ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುಣಾಳು ಬಾ ಬೆಳಕೆ| ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ ಗುರುರಾಜ ಕರಜಗಿ

Last Updated 27 ಏಪ್ರಿಲ್ 2020, 11:26 IST
ಅಕ್ಷರ ಗಾತ್ರ

ಕೊರೊನಾ ಕಾರ್ಮೋಡ ಆವರಿಸಿರುವ ಕತ್ತಲಲ್ಲಿ ಹಾಯ್ ಎನಿಸುವ ಕಿರಣಗಳನ್ನು ಹೊತ್ತು ತರುವ ಬೆಳಕಿಂಡಿ ಇಲ್ಲಿದೆ. ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರಿಂದ ಪ್ರಜಾವಾಣಿ ಓದುಗರಿಗಾಗಿ ‘ಫೇಸ್‌ಬುಕ್‌’ ಲೈವ್ ಉಪನ್ಯಾಸ. ಸಂಜೆ 4ರಿಂದ 5ರ ವರೆಗೂಲೈವ್‌ ವೀಕ್ಷಣೆಗೆ ಇಲ್ಲಿದೆಲಿಂಕ್‌

ಕರಜಗಿ ಮಾತು
ಯಾವುದೇ ಒಂದು ವ್ಯಕ್ತಿಯಾಗಲೀ, ವಸ್ತುವಾಗಲೀ, ಪುಸ್ತಕವಾಗಲೀ ಅದಕ್ಕೆ ಜೀವದ ಅವಧಿ ಅಂತಾ ಇರುತ್ತದೆ. ಎಷ್ಟು ಜನ ನೆನಪಲ್ಲಿ ಇರ್ತಾರೆ? ಯಾವುದೇ ವಸ್ತು ದಿನ ಕಳೆದಂತೆ ತನ್ನ ಹೊಸತನವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ದಿನ ಕಳೆದಂತೆ ಅದರ ಮಹತ್ವ ಕಳೆದುಕೊಂಡಂತಾಯ್ತು. ಇದು ವಸ್ತುಗಳಿಗೆ ಮಾತ್ರ ಅಲ್ಲ ಭಾವನೆಗಳಿಗೂ ಸಂಬಂಧಿಸಿದ್ದು.

ವ್ಯಕ್ತಿ, ಸುದ್ದಿ ಅಥವಾ ಚಿಂತನೆಯೂ ಹಾಗೆನೇ. ದಿವಸ ಕಳೆದಂತೆ ಸಂತೋಷ ಆಗಲೀ ದುಃಖವಾಗಲೀ ಅದರ ತೀಕ್ಷಣತೆ ಕಡಿಮೆ ಆಗತ್ತದೆ. ಕೆಲವೊಂದು ವ್ಯಕ್ತಿಗಳು, ಪುಸ್ತಕಗಳು ದಿನಕಳೆದಂತೆ ಮಹತ್ವ ಹೆಚ್ಚುತ್ತಾ ಹೋಗುತ್ತದೆ. 1943ನೇ ಇಸವಿಯಲ್ಲಿ ಡಿವಿ ಗುಂಡಪ್ಪನವರು ಮಂಕುತಿಮ್ಮನ ಕಗ್ಗ ಪ್ರಕಟ ಮಾಡಿದರು. ಅವತ್ತಿನ ದಿನ ಎಷ್ಟು ಜನರು ಓದುತ್ತಿದ್ದರೋ ಗೊತ್ತಿಲ್ಲ. ಆದರೆ ಇವತ್ತಿಗೂ ಜನ ಅದನ್ನು ಓದುತ್ತಾ ಇದ್ದಾರೆ. ಪುಸ್ತಕದ ಶಕ್ತಿ ಹೆಚ್ಚಾಯಿತೇ ಹೊರತು ಕಡಿಮೆ ಆಗಿಲ್ಲ. 1902 ಜುಲೈ 4ರಂದು ವಿವೇಕಾನಂದರು ಜೀವಬಿಟ್ಟರು. ಅವತ್ತು ಅವರಿಗೆ ಎಷ್ಟು ಶಿಷ್ಯರಿದ್ದರೂ ಅದಕ್ಕಿಂತ 10 ಸಾವಿರ ಪಟ್ಟು ಶಿಷ್ಯರು ಇವತ್ತು ಅವರಿಗಿದ್ದಾರೆ. ಕೆಲವು ವಸ್ತುಗಳು ದಿನದಿಂದ ದಿನಕ್ಕೆ ಹೆಚ್ಚು ಪ್ರಭಾವಶಾಲಿಯಾಗಿ ಹೋಗುತ್ತವೆ.


ನಿನ್ನೆ ತಾನೇ ನಾವು ಬಸವಣ್ಣನ ಜಯಂತಿ ಆಚರಿಸಿದೆವು.ಶತಮಾನಗಳ ಹಿಂದೆ ಅವರು ಕಳಬೇಡ, ಕೊಲಬೇಡ,. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ ಎಂದಿದ್ದರು. ವರ್ಗ ಸಮಾನತೆ ತರಬೇಕು ಎಂದು ಶತಮಾನಗಳ ಹಿಂದೆಯೇ ಹೇಳಿದ್ದರು. ಆ ವ್ಯಕ್ತಿಗಳು ಈಗಲೂ ಯಾಕೆ ನೆನಪಿನಲ್ಲಿ ಉಳಿಯುತ್ತಾರೆ ಎಂದು ನಮಗೆ ಅನಿಸಲ್ವಾ? ಯಾರು ಸಾರ್ವಕಾಲಿಕ ಸತ್ಯಗಳ ಬಗ್ಗೆ ಹೇಳುತ್ತಾರೋ ಅವರು ಶಾಶ್ವತವಾಗಿ ಉಳಿಯುತ್ತಾರೆ. ಈಗಿನ ವರ್ತಮಾನದ ಬಗ್ಗೆ ಅಲ್ಲ ಮುಂದಿನ 10 ಸಾವಿರ ವರ್ಷಗಳ ಬಗ್ಗೆ ಚಿಂತನೆ ಮಾಡುವವರ ಬಗ್ಗೆ ಮಾತ್ರ ಜನರು ನೆನಪಿಡುತ್ತಾರೆ.
ಭಗವದ್ಗೀತೆಯಲ್ಲಿ ನಮೋಸ್ತುತೇ ವ್ಯಾಸ ವಿಶಾಲ ಬುದ್ದೇ ಪುಲ್ಲಾರವಿಂದಾಯತ ಪತ್ರನೇತ್ರ. ಯೇನ ತ್ವಯಾ ಭಾರತ ತೈಲಪೂರ್ಣ: ಪ್ರಜ್ವಲಿತೋ ಜ್ಞಾನಮಯ: ಪ್ರದೀಪ:
ಪ್ರದೀಪ ಎಂದರೆ ನೂರಾರು ದೀಪಗಳಿಗೆ ಶಕ್ತಿಕೊಡುವಂತದ್ದು.
ವಿವೇಕಾನಂದರು ಬದುಕಿದ್ದೇ 39 ವರ್ಷ.ಅವರ ಸಾಧನೆ ಕಲ್ಪನೆ ಮಾಡಲೂ ಸಾಧ್ಯವಿಲ್ಲ. ಕಾಲೇಜಿಗೆ ಹೋದರು ರಾಮಕೃಷ್ಣ ಪರಮಹಂಸರ ಸ್ಪರ್ಶ ಮೇಲೆ ಅವರು ಬದಲಾದರು, ಅಮೆರಿಕದಲ್ಲಿ ಬ್ರದರ್ಸ್ ಆ್ಯಂಡ್ ಸಿಸ್ಟರ್ಸ್ ಎಂದು ಹೇಳಿದಾಗ ಜನ ಮೆಚ್ಚುಗೆಯಿಂದ ಚಪ್ಪಾಳೆ ತಟ್ಟಿದರು. ಅಮೆರಿಕನ್ನರಿಗೆ ಇದು ಹೊಸ ಪದವೇನೂ ಅಲ್ಲ. ಆದರೆ ವಿವೇಕಾನಂದರು ಹೇಳಿದಾಗ ಯಾಕೆ ಚಪ್ಪಾಳೆ ತಟ್ಟಿದರು. ಕಾರಣ ಇಷ್ಟೇನೇ ಬ್ರದರ್ಸ್ ಆ್ಯಂಡ್ ಸಿಸ್ಟರ್ಸ್ ಅನ್ನುವುದು ತುಟಿ ಮಾತು. ತುಡಿಯುವ ಹೃದಯದ ಮಾತು.
ಕಷ್ಟದಿಂದ ಪಾಸಾಗಬಹುದು. ಆದರೆ ಮನ್ನಣೆಯಿಂದ ಪಾಸಾಗುವುದು ತುಂಬಾ ಕಷ್ಟ. ಅದಕ್ಕೆ ನಮ್ಮ ಗುಂಡಪ್ಪನವರು ಹೇಳುತ್ತಾರೆ. ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ ಚಿನ್ನದಾತುರಕ್ಕಿಂತ ಹೆಣ್ಣು ಗಂಡೊಲವು ಮನ್ನಣೆಯ ದಾಹವೀಯೆಲ್ಲಕಿಂ ತೀಕ್ಷ್ಣತಮ ಕೊಲ್ಲುವುದದಾತ್ಮವನೆ ಮಂಕುತಿಮ್ಮ.
ಮನ್ನಣೆ ಸಿಗಬೇಕು ಎಂಬುದು ಇದೆಯಲ್ಲಾ ಅದರ ಆಸೆ ಬಂದರೆ ಮುಗಿತು ಜೀವನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT