ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿಯ ಹಕ್ಕು ಮುಕ್ತವಾಗಿದೆಯೆ?

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಮಾಧ್ಯಮಗಳು ಅದೆಷ್ಟು ಮುಕ್ತ? ತನ್ನ ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವಲ್ಲಿ ವ್ಯಕ್ತಿಯೊಬ್ಬ ಅದೆಷ್ಟರಮಟ್ಟಿಗೆ ಸಮರ್ಥ.. ಇತ್ಯಾದಿ ಪ್ರಶ್ನೆಗಳು ಈಚೆಗೆ ನಾನು ಕೇಳಿದ ಮೂರು ಭಾಷಣಗಳ ನಂತರ ಇನ್ನಷ್ಟು ಕಾಡತೊಡಗಿವೆ. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪತ್ರಿಕಾ ಮಂಡಳಿಯ ಮುಖ್ಯಸ್ಥರಾಗಿರುವ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರ ಭಾಷಣಗಳು ಅಭಿವ್ಯಕ್ತಿಯ ಹಕ್ಕಿನ ಕುರಿತಾದ ವಿಭಿನ್ನ ಆಯಾಮಗಳ ಬಗ್ಗೆ ಚಿಂತಿಸುವಂತೆ ಮಾಡಿವೆ.
 
ಖ್ಯಾತ ಬರಹಗಾರ ಸಲ್ಮಾನ್ ರಶ್ದಿ ಅವರು ಜೀವ ಬೆದರಿಕೆಯಿಂದಾಗಿ ಜೈಪುರದಲ್ಲಿ ಈಚೆಗೆ ನಡೆದ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳಲಿಲ್ಲ. ಪುಣೆಯಲ್ಲಿ ಕಾಶ್ಮೀರ ಕುರಿತಾದ ಸಾಕ್ಷ್ಯಚಿತ್ರವೊಂದರ ಪ್ರದರ್ಶನವನ್ನು ಬಿಜೆಪಿಯ ವಿದ್ಯಾರ್ಥಿ ಘಟಕವೊಂದು ಪ್ರತಿಭಟನೆಯ ಮೂಲಕ ನಿಲ್ಲಿಸಿತು. ಈ ಘಟನೆಗಳೂ ನನ್ನನ್ನು ಮತ್ತಷ್ಟು ಯೋಚಿಸುವಂತೆ ಮಾಡಿವೆ.

ಉಪರಾಷ್ಟ್ರಪತಿ ಮತ್ತು ಪ್ರಧಾನಿಯವರ ಭಾಷಣಗಳ ಬಗ್ಗೆ ಹೇಳುವುದಾದರೆ, ಇವರಿಬ್ಬರೂ ಮಾಧ್ಯಮಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಒತ್ತಿ ಹೇಳಿದ್ದಾರೆ. ಹೆಚ್ಚು ಜನರನ್ನು ಬಲು ಬೇಗನೆ ತಲುಪುವ ನಿಟ್ಟಿನಲ್ಲಿ ಜನರನ್ನು ಭಾವೋದ್ರೇಕಗೊಳಿಸುವ ಸುದ್ದಿಗಳಿಗೇ ಮಹತ್ವ ನೀಡುವುದರ ಬಗ್ಗೆ ಪ್ರಸ್ತಾಪಿಸಿ ಅವರು ಈ ಮಾತುಗಳನ್ನು ಹೇಳಿದ್ದರು.
 
ಇವರಿಬ್ಬರೂ ಮಾಧ್ಯಮಗಳ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷ ನಿಯಂತ್ರಣ ಸಾಧಿಸುವ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಆದರೆ ಖಟ್ಜು ಅವರು ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸುವಂತಹ ಕೆಲವು ನಿಯಮಗಳನ್ನು ಹೇರಬೇಕಿದೆ, ಸ್ವನಿಯಂತ್ರಣಗಳು ಸಾಕಾಗುವುದಿಲ್ಲ ಎಂಬ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ.

ಸ್ವಾತಂತ್ರ್ಯಾನಂತರ 1975-77ರ ತುರ್ತು ಪರಿಸ್ಥಿತಿಯ ದಿನಗಳಲ್ಲಿ ಹೇರಲಾದ ಸೆನ್ಸಾರ್ ಹೊರತು ಪಡಿಸಿದರೆ, ಕೇಂದ್ರವು ಮಾಧ್ಯಮದ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸುವ ಕೆಲಸಗಳನ್ನು ಮಾಡಿದ್ದು ತೀರಾ ಕಡಿಮೆ. ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು 1950ರ ಡಿಸೆಂಬರ್ 3ರಂದು ಅಖಿಲ ಭಾರತ ಪತ್ರಿಕಾ ಸಂಪಾದಕರುಗಳ ಅಧಿವೇಶನದಲ್ಲಿ ನೀಡಿದ್ದ ಆಶ್ವಾಸನೆಯನ್ನೇ ಕೇಂದ್ರ ಸರ್ಕಾರ ಪಾಲಿಸಿಕೊಂಡು ಬಂದಿದೆ.

`ನಾನು ಸಂಪೂರ್ಣವಾದ ಪತ್ರಿಕಾ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತೇನೆ. ಅದರ ದುರುಪಯೋಗದ ಅರಿವಿದ್ದರೂ, ನಿಯಂತ್ರಿತ ಮಾಧ್ಯಮಕ್ಕಿಂತ ಮುಕ್ತ ಮಾಧ್ಯಮವಿರಬೇಕೆಂಬುದನ್ನೇ ನಾನು ಇಷ್ಟಪಡುತ್ತೇನೆ~ ಎಂದು ಅಂದು ನೆಹರು ಅಭಯ ನೀಡಿದ್ದರು.

ನ್ಯಾಯಮೂರ್ತಿ ಖಟ್ಜು, ಈ ನಡುವೆ ಇನ್ನೊಂದು ವರಸೆ ತೆಗೆದಿದ್ದಾರೆ. ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡುವುದಕ್ಕಾಗಿಯೇ ಪತ್ರಿಕಾ ಮಂಡಳಿಯನ್ನು ಸ್ಥಾಪಿಸಿದ್ದು ಎಂಬ ಸತ್ಯವನ್ನು ಅರಿತುಕೊಳ್ಳದೆಯೇ ಅವರು ಮಾತನಾಡಿದಂತಿದೆ. ಅವರ ಭಾಷಣ ಮಾಧ್ಯಮಗಳ ಏಳುಬೀಳು, ಪರಂಪರೆ ಇತ್ಯಾದಿಗಳೆಲ್ಲದರ ಬಗ್ಗೆ ಕಡಿಮೆ ಅರಿವು ಹೊಂದಿರುವುದರ ಸಂಕೇತದಂತಿದೆ.
 
ತಾವು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಪತ್ರಕರ್ತರು ಅನಕ್ಷರಸ್ಥರು ಇತ್ಯಾದಿ ಹೇಳಿಕೆಗಳನ್ನು ನೀಡಿ ಆ ಸಮುದಾಯದಿಂದಲೇ ದೂರವಾಗಿ ಬಿಟ್ಟಿದ್ದಾರೆ. ಒಬ್ಬನಿಗೆ ಬರವಣಿಗೆ ಗೊತ್ತಿಲ್ಲದಿದ್ದರೆ, ಚೆನ್ನಾಗಿ ಬರೆಯಲು ಬರದಿದ್ದರೆ, ಸುದ್ದಿಯ ಜಾಡು ಹಿಡಿಯವ ಸಾಮರ್ಥ್ಯ ಇಲ್ಲದಿದ್ದರೆ, ವಿಶ್ಲೇಷಣಾ ಶಕ್ತಿ ಇಲ್ಲದಿದ್ದರೆ ಆತ ಪತ್ರಕರ್ತನಾಗಲು ಸಾಧ್ಯವಿಲ್ಲ. ಭಾರತ ಕಂಡ ಅಗ್ರಗಣ್ಯ ಸಂಪಾದಕರುಗಳಲ್ಲಿ ಒಬ್ಬರಾದ ಎಸ್.ಮುಳಗಾಂವ್ಕರ್ ಪದವೀಧರರಲ್ಲ ಎಂಬುದನ್ನು ನಾವು ನೆನಪಲ್ಲಿಟ್ಟುಕೊಳ್ಳ ಬೇಕಾಗುತ್ತದೆ.

ನನಗೆ ಅದಷ್ಟೇ ಚಿಂತೆಯಲ್ಲ, ಇವತ್ತು ಮಾಧ್ಯಮವು ವ್ಯವಸ್ಥೆಯ ಭಾಗವಾಗುತ್ತಾ ಸಾಗಿದೆಯಲ್ಲ ಎಂಬ ಸಂಗತಿ ನನ್ನನ್ನು ತೀವ್ರವಾಗಿ ಕಾಡತೊಡಗಿದೆ. ಮುಕ್ತ ಸಮಾಜದಲ್ಲಿ ಮಾಧ್ಯಮವು ಮಾಹಿತಿಗಳನ್ನು ಯಾವುದೇ ಭಯ ಆತಂಕವಿಲ್ಲದೆ ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿ ಹೊಂದಿದೆ.
 
ಮಾಧ್ಯಮ ಅಂದರೆ ಕೇವಲ ಸರ್ಕಾರದ ಕರಪತ್ರಗಳನ್ನು ಅಥವಾ ಅಧಿಕೃತ ಹೇಳಿಕೆಗಳನ್ನು ಪ್ರಕಟಿಸುವ ಅಂಗವಾದರೆ, ಅಲ್ಲಿ ಹುಳುಕುಗಳನ್ನು ಹುಡುಕುವ ಸಂದರ್ಭ ಬರುವುದೇ ಇಲ್ಲ. ಇವೆಲ್ಲದರ ನಡುವೆ ಮಾಧ್ಯಮ ಕ್ಷೇತ್ರವೂ ಹೆಚ್ಚು ಸುಧಾರಣೆ ಕಾಣುತ್ತಲೇ ಬಂದಿದೆ. ಅತಿ ಜಾಣತನ, ಅತಿ ನಯವಂತಿಕೆಯನ್ನೂ ಮೈಗೂಡಿಸಿಕೊಂಡಿದೆ. ಇವೆಲ್ಲದರ ನಡುವೆಯೂ ಈ ಕ್ಷೇತ್ರವೊಂದು ಉದ್ಯಮವಾಗಿ ಪರಿವರ್ತನೆಗೊಳ್ಳುತ್ತಾ, ಕಾರ್ಪೊರೇಟ್ ವಲಯದ ಅಭಿಪ್ರಾಯಗಳಿಗೆ ಧ್ವನಿಯಾಗತೊಡಗಿರುವುದೊಂದು ಅಪಾಯದ ಕರೆಗಂಟೆಯಾಗಿದೆ.

ಈ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳಿಗೆ ಏರಿ ಕುಳಿತವರು ದೇಶಕ್ಕೆ ಏನು ಹೇಳಬೇಕು, ಏನು ಮಾಡಬೇಕು ಎಂದು ಹೇಳಲು ತಾವು ಮಾತ್ರ ಸಮರ್ಥರು ಎಂದು ಯೋಚಿಸುತ್ತಿರುವುದೂ ಇದೆ. ಅವರಿಗೆ ಇಷ್ಟವಾಗದ ಸುದ್ದಿಗಳು ಪ್ರಕಟವಾಗುವುದನ್ನು ಕೆಲವೊಮ್ಮೆ ಅವರು ಇಷ್ಟ ಪಡುವುದಿಲ್ಲ.
 
ಕೆಲವೊಮ್ಮೆ ಅಂತಹ ಸುದ್ದಿಗಳಿಗೆ ವಿರುದ್ಧ ಧೋರಣೆ ತಳೆಯುವುದುಂಟು ಇಲ್ಲವೇ ಅದು ಕುಚೋದ್ಯದ್ದು ಎಂದು ತಳ್ಳಿಹಾಕುವುದುಂಟು. ಕೆಲವೊಮ್ಮೆ ಪ್ರಕಟಿತ ಸುದ್ದಿಗಳು ಸರಿಯಲ್ಲ ಎಂದು ಕಂಡು ಬಂದು, ಅದನ್ನು ಸುಮ್ಮನೆ ಅಲ್ಲಗಳೆಯಲೂ ಸಾಧ್ಯವಿಲ್ಲದಿದ್ದರೆ `ಏನನ್ನು ಹೇಳಬೇಕಿತ್ತೋ ಅದನ್ನು ಸಮರ್ಪಕವಾಗಿ ಹೇಳಲಾಗಲಿಲ್ಲ, ಅಷ್ಟೇ~ ಎಂದು ತಿಪ್ಪೆ ಸಾರಿಸಿಬಿಡುತ್ತಾರೆ.

ಪತ್ರಿಕಾ ಮಂಡಳಿ ಅಸ್ತಿತ್ವಕ್ಕೆ ಬಂದ ಆರಂಭದ ದಿನಗಳಲ್ಲಿ ನಾನು ಅದರಲ್ಲಿದ್ದೆ. ಆಗ ಈ ಮಂಡಳಿಯು ಹಲ್ಲಿಲ್ಲದಂತೆಯೇ ಎಂದು ಎಲ್ಲರೂ ಭಾವಿಸಿದ್ದರು. ಇದು ಸಮಾನ ಮನಸ್ಕರೆಲ್ಲಾ ಒಗ್ಗೂಡಿ ಸ್ಥಾಪಿಸಿಕೊಂಡ ಘಟಕದಂತಿದ್ದು, ತಮ್ಮನ್ನೇ ನ್ಯಾಯನಿಷ್ಠುರ ವಿಮರ್ಶೆಗೆ ಒಡ್ಡಿಕೊಳ್ಳುವಂತಹದ್ದಾಗಿತ್ತು. ಆದರೆ ಈ ಮಂಡಳಿಯು ಶಿಕ್ಷೆ ನೀಡುವ ಅಧಿಕಾರವನ್ನೂ ಹೊಂದಿರಬೇಕೆಂಬಂತೆ ಖಟ್ಜು ಅವರು ವಾದ ಮಂಡಿಸುತ್ತಿರುವಂತಿದೆ.
 
ಇದು ಮಂಡಳಿಯ ಮೂಲ ಪರಿಕಲ್ಪನೆಯನ್ನೇ ಪ್ರಶ್ನಿಸುವಂತಹದ್ದಾಗಿದೆ. ಇದೇನೂ ನ್ಯಾಯಾಲಯ ಅಲ್ಲ ತಾನೆ. ಅಂತಹ ನ್ಯಾಯಾಲಯಗಳು ಬಹಳಷ್ಟಿವೆ. ಬೇಕಿದ್ದರೆ ಮಾಧ್ಯಮಕ್ಕೂ ಒಂದನ್ನು ಸೃಷ್ಟಿಸಬಹುದೇನೊ. ಮಾಧ್ಯಮಗಳಲ್ಲಿನ ಅತಿರೇಕ ಅಥವಾ ತಪ್ಪುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಂಡಳಿಯ ಸದಸ್ಯರು, ಮಾಧ್ಯಮ ಸಂಸ್ಥೆಗಳ ಮಾಲೀಕರು, ಸಂಪಾದಕರು, ಪತ್ರಕರ್ತರೆಲ್ಲಾ ಸೇರಿ ಪ್ರಯತ್ನಿಸಬೇಕು ಎಂಬುದೇ ಪತ್ರಿಕಾ ಮಂಡಳಿಯ ಮೂಲೋದ್ದೇಶ ಎನ್ನುವುದನ್ನು ನಾವು ಮರೆಯುವಂತಿಲ್ಲ.

ಪತ್ರಿಕೆಯೊಂದರ ವಿರುದ್ಧ ಮಂಡಳಿಯು ನೀಡಿದ ತೀರ್ಪನ್ನು ಆ ಪತ್ರಿಕೆಯೇ ಪ್ರಕಟಿಸದಿರುವಂತಹ ಪರಿಸ್ಥಿತಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಇಂತಹ ಚರ್ಚೆಗಳಿಗೆ ಗ್ರಾಸ ಒದಗಿಸಿದಂತಾಗಿದೆ. ಸಂಬಂಧಪಟ್ಟ ಪತ್ರಿಕೆಯು ಎಲ್ಲಿ ಪತ್ರಿಕಾ ಧರ್ಮವನ್ನು ಉಲ್ಲಂಘಿಸಿದೆ ಎಂಬುದನ್ನು ಬೆಟ್ಟು ಮಾಡಿ ತೋರಿಸಿದರೂ ಆ ಪತ್ರಿಕೆಯು ಆ ಬಗ್ಗೆ ನಿರ್ಲಕ್ಷ್ಯ ತಾಳಿತು. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಮಂಡಳಿಯ ನಿರ್ಧಾರಗಳು ತನ್ನ ಪತ್ರಿಕೆಗೆ ಪ್ರತಿಕೂಲವಾಗಿದ್ದರೂ ಅಂತಹ ತೀರ್ಮಾನಗಳನ್ನು ಆ ಪತ್ರಿಕೆಯು ಪ್ರಕಟಿಸುವುದನ್ನು ಕಡ್ಡಾಯ ಮಾಡಬೇಕೆನ್ನುವುದು ನನ್ನ ಸ್ಪಷ್ಟ ನಿಲುವು.

ಪತ್ರಿಕಾ ಮಂಡಳಿಯು ಅನಿವಾರ್ಯವಾಗಿ ವಾರ್ತಾ ಮತ್ತು ಪ್ರಸಾರ ಇಲಾಖೆಯ ಭಾಗದಂತೆ ಕಂಡು ಬಂದಿದೆ ಎಂಬುದನ್ನೂ ನಾವು ಹಿಂದಿನ ನೆನಪುಗಳನ್ನು ಕೆದಕಿದಾಗ ಕಂಡು ಬರುತ್ತದೆ ಎಂಬುದನ್ನು ಖಟ್ಜು ಅರಿಯಬೇಕು. ಪತ್ರಿಕಾ ಮಂಡಳಿಯು ತುರ್ತು ಪರಿಸ್ಥಿತಿಯ ಕಾಲದಲ್ಲಿ ತೀರಾ ಹೀನಾಯ ಸ್ಥಿತಿಗೆ ಇಳಿದಿತ್ತು.
 
ಆಗ ವಾರ್ತಾ ಮತ್ತು ಪ್ರಚಾರ ಖಾತೆ ಸಚಿವ ವಿ.ಸಿ. ಶುಕ್ಲಾ ಅವರ `ಆಜ್ಞಾಪಾಲಕ~ರೊಬ್ಬರು ಪತ್ರಿಕಾ ಮಂಡಳಿಯ ಮುಖ್ಯಸ್ಥರಾಗಿದ್ದರು. ಆ ದಿನಗಳಲ್ಲೇ `ಹಿಂದೂಸ್ತಾನ್ ಟೈಮ್ಸ~ ಪತ್ರಿಕೆಯ ಸಂಪಾದಕ ಸ್ಥಾನದಿಂದ ಜಾರ್ಜ್ ವರ್ಗೀಸ್ ಅವರನ್ನು ಕಿತ್ತು ಹಾಕಲಾಗಿತ್ತು. ಆ ಬಗ್ಗೆ ಮಂಡಳಿಯು ತನ್ನ ನಿರ್ಧಾರ ನೀಡುವ ಮೊದಲೇ ಅದು ರದ್ದಾಗಿತ್ತು.

ಆ ನಂತರ ಕೂಡಾ ಪತ್ರಿಕಾ ಮಂಡಳಿಯು ತನ್ನ ಸ್ವತಂತ್ರ ಸ್ಥಾನಮಾನಕ್ಕೆ ತಕ್ಕಂತೆ ಕೆಲವೊಮ್ಮೆ ನಡೆದುಕೊಂಡಿರದ ನಿದರ್ಶನಗಳಿವೆ. `ಕಾಸಿಗಾಗಿ ಸುದ್ದಿ~ಗೆ ಸಂಬಂಧಿಸಿದಂತೆ ಹಲವು ದೂರುಗಳು ಮಂಡಳಿಯ ಎದುರು ಬಂದವು. ಮಾಧ್ಯಮ ಕ್ಷೇತ್ರದಲ್ಲಿ ಅತ್ಯಂತ ಪವಿತ್ರವೆಂದೇ ಪರಿಗಣಿಸಲಾಗುವ ಸುದ್ದಿ ವಿಭಾಗಗಳು ಕಲುಷಿತಗೊಂಡ ನಿದರ್ಶನಗಳು ಕಾಣತೊಡಗಿದವು.

ಚುನಾವಣಾ ಪ್ರಚಾರದ ವೇಳೆ ಹಣ ಕೊಡುವ ಅಭ್ಯರ್ಥಿಗಳ ಪರವಾಗಿ ಸುದ್ದಿ ವಿಭಾಗಗಳಲ್ಲೇ ಸಕಾರಾತ್ಮಕ ಸುದ್ದಿಯನ್ನು ತುಂಬತೊಡಗಿದ ಘಟನೆಗಳು ನಡೆಯತೊಡಗಿದವು. ಮಂಡಳಿಯ ವರದಿಯು ಮಾಧ್ಯಮ ಸಂಸ್ಥೆಗಳ ಮಾಲೀಕರ ಒತ್ತಡದ ಮೇರೆಗೆ ಮೂಲೆಗುಂಪಾಯಿತು. ಖಟ್ಜು ಅವರು `ಕಾಸಿಗಾಗಿ ಸುದ್ದಿ~ ವಿರುದ್ಧ ಧ್ವನಿ ಎತ್ತಿರುವುದು ನಿಜ, ಆದರೆ ಮಂಡಳಿಯಲ್ಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ ಎಂಬುದನ್ನು ಅವರು ಅರಿಯಬೇಕು.

ಸಲ್ಮಾನ್ ರಶ್ದಿ ವಿಷಯಕ್ಕೆ ಬರುವುದಾದರೆ, ಆತ ಜೀವಬೆದರಿಕೆಯ ಕಾರಣದಿಂದಲೇ ಜೈಪುರಕ್ಕೆ ಬರಲಿಲ್ಲ. ಸರ್ಕಾರವಂತೂ ಆತನ ಭದ್ರತೆಗೆ ಸಂಬಂಧಿಸಿದಂತೆ ಯಾವುದೇ ಒಂದು ಖಚಿತ ನಿಲುವು ತಳೆಯಲೇ ಇಲ್ಲ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಕೆಲವು ಮೂಲಭೂತವಾದಿಗಳು ರಶ್ದಿಯ `ಸೆಟಾನಿಕ್ ವರ್ಸಸ್~ ಕೃತಿಯನ್ನು ಟೀಕಿಸುವ ಮೂಲಕ ಇಡೀ ಮುಸ್ಲಿಂ ಸಮುದಾಯದ ಬಗ್ಗೆಯೇ ಬೇರೆಯೇ ಅಭಿಪ್ರಾಯ ಮೂಡುವಂತಾಯಿತು. ಹಿಂದೂಗಳ ಕೆಲವು ವಿಪರೀತಗಳ ಬಗ್ಗೆ ಧ್ವನಿ ಎತ್ತುವ ಉದಾರವಾದಿ ಮುಸಲ್ಮಾನರು ರಶ್ದಿ ವಿಷಯಕ್ಕೆ ಸಂಬಂಧಿಸಿದಂತೆ ಮೌನವಾಗಿದ್ದುದು ವಿಪರ್ಯಾಸ.

`ವ್ಯಕ್ತಿಗೆ ವೈಯಕ್ತಿಕ ಸ್ವಾತಂತ್ರ್ಯವು ಅಮೂಲ್ಯವಾದುದು. ಇದನ್ನೇ ಸಂವಿಧಾನದಲ್ಲಿ ಖಚಿತವಾಗಿ ಹೇಳಲಾಗಿದೆ~ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಪಡಿಸಿದೆ. ಈ ಬಗ್ಗೆ ದೇವ್‌ಬಂದ್ ಪಂಥದವರು ಅರಿತು ಕೊಳ್ಳಬೇಕು. ನಮ್ಮ ಜಾತ್ಯತೀತ ವ್ಯವಸ್ಥೆಯಲ್ಲಿ ಫತ್ವಾಕ್ಕಿಂತ ಸಂವಿಧಾನವೇ ದೊಡ್ಡದು ಎಂಬುದನ್ನು ಯಾರೂ ಮರೆಯಬಾರದು. ಹಿಂದೆ ಕಲಾವಿದ ಎಂ.ಎಫ್.ಹುಸೇನ್ ಕೂಡ ಹಿಂದೂ ಮೂಲಭೂತವಾದಿಗಳ ಕೈಯಲ್ಲಿ ಇಂತಹದೇ ಅಪಮಾನ ಎದುರಿಸಿದ್ದೂ ನಿಜ. ಇಂತಹ ಧ್ವನಿಗಳೆಲ್ಲವನ್ನೂ ಇಡೀ ಒಂದು ಸಮುದಾಯ ಅಥವಾ ಬಹುಜನರನ್ನು ಪ್ರತಿನಿಧಿಸುವಂತಹದ್ದಲ್ಲ ಎಂಬುದನ್ನು ನಾವು ಮನಗಾಣಬೇಕಿದೆ.

ಪುಣೆಯ ಸಿಂಬಿಯೊಸಿಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕಾಶ್ಮೀರ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಆ ಚಿತ್ರವನ್ನು  ಪ್ರದರ್ಶಿಸಬಾರದೆಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆ ಕಾಲೇಜಿನ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿತು.

ಆ ವಿದ್ಯಾರ್ಥಿ ಘಟಕವು ಸಾಕ್ಷ್ಯಚಿತ್ರವು ಪ್ರತ್ಯೇಕತಾವಾದವನ್ನು ಸಮರ್ಥಿಸುವಂತಿದೆ ಎಂದು ಆರೋಪಿಸಿತ್ತು. `ಜಶ್ನ್ ಎ ಆಜಾದಿ~ ಹೆಸರಿನ ಆ ಸಾಕ್ಷ್ಯಚಿತ್ರವನ್ನು ಸಂಜಯ್ ಕಾಕ್ ಎಂಬುವವರು ನಿರ್ದೇಶಿಸಿದ್ದು, ಕಾಶ್ಮೀರ ಕಣಿವೆಯಲ್ಲಿ ಸೇನೆಯು ದೌರ್ಜನ್ಯ ನಡೆಸುತ್ತಿದೆ ಎನ್ನುತ್ತಲೇ ಉಗ್ರರ ನಿಲುವಿನ ಬಗ್ಗೆ ಮೃದುಧೋರಣೆ ತಳೆದಂತಿತ್ತು (ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಪ್ರತಿಭಟನೆಯ ಸಂಕೇತವಾಗಿ ಸಿಂಬಿಯೋಸಿಸ್ ಸಂಸ್ಥೆಯ ಪತ್ರಿಕೋದ್ಯಮ ವಿಭಾಗದ ಪ್ರೊಫೆಸರ್ ಎಮಿರೆಟಸ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ).

ಜಗತ್ತಿನಾದ್ಯಂತ ಮುಕ್ತ ಅಭಿಪ್ರಾಯ ಮಂಡನೆಯ ಅವಕಾಶಗಳು ಕಡಿಮೆಯಾಗುತ್ತಾ ಬರುತ್ತಿವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಹಿನ್ನೆಲೆಯಲ್ಲಿ ಭಾರತದ ಸ್ಥಿತಿಗತಿಯನ್ನು ಗಮನಿಸಿದರೆ ನಮ್ಮ ದೇಶ ಮರುಭೂಮಿಯಲ್ಲಿ ಓಯಸಿಸ್‌ನಂತೆ ಕಂಡು ಬರುತ್ತಿದೆ. ಆದರೆ ಮೂಲಭೂತವಾದಿಗಳು, ಧರ್ಮಾಂಧರು ಮತ್ತು ದುರ್ಬಲ ಆಡಳಿತಗಾರರು ಒಮ್ಮಮ್ಮೆ ನನ್ನ ಅಭಿಪ್ರಾಯವನ್ನೇ ತಲೆಕೆಳಗು ಮಾಡುವಂತೆ ನಡೆದುಕೊಂಡಿದ್ದಾರಷ್ಟೆ.
 
ರಶ್ದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಚುನಾವಣೆಯೇ ಮುಖ್ಯ ಪಾತ್ರ ವಹಿಸಿದಂತಿದೆ. ಉತ್ತರ ಪ್ರದೇಶದಲ್ಲಿರುವ ಶೇಕಡ 15ರಷ್ಟು ಮುಸ್ಲಿಮರನ್ನು ಗಮನದಲ್ಲಿಟ್ಟುಕೊಂಡೇ ಆಡಳಿತಗಾರರು ನಡೆದುಕೊಂಡಂತಿದೆ. ಅದೇ ರೀತಿ ಕಾಶ್ಮೀರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ರದ್ದುಗೊಂಡರೂ ಹಿಂದೂ ಸಮುದಾಯವನ್ನು ಓಲೈಸುವ ನಿಟ್ಟಿನಲ್ಲಿ ಆಡಳಿತಗಾರರು ಮೌನ ವಹಿಸಿದಂತಿದೆ.
(ನಿಮ್ಮ ಅನಿಸಿಕೆ ತಿಳಿಸಿ:

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)
 
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT