ಸೋಮವಾರ, ಜೂನ್ 1, 2020
27 °C

ಪ್ರಜಾವಾಣಿ ಜೊತೆ ಡಾ. ಗುರುರಾಜ ಕರಜಗಿ: ಸ್ಫೂರ್ತಿಯ ಮಾತುಗಳು–ದಿನ 5

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಗುರುರಾಜ ಕರಜಗಿ ಅವರ ಸ್ಪೂರ್ತಿದಾಯಕ ಮಾತುಗಳು..

ಯುವಕರನ್ನು ಮುಖ್ಯವಾಗಿಟ್ಟುಕೊಂಡು ಮಂಗಳವಾರ ಗುರುರಾಜ ಕರಜಗಿ ಅವರು ಮಾತನಾಡಿದರು. ಮುಖ್ಯವಾಗಿ ಯುವಜನರು 
ದೈಹಿಕ, ಮಾನಸಿಕ, ನೈತಿಕ, ನಂಬಿಕೆ, ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದರೆ ಅವರು ಸುಲಭವಾಗಿ ಗುರಿಯನ್ನು ಮುಟ್ಟ ಬಲ್ಲರು ಎಂದು ಹಲವು ಉಪ ಕಥೆಗಳ ಮೂಲಕ ವಿವರಣೆ ನೀಡಿದರು.

ಮೊದಲು ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಅದಾದ ಮೇಲೆ ನಾವು ಮಾಡುವ ಕೆಲಸದಲ್ಲಿ ನಂಬಿಕೆ ಇಡಬೇಕು. ಇದರಿಂದ ನನಗೂ ಮತ್ತು ಪ್ರಂಪಂಚಕ್ಕೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇರಬೇಕು. ಆಗ ಯಶಸ್ಸು ಸಾಧಿಸಲು ಸಾಧ್ಯ ಎಂಬುದನ್ನು ಕರಜಗಿ ಅವರು ಸೊಗಸಾಗಿ ಹೇಳಿದರು. ಇದರ ಜತೆಗೆ  ನಂಬಿಕೆ ಬಗ್ಗೆ ಡಿ.ವಿ ಗುಂಡಪ್ಪ ಅವರ ಕಗ್ಗವನ್ನು ಉಲ್ಲೇಖಿಸಿ ತಾತ್ಪರ್ಯವನ್ನು ಹೇಳಿದರು.

ಒಂದು ಉಪ ಕಥೆ..
ಸೂಫಿ ಸಂತನೊಬ್ಬ ಧಾರ್ಮಿಕ ವಾತಾವರಣ ಇರುವ ಕುಟುಂಬವೊಂದರಲ್ಲಿ ಮದುವೆಯಾಗಿ ಮಡದಿಯನ್ನು ತನ್ನ ಊರಿಗೆ ಕರೆದುಕೊಂಡ ಹೋಗುತ್ತಾನೆ. ಆ ಸಂತನ ಊರಿಗೆ ಹೋಗಬೇಕಾದರೆ ನದಿಯನ್ನು ದಾಟಿ ಹೋಗಬೇಕು. ಸಣ್ಣ ದೋಣಿಯಲ್ಲಿ ಅಂಬಿಗನೊಂದಿಗೆ ಅವರು ಪ್ರಯಾಣ ಆರಂಭಿಸುತ್ತಾರೆ. ಸ್ವಲ್ಪ ದೂರ ಸಾಗಿದ ಮೇಲೆ ದೊಡ್ಡ ದೊಡ್ಡ ಅಲೆಗಳು ಎದುರಾಗುತ್ತವೆ. ಆಗ ಮಡದಿ ಮತ್ತು ಅಂಬಿಗ ಭಯಭೀತರಾದರು ಸೂಫಿ ಮಾತ್ರ ಯಾವ ಚಿಂತೆ ಇಲ್ಲದೆ ಅಗಸವನ್ನು ನೋಡುತ್ತಿರುತ್ತಾರೆ. ಈ ವೇಳೆ ಪತ್ನಿ ನಿಮಗೆ ಗಾಬರಿಯಾಗುತ್ತಿಲ್ಲವೇ ಎಂದು ಕೇಳಿದಾಗ, ಕೋಪಗೊಂಡು ಸೊಂಟದಲ್ಲಿರುವ ಚಾಕುವನ್ನು ಪತ್ನಿಯ ಕೊರಳ ಬಳಿ ಹಿಡಿದು ಈಗ ನಿನ್ನ ಕೊಲ್ಲುತ್ತೇನೆ ಎನ್ನುತ್ತಾನೆ. ಆಗ ಆಕೆ ಚಾಕು ಮೊನಚಾಗಿ ಇರಬಹುದು ಅದನ್ನು ಹಿಡಿದಿರುವ ಕೈ ನನ್ನ ಪ್ರೀತಿ ಮಾಡುತ್ತದೆ ಎಂಬುದು ನನಗೆ ಗೊತ್ತಿದೆ ಎನ್ನುತ್ತಾಳೆ.  ಆಗ ಸೂಫಿ ಹೇಳುತ್ತಾನೆ ಈ ಹೊತ್ತಿಗೆ ತೆರೆಗಳು ಭಯಂಕರವಾಗಿರಬಹುದು,ನಮ್ಮನು ಪ್ರೀತಿಸುವ ದೇವರಿಗೆ ತೆರೆಗಳನ್ನು ಕರಗಿಸುವ ಶಕ್ತಿ ಇದೆ ಎನ್ನುತ್ತಾನೆ. 

ನಮ್ಮ ಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ತಪ್ಪಾಗಿ ಬಿಂಬಿಸಲಾಗಿದೆ. ದೇವರ ಬಗ್ಗೆ ಭಯವನ್ನು ಸೃಷ್ಟಿ ಮಾಡಲಾಗಿದೆ ಎಂದು ಸ್ವಾಮಿವಿವೇಕಾನಂದರೆ ಹೇಳಿದ್ದಾರೆ. ಒಂದು ದಿನಕ್ಕೆ ಒಬ್ಬ ವ್ಯಕ್ತಿ ನಾಲ್ಕು ವರ್ಣಗಳಲ್ಲಿ ಇರುತ್ತಾನೆ...

1) ದೇವರಿಗೆ ಪೂಜಿಸಿದಾಗ– ಬ್ರ್ಯಾಹ್ಮಣನಾಗಿ
2) ಜಗಳ ಮಾಡುವಾಗ– ಕ್ಷೇತ್ರಿಯನಾಗಿ
3) ವ್ಯವಹಾರದಲ್ಲಿ ಚೌಕಾಶಿ ಮಾಡುವಾಗ–ವೈಶ್ಯನಾಗಿ
4) ಪರರ ಸೇವೆ ಮಾಡುವಾಗ– ಶೂದ್ರನಾಗಿ

 ಮತ್ತೊಬ್ಬರ ದುಖಕ್ಕೆ ಕರಗುವವನು ಮತ್ತು ಸದಾ ಕಾಲ ಜ್ಞಾನ ಪಡೆದುಕೊಳ್ಳುವವನೇ ಶೂದ್ರ ಎನ್ನುತ್ತಾರೆ ಕರಜಗಿ.

( ಗುರುರಾಜ ಕರಜಗಿ ಅವರ ಉಪನ್ಯಾಸದ ಆಯ್ದ ಭಾಗಗಳನ್ನು ಮಾತ್ರ ನೀಡಲಾಗಿದೆ. ಉಪನ್ಯಾಸದ ಪೂರ್ಣ ಪಾಠಕ್ಕೆ ಪ್ರಜಾವಾಣಿಯ ಯುಟ್ಯೂಬ್‌ ಚಾನೆಲ್‌ಗೆ ಭೇಟಿ ಕೊಡಿ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು