ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಿಆರ್‌ ವಿಶ್ಲೇಷಣೆ : ಕ್ರಿಮಿನಲ್ ಹಿನ್ನೆಲೆಯ 77 ಶಾಸಕರು

Last Updated 16 ಮೇ 2018, 19:35 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನಸಭೆಗೆ ಆಯ್ಕೆಯಾದ 221 ನೂತನ ಶಾಸಕರ ಪೈಕಿ 77 (ಶೇ 35) ಮಂದಿ ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಈ ಪೈಕಿ 54 ಮಂದಿ ಗಂಭೀರ ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿದ್ದಾರೆ. ಇವರು ಕೊಲೆ ಯತ್ನ, ಅಪಹರಣ ಪ‍್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ಶಾಸಕರ ಅಪರಾಧ ಹಿನ್ನೆಲೆ, ಹಣಕಾಸು, ಶಿಕ್ಷಣ, ಲಿಂಗ ಹಾಗೂ ಇತರ ವಿಷಯಗಳ ಬಗ್ಗೆ ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ವಿಶ್ಲೇಷಣೆ ನಡೆಸಿ ವರದಿ ಪ್ರಕಟಿಸಿದೆ.

ಅಭ್ಯರ್ಥಿಗಳು ನಾಮಪತ್ರದ ಜತೆಗೆ ಸಲ್ಲಿಸಿದ ಪ್ರಮಾಣಪತ್ರದ ಆಧಾರದಲ್ಲಿ ಈ ವಿಶ್ಲೇಷಣೆ ನಡೆಸಲಾಗಿದೆ. ನಂಜನಗೂಡು ಶಾಸಕ ಬಿ.ಹರ್ಷವರ್ಧನ ಅವರ ಪ್ರಮಾಣಪತ್ರ ಸರಿಯಾಗಿ ಸ್ಕ್ಯಾನ್‌ ಆಗಿರದ ಕಾರಣ ಅದನ್ನು ವಿಶ್ಲೇಷಣೆ ನಡೆಸಿಲ್ಲ. 2013ರಲ್ಲಿ ಕ್ರಿಮಿನಲ್‌ ಹಿನ್ನೆಲೆಯ 74 ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ಬಿಜೆಪಿಯ 29, ಕಾಂಗ್ರೆಸ್‌ನ 17 ಹಾಗೂ ಜೆಡಿಎಸ್‌ನ 8 ಶಾಸಕರು ಗಂಭೀರ ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿದ್ದಾರೆ.

ನಾಲ್ವರು ಶಾಸಕರು ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರು ಶಾಸಕರು ಪ್ರಚೋದನಾಕಾರಿ ಭಾಷಣದ ಆರೋಪ ಎದುರಿಸುತ್ತಿದ್ದಾರೆ.

ಜಿಗಿದ ಸಂಪತ್ತು: 2013ರಲ್ಲಿ ಶಾಸಕರ ಸಂಪತ್ತು ಸರಾಸರಿ ₹23.54 ಕೋಟಿ ಆಗಿತ್ತು. ಈಗ ಅದು ₹34.59
ಕೋಟಿಗೆ ಏರಿದೆ.

ಈ ಸಲ 94 ಶಾಸಕರು ಪುನರಾಯ್ಕೆಯಾಗಿದ್ದಾರೆ. 2013ರಲ್ಲಿ ಅವರ ಸರಾಸರಿ ಆಸ್ತಿ ₹28.07 ಕೋಟಿ ಇತ್ತು. ಈಗ ಅದು ₹53.40 ಕೋಟಿಗೆ ಏರಿದೆ. ಐದೇ ವರ್ಷಗಳಲ್ಲಿ ಅವರ ಸಂಪತ್ತಿನ ಪ್ರಮಾಣ ಶೇ 90ರಷ್ಟು ಜಾಸ್ತಿಯಾಗಿದೆ.

ಯುವ ಶಾಸಕರು: 16 ಶಾಸಕರು 25 ರಿಂದ 40 ವರ್ಷದೊಳಗಿನವರು. 138 ಮಂದಿ 41ರಿಂದ 60 ವರ್ಷದೊಳಗಿನವರು. 61ರಿಂದ 80 ವರ್ಷದವರ ಸಂಖ್ಯೆ 64 ಇದೆ. ಮೂವರು ಶಾಸಕರ ವಯಸ್ಸು 80 ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT