Ask ಅಮೆರಿಕ

7

Ask ಅಮೆರಿಕ

ಯು.ಎಸ್.ಕಾನ್ಸುಲೇಟ್, ಚೆನ್ನೈ
Published:
Updated:

1. ಎಸ್. ಪಿ. ಚಂದ್ರಶೇಖರಪ್ಪ ಶಿರಿಗೆರೆ, ಆಯನೂರು

ಭಾರತ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುತ್ತಿಲ್ಲ. ಅಮೆರಿಕ ಯಾವ ಮೂಲದಿಂದ ವಿದ್ಯುತ್ ಉತ್ಪಾದಿಸುತ್ತದೆ. ಅದು ಸ್ವಾವಲಂಬಿಯಾಗಿದೆಯೇ?

ಅಮೆರಿಕ ಸಂಯುಕ್ತ ಸಂಸ್ಥಾನದ ಇಂಧನ ಸ್ವಾವಲಂಬನೆಯು ತೈಲ ಹಾಗೂ ಇತರ ವಿದೇಶ ಊರ್ಜ್ವ ಮೂಲಗಳ ಆಮದನ್ನು ಕಡಿಮೆ ಮಾಡುವ ಗುರಿಗೆ ಸಂಬಂಧಿಸಿದೆ. ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯಲ್ಲಿ 2008ರಲ್ಲಿ 'ಇಂಧನ ಸ್ವಾವಲಂಬನೆ' ಎಂಬ ಶೀರ್ಷಿಕೆಯ ಲೇಖನದ ಪ್ರಕಾರ, ಅಮೆರಿಕ ಸಂಯುಕ್ತ ಸಂಸ್ಥಾನದ ಸಂಪೂರ್ಣ ಶಕ್ತಿಯನ್ನು ಗಮನಿಸಿದರೆ, ಅದು ಶೇ70ರಷ್ಟು ಸ್ವಾವಲಂಬಿಯಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಇಂಧನ ಮಾಹಿತಿ ಆಡಳಿತ (The U.S. Energy Information Administration) ಪ್ರಕಾರ, 2011ರಲ್ಲಿ ನಾವು ಬಳಸಿದ ಶೇ 45ರಷ್ಟು ಪೆಟ್ರೋಲಿಯಂ (ಕಚ್ಚಾ ತೈಲ ಹಾಗೂ ಪೆಟ್ರೋ ಉತ್ಪನ್ನಗಳು) ಅನ್ನು ನಿವ್ವಳ ಆಮದು (ಒಟ್ಟು ಆಮದಿನಲ್ಲಿ ರಫ್ತನ್ನು ಕಳೆದಾಗ ಬರುವ ಸಂಖ್ಯೆ)  ಮಾಡಿಕೊಂಡಿದೆ. ಇದರಲ್ಲಿ ಅರ್ಧಕ್ಕಿಂತಲೂ ಕೊಂಚ ಹೆಚ್ಚಿನ ಪ್ರಮಾಣವನ್ನು ಪಾಶ್ಚಾತ್ಯ ರಾಷ್ಟ್ರಗಳಿಂದಲೇ ಆಮದು ಮಾಡಿಕೊಳ್ಳಲಾಗಿದೆ. ವಿದೇಶಿ ಪೆಟ್ರೋಲಿಯಂ ಮೇಲಣ ನಮ್ಮ ಅವಲಂಬನೆ 2005ರ ನಂತರ ಬಳಕೆ ಸಾಕಷ್ಟು ಇಳಿಮುಖವಾಗಿದೆ. (2005ರಲ್ಲಿ ವಿದೇಶಿ ಪೆಟ್ರೋಲಿಯಂ ಮೇಲಿನ ಅವಲಂಬನೆ ಹೆಚ್ಚಿತ್ತು.)ಸ್ವದೇಶ ಹಾಗೂ ವಿದೇಶಗಳಲ್ಲಿ ನವೀಕರಿಸಬಹುದಾದ ಇಂಧನವನ್ನು ಹೆಚ್ಚಿಸುವ ಮೂಲಕ ತೈಲದ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಲು ಅಮೆರಿಕ ಸಂಯುಕ್ತ ಸಂಸ್ಥಾನವು ಬಲವಾಗಿ ಬದ್ಧವಾಗಿದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಅಮೆರಿಕ ಸಂಯುಕ್ತ ಸಂಸ್ಥಾನದ ಇಂಧನ ಮಾಹಿತಿ ಆಡಳಿತದ ವೆಬ್ ಸೈಟಿಗೆ http://www.eia.gov/ ಭೇಟಿ ನೀಡಿ.

2. ಸಿ. ವೀರೇಂದ್ರ ದೇಸಾಯಿ ಶಿರಿಗೆರೆ, ಆಯನೂರು

ಅಮೆರಿಕದ ಕೃಷಿ ನೀರಾವರಿ ವ್ಯವಸ್ಥೆಯ ಕುರಿತು ತಿಳಿಯಬಯಸುತ್ತೇವೆ. ಅದು ಮಳೆಯಾಧಾರಿತ ಕೃಷಿಯೇ, ಕೆರೆ, ಅಣೆಕಟ್ಟು ಅಥವಾ ಅಂತರ್ಜಲವನ್ನು ಅವಲಂಬಿಸಿದೆಯೆ. ಅಲ್ಲಿನ ಕೃಷಿ, ಕೂಲಿಯಾಳು ಅಥವಾ ಯಂತ್ರವನ್ನು ಆಧರಿಸಿದೆಯೇ.. ಅಲ್ಲಿನ ಕೃಷಿ ಲಾಭದಾಯಕವೇ. ದಯವಿಟ್ಟು ಉತ್ತರಿಸಿ.

ಬಹುಕಾಲದಿಂದಲೂ, ಕೃಷಿಯು ಅಮೆರಿಕ ಸಂಯುಕ್ತ ಸಂಸ್ಥಾನದ ಆರ್ಥಿಕತೆಯ ಪ್ರಮುಖ ಭಾಗ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನೀರಾವರಿ ಪದ್ಧತಿಯ ಆಗಮನದಿಂದಾಗಿ, ರೈತರು ಬೆಳೆಗಳ ಇಳುವರಿಯನ್ನು ನಾಟಕೀಯವಾಗಿ ಹೆಚ್ಚಿಸಲು ಅವಕಾಶವಾಯಿತು. ಮೊದಲಿನ ನೀರಾವರಿ ವ್ಯವಸ್ಥೆಗಳು ಹೆಚ್ಚಿನ ಪ್ರಮಾಣದ ಮಾನವ ಶ್ರಮವನ್ನು ಬೇಡುತ್ತಿದ್ದವಾದರೂ, ಕಳೆದ ಹಲವು ದಶಕಗಳಿಂದ ತಂತ್ರಜ್ಞಾನವು ಸಾಕಷ್ಟು ಪ್ರಮಾಣದಲ್ಲಿ ಸುಧಾರಿಸಿದೆ.ಈಗ ನೀರಾವರಿ ಪದ್ಧತಿಯನ್ನು ಯಾಂತ್ರಿಕ ಉಪಕರಣಗಳ ನೆರವಿನಿಂದ ನಡೆಸಲಾಗುತ್ತದೆ. ಕೆಲ ನೀರಾವರಿ ವ್ಯವಸ್ಥೆಗಳಲ್ಲಂತೂ, ರೈತರು, ನೀರಿನ ಬಳಕೆಯ ಪ್ರಮಾಣದ ದರವನ್ನು ಹಾಗೂ ಇಡೀ ವ್ಯವಸ್ಥೆಯ ವೇಗವನ್ನು ಮೊಬೈಲ್ ಫೋನುಗಳನ್ನೇ ರಿಮೋಟುಗಳಂತೆ ಬಳಸಿ, ದೂರದಿಂದಲೇ ನಿಯಂತ್ರಿಸುತ್ತಾರೆ.ನೀರಿನ ಮೂಲವು, ನೀರಾವರಿಗೆ ಒಳಪಡುವ ಜಮೀನಿನ  ಸ್ಥಳವನ್ನು ಅವಲಂಬಿಸಿದೆ. ಅಂತರ್ಜಲ, ನದಿ, ಹಳ್ಳ ಹಾಗೂ ಸರೋವರಗಳ ನೀರನ್ನು ಬಳಸಲಾಗುತ್ತದೆ. ಕಳೆದ ದಶಕದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ತಯಾರಕರು ನೀರಾವರಿ ಪದ್ಧತಿಗಳ ಒಟ್ಟಾರೆ ಸಾಮರ್ಥ್ಯವನ್ನು ಸುಧಾರಿಸಿದ್ದಾರೆ. ಈಚಿನ ಹೊಸ ಮಾದರಿಗಳು ನೀರು ಹಾಗೂ ಇಂಧನವನ್ನು ಹಿಂದಿನ ದಶಕಗಳ ಮಾದರಿಗಿಂತ ಸಾಕಷ್ಟು ಕಡಿಮೆ ಬಳಸುತ್ತವೆ.3. ಪ್ರಭುದೇವ ಮ. ಜಡ್ರಾಮಕುಂಟಿ ಗುಡೂರು, ಬಾಗಲಕೋಟೆ

ಭಾರತದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ನವೋದಯ ಶಾಲೆಗಳು ಇರುವಂತೆ ಅಮೆರಿಕದಲ್ಲಿಯೂ ಗ್ರಾಮೀಣರಿಗೆ ಉಪಯೋಗವಾಗುವಂತೆ ಶಾಲಾ ಕಾಲೇಜುಗಳನ್ನು ಅಲ್ಲಿನ ಸರ್ಕಾರ ನಡೆಸುತ್ತಿದೆಯೇ?

ವಾಸ್ತವವಾಗಿ, ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನಸಾಮಾನ್ಯರ ಅನುಕೂಲಕ್ಕಾಗಿ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿಯೂ ಸರ್ಕಾರ ನಿಧಿಯಿಂದ ನಡೆಯುವ ಶಾಲೆಗಳಿವೆ. ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯನ್ನು ಪರಿಗಣಿಸದೇ, ಪ್ರತಿಭಾವಂತ ಮಕ್ಕಳಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವ ಭಾರತದ ಕೇಂದ್ರ ಸರ್ಕಾರದ ಬದ್ಧತೆಗೆ ನವೋದಯ ವಿದ್ಯಾಲಯ ಒಂದು ಪುರಾವೆಯಾಗಿದೆ. ಆದರೆ, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಎಲ್ಲ ಮಕ್ಕಳಿಗೂ, ಪ್ರತಿಭಾವಂತರು ಅಥವಾ ಅಲ್ಲದವರಿಗೂ, ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸಾರ್ವಜನಿಕ ನಿಧಿಗಳನ್ನು ಬಳಸಲಾಗುತ್ತದೆ. ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿರುವ  ``ವಿಶೇಷ ಶಿಕ್ಷಣ'' (ಅಂದರೆ ವಿಶೇಷ ಅಗತ್ಯಗಳ ಮಕ್ಕಳಿಗೆ ನೀಡುವ ಶಿಕ್ಷಣ)ವನ್ನು ಹೊರತು ಪಡಿಸಿದರೆ, ಸ್ಥಳೀಯ ಸರ್ಕಾರಗಳು (ರಾಜ್ಯ, ಕೌಂಟಿ ಅಥವಾ ಮುನಿಸಿಪಲ್ ಮಟ್ಟದಲ್ಲಿ) ಉತ್ಕೃಷ್ಟ ಶಿಕ್ಷಣದ ಆಯ್ಕೆಯ ವಿಧಾನ ಹಾಗೂ ಸೇವೆಯ ವಿಧಗಳನ್ನು ಗುರುತಿಸುತ್ತವೆ. ಉದಾಹರಣೆಗಾಗಿ, ವಾಷಿಂಗ್ಟನ್ ಡಿ.ಸಿ. ನಗರದ ಮುನಿಸಿಪಲ್ ಸರ್ಕಾರವು ಸಾರ್ವಜನಿಕ ಶಾಲಾ ವ್ಯವಸ್ಥೆಯೊಳಗೆ ಪ್ರತಿಭಾನ್ವಿತ ಹಾಗೂ ಮೇಧಾವಿಗಳಿಗಾಗಿ ಶಿಕ್ಷಣ ನಿರ್ದೇಶನಾಲಯ ಹೊಂದಿದೆ ಮತ್ತು ಈ ವಿಭಾಗವು 2012 ಹಣಕಾಸಿನ ವರ್ಷದಲ್ಲಿ 1.132 ಮಿಲಿಯನ್ ಡಾಲರ್ ಬಜೆಟ್ ಹೊಂದಿತ್ತು.4. ವೀರನಗೌಡ ಮರಿಗೌಡರ, ಮಂಜುನಾಥನಗರ, ಪಿ.ಬಿ.ರೋಡ್, ಬೆಟಗೇರಿ -582012

ಅಮೆರಿಕ ಮುಂದುವರೆದ ರಾಷ್ಟ್ರಗಳಲ್ಲಿ ಮೊದಲ ಸ್ಥಾನ ಪಡೆದಾಗಿನಿಂದ ಈವರೆಗೂ ಅದೇ ಸ್ಥಾನದಲ್ಲಿದೆ. ಅಮೆರಿಕದ ಶಕ್ತಿ ಯಾವುದು?

ಇಂಧನ, ಜನಸಂಖ್ಯಾಶಾಸ್ತ್ರ, ವಲಸೆ, ಶಿಕ್ಷಣ ಹಾಗೂ ವಿನೂತನ ಸಂಶೋಧನಾ ಕ್ಷೇತ್ರಗಳಲ್ಲಿ ಹೊರ ಹೊಮ್ಮುತ್ತಿರುವ ಧನಾತ್ಮಕ ಪ್ರವೃತ್ತಿಗಳೂ ಸೇರಿದಂತೆ ಹಲವಾರು ಅಂಶಗಳು, ಸದ್ಯ ಅಮೆರಿಕ ಸಂಯುಕ್ತ ಸಂಸ್ಥಾನ ಪ್ರಬಲವಾಗಲು ಕಾರಣಗಳಾಗಿವೆ.ಇಂಧನ ಕ್ಷೇತ್ರದಲ್ಲಿ, ಅಮೆರಿಕ ಈ ವರ್ಷಾಂತ್ಯದ ವೇಳೆಗೆ, ವಿಶ್ವದ ಅತಿ ದೊಡ್ಡ ತೈಲ ಹಾಗೂ ಜೈವಿಕ ಇಂಧನ ಉತ್ಪಾದಕ ದೇಶವಾಗಿ ಹೊರ ಹೊಮ್ಮಲಿದೆ. ಅಲ್ಲದೇ, ಅಮೆರಿಕನ್ ಕಂಪೆನಿಗಳು ಅಮೆರಿಕದ ನೈಸರ್ಗಿಕ ಅನಿಲ ಇಂಧನವನ್ನು ರಫ್ತು ಮಾಡಲೂ ಆಲೋಚಿಸುತ್ತಿವೆ. ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದಂತೆ, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಜನಸಂಖ್ಯೆ ಬೆಳವಣಿಗೆ ದರ ಧನಾತ್ಮಕವಾಗಿದೆ. ಇದು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿ ವಿರಳ ಹಾಗೂ ಭವಿಷ್ಯದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.ವಲಸಿಗರ ದೇಶವಾಗಿದ್ದರಿಂದ, ಅಮೆರಿಕ ಸಂಯುಕ್ತ ಸಂಸ್ಥಾನವು ಅದರಿಂದ ಸಾಕಷ್ಟು ಲಾಭ ಪಡೆದಿದ್ದು ಮಾತ್ರವಲ್ಲದೇ, ಅದು ವಿಶ್ವದ ಇತರ ದೇಶಗಳ ಒಟ್ಟು ಮೊತ್ತಕ್ಕಿಂತ ಹೆಚ್ಚಿನ ವಲಸಿಗರನ್ನು (ವರ್ಷಕ್ಕೆ ಹತ್ತು ಲಕ್ಷ ಹೊಸ ನಾಗರಿಕರು) ಸ್ವೀಕರಿಸುತ್ತದೆ. ನಮ್ಮ ದೇಶವು ವಿಶ್ವದ ಆರ್ಥಿಕತೆಯೊಂದಿಗೆ ತೊಡಗಿಸಿಕೊಳ್ಳಲು ಬೇಕಾದ ಅಮೂಲ್ಯ ಅಂತರರಾಷ್ಟ್ರೀಯ ದೃಷ್ಟಿಕೋನವನ್ನು ನಮ್ಮ ವಲಸಿಗರು ತಮ್ಮಡನೆ ತರುತ್ತಾರೆ. ಜನಸಂಖ್ಯೆಯಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನವನ್ನು ಹೊಂದಿದ್ದರೂ, ಸಾಕಷ್ಟು ಕಡಿಮೆ ಜನಸಾಂದ್ರತೆ ಇರುವುದೂ ನಮಗೆ ಅನುಕೂಲವಾಗಿದೆ. ಶಿಕ್ಷಣದ ವಿಚಾರಕ್ಕೆ ಬಂದರೆ, ಎಲ್ಲ ಮಕ್ಕಳಿಗೂ ಸಾರ್ವತ್ರಿಕ ಶಿಕ್ಷಣ ನೀಡುವುದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕಡ್ಡಾಯ. ವಿನೂತನತೆ ಹಾಗೂ ಶಿಕ್ಷಣಗಳಿಗೆ ಹೆಚ್ಚಿನ ಒತ್ತು ನೀಡುವ ಅತ್ಯುನ್ನತ ಮೌಲ್ಯಗಳನ್ನು ಕಲಿಸುವ ಮೂಲಕ ನಮ್ಮ ಮುಂದಿನ ತಲೆಮಾರಿನ ನಾಯಕರು, ವೃತ್ತಿಪರರು ಹಾಗೂ ವಾಣಿಜ್ಯೋದ್ಯಮಿಗಳನ್ನು ತಯಾರು ಮಾಡುವ ವಿಶ್ವದ ಅತ್ಯುತ್ಕೃಷ್ಟ ವಿಶ್ವವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಗಳನ್ನು ಅಮೆರಿಕ ಹೊಂದಿದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಏಳಿಗೆಗೆ ಇದೇ ಕಾರಣ ಎಂದು ನಿರ್ದಿಷ್ಟವಾಗಿ ವಿವರಿಸುವುದು ಕಷ್ಟ. ಆದರೆ, ನಮ್ಮ ಯಶಸ್ಸಿಗೆ ಬಹುತೇಕ ಕಾರಣ ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆ ಹಾಗೂ ನಮ್ಮ ವೈವಿಧ್ಯಮಯ ಹಿನ್ನೆಲೆಯ ನಾಗರಿಕರಿಗೆ ಸಮಾನ ಅವಕಾಶ ಹಾಗೂ ಹಕ್ಕುಗಳನ್ನು ಖಾತರಿ ಮಾಡುವ ನಂಬಿಕೆ ಹೊಂದಿರುವುದೂ ಕಾರಣ.5. ಸುಶೀಲ ವಿಶ್ವನಾಥ್

ಹುಟ್ಟಿನಿಂದ ನನ್ನ ಮೊಮ್ಮಗಳು ಅಮೆರಿಕ ಸಂಯುಕ್ತ ಸಂಸ್ಥಾನದ ನಾಗರಿಕಳು. ಆಕೆ, ಭಾರತದ ನಾಗರಿಕನನ್ನು ಮದುವೆಯಾಗುತ್ತಿದ್ದಾಳೆ. ಇದಕ್ಕಾಗಿ ಅಮೆರಿಕ ಸರ್ಕಾರದಿಂದ ನಿರಪೇಕ್ಷಣಾ ಪತ್ರವನ್ನೇನಾದರೂ ಪಡೆಯಬೇಕೆ?

ಮದುವೆಯಾಗ ಬಯಸುವವರಿಗೆ ನಿರಪೇಕ್ಷಣಾ ಪತ್ರಗಳನ್ನು ಅಮೆರಿಕ ಸಂಯುಕ್ತ ಸಂಸ್ಥಾನದ ಸರ್ಕಾರದಿಂದ ಪಡೆಯುವ ಅಗತ್ಯವಿಲ್ಲ ಅಥವಾ ಸರ್ಕಾರವೂ ನೀಡುವುದಿಲ್ಲ. ವಾಸ್ತವವಾಗಿ, ಮದುವೆಯಾಗಲು ವ್ಯಕ್ತಿಗಳಿಗಿರಬೇಕಾದ ಅರ್ಹತೆಗಳ ಕುರಿತು ನಮ್ಮ ದೂತಾವಾಸದ ಅಧಿಕಾರಿಗಳು ಯಾವುದೇ ಅಧಿಕೃತ ಹೇಳಿಕೆ ನೀಡುವುದನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ.ವಿವಾಹವಾಗಲು ಇಚ್ಛಿಸುವ ವಿದೇಶಿಯರು, ತಮ್ಮ ಮದುವೆಗೆ ಕಾನೂನಿನ ಅಡ್ಡಿಯಿಲ್ಲ ಎಂಬುದನ್ನು ಸರ್ಕಾರದ ಪ್ರಾಧಿಕಾರದ ಲಿಖಿತ ಪುರಾವೆಯನ್ನು ಭಾರತವೂ ಸೇರಿದಂತೆ ಕೆಲ ದೇಶಗಳಲ್ಲಿ ಒದಗಿಸಬೇಕಾಗುತ್ತದೆ. ಆದರೆ, ಈ ಬಗೆಯ ಯಾವುದೇ ದಾಖಲೆಯಾಗಲಿ ಅಥವಾ ಇಂಥ ದಾಖಲೆಗಳನ್ನು ನೀಡುವ ಸರ್ಕಾರಿ ಪ್ರಾಧಿಕಾರವಾಗಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅಸ್ತಿತ್ವದಲ್ಲಿಯೇ ಇಲ್ಲ. ಮದುವೆಯಲ್ಲಿ ಭಾಗಿಯಾಗಿರುವ ಅಮೆರಿಕನ್ ನಾಗರಿಕ ಕಕ್ಷಿದಾರರು, ತಾವು ವಿವಾಹವಾಗಲು ಸ್ವತಂತ್ರರೆಂದು ದೃಢೀಕರಿಸುವ ಹೇಳಿಕೆಯೊಂದನ್ನು ಅಮೆರಿಕನ್ ದೂತಾವಾಸದ ಅಧಿಕಾರಿಗಳು ಪ್ರಮಾಣೀಕರಿಸುತ್ತಾರೆ. ಈ ದಾಖಲೆಯನ್ನೇ ಸರ್ಕಾರ ಹೇಳಿಕೆಗೆ ಬದಲಿಗೆ ಸ್ವೀಕರಿಸಲಾಗುತ್ತದೆ.ಮೂಲ: http://chennai.usconsulate.gov/pdfs/marriage_no_objection_request.pdf)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry