ಬುಧವಾರ, ಸೆಪ್ಟೆಂಬರ್ 30, 2020
21 °C

ಐ.ಟಿ. ರಿಟರ್ನ್ಸ್‌ ಸಲ್ಲಿಸಲು ಸಜ್ಜಾಗಿ: ಅದಕ್ಕೂ ಮೊದಲು ಈ ಅಂಶಗಳನ್ನು ಗಮನಿಸಿ

ಅವಿನಾಶ್ ಕೆ.ಟಿ. Updated:

ಅಕ್ಷರ ಗಾತ್ರ : | |

2019-20ನೇ ಹಣಕಾಸು ವರ್ಷದ ಆದಾಯ ತೆರಿಗೆ ಲೆಕ್ಕಪತ್ರ ವಿವರ (ಐಟಿಆರ್) ಸಲ್ಲಿಸಲು ಈ ವರ್ಷದ ನವೆಂಬರ್ 30 ಕೊನೆಯ ದಿನ. ನಮಗೆ ಎಷ್ಟು ಆದಾಯ ಬಂದಿದೆ? ಯಾವ್ಯಾವ ಸೆಕ್ಷನ್‌ಗಳ ಅಡಿ ನಾವು ಉಳಿತಾಯ ಮಾಡಿದ್ದೇವೆ? ಯಾವ್ಯಾವ ವಿನಾಯಿತಿಗಳನ್ನು ಪಡೆದಿದ್ದೇವೆ? ಹೀಗೆ ಆದಾಯ ಮತ್ತು ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಸಂಪೂರ್ಣ ವಿವರಗಳನ್ನು ಐ.ಟಿ. ರಿಟರ್ನ್ಸ್‌ನಲ್ಲಿ ನಮೂದಿಸಬೇಕಾಗುತ್ತದೆ. ಕೊನೆ ಗಳಿಗೆಯಲ್ಲಿ ತರಾತುರಿಯಲ್ಲಿ ಆದಾಯ ತೆರಿಗೆ ವಿವರ ಸಲ್ಲಿಸಲು ಅಣಿಯಾಗುವುದಕ್ಕಿಂತ ಈಗಲೇ ಪೂರ್ವ ತಯಾರಿ ಮಾಡಿಕೊಳ್ಳುವುದು ಉತ್ತಮ.


ಅವಿನಾಶ್ ಕೆ.ಟಿ.

ಅಗತ್ಯ ದಾಖಲೆಗಳು 

1) ಫಾರಂ 16: ಉದ್ಯೋಗ ನೀಡಿರುವ ಕಂಪನಿಯು ತನ್ನ ನೌಕರನಿಗೆ ಕಡ್ಡಾಯವಾಗಿ ನೀಡಬೇಕಾದ ಮಹತ್ವದ ದಾಖಲೆ ಫಾರಂ-16. ಫಾರಂ-16ಅನ್ನು ಕಡ್ಡಾಯವಾಗಿ ಎಲ್ಲಾ ಕಂಪನಿಗಳು ಉದ್ಯೋಗಿಗಳಿಗೆ ನಿಗದಿತ ಸಮಯದೊಳಗೆ ನೀಡಬೇಕು ಎಂಬ ನಿಯಮವಿದೆ. ಫಾರಂ 16ನಲ್ಲಿ ಪಾರ್ಟ್ ಎ ಮತ್ತು ಪಾರ್ಟ್ ಬಿ ಎಂಬ ಎರಡು ವಿಭಾಗಗಳಿರುತ್ತವೆ. ನೌಕರನ ಆದಾಯದ ವಿವರ, ಉಳಿತಾಯ ಸೇರಿ ಮೂಲದಲ್ಲೇ ತೆರಿಗೆ ಕಡಿತದ (ಟಿಡಿಎಸ್) ವಿವರ ಇದರಲ್ಲಿರುತ್ತದೆ.

2) ಫಾರಂ 26ಎಎಸ್: ಫಾರಂ 26 ಎಎಸ್ ಎಂಬುದು ನಿಮ್ಮ ಪರವಾಗಿ ಕಡಿತಗೊಳಿಸಲಾದ ತೆರಿಗೆಗಳು ಮತ್ತು ನೀವು ಪಾವತಿಸಿದ ತೆರಿಗೆಗಳ ವಿವರವಾಗಿದೆ. ಇದನ್ನು ಆದಾಯ ತೆರಿಗೆ ಇಲಾಖೆ ಒದಗಿಸುತ್ತದೆ. ಪ್ಯಾನ್ ಕಾರ್ಡ್ ಬಳಸಿ, ಎಲ್ಲಾ ತೆರಿಗೆದಾರರು ಈ ಮಾಹಿತಿಯನ್ನು ಆದಾಯ-ತೆರಿಗೆ ವೆಬ್‌ಸೈಟ್‌ನಿಂದ ಸುಲಭವಾಗಿ ಪರಿಶೀಲಿಸಬಹುದು. ನಿಮ್ಮ ಪರವಾಗಿ ಕಡಿತಗೊಳಿಸಿದ ತೆರಿಗೆಯ ವಿವರಗಳು, ತೆರಿಗೆದಾರರು ಪಾವತಿ ಮಾಡಿದ ತೆರಿಗೆಯ ವಿವರಗಳು ಮತ್ತು ಹಣಕಾಸು ವರ್ಷದಲ್ಲಿ ಪಡೆದ ತೆರಿಗೆ ಮರುಪಾವತಿಯನ್ನು (TAX REFUND) ತೋರಿಸುತ್ತದೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು