Ask ಅಮೆರಿಕ- ಯು.ಎಸ್.ಕಾನ್ಸುಲೇಟ್: ಪ್ರಶ್ನೆ- ಉತ್ತರ

7

Ask ಅಮೆರಿಕ- ಯು.ಎಸ್.ಕಾನ್ಸುಲೇಟ್: ಪ್ರಶ್ನೆ- ಉತ್ತರ

ಯು.ಎಸ್.ಕಾನ್ಸುಲೇಟ್, ಚೆನ್ನೈ
Published:
Updated:

1. ಎಂ. ಯು. ಪ್ರಶಾಂತ, ಶಿವಗಂಗೋತ್ರಿ, ದಾವಣಗೆರೆ

ಜಾಗತೀಕರಣದ ನಂತರ ಅಮೆರಿಕ ಹಾಗೂ ಭಾರತದ ಸಂಬಂಧ ಯಾವ ರೀತಿ ವಿಶ್ವದ ಇತರ ರಾಷ್ಟ್ರಗಳ ಮೇಲೆ ಪ್ರಬಾವ ಬೀರಿದೆ.ಅಮೆರಿಕ-ಭಾರತಗಳ ನಡುವಣ ಸಂಬಂಧ ಹಿಂದೆಂದಿಗಿತಲೂ ಗಟ್ಟಿಯಾಗಿದೆ. ಎರಡೂ ದೇಶಗಳು ಎಲ್ಲ ವಿಭಾಗಗಳಲ್ಲಿ ಪರಸ್ಪರ ಹೆಗಲೆಣೆಯಾಗಿ ದುಡಿಯುತ್ತಿರುವುದಕ್ಕೆ ಈಚೆಗಷ್ಟೆ ವಾಷಿಂಗ್ಟನ್ನಲ್ಲಿ ನಡೆದ ವ್ಯೆಹಾತ್ಮಕ ಮಾತುಕತೆಗಳೇ ಸಾಕ್ಷಿ. ಭಾರತದೊಂದಿಗಿನ ಅಮೆರಿಕಾ ಸಂಬಂಧಗಳು ``21 ಶತಮಾನವನ್ನು ರೂಪಿಸುವ ಮಹತ್ವದ ಸಹಭಾಗಿತ್ವ~~ ಎಂದು ಅಮೆರಿಕ ಅಧ್ಯಕ್ಷ ಒಬಾಮಾ ಅವರು ಹೇಳಿರುವುದು ಅಚ್ಚರಿಯೇನಲ್ಲ.ರಾಷ್ಟ್ರವೊಂದರ ಜೊತೆ ಸೌಹಾರ್ದ ಸಂಬಂಧ ಹೊಂದಿರುವುದು, ಮತ್ತೊಂದು ದೇಶದೊಂದಿಗೆ ತಣ್ಣಗಿನ ಬಾಂಧವ್ಯ ಎಂದು ಭಾವಿಸುವ ಅಗತ್ಯವಿಲ್ಲ. ಎರಡೂ ದೇಶಗಳಲ್ಲಿ ಶಾಂತಿ ಹಾಗೂ ಸಮೃದ್ಧಿಗಾಗಿ ಸದೃಢ ಸಂಬಂಧ ಹೊಂದಿರುವ ಭಾರತ-ಅಮೆರಿಕ ದೇಶಗಳು ಪ್ರಾದೇಶಿಕ ಹಾಗೂ ಜಾಗತಿಕ ಪಾಲುದಾರರಾಗಿ ಹಲ ವಾರು ಬಹುಪಕ್ಷೀಯ ಸಂಸ್ಥೆಗಳಲ್ಲಿಯೂ ಕಾರ್ಯ ನಿರ್ವಹಿಸುತ್ತಿವೆ.ಪೂರ್ವ ಏಷ್ಯಾ ಶೃಂಗಸಭೆ ಹಾಗೂ ಆಸಿಯಾನ್‌ಗಳಂಥ ಪ್ರಾದೇಶಿಕ ಹಾಗೂ ಜಾಗತಿಕ ವೇದಿಕೆಗಳಿಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಎರಡೂ ರಾಷ್ಟ್ರಗಳು ಜೊತೆಯಾಗಿ ದುಡಿಯಲು ಬದ್ಧತೆಯನ್ನು ವ್ಯಕ್ತ ಪಡಿಸಿವೆ. ಭಾರತ-ಅಮೆರಿಕಾ ವ್ಯೆಹಾತ್ಮಕ ಸಂವಾದದ ಭಾಗವಾಗಿ, ಭಾರತ, ಅಮೆರಿಕಾ ಹಾಗೂ ಜಪಾನ್ ದೇಶಗಳ ತ್ರಿಪಕ್ಷೀಯ ಮಾತುಕತೆಗೂ ಚಾಲನೆಗೆ ದೊರೆತಿದ್ದು, ಆ ಮೂಲಕ ಮೂರೂ ದೇಶಗಳ ಪರಸ್ಪರ ಹಿತಾಸಕ್ತಿಯ ಕುರಿತ ಚರ್ಚೆ ನಡೆಯಲಿದೆ.2. ಎಚ್. ಸಿ. ಪವಿತ್ರ, ತರೀಕೆರೆ

ನಾನು ಅಮೆರಿಕದಲ್ಲಿರುವ ವೈದ್ಯಕೀಯ ಶಿಕ್ಷಣದ ಬಗ್ಗೆ ಮಾಹಿತಿ ಪಡೆಯಲು ಇಚ್ಛಿಸುತ್ತೇನೆ. ಈಗ ನಾನು ದ್ವಿತೀಯ ಪಿಯುಸಿ ಪಿಸಿಎಂಬಿ ವಿಬಾಗದಲ್ಲಿ ಪರೀಕ್ಷೆಗಳನ್ನು ಬರೆದಿದ್ದೇನೆ. ವೈದ್ಯೆ ಆಗಬೇಕೆಂಬ ಮಹದಾಸೆಯನ್ನು ಹೊಂದಿದ್ದೇನೆ. ವೈದ್ಯಕೀಯ ವಿಭಾಗಕ್ಕೆ ಕಳುಹಿಸುವಷ್ಟು ಸಾಮರ್ಥ್ಯ ನನ್ನ ಪೋಷಕರಿಗಿಲ್ಲ. ಆದ್ದರಿಂದ ಅಮೆರಿಕ ಸರ್ಕಾವು ನೀಡಬಹುದಾದ ಉಚಿತ ವೈದ್ಯಕೀಯ ಶಿಕ್ಷಣ ಹಾಗೂ ವಿದ್ಯಾರ್ಥಿ ವೇತನಗಳ ಕುರಿತು ದಯಮಾಡಿ ಮಾಹಿತಿ ನೀಡಬೇಕಾಗಿ ಕೋರುತ್ತೇನೆ.ಅಮೆರಿಕದಲ್ಲಿ ವೈದ್ಯ ಶಿಕ್ಷಣದ ಕುರಿತ ಸಮಗ್ರ ಮಾಹಿತಿಯ ಭಂಡಾರವೆಂದರೆ, ಅಸೋಸಿಯೇಷನ್ ಆಫ್ ಅಮೆರಿಕನ್ ಮೆಡಿಕಲ್ ಕಾಲೇಜಸ್. ಈ ಮುಂದಿನ ವೆಬ್ ಸೈಟಿನಲ್ಲಿ "Applying to Medical School"ಎಂಬ ವಿಭಾಗವನ್ನು ನೋಡಿ https://www.aamc.org/students/applying/requirements/

ಮೆಡಿಕಲ್ ಕಾಲೇಜುಗಳ ಪ್ರವೇಶ ಪರೀಕ್ಷೆ (MCAT) ಬರೆಯಬೇಕು. ಅಲ್ಲದೇ, ಇಂಗ್ಲೀಷ್ ಭಾಷಾ ಪರಿಣತಿಯ ಮೌಲ್ಯ ಮಾಪನಕ್ಕಾಗಿ TOEFL  ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

 

ಮೆಡಿಕಲ್ ಕಾಲೇಜುಗಳ ಶಿಕ್ಷಣ ತುಂಬ ಸ್ಪರ್ಧಾತ್ಮಕವಾಗಿರುವುದು ಮಾತ್ರವಲ್ಲ, ಸಾಕಷ್ಟು ವೆಚ್ಚದಾಯಕವೂ ಹೌದು. ಸ್ಕಾಲರ್ ಶಿಪ್‌ಗಳ ಸಂಖ್ಯೆ ತೀರಾ ಕಡಿಮೆ. ಅಲ್ಲದೇ, ಸಾಮಾನ್ಯವಾಗಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಸೌಲಭ್ಯ ಇರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ಅಮೆರಿಕ-ಭಾರತ ಶಿಕ್ಷಣ ಪ್ರತಿಷ್ಠಾನವನ್ನು (USIEF) ದೂರವಾಣಿ ಸಂಖ್ಯೆ (044) 2857 4423/4131, ಅಥವಾ usiefchennai@usief.org.inಇಲ್ಲಿಗೆ ಈ ಮೇಲ್ ಮೂಲಕ ಸಂಪರ್ಕಿಸಿ.3. ಮಹೇಶ್ ಬಿ. ಕೊದ್ದಡ್ಡಿ, ಶಹಾಪೂರ

ಅಮೆರಿಕದಲ್ಲಿ ಶೇಕಡಾ ಎಷ್ಟು ಜನ ಕೃಷಿಯನ್ನು ಅವಲಂಬಿಸಿದ್ದಾರೆ? ರಾಷ್ಟ್ರೀಯ ಆದಾಯಕ್ಕೆ ಕೃಷಿಯಪಾಲು ಎಷ್ಟು? ಅಮೆರಿಕ ಕೃಷಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ, 10 ಲಕ್ಷಕ್ಕೂ ಹೆಚ್ಚು ಜನ ಕೃಷಿ ಕ್ಷೇತ್ರದ ಮೇಲೆ ಮಾತ್ರ ಅವಲಂಬಿತರು. ಮತ್ತೊಂದು ಉದ್ಯೋಗ ಮಾಡುತ್ತ ಕೃಷಿಯನ್ನೂ ಕೈಗೆತ್ತಿಕೊಂಡಿರುವವರ ಸಂಖ್ಯೆ 10 ಲಕ್ಷ. ಸುಮಾರು 50 ಲಕ್ಷ ಜನ ಕೃಷಿ ಫಾರ್ಮುಗಳಲ್ಲಿಯೇ ವಾಸ ಮಾಡುತ್ತಾರೆ. ರಿಟೇಲ್ (ಸೂಪರ್ ಸ್ಟೋರುಗಳು), ಸಾರಿಗೆ ಕ್ಷೇತ್ರಗಳಲ್ಲಿ ದುಡಿಯುವವರೂ ಹಾಗೂ ಅವರ ಕುಟುಂಬಗಳೂ ಪರೋಕ್ಷವಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ.ಅಮೆರಿಕಾ ರಾಷ್ಟ್ರೀಯ ಆದಾಯದ 0.7%ರಷ್ಟು ಪಾಲನ್ನು ಕೃಷಿ ಹಾಗೂ ಕೃಷಿ ಸಂಬಂಧಿ ಚಟುವಟಿಕೆಗಳು ನೀಡತ್ತವೆ. ಈ ಕ್ಷೇತ್ರವನ್ನು 2009ನೇ ಸಾಲಿನಲ್ಲಿ 331 ಬಿಲಿಯ ಡಾಲರುಗಳನ್ನು ಅಮೆರಿಕ ಆರ್ಥಿಕತೆಗೆ ಸಂದಾಯ ಮಾಡಿತ್ತು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ ಸೈಟುಗಳಿಗೆ ಭೇಟಿ ನೀಡಿ: http://www.census.gov/compendia/statab/2012/tables/12s0841.pdf

http://www.epa.gov/oecaagct/ag101/demographics.html4. ಬದ್ರಿ ಪುರೋಹಿತ, ಕೊಪ್ಪಳ

ಅಮೆರಿಕಾದಲ್ಲಿ ಮಹಿಳೆಯರಿಗಾಗಿ ಕಾನೂನು ಹಾಗೂ ಭದ್ರತೆಗಾಗಿ ವಿಶೇಷ ಕಾನೂನುಗಳಿವೆಯ. ಮಹಿಳೆಯರಿಗಾಗಿ ವಿಶೇಷ ಮೀಸಲಾತಿಗಳು ಉಂಟೆ? ಅಲ್ಲಿನ ಮಹಿಳಾ ವಿಶ್ವವಿದ್ಯಾಲಯಗಳ ಬಗ್ಗೆ ತಿಳಿಸಿ.ವಿಶ್ವದ ಮಹಿಳಾ ವಿಚಾರಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ರಾಯಭಾರಿ ಹುದ್ದೆಯನ್ನು ಅಧ್ಯಕ್ಷ ಒಬಾಮ ಅವರು ಮೊದಲ ಬಾರಿಗೆ ಸೃಜಿಸಿ, ರಾಯಭಾರಿ ಮೆಲಾನ್ನೆ ವೆರ್ವೀರ್ ಅವರನ್ನು ನೇಮಕ ಮಾಡಿದರು. ಇದರ ಮುಖ್ಯ ಉದ್ದೇಶ ಅಮೆರಿಕಾದ ವಿದೇಶಾಂಗ ನೀತಿಯಲ್ಲಿ ಮಹಿಳಾ ಸಬಲೀಕರಣವನ್ನು ಉತ್ತೇಜಿಸುವುದಾಗಿದೆ.

 

ಈ ಕುರಿತು ರಾಯಭಾರಿ ವೆರ್ವೀರ್ ಅವರು ``ಮಹಿಳೆಯರ ಮೇಲಾಗುವ ಹಿಂಸೆಯ ವಿರುದ್ಧ ಹೋರಾಡಲು ಹೊಸ ಶಾಸನವನ್ನು ರೂಪಿಸಿದ್ದೇವೆ. ಮಹಿಳೆಯರ ಸಾಗಣಿಕೆಯ ವಿರುದ್ಧ ಶಾಸನವನ್ನು 2000ರವರೆಗೂ ಅಂಗೀಕರಿಸಲು ಆಗಿರಲೇ ಇಲ್ಲ. ಆದರೆ, ಆ ಶಾಸನವನ್ನು ಈಗ ರೂಪಿಸ ಲಾಗಿದೆ ಹಾಗೂ ಅದು ವಿಶ್ವಕ್ಕೇ ಮಾದರಿಯಾಗಿದೆ.ಮಹಿಳೆಯರ ಕುರಿತ ಸಮಸ್ಯೆಗಳನ್ನು ನಾವು ಎದುರಿಸಿದ ವಿಧಾನ ಅಧ್ಯಯನ ಯೋಗ್ಯ.  ಮಹಿಳೆಯರ ವಿರುದ್ಧ ಹಿಂಸೆಯನ್ನು ತಡೆಯಲು, ಅಂಥ ಹಿಂಸೆಯ ವಿರುದ್ಧ ಸೂಕ್ತ ಅಭಿಯೋಜನೆ ಹಾಗೂ ಈ ಅಭಿಯಾನದ ಕಾರ್ಯಕರ್ತರಿಗೆ ರಕ್ಷಣೆ ಒದಗಿಸುವ ಕುರಿತು ಕೈಗೊಂಡಿರುವ ಕ್ರಮಗಳೂ ಗಮನಾರ್ಹ~~ ಎಂದು ವಿವರಿಸಿದ್ದಾರೆ.ಅಮೆರಿಕಾದಲ್ಲಿ ಮಹಿಳಾ ಶಿಕ್ಷಣದ ಇತಿಹಾಸ ಬಲು ದೊಡ್ಡದು. 18ನೇ ಶತಮಾನದ ಆರಂಭದಲ್ಲಿಯೇ ಮಹಿಳೆಯರಿಗೇ ಮೀಸಲಾದ ವಿದ್ಯಾಲಯಗಳು ಆರಂಭವಾದವು. ಬಹುತೇಕ ಕಾಲೇಜು, ವಿಶ್ವವಿದ್ಯಾ ಲಯಗಳು ಪುರುಷರಿಗೆ ಮಾತ್ರವಿದ್ದ ಕಾಲದಲ್ಲಿ, ಪೆನ್ಸಿಲ್ವೇನಿಯಾದ ಮೊರಾವಿಯನ್ ಕಾಲೇಜು, ಮ್ಯೋಸುಚ್ಯುಸೆಟ್ಸ್‌ನ ವೆಲ್ಲೆಸ್ಸಿ ಮಹಿಳಾ ವಿದ್ಯಾಲಯಗಳು ಉನ್ನತ ಶಿಕ್ಷಣದ ಬಾಗಿಲುಗಳನ್ನು ಮಹಿಳೆಯರಿಗಾಗಿ ತೆರೆದವು.

 

ಈಗ ಅಮೆರಿಕದ ಬಹುತೇಕ ವಿಶ್ವವಿದ್ಯಾಲಯಗಳು ಸಹ-ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ್ದರೂ ಸುಮಾರು 60ಕ್ಕೂ ಹೆಚ್ಚು ಮಹಿಳಾ ವಿದ್ಯಾಲಯಗಳೂ ಉಂಟು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಮುಂದಿನ ಕೊಂಡಿಯಲ್ಲಿರುವ ವೆಬ್ ಸೈಟಿಗೆ ಭೇಟಿ ನೀಡಿ: www.womenscolleges.org

ಮಹಿಳೆಯರ ಹಕ್ಕುಗಳು ಮತ್ತು ಮಹಿಳೆಯರಿಗೆ ಸಂಬಂಧಿಸಿದ ಇತರ ವಿಚಾರಗಳಿಗಾಗಿ ಈ ಮುಂದಿನ ವೆಬ್ ಸೈಟಿಗೂ ಭೇಟಿ ನೀಡಿ: http://www.state.gov/s/gwi/. 5. ಎ. ಬಿ. ಶ್ಯಾಮಸುಂದರ, ಬೆಂಗಳೂರು

ನನ್ನ ಬಳಿ ಈಗಾಗಲೇ ವಿಸಾ ಇದ್ದು, ಅದರ ಅವಧಿ 2017ರವರೆಗೂ ಉಂಟು. ನನಗೀಗ 60 ವರ್ಷಗಳು. ವಿಸಾ ನವೀಕರಣದ ಪ್ರಕ್ರಿಯೆ ಹೇಗೆ? ವಿಸಾ ನವೀಕರಿಸಲು ನಾನು ಖುದ್ದಾಗಿ ಚೆನ್ನೈ ದೂತಾವಾಸಕ್ಕೆ ಬರಬೇಕೆ ಅಥವಾ ಹಿರಿಯ ನಾಗರಿಕನಾಗಿರುವುದರಿಂದ, ನನ್ನ ಪಾಸ್‌ಪೋರ್ಟನ್ನು ಕಳುಹಿಸಿಕೊಟ್ಟರೂ, ನವೀಕರಿಸಲು ಆದೀತೆ?ಬಹುತೇಕ ಸಂದರ್ಭಗಳಲ್ಲಿ ವಿಸಾ ಅರ್ಜಿದಾರರು ದೂತಾವಾಸಕ್ಕೆ ಬರಬೇಕಾಗುತ್ತದೆ. ಆದರೆ, ಕೆಲವು ಅರ್ಜಿದಾರರು ಕೆಲವು ಅರ್ಹತೆ ಗಳನ್ನು ಹೊಂದಿದ್ದರೆ, ಅವರು ಸಂದರ್ಶನ ವಿನಾಯಿತಿ ಯೋಜನೆಯ (Interview Waiver Program -IWP) ಸೌಕರ್ಯ ಪಡೆಯ ಬಹುದು. ಅಂಥ ಸಂದರ್ಭಗಳಲ್ಲಿ ಅರ್ಜಿದಾರರು ಸಂದರ್ಶನಕ್ಕೆ ಹಾಜರಾಗುವ ಅಗತ್ಯವಿಲ್ಲ. ಈ ಯೋಜನೆಯಡಿಯಲ್ಲಿ ವಿನಾಯಿತಿ ಅವಕಾಶವಿದ್ದರೂ, ಕೆಲ ಅರ್ಜಿದಾರರು ತಮ್ಮ ಬೆರಳಚ್ಚು ಮುದ್ರೆ ಗಳನ್ನು ದಾಖಲಿಸಲು ದೂತಾವಾಸಕ್ಕೆ ಬರಬೇಕಾಗಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ ಸೈಟುಗಳಿಗೆ ಭೇಟಿ ನೀಡಿ:

http://chennai.usconsulate.gov/visas.html ಅಥವಾ   https://www.vfs-usa.co.in/USIndia/Index.html.ಪ್ರಿಯ ಓದುಗರೆ,

ಶುಭಾಶಯಗಳು!  ಭಾರತ-ಅಮೆರಿಕ ನಡುವಣ ಮೂರನೇ ವ್ಯೆಹಾತ್ಮಕ ಸಂವಾದದ ಯಶಸ್ಸಿನೊಂದಿಗೆ ಉಭಯ ದೇಶಗಳ ಸಂಬಂಧ ಮತ್ತೊಂದು ಮಹತ್ವದ ಮೈಲುಗಲ್ಲನ್ನು ದಾಟಿತು.  ಹಲವಾರು ಉನ್ನತ ಮಟ್ಟದ ನಿಯೋಗಗಳು ಉಭಯ ದೇಶಗಳ ಸಹಭಾಗಿತ್ವದ ಆಳ-ಅಗಲಗಳನ್ನು ಬಿಂಬಿಸುವ ಅನೇಕ ದ್ವಿಪಕ್ಷೀಯ ವಿಚಾರಗಳ ಕುರಿತು ಚರ್ಚಿಸಿದವು. ಸಾರ್ವಜನಿಕ ಆರೋಗ್ಯ, ಪ್ರಾದೇಶಿಕ ಸುರಕ್ಷತೆ, ದ್ವಿ ಪಕ್ಷೀಯ ಆರ್ಥಿಕ ಚಟುವಟಿಕೆಗಳ ಕುರಿತ ಬದ್ಧತೆಗಳಂಥ ವಿಚಾರಗಳಿಂದ ಮೊದಲುಗೊಂಡು ರಕ್ಷಣೆ, ಮಹಿಳಾ ಸಬಲೀಕರಣ ಹಾಗೂ ಕೃಷಿ ಕ್ಷೇತ್ರಗಳವರೆಗೂ ಚರ್ಚೆಗಳು ನಡೆದವು. ಈ ಬಾರಿಯ ಸಂವಾದದ ಮೊದಲ ನೇರ ಫಲಾನುಭವಿ ಕರ್ನಾಟಕ ಎಂದು ಹೇಳಲು ಸಂತಸವಾಗುತ್ತದೆ. ಒಬಾಮ-ಸಿಂಗ್ 21ನೇ ಶತಮಾನದ ಜ್ಞಾನ ಕಾರ್ಯಯೋಜನೆಯ ಮೊಟ್ಟ ಮೊದಲ ಪ್ರಶಸ್ತಿಗೆ ಕರ್ನಾಟಕದ ಎರಡು ವಿಶ್ವವಿದ್ಯಾಲಯಗಳನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯವು ಅಮೆರಿಕದ ಮೋಂಟಾನ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ವಿಶೇಷ ಸಂಶೋಧನಾ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲಿದೆ. ಕಾರ್ನೆಲ್ ವಿಶ್ವವಿದ್ಯಾಲಯವು ಧಾರವಾಡದ ಕೃಷಿ ವಿಶ್ವವಿದ್ಯಾಲಯವೂ ಸೇರಿದಂತೆ ಭಾರತದಲ್ಲಿರುವ ಎರಡು ಕೃಷಿ ವಿಶ್ವವಿದ್ಯಾಲಯಗಳ ಸಹಭಾಗಿತ್ವದಲ್ಲಿ ಸಂಶೋಧನೆ ನಡೆಯಲಿದೆ.  ಪ್ರತಿ ಸಂಶೋಧನಾ ಯೋಜನೆಗೂ 2.50 ಲಕ್ಷ ಡಾಲರುಗಳ ಅನುದಾನ ದೊರಕಲಿದೆ.ಅಮೆರಿಕದಲ್ಲಿ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯ ಎಂದರೆ ಬೇಸಿಗೆ.  ಅಮೆರಿಕದ ವೈವಿಧ್ಯಮಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದನ್ನು ನಮ್ಮ ದೂತಾವಾಸವೂ ಉತ್ತೇಜಿಸುತ್ತದೆ. ಅದಕ್ಕಾಗಿ ಅಮೆರಿಕದ ಐವತ್ತು ರಾಜ್ಯಗಳ ಪ್ರವಾಸೋದ್ಯಮದ ಕುರಿತ ರಾಜ್ಯವಾರು ಮಾಹಿತಿಯನ್ನು ಪ್ರತಿ ದಿನವೂ ನಮ್ಮ ವೆಬ್ ಸೈಟ್ ಹಾಗೂ ಫೇಸ್ ಬುಕ್ ಪುಟಗಳಲ್ಲಿ ನೀಡಲಿದ್ದೇವೆ.  ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು  http://chennai.usconsulate.gov or www.facebook.com/chennai.usconsulate.ತಮ್ಮ ವಿಶ್ವಾಸಿ

ಜೆನಿಫೆರ್ ಮ್ಯಾಕ್‌ಇನ್ಟೈರ್

ಕಾನ್ಸಲ್ ಜನರಲ್, ಅಮೆರಿಕನ್ ದೂತಾವಾಸ, ಚೆನ್ನೈ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry