ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಬ್ಯಾಂಕಿಂಗ್‌ ವಹಿವಾಟು ಹೆಚ್ಚಳ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ನಿರೀಕ್ಷೆ
Last Updated 16 ಜೂನ್ 2018, 11:17 IST
ಅಕ್ಷರ ಗಾತ್ರ

ಮುಂಬೈ: ಪ್ರಸಕ್ತ ಹಣಕಾಸು ವರ್ಷದಲ್ಲಿ (2018–19) ಮೊಬೈಲ್‌ ಬ್ಯಾಂಕಿಂಗ್‌ ವಹಿವಾಟಿನ ಸಂಖ್ಯೆಯು 3,360 ಲಕ್ಷಕ್ಕೆ ಏರಿಕೆಯಾಗಲಿದ್ದು, ಒಟ್ಟಾರೆ ವಹಿವಾಟು ₹ 7.56 ಲಕ್ಷ ಕೋಟಿಗೆ ತಲುಪಲಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಅಂದಾಜಿಸಿದೆ.

‘ಬ್ಯಾಂಕ್‌ನಲ್ಲಿ, ಮೊಬೈಲ್‌ ಬ್ಯಾಂಕಿಂಗ್‌ ಸೌಲಭ್ಯಕ್ಕೆ ನೋಂದಾಯಿಸಿಕೊಂಡಿರುವ ಗ್ರಾಹಕರ ಸಂಖ್ಯೆಯು ಮಾರ್ಚ್‌ ಅಂತ್ಯದ ವೇಳೆಗೆ 3.05 ಕೋಟಿಗೆ ತಲುಪಿದೆ’ ಎಂದು ಎಸ್‌ಬಿಐನ ಉಪ ವ್ಯವಸ್ಥಾಪಕ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರಾ ಹೇಳಿದ್ದಾರೆ.

‘ದೂರಸಂಪರ್ಕ ವಲಯದಲ್ಲಿನ ಸ್ಪರ್ಧಾತ್ಮಕತೆಯಿಂದ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚುತ್ತಿದೆ. ವೈ–ಫೈ, ತ್ರಿಜಿ, 4ಜಿ ತಂತ್ರಜ್ಞಾನಗಳ ವ್ಯಾಪಕ ಲಭ್ಯತೆಯಿಂದ ಬ್ಯಾಂಕಿಂಗ್‌ ವಹಿವಾಟು ಹೆಚ್ಚು ಸುಲಭಗೊಂಡಿದೆ. ಮೊಬೈಲ್‌ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಎಸ್‌ಬಿಐ ಮುನ್ನಡೆ ಕಾಯ್ದುಕೊಂಡಿದೆ’ ಎಂದೂ ಅವರು ಹೇಳಿದ್ದಾರೆ.

ಹಿಂದಿನ ವರ್ಷ ₹ 6 ಲಕ್ಷ ಕೋಟಿ ಮೊತ್ತದ 2,706 ಲಕ್ಷದಷ್ಟು ಮೊಬೈಲ್‌ ಬ್ಯಾಂಕಿಂಗ್‌ ವಹಿವಾಟುಗಳು ನಡೆದಿದ್ದವು.

‘ಬ್ಯಾಂಕ್‌ನ ಪರ್ಯಾಯ ವಹಿವಾಟು ವಿಧಾನಗಳಾದ ಇಂಟರ್‌ನೆಟ್‌ ಬ್ಯಾಂಕಿಂಗ್‌, ಪಾಯಿಂಟ್‌ ಆಫ್‌ ಸೇಲ್‌, ಮೊಬೈಲ್ ಬ್ಯಾಂಕಿಂಗ್‌ ಮತ್ತು ಎಟಿಎಂಗಳ ಮೂಲಕ ಶೇ 80ರಷ್ಟು ವಹಿವಾಟು ನಡೆಯುತ್ತಿದೆ. ಹೀಗಾಗಿ ಬ್ಯಾಂಕ್‌ ಶಾಖೆಗಳಲ್ಲಿನ ವಹಿವಾಟು ಶೇ 20ರಷ್ಟಕ್ಕೆ ಇಳಿದಿದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ರಜನೀಶ್ ಕುಮಾರ್ ಅವರು ಇತ್ತೀಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT