Ask ಅಮೆರಿಕ- ಯು.ಎಸ್.ಕಾನ್ಸುಲೇಟ್: ಪ್ರಶ್ನೆ- ಉತ್ತರ

7

Ask ಅಮೆರಿಕ- ಯು.ಎಸ್.ಕಾನ್ಸುಲೇಟ್: ಪ್ರಶ್ನೆ- ಉತ್ತರ

ಯು.ಎಸ್.ಕಾನ್ಸುಲೇಟ್, ಚೆನ್ನೈ
Published:
Updated:

1. ತಿಪ್ಪೇಸ್ವಾಮಿ ಬಿ. ಸಿ.

ಅಮೆರಿಕ ಕುರಿತ ವೈವಿಧ್ಯಮಯ ಮಾಹಿತಿಯನ್ನು ಒದಗಿಸಲು ಪ್ರಜಾವಾಣಿ ಮಾಡುತ್ತಿರುವ ಪ್ರಯತ್ನ ಖುಷಿ ನೀಡಿದೆ. ನಾನು ಮೂಲತಃ ಅಭಿವೃದ್ಧಿ ಕ್ಷೇತ್ರದಲ್ಲಿ ದುಡಿಯುತ್ತಿರುವ ವೃತ್ತಿಪರ. ನನಗೆ ಅಮೆರಿಕದಂಥ ದೇಶಗಳಲ್ಲಿ ಸೇವೆ ಮಾಡುವ ಆಸೆಯುಂಟು. ಅಭಿವೃದ್ಧಿ ಕ್ಷೇತ್ರದ ತಜ್ಞರಲ್ಲಿ ಅಮೆರಿಕದಲ್ಲಿರುವ ಅವಕಾಶಗಳ ಕುರಿತು ದಯವಿಟ್ಟು ತಿಳಿಸಿ. ಅಮೆರಿಕದಲ್ಲಿರುವ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳ ನೌಕರರ ಕುರಿತು ಮಾಹಿತಿಯನ್ನೂ ನೀಡಿ.ಅಮೆರಿಕದಲ್ಲಿ ದತ್ತಿ ಸಂಸ್ಥೆಗಳನ್ನು (ಚಾರಿಟಬಲ್) ಸ್ಥಾಪಿಸುವುದು ಬಲು ಸುಲಭ. ದಸ್ತಾವೇಜುಗಳನ್ನು ಬರೆದು ಅವನ್ನು ಜಾರಿ ಮಾಡುವ ಮೂಲಕ, ಕರಾರು ಪತ್ರದ ಮೂಲಕ ಟ್ರಸ್ಟನ್ನು ಸ್ಥಾಪಿಸಬಹುದು.ದತ್ತಿ ಉದ್ದೇಶಕ್ಕಾಗಿ ಸ್ಥಾಪಿಸಲಾದ ಸಂಸ್ಥೆಯ ಆಸ್ತಿಯನ್ನು ಅದೇ ಸಂಸ್ಥೆಯ ಮತ್ತೊಬ್ಬ ಸದಸ್ಯರಿಗೆ ವಹಿಸುವ ಮುಖಾಂತರವಾಗಿಯೂ ದತ್ತಿ ಸಂಸ್ಥೆಯನ್ನು ಸ್ಥಾಪಿಸಬಹುದು. ಕರಾರು ಪತ್ರಗಳಿಗೆ ಸಹಿ ಹಾಕುವುದುಅಥವಾ ಆಸ್ತಿಯ ವರ್ಗಾವಣೆಗೆ ಸಂಬಂಧಿಸಿದಂತೆ ಇರುವ ನಿಗದಿತ ಕಾನೂನು ಪ್ರಕ್ರಿಯೆಗಳನ್ನು ಹೊರತು ಪಡಿಸಿ, ಇನ್ಯಾವುದೇ ಹೆಚ್ಚಿನ ಪ್ರಕ್ರಿಯೆಗಳಿಲ್ಲ. ಸರ್ಕಾರದ ಅನುಮೋದನೆಯೂ ಬೇಕಾಗಿಲ್ಲ.ಆದರೆ, ಧಾರ್ಮಿಕ, ಶೈಕ್ಷಣಿಕ ಹಾಗೂ ಇತರ ದತ್ತಿ ಉದ್ದೇಶಗಳಿಗಾಗಿ ಸ್ಥಾಪಿಸಲಾಗುವ ಸಂಸ್ಥೆಗಳನ್ನು, ವಿಶೇಷವಾಗಿ ಈ ಸಂಸ್ಥೆಗಳು ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸುತ್ತಿದ್ದಲ್ಲಿ, ನೋಂದಾಯಿಸಬೇಕೆಂಬ ನಿಯಮ ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಉಂಟು.ಅಮೆರಿಕದಲ್ಲಿನ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ಮುಂದೆ ಕಾಣಿಸಲಾಗಿರುವ ವೆಬ್ ಸೈಟನ್ನು ನೋಡಿ. http://www.humanrights.gov/2012/01/12/

fact-sheet-non-governmental-organizations-ngos-in-the-united-states/2. ಮಾಲತೇಶ ಸತ್ಯಪ್ಪ ಹೊಸಳ್ಳಿ, ಹಾವೇರಿ

ಅಮೆರಿಕದ  ಹಾಗೂ ಭಾರತೀಯ ಶಿಕ್ಷಣ ಪದ್ಧತಿಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ತಿಳಿಸಿ.

ಭಾರತ ಹಾಗೂ ಅಮೆರಿಕದ  ಶಿಕ್ಷಣ ಪದ್ಧತಿಯಲ್ಲಿ ಪ್ರಮುಖ ವ್ಯತ್ಯಾಸ ಎಂದರೆ ಕಾಲೇಜು ವ್ಯಾಸಂಗದ ಅವಧಿ. ಬಹುತೇಕ ಪದವಿ ಕೋರ್ಸುಗಳು 4 ವರ್ಷ ಅವಧಿಯವು. ಕೆಲ ವಿದ್ಯಾರ್ಥಿಗಳು ತಮ್ಮ ಪದವಿಯನ್ನು ಪೂರೈಸಲು 5 ವರ್ಷ ಅಥವಾ ಅದಕ್ಕೂ ಹೆಚ್ಚಿನ ಅವಧಿ ತೆಗೆದುಕೊಳ್ಳುವ ಅವಕಾಶವುಂಟು.

 

ಪದವಿ ಮಟ್ಟದಲ್ಲಿ ವಿಶೇಷ ವಿಷಯಗಳಲ್ಲಿ ವ್ಯಾಸಂಗ ಮಾಡುವುದಕ್ಕೂ ಮುನ್ನ, ಆಯಾ ವಿಷಯಗಳಲ್ಲಿ ಪೂರ್ವ ಸಿದ್ಧತಾ ಅಧ್ಯಯನ ಮಾಡಲು ಅವಕಾಶವುಂಟು. ಅಂದರೆ, ವೈದ್ಯಕೀಯ, ದಂತವೈದ್ಯಕೀ ಯ, ಕಾನೂನು ಹಾಗೂ ಫಾರ್ಮಸಿ ಅಧ್ಯಯನ ಮಾಡಬಯಸುವವರು, ಪದವಿ ಮಟ್ಟದಲ್ಲಿ ಅಧ್ಯಯನಕ್ಕೆ ಮುನ್ನವೇ ಪ್ರಿ-ಮೆಡಿಸಿನ್, ಪ್ರಿ-ಡೆಂಟಲ್, ಪ್ರಿ-ಲಾ, ಹಾಗೂ ಪ್ರಿ-ಫಾರ್ಮಸಿ ಕೋರ್ಸುಗಳನ್ನು ಮಾಡಬಹುದು.

ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ಪಿಎಚ್.ಡಿ ಗೆ ನೇರವಾಗಿ ನೋಂದಾಯಿಸಿಕೊಳ್ಳಬಹುದು. ಪದವಿ ಪಡೆದ ವಿದ್ಯಾರ್ಥಿಗಳು ಇಂಟಿಗ್ರೇಟೆಡ್ ಎಂ.ಎಸ್ / ಪಿಎಚ್.ಡಿ ಕೋರ್ಸಿಗೆ ಸೇರಬಹುದು.ಅಮೆರಿಕದ ಶಿಕ್ಷಣ ಪದ್ಧತಿಯಲ್ಲಿ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳನ್ನು ಸಾಮಾನ್ಯವಾಗಿ ಖಾಸಗಿ ಹಾಗೂ ಸಾರ್ವಜನಿಕ ಸಂಸ್ಥೆಗಳೆಂದು ವಿಂಗಡಿಸಲಾಗುತ್ತದೆ.  ಅಮೆರಿಕದಲ್ಲಿ ಶೈಕ್ಷಣಿಕ ವರ್ಷ ಸಾಮಾನ್ಯವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗುತ್ತದೆ.ಶೈಕ್ಷಣಿಕ ವರ್ಷವನ್ನು ಸಾಮಾನ್ಯವಾಗಿ ಎರಡು, ಮೂರು ಅಥವಾ ನಾಲ್ಕು ಟರ್ಮುಗಳಾಗಿ ವಿಭಜಿಸಲಾಗುತ್ತದೆ. ಇದು ಆಯಾ ಶಿಕ್ಷಣ ಸಂಸ್ಥೆಗಳ ಮೇಲೆ ಅವಲಂಬಿಸಿರುತ್ತದೆ. ಫಾಲ್ ಹಾಗೂ ಸ್ಪಿಂಗ್ ಸೆಮಿಸ್ಟರುಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುತ್ತದೆ.ಅಮೆರಿಕದಲ್ಲಿ ಅಧ್ಯಯನ ಮಾಡಲು ಹೆಚ್ಚಿನ ಮಾಹಿತಿಗಾಗಿ ತಾವು ಅಮೆರಿಕ -ಭಾರತ ಅಧ್ಯಯನ ಪ್ರತಿಷ್ಠಾನ (USIEF)  ವನ್ನು ಸಂಪರ್ಕಿಸಬಹುದು.  ಫೋನ್: 044 2857 4423/4131, ಈ-ಮೇಲ್: email (usiefchennai@usief.org.in. ಅಥವಾ ಫೇಸ್ ಬುಕ್ www.facebook.com/EducationUSAChennai ಮುಖಾಂತರವಾಗಿಯೂ ಸಂಪರ್ಕಿಸಬಹುದು.3. ಪ್ರವೀಣ ಡಿ. ಎನ್.

ಅಮೆರಿಕದ ಪ್ರಾಚೀನ ಸಂಸ್ಕೃತಿಯ ಕುರಿತು ದಯವಿಟ್ಟು ತಿಳಿಸಿ. ಭಾರತೀಯ ಸಂಸ್ಕೃತಿಗೂ ಹಾಗೂ ಅಮೆರಿಕನ್ ಸಂಸ್ಕೃತಿಗೂ ಇರುವ ವ್ಯತ್ಯಾಸಗಳನ್ನು ತಿಳಿಸಲು ಸಾಧ್ಯವೇ?
ಈಗ ಅಮೆರಿಕದಲ್ಲಿರುವ ಪ್ರಾಚೀನ ಅಮೆರಿಕನ್-ಇಂಡಿಯನ್ ಸಂಸ್ಕೃತಿಯಲ್ಲಿ ಅಪಾರವಾದ ವೈವಿಧ್ಯಗಳುಂಟು. ಬಹುತೇಕ ಗುಂಪುಗಳು ಜೀವಿಸಲು ಮೂಲತಃ ಶಿಕಾರಿ ಹಾಗೂ ಕಂದಮೂಲಗಳ ಸಂಗ್ರಹಣೆಯನ್ನೇ ಅವಲಂಬಿಸಿದ್ದವು. ಒಂದಿಷ್ಟು  ತೋಟಗಾರಿಕೆಯನ್ನೂ ಮಾಡಿದ್ದುಂಟು. ಅನೇಕ ಗುಂಪುಗಳು ಮಾತೃ ಪ್ರಧಾನ ಪದ್ಧತಿಯನ್ನು ಪಾಲಿಸುತ್ತಿದ್ದವು.ಅಮೆರಿಕಕ್ಕೆ ಯೂರೋಪಿಯನ್ನರು ಬರುವವರೆಗೆ, ಅಮೆರಿಕನ್-ಇಂಡಿಯನ್ನರಲ್ಲಿ ನಾಯಿಗಿಂತಲೂ ದೊಡ್ಡದಾದ ಸಾಕು ಪ್ರಾಣಿಗಳೇ ಇರಲಿಲ್ಲ. ಆದರೆ, ದಕ್ಷಿಣಾ ಏಷ್ಯಾ ಸಂಸ್ಕೃತಿಯಲ್ಲಿ ಸಾಕಷ್ಟು ದೊಡ್ಡದಾದ ಪ್ರಾಣಿಗಳನ್ನು ಸಾಕುತ್ತಿದ್ದರು. ಅಲ್ಲದೇ ಲೋಹದ ಉಪಕರಣಗಳ ಬಳಕೆಯೂ ಮಿತವಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಅವರು ಬರಹದ ಭಾಷೆಗಳ ಬದಲಾಗಿ ಮೌಖಿಕ ಪರಂಪರೆಯನ್ನು ಪಾಲಿಸುತ್ತಿದ್ದರು.ಅಮೆರಿಕನ್ ಇಂಡಿಯನ್ನರು ಬೆಳೆದು ಬಳಸುತ್ತಿದ್ದ ಅನೇಕ ಆಹಾರ ಬೆಳೆಗಳು ಕಾಲಾಂತರದಲ್ಲಿ ಭಾರತದತ್ತಲೂ ಸಾಗಿ ಬಂದವು. ಅಂಥ ಕೆಲವು ಪದಾರ್ಥಗಳೆಂದರೆ, ಮೆಕ್ಕೆಜೋಳ, ಆಲೂಗೆಡ್ಡೆ, ಟೊಮ್ಯಾಟೊ, ಕ್ಯಾಪ್ಸಿಕಂ (ದೊಣ್ಣೆ ಮೆಣಸಿನಕಾಯಿ), ಹಸಿ ಮೆಣಸಿನ ಕಾಯಿ ಇತ್ಯಾದಿ. ಅಮೆರಿಕನ್ ಇಂಡಿಯನ್ನರ ಕುರಿತ ಹೆಚ್ಚಿನ ಮಾಹಿತಿಗಾಗಿ ಇಂಡಿಯನ್ ಅಮೆರಿಕನ್ನರ ನ್ಯಾಷನಲ್ ಮ್ಯೂಸಿಯಮ್‌ನ ವೆಬ್‌ಸೈಟ್‌ನ್ನು ನೋಡಿ: http://nmai.si.edu/home/4. ಜಯಶ್ರೀ ಸಿದ್ದಾಪುರ, ಉತ್ತರಕನ್ನಡ

ಅಮೆರಿಕದಲ್ಲಿ ಕ್ರಿಕೆಟ್ ಏಕೆ ಜನಪ್ರಿಯವಾಗಿಲ್ಲ ಹಾಗೂ ಅದಕ್ಕೆ ಪ್ರೋತ್ಸಾಹ ಕೂಡಾ ಯಾಕಿಲ್ಲ?ಬೇಸ್ ಬಾಲ್ ಹಾಗೂ ಅಮೆರಿಕನ್ ಫುಟ್‌ಬಾಲ್‌ನಷ್ಟು, ಕ್ರಿಕೆಟ್ ಅಮೆರಿಕದಲ್ಲಿ ಜನಪ್ರಿಯವಲ್ಲವಾದರೂ, ಇದಕ್ಕೂ ಬೆಂಬಲಿಗರ ಪ್ರಮಾಣ ಗಣನೀಯ ಪ್ರಮಾಣದಲ್ಲುಂಟು. ವಾಸ್ತವಾಂಶವೆಂದರೆ, ಅಮೆರಿಕದಲ್ಲೂ, ಒಂದು ರಾಷ್ಟ್ರೀಯ ಕ್ರಿಕೆಟ್ ತಂಡವುಂಟು. ಈ ತಂಡ ಅನೇಕ ಪ್ರಾದೇಶಿಕ ಹಾಗೂ ಐಸಿಸಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತದೆ. ಬ್ರಿಟಿಷರು 18ನೇ ಶತಮಾನದಲ್ಲಿ ಕ್ರಿಕೆಟ್ ಅನ್ನು ಅಮೆರಿಕಕ್ಕೆ ತಂದರು. ಆದರೆ, ಕ್ರಿಕೆಟ್ ಅನ್ನು 1850 ಹಾಗೂ 1860ರ ಅವಧಿಯಲ್ಲಿ ಬೇಸ್ ಬಾಲ್ ಬಹುತೇಕ ಕ್ರಿಕೆಟ್ ಅನ್ನು ಸ್ಥಾನಪಲ್ಲಟಗೊಳಿಸಿ, ಜನಪ್ರಿಯತೆ ಗಳಿಸಿತು.

 

ಅಮೆರಿಕದಲ್ಲಿ ನೆಲೆಸಿರುವ 30 ಲಕ್ಷಕ್ಕೂ ಹೆಚ್ಚಿನ ಭಾರತೀಯ ಸಂಜಾತ ಅಮೆರಿಕನ್ನರು ಹಾಗೂ ಕ್ರಿಕೆಟ್ ಆಡುವ ಇತರ ರಾಷ್ಟ್ರಗಳಿಂದ ಅಮೆರಿಕಕ್ಕೆ ವಲಸೆ ಹೋಗಿರುವವರ ಸಂಖ್ಯೆ ಹೆಚ್ಚಿರುವುದರಿಂದಾಗಿ, ಕ್ರಿಕೆಟ್‌ನ ಜನಪ್ರಿಯತೆ ಹೆಚ್ಚುತ್ತಿದೆ.ಈ ಬಾರಿ ಚೆನ್ನೈನಲ್ಲಿ ನಡೆದ ಐಪಿಎಲ್ 2012 ಕ್ರಿಕೆಟ್ ಋತುವಿನ ಉದ್ಘಾಟನಾ ಸಮಾರಂಭದಲ್ಲಿ ಅಮೆರಿಕದ ಮ್ಯೂಸಿಕ್ ಸೂಪರ್ ಸ್ಟಾರ್ ಕ್ಯಾಥಿ ಪೆರ‌್ರಿ ಪಾಲ್ಗೊಂಡಿದ್ದರು. ಅಮೆರಿಕದಲ್ಲಿ ಕ್ರಿಕೆಟ್ ಚಟುವಟಿಕೆಗಳನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಕ್ರಿಕೆಟ್ ಅಸೋಸಿಯೇಷನ್ (USACA) ಅಡಿಯಲ್ಲಿ ನಡೆಸಲಾಗುತ್ತದೆ.  ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್‌ಸೈಟಿಗೆ ಭೇಟಿ ನೀಡಿ: http://usaca.org/

                                      =====

ಪ್ರಿಯ ಓದುಗರೇ,

 
ಶುಭಾಶಯಗಳು! ಭಾರತಕ್ಕೆ ಅಮೆರಿಕದ ನೂತನ ರಾಯಭಾರಿಯಾಗಿ ನ್ಯಾನ್ಸಿ ಪೋವೆಲ್ ಅವರ ಆಗಮನ ಭಾರತದ ದೂತಾವಾಸಗಳಲ್ಲಿ ಸಂಭ್ರಮಕ್ಕೆ ಕಾರಣವಾಯಿತು.  ರಾಜತಾಂತ್ರಿಕ ಕ್ಷೇತ್ರದಲ್ಲಿ ವಿಪುಲವಾದ ಅನುಭವ ಹೊಂದಿರುವ ರಾಯಭಾರಿ ಪೋವೆಲ್ ಅವರಿಗೆ ಭಾರತ ಹಾಗೂ ದಕ್ಷಿಣ ಏಷ್ಯಾದಲ್ಲಿ ವಿಶೇಷವಾದ ನೈಪುಣ್ಯ.ಅಂದಹಾಗೆ, ಭಾರತಕ್ಕೆ ಅಮೆರಿಕ ರಾಯಭಾರಿಯಾಗಿರುವ ಮೊದಲ ಮಹಿಳೆ ಕೂಡಾ. ರಾಯಭಾರಿ ಪೋವೆಲ್ ಅವರ ಪರಿಚಯವನ್ನು ಅವರ ಮಾತುಗಳಲ್ಲೆೀ ಮಾಡಿಕೊಳ್ಳಲು ರಾಯಭಾರ ಕಚೇರಿಯ ವೆಬ್ ಸೈಟಿನಲ್ಲಿರುವ ವಿಡಿಯೊ ನೋಡಿ: www.newdelhi.usembassy.gov.  ಪತ್ರಿಕಾ ಸ್ವಾತಂತ್ರ್ಯ ದಿನ ಮೇ ತಿಂಗಳ ವಿಶೇಷ. ಪತ್ರಿಕಾ ಸ್ವಾತಂತ್ರ್ಯದ ಮಹತ್ವವನ್ನು ಅರಿತಿದ್ದ ಅಮೆರಿಕದ ನಿರ್ಮಾತೃಗಳು, ಇದನ್ನು `ಬಿಲ್ ಆಫ್ ರೈಟ್ಸ್~ಗಳ ಭಾಗವಾಗಿರುವಂತೆ (ಅದು ಅಮೆರಿಕ ಸಂವಿಧಾನದ ಮೊದಲ ತಿದ್ದುಪಡಿ ಕೂಡ) ನೋಡಿಕೊಂಡರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭಾರತ ಸಂವಿಧಾನದಲ್ಲಿಯೂ ಸಾಕಷ್ಟು ಮಹತ್ವ ಉಂಟು. ಅಮೆರಿಕನ್ ಫುಲ್ ಬ್ರೈಟ್ ವಿದ್ವಾಂಸರು ಹಾಗೂ ಪತ್ರಿಕಾ ಕ್ಷೇತ್ರದ ತಜ್ಞರೊಂದಿಗೆ ಒಡಗೂಡಿ ಹಲವಾರು ಕಾರ್ಯಕ್ರಮಗಳನ್ನು ಈ ತಿಂಗಳು ನಮ್ಮ ದೂತಾವಾಸದ ಸಾರ್ವಜನಿಕ ವ್ಯವಹಾರಗಳ ವಿಭಾಗ ಆಯೋಜಿಸುತ್ತಿದೆ.ಈಚೆಗೆ ಅಮೆರಿಕ ಭಾರತ ಶಿಕ್ಷಣ ಪ್ರತಿಷ್ಠಾನ (USIEF) ಕೇರಳದ ಪ್ರಮುಖ ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳೊಂದಿಗೆ ಏರ್ಪಡಿಸಿದ್ದ ಫುಲ್ ಬ್ರೈಟ್ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದೆ.

 

ಅಮೆರಿಕದ ಅನೇಕ ಪ್ರತಿಭಾವಂತ ಫುಲ್ ಬ್ರೈಟ್ ವಿದ್ವಾಂಸರಿಗೆ ಕರ್ನಾಟಕದ ಅನೇಕ ಸಂಸ್ಥೆಗಳೂ ಆತಿಥ್ಯ ನೀಡಿವೆ. ಭಾರತ ಹಾಗೂ ಅಮೆರಿಕಗಳ ಶೈಕ್ಷಣಿಕ ವಿನಿಮಯ ಕಾರ್ಯಕ್ರಮವಾಗಿ ಸುಮಾರು 60 ವರ್ಷಗಳಿಂದ ಅನುಷ್ಠಾನಗೊಳ್ಳುತ್ತಿರುವ ಈ ಫುಲ್ ಬ್ರೈಟ್ ಯೋಜನೆ, ಎರಡೂ ದೇಶಗಳ ಪ್ರಕಾಂಡ ಪಂಡಿತರನ್ನು, ನಾಗರಿಕ ನೇತಾರರನ್ನು ಹಾಗೂ ಸರ್ಕಾರದ ವೃತ್ತಿಪರರನ್ನು ಒಟ್ಟಿಗೆ ತಂದು, ಸಂಶೋಧನೆ ಹಾಗೂ ವಿದ್ವತ್ ಕ್ಷೇತ್ರದ ಸಹಯೋಗಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತದೆ.ಇಷ್ಟು ಕಾಲ ಕೇವಲ ಫುಲ್ ಬ್ರೈಟ್ ಎಂದೇ ಕರೆಯಲಾಗುತ್ತಿದ್ದ ಈ ಕಾರ್ಯಕ್ರಮ, ಈಗ ವಿಸ್ತೃತಗೊಂಡಿದ್ದು ಇದನ್ನು ಫುಲ್ ಬ್ರೈಟ್-ನೆಹರೂ ಎಂದು ಹೆಸರಿಲಾಗಿದೆ. ಫುಲ್ ಬ್ರೈಟ್ ವಿದ್ವಾಂಸರ ವಿನಿಮಯ ಯೋಜನೆಯ ಅತಿ ಹೆಚ್ಚಿನ ಪ್ರಯೋಜನ ಪಡೆದಿರುವ ದೇಶವೆಂದರೆ ಭಾರತ.ಈ ಕಾರ್ಯಕ್ರಮ ಆರಂಭವಾದಾಗಿನಿಂದ ಸುಮಾರು 17,000ಕ್ಕೂ ಹೆಚ್ಚು ಫೆಲೋಶಿಪ್‌ಗಳು ಹಾಗೂ ಇತರ ಗ್ರಾಂಟ್‌ಗಳನ್ನು ಭಾರತೀಯ ಹಾಗೂ ಅಮೆರಿಕನ್ ವಿದ್ವಾಂಸರಿಗೆ ನೀಡಲಾಗಿದೆ. ಅಮೆರಿಕ -ಭಾರತ ಶಿಕ್ಷಣ ಪ್ರತಿಷ್ಠಾನ ನೋಡಿಕೊಳ್ಳುತ್ತಿರುವ ಏಕೈಕ ಶೈಕ್ಷಣಿಕ ವಿನಿಮಯ ಕಾರ್ಯಕ್ರಮ ಇದು.ಅಮೆರಿಕೆಯಲ್ಲಿ ವ್ಯಾಸಂಗ ಮಾಡಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಸಲಹೆ, ಮಾರ್ಗದರ್ಶನ ಸೇವೆಗಳನ್ನೂ ಒದಗಿಸುವ ಪ್ರತಿಷ್ಠಾನ, ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಶೈಕ್ಷಣಿಕ ಮೇಳಗಳನ್ನೂ ದಕ್ಷಿಣ ಭಾರತದಲ್ಲಿ ಆಯೋಜಿಸುತ್ತದೆ. ಅಮೇರಿಕಾದಲ್ಲಿ ಉನ್ನತ ಶಿಕ್ಷಣ ಕುರಿತ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು www.usief.org.in ಹಾಗೂ www.educationusa.state.gov  ವೆಬ್ ಸೈಟುಗಳಿಗೆ ಭೇಟಿ ನೀಡಿ.ಕಳೆದ ತಿಂಗಳು ನಾನು ಮತ್ತೊಮ್ಮೆ ಬೆಂಗಳೂರಿಗೆ ಬಂದಿದ್ದೆ. ಕಳೆದ ಐದು ವರ್ಷಗಳಿಂದ ನಡೆಸಲಾಗುತ್ತಿರುವ ಅತ್ಯಂತ ಯಶಸ್ವಿ ಎಚ್‌ಐವಿ/ ಏಡ್ಸ್ ಸಮಸ್ಥಾ ಯೋಜನೆಯ ಮುಕ್ತಾಯ ಸಮಾರಂಭದಲ್ಲಿ ಭಾಗಿಯಾಗಿದ್ದೆ. ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ ನ್ಯಾಷನಲ್ ಡೆವಲಪ್ಮೆಂಟ್ (USAID),ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ((NACO), ಕರ್ನಾಟಕ ರಾಜ್ಯ ಏಡ್ಸ್ ಪ್ರತಿಬಂಧ ಸೊಸೈಟಿ (KSAPS),  ಆಂಧ್ರಪ್ರದೇಶ ರಾಜ್ಯ ಏಡ್ಸ್ ಪ್ರತಿಬಂಧ ಸೊಸೈಟಿ (APSAPS) ಹಾಗೂ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟಗಳ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾದ ಈ ಯೋಜನೆಯ ಮುಖ್ಯ ಗಮನ ಈ ರೋಗದ ಅಪಾಯಕ್ಕೆ ಒಡ್ಡಿಕೊಂಡಿರುವ ಸಮುದಾಯಗಳಿಗೆ, ವ್ಯಕ್ತಿಗಳಿಗೆ ಬೆಂಬಲ ಹಾಗೂ ನೆರವು ಒದಗಿಸುವುದಾಗಿತ್ತು.ಅಲ್ಲದೇ, ಆರೋಗ್ಯ ವ್ಯವಸ್ಥೆ ಹಾಗೂ ನೆರವಿನ ಜಾಲವನ್ನು ಬಲಪಡಿಸುವುದೂ ಇದರಲ್ಲಿ ಸೇರಿತ್ತು.  ಈ ವಿಷಮಕಾರಿ ಆರೋಗ್ಯ ಕ್ಷೇತ್ರದಲ್ಲಿ ಸಮರ್ಥವಾಗಿ ಸೇವೆ ಸಲ್ಲಿಸುತ್ತಿರುವ ಎರಡೂ ದೇಶಗಳ ಆರೋಗ್ಯ ಕ್ಷೇತ್ರದ ವೃತ್ತಿಪರರಿಗೆ ನನ್ನ ಅಭಿನಂದನೆಗಳು.ತಮ್ಮ ವಿಶ್ವಾಸಿ

ಜೆನಿಫೆರ್ ಮ್ಯಾಕ್‌ಇನ್ಟೈರ್

ಕಾನ್ಸಲ್ ಜನರಲ್, ಅಮೆರಿಕನ್ ದೂತಾವಾಸ, ಚೆನ್ನೈ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry