ಗುರುವಾರ , ಮೇ 19, 2022
21 °C

Ask ಅಮೆರಿಕ

ಯು.ಎಸ್.ಕಾನ್ಸುಲೇಟ್, ಚೆನ್ನೈ Updated:

ಅಕ್ಷರ ಗಾತ್ರ : | |

1. ಸಂಪತ್ ಬೆಟ್ಟಗೆರೆ, ಮೂಡಿಗೆರೆ.

ಭಾರತೀಯ ಸಾಹಿತಿಗಳು ಪಡೆಯುವ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ `ಜ್ಞಾನಪೀಠ' ಹಾಗೂ `ಕೇಂದ್ರ ಸಾಹಿತ್ಯ ಅಕಾಡೆಮಿ' ಪ್ರಶಸ್ತಿಯಂತೆ ಅಮೆರಿಕಾದ ಸಾಹಿತಿಗಳಿಗೆ ಅಲ್ಲಿನ ಸಾಹಿತ್ಯ ವಲಯ ಹಾಗೂ ಸರ್ಕಾರ ನೀಡುವ ಪರಮೋಚ್ಚ ಸಾಹಿತ್ಯ ಪುರಸ್ಕಾರ/ಪ್ರಶಸ್ತಿ ಯಾವುದು?ಮಾನವಿಕ ಹಾಗೂ ಸೃಜನಶೀಲ ಕ್ಷೇತ್ರಗಳಲ್ಲಿನ ಸಾಧನೆಗೆ ಪುರಸ್ಕಾರ ನೀಡುವ ಖಾಸಗಿ ದತ್ತಿ ಯೋಜನೆಗಳನ್ನು ಲೈಬ್ರರಿ ಆಫ್ ಕಾಂಗ್ರೆಸ್ ಪ್ರಾಯೋಜಿಸುತ್ತದೆ. ಲೈಬ್ರರಿ ಆಫ್ ಕಾಂಗ್ರೆಸ್ ನೀಡುವ ಪುರಸ್ಕಾರಗಳಲ್ಲಿ ಕೆಲವೆಂದರೆ, ಸೃಜನಶೀಲ ಸಾಧನೆ ಪುರಸ್ಕಾರ (The Creative Achievement Prize) ಹಾಗೂ ಕಥನ ಪುರಸ್ಕಾರ (The Fiction Prize). ಅಮೆರಿಕ ಸಂಯುಕ್ತ ಸಂಸ್ಥಾನದ ಅತ್ಯುಚ್ಚ ನಾಗರಿಕ ಪುರಸ್ಕಾರ ಎಂದರೆ ಅಧ್ಯಕ್ಷರ ಸ್ವಾತಂತ್ರ್ಯ ಪದಕ (The U.S. Presidential Medal of Freedom). ಈ ಪುರಸ್ಕಾರವನ್ನು 1963ರಲ್ಲಿ ಆರಂಭಿಸಲಾಗಿದ್ದು, ಈ ಪದಕವನ್ನು ಈ ವರೆಗೂ 20 ಅಮೆರಿಕದ ಬರಹಗಾರರು ಪಡೆದಿದ್ದಾರೆ. ಅಮೆರಿಕದ ಖಾಸಗಿ ಸಂಸ್ಥೆಗಳು ನೀಡುವ ಪುರಸ್ಕಾರಗಳಲ್ಲಿ ಪುಲಿಟ್ಜರ್ ಪ್ರಶಸ್ತಿ, ನ್ಯಾಷನಲ್ ಬುಕ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿಗಳು ಅತ್ಯಂತ ಪ್ರತಿಷ್ಠಿತವಾದವುಗಳು. ಭಾರತೀಯ ಸಂಜಾತ ಅಮೆರಿಕನ್ ಬರಹಗಾರರು ಇಂಥ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಝುಂಪಾ ಲಾಹಿರಿ ಅವರು ತಮ್ಮ ಚೊಚ್ಚಲ ಕೃತಿ `ಇಂಟರ್ ಪ್ರೆಟರ್ ಆಫ್ ಮ್ಯೋಲಡೀಸ್' 2000ರಲ್ಲಿ ಪುಲಿಟ್ಜರ್ ಪ್ರಶಸ್ತಿ ಪಡೆದರು. ಭಾರತಿ ಮುಖರ್ಜಿ ಅವರು ತಮ್ಮ `ದಿ ಮಿಡಲ್ ಮ್ಯೋನ್ ಅಂಡ್ ಅದರ್ ಸ್ಟೋರೀಸ್' ಕೃತಿಗೆ ನ್ಯಾಷನಲ್ ಬುಕ್ ಕ್ರಿಟಿಕ್ಸ್ ಸರ್ಕಲ್ ಕಥನ ಪ್ರಶಸ್ತಿಯನ್ನು 1988ರಲ್ಲಿ ಪಡೆದರು. ಕಿರಣ್ ದೇಸಾಯಿ ಅವರು ತಮ್ಮ `ದಿ ಇನ್ ಹೆರಿಟೆನ್ಸ್ ಆಫ್ ಲಾಸ್' ಕೃತಿಗಾಗಿ ಇದೇ ಪ್ರಶಸ್ತಿಯನ್ನು 2006ರಲ್ಲಿ ಪಡೆದರು.2. ಬಿ. ಸಿ. ಶೇಷಾದ್ರಿ, ಬೆಂಗಳೂರು

ನನ್ನ ಮಗ ಕಳೆದ 10 ವರ್ಷಗಳಿಂದ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ H1B ವೀಸಾದ ಮೇಲೆ ವಾಸಿಸುತ್ತಿದ್ದಾನೆ. ನಾನು ಹಾಗೂ ನನ್ನ ಪತ್ನಿಗೆ 10 ವರ್ಷಗಳ H1/B2 ಬಹುಪ್ರವೇಶಿ ವೀಸಾ ದೊರಕಿದ್ದು, ನಾವು ಅಲ್ಲಿ 3-6 ತಿಂಗಳಿದ್ದು, ಭಾರತಕ್ಕೆ ವಾಪಸಾಗಿದ್ದೇವೆ. ಮತ್ತೆ ಅಮೆರಿಕಕ್ಕೆ ಹೋಗಬೇಕೆಂದರೆ, ಕನಿಷ್ಠ ಎಷ್ಟು ಕಾಲ ನಾವು ಭಾರತದಲ್ಲಿ ವಾಸವಾಗಿರಬೇಕು ? ಈ ಬಗೆಯ ಬಹುಪ್ರವೇಶಿ ವೀಸಾ ಪಡೆದವರು ಅಮೆರಿಕ ಭೇಟಿ ನೀಡುವ ಸಂಖ್ಯೆಗಳ ಮೇಲೆ ಮಿತಿಗಳನ್ನೇನಾದರೂ ನಿಗದಿ ಪಡಿಸಲಾಗಿದೆಯೇ ? ಈ ಕುರಿತ ಹೆಚ್ಚಿನ ಮಾಹಿತಿ, ಮಾರ್ಗದರ್ಶಿ ಸೂತ್ರಗಳು, ಅಥವಾ ಸೂಚನೆಗಳ ವಿವರಗಳನ್ನು ವೆಬ್ ಸೈಟುಗಳಿದ್ದರೆ ತಿಳಿಸಿ.ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ತಾವು ಮತ್ತೊಮ್ಮೆ ಭೇಟಿ ನೀಡಲು, ಭಾರತದಲ್ಲಿ ಕನಿಷ್ಠ ವಾಸದ ಮಿತಿ ಇಲ್ಲ. ಅಲ್ಲದೇ, B1/B2 ವೀಸಾ ಹೊಂದಿರುವ ತಾವು ಎಷ್ಟು ಬಾರಿ ಬೇಕಾದರೂ ಅಮೆರಿಕಗೆ ಭೇಟಿ ನೀಡಬಹುದು. ಆದರೆ, ಅಮೆರಿಕದ ಅಲ್ಪಾವಧಿ ಪ್ರವಾಸಕ್ಕೆ ಮಾತ್ರ B1/B2 ವೀಸಾ. ಅಮೆರಿಕದಲ್ಲಿಯೇ ವಾಸಿಸುತ್ತಾ, ತಮ್ಮ ಸ್ವದೇಶಕ್ಕೆ ಆಗೀಗ ಅಲ್ಪಾವಧಿ ಭೇಟಿ ನೀಡಲು ಈ ವೀಸಾ ಬಳಸಲಾಗದು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿನ ದೀರ್ಘಾವಧಿ ವಾಸಿಸುವ ಮೂಲಕ ತಾವು ತಮ್ಮ ಸ್ವದೇಶದೊಂದಿಗೆ ದುರ್ಬಲ ಸಂಬಂಧ ಹೊಂದಿದ್ದೀರಿ ಎಂದು ಗ್ರಹಿಸುವ ಸಾಧ್ಯತೆಯುಂಟು. ಮತ್ತೊಂದು ಮರೆಯಬಾರದ ಸಂಗತಿ ಎಂದರೆ, ಸಮಂಜಸವಾದ ವೀಸಾ ಹೊಂದಿರುವಿಕೆ ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರವೇಶಕ್ಕೆ ಖಾತರಿ ಒದಗಿಸುವುದಿಲ್ಲ. ಪ್ರತಿ ಬಾರಿಯ ಭೇಟಿಯ ಸಂದರ್ಭದಲ್ಲಿಯೂ ಅಮೆರಿಕ ಸಂಯುಕ್ತ ಸಂಸ್ಥಾನದ ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಸೀಮಾಸುಂಕ ಹಾಗೂ ಗಡಿ ಭದ್ರತೆಯ ಅಧಿಕಾರಿಗಳು (Customs and Border Protection -CBP) ಪ್ರವೇಶ ನೀಡುವ ಅಥವಾ ನಿರಾಕರಿಸುವ ಅಧಿಕಾರವನ್ನು ಹೊಂದಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಮುಂದಿನ ವೆಬ್ ಸೈಟಿಗೆ ಭೇಟಿ ನೀಡಿ: http://travel.state.gov/visa/temp/types/types_1262.html3.ಸಿ. ಎ. ಜೈನಾಪುರೆ, ಇಂಗ್ಲೀಷ್ ಅಧ್ಯಾಪಕರು, ಸರ್ಕಾರಿ ಪ್ರೌಢಶಾಲೆ, ಶಿರೋಲಿ, ಖಾನಾಪುರ ತಾಲೂಕು, ಬೆಳಗಾವಿ

ಅಮೆರಿಕದ ಇಂಗ್ಲಿಷ್ ಹಾಗೂ ಬ್ರಿಟಿಷ್ ಇಂಗ್ಲಿಷ್ ನಡುವಿನ ವ್ಯತ್ಯಾಸಗಳೇನು? ನಾವು ಬ್ರಿಟಿಷ್ ಇಂಗ್ಲಿಷನ್ನು ಬಳಸುತ್ತೇವೆ. ಅಮೆರಿಕೆಗೆ ಹೋದಾಗ ಇದನ್ನು ನಾವು ಬಳಸುವುದು ಹೇಗೆ?

ಅಮೆರಿಕನ್ ಇಂಗ್ಲಿಷ್ ಹಾಗೂ ಬ್ರಿಟಿಷ್ ಇಂಗ್ಲಿಷ್‌ಗಳ ಮೂಲ ಬೇರು ಒಂದೇ ಆದರೂ, ಬೆಳವಣಿಗೆ ಮಾತ್ರ ಬೇರೆ ಬೇರೆಯಾಗಲು ಕಾರಣ ಎರಡೂ ದೇಶಗಳ ನಡುವಿನ ದೂರ ಹಾಗೂ ಅವೆರಡನ್ನೂ ಪ್ರತ್ಯೇಕಿಸುವ ಅಟ್ಲಾಂಟಿಕ್ ಸಾಗರ. ಈ ಎರಡರ ನಡುವಣ ವ್ಯತ್ಯಾಸ ತೀರಾ ಚಿಕ್ಕದು. ಉದಾಹರಣೆಗೆ ಅಮೆರಿಕನ್ ಇಂಗ್ಲಿಷಿನಲ್ಲಿ ಬಣ್ಣ ಎಂಬ ಶಬ್ದಕ್ಕೆ “್ಚಟ್ಝಟ್ಟ” ಎಂಬ ಸ್ಪೆಲ್ಲಿಂಗ್ ಬರೆದರೆ, ಬ್ರಿಟಿಷ್ ಇಂಗ್ಲಿಷ್‌ನಲ್ಲಿ ಅದನ್ನು “್ಚಟ್ಝಟ್ಠ್ಟ” ಎಂದು ಬರೆಯಲಾಗುತ್ತದೆ. “ಟಞಠಿಟ”ದಂಥ ಹಲವಾರು ಪದಗಳ ಉಚ್ಛಾರಣೆಗೆ ಸಂಬಂಧಿಸಿದಂತೆಯೂ ಹಲವಾರು ಸಣ್ಣ ಪುಟ್ಟ ವ್ಯತ್ಯಾಸಗಳುಂಟು. ಭೌಗೋಳಿಕ ವಿಭಜನೆಗಳು ವಿಶ್ವಾದ್ಯಂತ ಇಂಗ್ಲಿಷಿನ ಹಲವಾರು ಆವೃತ್ತಿಗಳಿಗೆ ಕಾರಣವಾಗಿವೆ.ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಇಂಗ್ಲಿಷ್ ಭಾಷಿಕ ಪ್ರದೇಶಗಳಲ್ಲಿಯೇ, ಅನೇಕ ಪ್ರಾದೇಶಿಕ ಉಚ್ಚಾರಣೆಗಳು ಹಾಗೂ ವಿಶಿಷ್ಟವಾದ ವ್ಯಾಕರಣ ರಚನೆಗಳಿವೆ. ಇದಕ್ಕೆ ಐತಿಹಾಸಿಕ ಕಾರಣಗಳುಂಟು. ಅಮೆರಿಕದ ವಿಶ್ವವಿದ್ಯಾಲಯಗಳ ಭಾಷಾಶಾಸ್ತ್ರ ವಿಷಯದ ವಿಭಾಗಗಳಲ್ಲಿ ಬೇರೆ ಬೇರೆ ನಮೂನೆಯ ಇಂಗ್ಲಿಷಿನ ಭಂಡಾರಗಳಿದ್ದು, ಕಾಲದಿಂದ ಕಾಲಕ್ಕೆ ಅವುಗಳಲ್ಲಾಗುವ ಬೆಳವಣಿಗೆಯನ್ನು ದಾಖಲಿಸಲಾಗುತ್ತದೆ. ಏನೆಲ್ಲಾ ಭಿನ್ನತೆಗಳಿದ್ದರೂ, ಬ್ರಿಟಿಷ್ ಹಾಗೂ ಅಮೆರಿಕನ್ ಇಂಗ್ಲಿಷ್‌ಗಳನ್ನು ಪರಸ್ಪರವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ಬ್ರಿಟನ್ನಿನ ಟೆಲಿವಿಷನ್ ಕಾರ್ಯಕ್ರಮಗಳು ಹಾಗೂ ಬರಹಗಾರರು ಅಮೆರಿಕದಲ್ಲಿಯೂ ಬಹುಕಾಲದಿಂದ ಜನಪ್ರಿಯರಾಗಿದ್ದಾರೆ.ಅಮೆರಿಕದವರಿಗಿಂತ ಬೇರೆಯದೇ ತೆರನಾಗಿ ಇಂಗ್ಲೀಷನ್ನು ತಾವು ಮಾತನಾಡಿದರೂ, ತಾವು ಕಲಿತ ಇಂಗ್ಲಿಷನ್ನೇ ಮಾತನಾಡಲು ಯಾವುದೇ ಸಂಕೋಚ ಪಡಬೇಕಿಲ್ಲ. ಏಕೆಂದರೆ, ಅಮೆರಿಕದಲ್ಲಿ ಸ್ಪೋಕನ್ ಇಂಗ್ಲಿಷಿನ ಯಾವುದೇ ನಿರ್ದಿಷ್ಟ ಗುಣಮಟ್ಟವನ್ನು ನಿಗದಿಪಡಿಸಿಲ್ಲ. ಈ ಕುರಿತು ತಾವು ಇಂಟರ್‌ನೆಟ್‌ನಲ್ಲಿ ಹುಡುಕಬಹುದು. ಅಮೆರಿಕದ ಇಂಗ್ಲಿಷ್ ಹಾಗೂ ವಿಶ್ವಾದ್ಯಂತ ಇರುವ ಇತರ ಇಂಗ್ಲಿಷ್ ನಡುವಣ ವ್ಯತ್ಯಾಸವನ್ನು ಅರಿಯಲು ಚೆನ್ನೈನ ಅಮೆರಿಕನ್ ದೂತಾವಾಸದಲ್ಲಿರುವ ಅಮೆರಿಕನ್ ಲೈಬ್ರರಿಯ ನೆರವು ಪಡೆಯಬಹುದು. ಅಮೆರಿಕನ್ ಇಂಗ್ಲೀಷನ್ನು ತಾವು ಉಚಿತವಾಗಿ ಕಲಿಯಲು ಬಯಸಿದರೆ, ಈ ಮುಂದಿನ ವೆಬ್ ಸೈಟಿಗೆ ಭೇಟಿ ನೀಡಿ: http://americanenglish.state.gov/.4.ಶರಣಗೌಡ, ಬೆಂಗಳೂರು

ಅಮೆರಿಕನ್ ಸಂಸ್ಕೃತಿ, ಜೀವನ ಹಾಗೂ ಸಾಮಾಜಿಕ ಸಂಬಂಧಗಳ ವಿವರ ಕುರಿತು ಯಾವ ಪುಸ್ತಕಗಳನ್ನು ಓದಿದರೆ ತಿಳಿಯಬಹುದು ?ಅಮೆರಿಕದ ಸಮಾಜವನ್ನು ಅರಿಯಲು ಅತ್ಯುತ್ತಮ ವಿಧಾನವೆಂದರೆ ನೊಬೆಲ್ ಪ್ರಶಸ್ತಿ ಹಾಗೂ ಪುಲಿಟ್ಜರ್ ಪ್ರಶಸ್ತಿ ಪಡೆದ ಅಮೆರಿಕನ್ ಲೇಖಕರ ಪುಸ್ತಕಗಳನ್ನು ಓದುವುದು. ಚೆನ್ನೈನಲ್ಲಿರುವ ಅಮೆರಿಕನ್ ದೂತಾವಾಸದಲ್ಲಿರುವ ಅಮೆರಿಕನ್ ಲೈಬ್ರರಿ (http://chennai.usconsulate.gov/resources.html) ಮತ್ತು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿರುವ ಅಮೆರಿಕನ್ ಕಾರ್ನರ್‌ಗಳಲ್ಲಿ(http://chennai.usconsulate.gov/amcorner.html) ಅಮೆರಿಕದ ಸಂಸ್ಕೃತಿ, ಇತಿಹಾಸ, ಜೀವನ ಹಾಗೂ ಸಮಾಜಗಳ ಕುರಿತು ಸಾವಿರಾರು ಪುಸ್ತಕಗಳಿವೆ. ಅಮೆರಿಕನ್ ಲೈಬ್ರರಿಯು ಉಚಿತ ಪುಸ್ತಕಗಳು ಹಾಗೂ ಆನ್‌ಲೈನ್ ಸಂಪನ್ಮೂಲಗಳನ್ನು ಹೊಂದಿದ್ದು ಹಾಗೂ ಪುಸ್ತಕಗಳನ್ನು ತಮಗೆ ಅಂಚೆಯ ಮೂಲಕ ಕಳುಹಿಸಲಾಗುವುದು. ಅಲ್ಲದೇ, ತಮ್ಮ ಆಸಕ್ತಿಯ ವಿಚಾರಗಳ ಅನೇಕ ಉಚಿತ ಆನ್‌ಲೈನ್ ಪ್ರಕಟಣೆಗಳೂ ಉಂಟು. ಅವುಗಳನ್ನು ಈ ಮುಂದಿನ ವೆಬ್ ಸೈಟಿನಲ್ಲಿ ಪಡೆಯಬಹುದು: http://iipdigital.usembassy.gov/.ಹೆಚ್ಚಿನ ಮಾಹಿತಿಗಾಗಿ, ಅಮೆರಿಕನ್ ಲೈಬ್ರರಿಯ ಸದಸ್ಯತ್ವ ಪಡೆಯಲು ಹಾಗೂ ಇತರ ಉಚಿತ ಸಂಪನ್ಮೂಲಗಳನ್ನು ಪಡೆಯಲು ತಾವು ಈ ಮುಂದಿನ ದೂರವಾಣಿ ಸಂಖ್ಯೆಗೆ +91-44-2857-4223 ಕರೆ ಮಾಡಬಹುದು ಇಲ್ಲವೇ ಈ ಮುಂದಿನ ವಿಳಾಸಕ್ಕೆ chennairefdesk@state.gov  ಮೇಲ್ ಕಳುಹಿಸಬಹುದು.5.ಹೆಚ್. ವಿ. ಶಿವರಾಜ್, ಹಿಟ್ಟನಹಳ್ಳಿ ಕೊಪ್ಪಲು, ಮಳವಳ್ಳಿ ತಾಲೂಕು, ಮಂಡ್ಯ ಜಿಲ್ಲೆ

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಪರವಾನಗಿ (ಲೈಸೆನ್ಸ್) ಅಥವಾ ವರ್ಗಾವಣೆಗೆ ರಾಜಕಾರಣಿ ಅಥವಾ ಅಧಿಕಾರಶಾಹಿ ಲಂಚ ಪಡೆಯುತ್ತದೆಯೆ ಭ್ರಷ್ಟಾಚಾರದ ವಿರುದ್ಧ ಅಲ್ಲಿನ ನಾಗರಿಕರಿಗಿರುವ ಹಕ್ಕುಗಳ ವಿವರ ಕೊಡಿ.ಭ್ರಷ್ಟಾಚಾರವನ್ನು ನಿಗ್ರಹಿಸಲು ಬಹುಸಂಸ್ಥೀಯ ತಂತ್ರಗಾರಿಕೆಯನ್ನು ಅಮೆರಿಕ ಸಂಯುಕ್ತ ಸಂಸ್ಥಾನ ಅಳವಡಿಸಿಕೊಂಡಿದೆ. ಈ ವಿಧಾನದ ಒಂದು ಅಂಶವನ್ನು ಸರ್ಕಾರಿ ನೀತಿಸಂಹಿತೆ ಕಚೇರಿಯು (Office of Government Ethics –OGE) ಪ್ರತಿನಿಧಿಸುತ್ತದೆ (ನೋಡಿ www.usoge.gov). ಕಾರ್ಯಾಂಗದ ನೀತಿ ಸಂಹಿತೆಯ ಮಟ್ಟವನ್ನು ದೃಢಪಡಿಸಲು, ಸರ್ಕಾರದಲ್ಲಿ ಪಾರದರ್ಶಕತೆಯನ್ನು ಖಚಿತ ಪಡಿಸಲು ಹಾಗೂ ಉತ್ತಮ ಆಡಳಿತಕ್ಕೆ ಉತ್ತೇಜನ ನೀಡಲು, ಸರ್ಕಾರಿ ನೀತಿ ಸಂಹಿತೆ ಕಚೇರಿಯು ನಿರ್ವಹಣೆ ಹಾಗೂ ಆಯವ್ಯಯ ಕಚೇರಿ (Office of Management and Budget),  ಸರ್ಕಾರಿ ಉತ್ತರದಾಯಿತ್ವ ಕಚೇರಿ (Government Accountability Office)  ಹಾಗೂ ನ್ಯಾಯಾಂಗ ಇಲಾಖೆಗಳೊಂದಿಗೆ ಸಹಕರಿಸುತ್ತದೆ.ವಿಶ್ವಸಂಸ್ಥೆ, ಅಮೆರಿಕನ್ ರಾಜ್ಯಗಳ ಸಂಸ್ಥೆ (the Organization of American States), ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿ ಸಂಸ್ಥೆ (Organization for Economic Co-operation and Development -OECD) , ಹಾಗೂ ಇನ್ನಿತರ ಬಹುಪಕ್ಷೀಯ ಸಂಸ್ಥೆಗಳ ಬೆಂಬಲವನ್ನೂ ಪಡೆದಿರುವ ಲಂಚಗುಳಿತನ ಹಾಗೂ ಅಂತಾರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ನಿಗ್ರಹಿಸುವ ಅಭಿಯಾನದ ನೇತೃತ್ವವನ್ನು ಅಮೆರಿಕ ಸಂಯುಕ್ತ ಸಂಸ್ಥಾನ ವಹಿಸಿದೆ. ಪರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಮೆರಿಕಾದ ಕಂಪನಿಗಳು ಲಂಚ ನೀಡುವುದನ್ನು 1977ರ ವಿದೇಶಿ ಭ್ರಷ್ಟಾಚಾರ ಪದ್ಧತಿ ಕಾಯ್ದೆ (The 1977 Foreign Corrupt Practices Act -FCPA)ಯು ನಿಷೇಧಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.