.ಎಚ್. ಸುದರ್ಶನ್, ಯಡಹಳ್ಳಿ, ಬಿಜಾಪುರ

ಪ್ರಶ್ನೆ: ನನಗೆ ಲಾಸ್ ಏಂಜಲೀಸ್ ಕುರಿತ ಮಾಹಿತಿ ನೀಡಿ.ಉತ್ತರ: ಲಾಸ್ ಏಂಜಲೀಸ್ ಅಥವಾ ಎಲ್‌ಎ, ಅಮೆರಿಕದ ಎರಡನೇ ಅತಿ ದೊಡ್ಡ ನಗರ. ಅಮೆರಿಕ ಚಲನಚಿತ್ರ ರಾಜಧಾನಿ `ಹಾಲಿವುಡ್~ ತವರು ಇದೇ. ಚಲನಚಿತ್ರ ನಿರ್ಮಾಣ, ದೂರದರ್ಶನ ಕಾರ್ಯಕ್ರಮಗಳು, ವಿಡಿಯೊ ಗೇಮ್‌ಗಳು, ಸಂಗೀತ ಹಾಗೂ ಹಾಲಿವುಡ್ ತಾರೆಗಳಾಚೆಗೂ ಇಲ್ಲಿ ಏನೆಲ್ಲಾ ಇವೆ.ಗ್ರೌಮನ್ ಚೈನೀಸ್ ರಂಗಭೂಮಿಯಿಂದ ಹಿಡಿದು, ಡಾಡ್ಜೆರ್ ಸ್ಟೇಡಿಯಂ, ಡಿಸ್ನಿಲ್ಯಾಂಡ್, ಹಾಲಿವುಡ್ ವಾಕ್ ಆಫ್ ಫೇಮ್, ಸುಂದರ ಕಡಲ ಕಿನಾರೆ, ರುಚಿಕರ ಆಹಾರ ಹಾಗೂ ಶಾಪಿಂಗ್...ಇತ್ಯಾದಿ ಇಲ್ಲಿನ ಪ್ರಮುಖ ಆಕರ್ಷಣೆಗಳು.

 

ಅಮೆರಿಕದಲ್ಲಿಯೇ ಅತ್ಯಂತ ಹೆಚ್ಚು ಬಹುಸಂಸ್ಕೃತಿಯನ್ನು ಹೊಂದಿರುವ ಪ್ರದೇಶ ಎಂಬ ಖ್ಯಾತಿ ಇದರದ್ದು. ಏಷ್ಯನ್ನರು, ಭಾರತೀಯರೂ ಸೇರಿದಂತೆ ವಿಶ್ವದ ಎಲ್ಲೆಡೆಯಿಂದ ಬಂದಿರುವ ಜನ ಈ ನಗರ ಹಾಗೂ ಇದರ ಉಪನಗರಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ.ಈ ಅದ್ಭುತ ನಗರದ ಕುರಿತು ಹೆಚ್ಚು ತಿಳಿಯಲು http://www.lacity.org/ RecreationTourism/index.htm ವೆಬ್‌ಸೈಟ್‌ಗೆ ಭೇಟಿ ನೀಡಿ. ಲಾಸ್ ಏಂಜಲೀಸ್ ಹಾಗೂ ಅಮೆರಿಕದ ಇತರ ನಗರಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಅಮೆರಿಕನ್ ಲೈಬ್ರರಿಗೆ ಭೇಟಿ ನೀಡುವ ಮೂಲಕ ಪಡೆಯಬಹುದು. ಇಲ್ಲವೇ ಆನ್‌ಲೈನ್ ಮುಖಾಂತರವೂ ಸಾಧ್ಯ. ಅದಕ್ಕಾಗಿ ಈ ಕೊಂಡಿಯನ್ನು http://chennai.usconsulate.gov/resources.html  ಬಳಸಿ.

ತಮ್ಮ ವಿಶ್ವಾಸಿ

ಜೆನಿಫೆರ್ ಮ್ಯಾಕ್‌ಇನ್ಟೈ

ಕಾನ್ಸಲ್ ಜನರಲ್,

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry