ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟೆರಿ’ಗೆ ಪಚೌರಿ ಕಾಲಿಡುವಂತಿಲ್ಲ

Last Updated 26 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಹಿಳಾ ಸಹೋ­ದ್ಯೋ­ಗಿಗೆ ಲೈಂಗಿಕ ಕಿರು­ಕುಳ ನೀಡಿದ ಆರೋಪ ಎದುರಿ­ಸುತ್ತಿರುವ ‘ಟೆರಿ’ ಮಹಾನಿರ್ದೇಶಕ ರಾಜೇಂದ್ರ ಕುಮಾರ್ ಪಚೌರಿ ಅವರು ಸಂಸ್ಥೆಗೆ ಕಾಲಿಡದಂತೆ ಗುರುವಾರ ತಡೆಯೊ­ಡ್ಡಿದ ದೆಹಲಿ ನ್ಯಾಯಾ­ಲಯ, ಅವರ ಬಂಧನಕ್ಕೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಮಾರ್ಚ್‌ 27ವರೆಗೂ ವಿಸ್ತರಿಸಿತು.

ಮಧ್ಯಂತರ ತಡೆಯಾಜ್ಞೆ ವಿಸ್ತರಿಸಿದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ರಾಜ್‌ಕುಮಾರ್‌ ತ್ರಿಪಾಠಿ ಅವರು, ಮಹಿಳಾ ಸಹೋದ್ಯೋಗಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿರುವ ‘ಟೆರಿ’ ಸಿಬ್ಬಂದಿ ಹಾಗೂ ದೂರುದಾರರನ್ನು ಸಂಪರ್ಕಿ­ಸ­ದಂತೆಯೂ ಪಚೌರಿ ಅವರಿಗೆ ನಿರ್ಬಂಧ ಹೇರಿದರು.

‘ಆರೋಪಿಯು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ತನಿಖೆ ಅವಧಿಯಲ್ಲಿ ‘ಟೆರಿ’ ಕಚೇರಿ ಪ್ರವೇಶಿಸ­ಬಾರದು, ಸಂಸ್ಥೆಯ ಸಿಬ್ಬಂದಿ­ಯನ್ನಾ­ಗಲಿ ದೂರು­ದಾರರ­ನ್ನಾಗಲಿ ಸಂಪರ್ಕಿ­ಸ­­ಬಾರದು ಹಾಗೂ ಸಾಕ್ಷಿಗಳನ್ನು ತಿರುಚಬಾರದು’ ಎಂದು ನ್ಯಾಯಾಧೀಶರು ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT