ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಧಿಗಿಂತ ಅವಕಾಶ ಮುಖ್ಯ..!

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಷೇರು ಪೇಟೆಯ ಏರಿಳಿತಗಳು ತೀವ್ರವಾಗಿದ್ದು ಎಲ್ಲಾ ಬೆಳವಣಿಗೆಗಳಿಗೂ ಸ್ಪಂದಿಸುವ ಸೂಕ್ಷ್ಮತೆಯನ್ನು ಪೇಟೆಗಳು ಅಳವಡಿಸಿಕೊಂಡಿರುವುದು ಈಚಿನ ದಿನಗಳಲ್ಲಿ ಕಾಣಬಹುದಾಗಿದೆ.

ಈ ಬೆಳವಣಿಗೆಯು ಹೆಚ್ಚಾಗಿ ನಕಾರಾತ್ಮಕ ವಿಷಯಗಳಿಗೆ ಒತ್ತು ನೀಡಿದಂತಿದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ, ಚಿನ್ನ ಬೆಳ್ಳಿ ದರಗಳು ಏರಿಳಿತ ಪ್ರದರ್ಶಿಸಿ ಅಸ್ಥಿರತೆಯ ವಾತಾವರಣ ಮೂಡಿಸಿವೆ. ಹಿಂದಿನವಾರದ ಅಂತಿಮ ಎರಡು ದಿನಗಗಳಲ್ಲಿ ಬೆಳ್ಳಿಯ ಬೆಲೆಯು ಕುಸಿದಿತ್ತು. ಅದೇ ಪ್ರವೃತ್ತಿ ಈ ವಾರವೂ ಮುಂದುವರೆದಿದೆ.

ಸೆಪ್ಟೆಂಬರ್ 26 ರಂದು ಬೆಳ್ಳಿಯ ಬೆಲೆಯು ದಿನದ ಮಧ್ಯಂತರದಲ್ಲಿ ಅಂತರರಾಷ್ಟ್ರೀಯ ಪೇಟೆಯಲ್ಲಿ ಶೇ 15 ರಷ್ಟು ಕುಸಿಯಿತು. ಇದರಿಂದ ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್‌ನಲ್ಲಿ ಬೆಳ್ಳಿಯ ಬೆಲೆ ಅಂದು  ್ಙ4,950 ರಿಂದ ್ಙ5,450ರವರೆಗೆ ಏರಿಳಿತ ಕಂಡಿತು. ಚಿನ್ನದ ಕುಸಿತದ ವೇಗ ಕಳೆದ 28 ವರ್ಷಗಳ ದಾಖಲೆಯ ಮಟ್ಟ ತಲುಪಿದೆ.

ಹಿಂದಿನ ವಾರ ಒಟ್ಟಾರೆಯಾಗಿ ಸಂವೇದಿ ಸೂಚ್ಯಂಕವು 291 ಅಂಶಗಳಷ್ಟು ಏರಿಕೆ ಕಂಡರೂ ಪೇಟೆಯ ದಿಶೆಯ ಬಗ್ಗೆ ನಂಬಿಕೆ ಹುಟ್ಟಿಸಲಿಲ್ಲ.

ಮಧ್ಯಮ ಶ್ರೇಣಿ ಸೂಚ್ಯಂಕ 53 ಅಂಶಗಳಷ್ಟು ಮತ್ತು  ಕೆಳ ಮಧ್ಯಮ ಶ್ರೇಣಿ ಸೂಚ್ಯಂಕ 160 ಅಂಶಗಳಷ್ಟು ಇಳಿಕೆ ಕಂಡಿತು. ಲೋಹಗಳ ಸೂಚ್ಯಂಕ ಶೇ 4.5 ರಷ್ಟು ಇಳಿಕೆ ದಾಖಲಿಸಿತು. ಆದರೆ, ಬ್ಯಾಂಕಿಂಗ್ ಸೂಚ್ಯಂಕ ಅಲ್ಪ ಏರಿಕೆ ಪಡೆಯಿತು.

ಕಲ್ಲಿದ್ದಲು ಉದ್ಯಮದಲ್ಲಿ ಶೇ 26 ರಷ್ಟು  ಲಾಭವನ್ನು ಸ್ಥಳೀಯರಿಗೆ ವಿತರಿಸಬೇಕೆಂಬ ಮಂತ್ರಿಮಂಡಲದ ನಿರ್ಧಾರದಿಂದ ಕೋಲ್ ಇಂಡಿಯಾದ ಬೆಲೆಯು ಸುಮಾರು ್ಙ 29 ಕುಸಿದು ನಂತರ ಸ್ವಲ್ಪ ಚೇತರಿಕೆ ಕಂಡಿತು.

ವಿದೇಶೀ ವಿತ್ತೀಯ ಸಂಸ್ಥೆಗಳು ್ಙ1,554 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ ಸ್ಥಳಿಯ ಸಂಸ್ಥೆಗಳು ್ಙ1,075 ಕೋಟಿ ಮೌಲ್ಯದ ಷೇರು ಖರೀದಿಸಿದವು. ಪೇಟೆ ಬಂಡವಾಳೀಕರಣ ಮೌಲ್ಯವು ್ಙ 59.72 ಲಕ್ಷ ಕೋಟಿಯಿಂದ ್ಙ59.53 ಲಕ್ಷ ಕೋಟಿಗೆ ಕುಸಿದಿದೆ.

ಬೋನಸ್ ಷೇರಿನ ವಿಚಾರ

*ಭೊರೂಕ ಅಲ್ಯುಮಿನಿಯಂ ಕಂಪೆನಿ ವಿತರಿಸಲಿರುವ 1:1ರ ಅನುಪಾತದ ಬೋನಸ್‌ಗೆ ಅಕ್ಟೋಬರ್ 14 ನಿಗದಿತ ದಿನವಾಗಿದೆ.

*ಮೊನ್ಸಾಂಟೋ ಇಂಡಿಯಾ ಕಂಪೆನಿ ವಿತರಿಸಲಿರುವ 1:1ರ ಅನುಪಾತದ ಬೋನಸ್‌ಗೆ ಅಕ್ಟೋಬರ್ 8 ನಿಗದಿತ ದಿನವಾಗಿದೆ.

ಹೊಸ ಷೇರಿನ ವಿಚಾರ
*ಪ್ರತಿ ಷೇರಿಗೆ ್ಙ210 ರಂತೆ ಸಾರ್ವಜನಿಕ ವಿತರಣೆ ಮಾಡಿದ ಪಿಜಿ. ಎಲೆಕ್ಟ್ರೊಪ್ಲಾಸ್ಟಿ ಲಿ. ಸೆಪ್ಟೆಂಬರ್ 26 ರಂದು `ಬಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು. ಆರಂಭದ ದಿನ ್ಙ 175/05 ಕನಿಷ್ಠ ದರದಿಂದ ್ಙ28 ರಿಂದ ್ಙ548ರವರೆಗೂ ಜಿಗಿಯಿತು.

್ಙ312.50 ರಲ್ಲಿ ವಾರಾಂತ್ಯ ಕಂಡಿತು. ಶುಕ್ರವಾರದಂದು ಕೊನೆಯ 30 ನಿಮಿಷಗಳ ವಹಿವಾಟಿನಲ್ಲಿ ್ಙ 275ರ ಸಮೀಪದಿಂದ ್ಙ364ರ ವರೆಗೂ ಜಿಗಿತ ಕಂಡು ್ಙ258.85ಕ್ಕೆ ಕುಸಿತ ಕಂಡಿದ್ದು ವಿಶ್ಲೇಷಣಾತೀತವಾದ ಚಟುವಟಿಕೆಯಾಗಿದೆ.

*ಪ್ರತಿ ಷೇರಿಗೆ ್ಙ90 ರಿಂದ 100ರ ಅಂತರದಲ್ಲಿ ಸಾರ್ವಜನಿಕ ವಿತರಣೆ ಪ್ರಕಟಿಸಿರುವ ಸ್ವಜಾಸ್ ಏರ್ ಚಾರ್ಟರ್ಸ್ ಲಿ. ಕಂಪೆನಿಯ ಯೋಜನೆಗೆ ಸೂಕ್ತ ಸ್ಪಂದನದ ಕೊರತೆಯ ಕಾರಣ ವಿತರಣೆ ಬೆಲೆಯನ್ನು ್ಙ84 ರಿಂದ ್ಙ90ಕ್ಕೆ ಇಳಿಸಲಾಗಿದ್ದು ಕೊನೆಯ ದಿನವನ್ನು ಅಕ್ಟೋಬರ್ 5 ರವರೆಗೂ ವಿಸ್ತರಿಸಲಾಗಿದೆ.

*ಪ್ರಕಾಶ್ ಕಾನ್ಸ್‌ಟ್ರುವೆಲ್ ಲಿ. ಕಂಪೆನಿಯು ಪ್ರತಿ ಷೇರಿಗೆ ್ಙ138 ರಂತೆ ಸಾರ್ವಜನಿಕ ವಿತರಣೆ ಮಾಡಿದ್ದು ಅಕ್ಟೋಬರ್ 4 ರಂದು ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಮುಖ ಬೆಲೆ ಸೀಳಿಕೆ ವಿಚಾರ
*ಮುಂಚಾಲ್ ಆಟೊ ಇಂಡಸ್ಟ್ರೀಸ್ ಕಂಪೆನಿಯು ಷೇರಿನ ಮುಖಬೆಲೆಯನ್ನು ್ಙ10 ರಿಂದ ್ಙ2ಕ್ಕೆ ಸೀಳಲು ನಿರ್ಧರಿಸಿದೆ.

*ಬೆಸ್ಟ್ ಈಸ್ಟರ್ನ್ ಹೋಟೆಲ್ಸ್ ಕಂಪೆನಿಯು ಷೇರಿನ ಮುಖಬೆಲೆಯನ್ನು ್ಙ10 ರಿಂದ ್ಙ 2ಕ್ಕೆ ಸೀಳಲು ಅಕ್ಟೋಬರ್ 21 ನಿಗದಿತ ದಿನವಾಗಿದೆ.

ಹಕ್ಕಿನ ಷೇರಿನ ವಿಚಾರ
*ಅಟಲ್ ಆಟೊ ಕಂಪೆನಿ ವಿತರಿಸುತ್ತಿರುವ 1:4ರ ಅನುಪಾತದ ಹಕ್ಕಿನ ಷೇರು ಯೋಜನೆಯ ಅವಧಿಯನ್ನು ಅಕ್ಟೋಬರ್ 14ರವರೆಗೂ ವಿಸ್ತರಿಸಿದೆ. ವಿತರಣೆ ಬೆಲೆಯು ್ಙ30.

*ಎಲ್‌ಜೆಬಿ ಫೋರ್ಜ್ ಕಂಪೆನಿಯು ್ಙ1ರ ಮುಖಬೆಲೆಯ ಷೇರನ್ನು 1:2ರ ಅನುಪಾತದಲ್ಲಿ ್ಙ3 ರಂತೆ ಹಕ್ಕಿನ ಷೇರನ್ನು ವಿತರಿಸಲಿದೆ.

*ವೆಲ್‌ಜಾನ್ ಡಿನಿಸನ್ ಲಿ. ಕಂಪೆನಿ ವಿತರಿಸಲಿರುವ 1:4ರ ಅನುಪಾತದ ಹಕ್ಕಿನ ಷೇರಿಗೆ ಅಕ್ಟೋಬರ್ 5 ನಿಗದಿತ ದಿನವಾಗಿದೆ.

ಮುಖ ಬೆಲೆ ಕ್ರೋಡಿಕರಣ
ಎಸ್‌ಇ ಇನ್‌ವೆಸ್ಟ್‌ಮೆಂಟ್ಸ್ ಕಂಪೆನಿಯ ಷೇರಿನ ಮುಖಬೆಲೆ ಸದ್ಯದ ್ಙ1 ರಿಂದ ್ಙ10ಕ್ಕೆ ಕ್ರೋಡಿಕರಿಸಲಿದೆ. ಅಕ್ಟೋಬರ್ 5 ನಿಗದಿತ ದಿನ.

ಷೇರು ಹಿಂದೆ ಕೊಳ್ಳುವಿಕೆ
ಜೆಮಿನಿ ಕಮ್ಯುನಿಕೇಷನ್ ಕಂಪೆನಿಯು ಪ್ರತಿ ಷೇರಿಗೆ ಗರಿಷ್ಠ ್ಙ45ರವರೆಗೂ ಷೇರು ಹಿಂದೆ ಕೊಳ್ಳುವ ಯೋಜನೆ ಪ್ರಕಟಿಸಿದೆ.

ವಹಿವಾಟಿನ ಹಿಂತೆಗೆತ
*ಬಾಲಾಜಿ ಡಿಸ್ಟಿಲ್ಲರೀಸ್ ಲಿ. ಕಂಪೆನಿಯ ಬ್ರಿವರೀಸ್ ವಿಭಾಗವನ್ನು ಚೆನ್ನೈ ಬ್ರಿವೆರೀಸ್ ಪ್ರೈ ಲಿ. ನಲ್ಲಿ ವಿಲೀನಗೊಳಿಸಿದ ಹಿನ್ನೆಲೆಯಲ್ಲಿ ಈ ಕಂಪೆನಿಯ ಷೇರುಗಳು ಷೇರು ವಿನಿಮಯ ಕೇಂದ್ರದ ವಹಿವಾಟಿಗೆ ನೊಂದಾಯಿಸಿ ಕೊಂಡಿರುವುದನ್ನು ಹಿಂಪಡೆದಿದೆ. ಸೆಪ್ಟೆಂಬರ್ 30 ರಿಂದ ವಹಿವಾಟು ಸ್ಥಗಿತಗೊಂಡಿದೆ.

*ಮಹಾರಾಷ್ಟ್ರ ಎಲೆಕ್ಟ್ರೊಸ್ಮೆಲ್ಟ್ ಕಂಪೆನಿಯು ಸಾರ್ವಜನಿಕ ವಲಯದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ ವಿಲೀನಗೊಂಡ ಕಾರಣ 30 ರಿಂದ ವಹಿವಾಟು ಸ್ಥಗಿತಗೊಂಡಿದೆ.
* ಸಾಳ್ವೆ ಫಾರ್ಮ ಲಿ. ಕಂಪೆನಿಯು ಅಬ್ಬಾಟ್ ಇಂಡಿಯಾ ಕಂಪೆನಿಯಲ್ಲಿ ವಿಲೀನಗೊಂಡ ಕಾರಣ 30 ರಿಂದ ವಹಿವಾಟು ಸ್ಥಗಿತಗೊಂಡಿದೆ.

ವಾರದ ಪ್ರಶ್ನೆ

ಸದ್ಯದ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಸುರಕ್ಷಿತವಾದ ಚಟುವಟಿಕೆ ಹೇಗೆ ನಡೆಸಬೇಕು ದಯವಿಟ್ಟು ತಿಳಿಸಿರಿ.

ಉತ್ತರ: ಈಗಿನ ಪರಿಸ್ಥಿತಿ ಪರಿಶೀಲಿಸಿದಾಗ ಸುರಕ್ಷಿತ ಹೂಡಿಕೆ ಎಂಬ ಪದ ಕೇವಲ ನಿಘಂಟಿನಲ್ಲಿ ಮಾತ್ರ ಹುಡುಕಬೇಕಾದ ಹಂತ ತಲುಪಿದೆ ಎಂದೆನಿಸುತ್ತದೆ.

ಷೇರುಪೇಟೆಯಲ್ಲಿನ ಏರಿಳಿತಗಳು ಗರಿಷ್ಠ ಮಟ್ಟದಲ್ಲಿದ್ದು, ಚಿನಿವಾರ ಪೇಟೆ ಸುರಕ್ಷಿತವೆನ್ನುವಂತಹ ಪರಿಸ್ಥಿತಿಯಿಂದಲೂ ದೂರಸರಿದಿದ್ದೇವೆ. ಚಿನ್ನ ಬೆಳ್ಳಿಗಳು ಡಿಮ್ಯಾಟ್ ರೂಪದಲ್ಲಿ ವಹಿವಾಟಿಗೆ ಅವಕಾಶ ವಿರುವುದರಿಂದ ಅಲ್ಲಿಯೂ ಸಹ ವಿಪರೀತ ಏರಿಳಿತಗಳು ಕಾಣುತ್ತಿವೆ.

ದಿನ ನಿತ್ಯ ಬೆಳ್ಳಿಯ ಬೆಲೆಯು ಪ್ರತಿ ಕಿಲೋಗೆ ್ಙ 5 ರಿಂದ ್ಙ10 ಸಾವಿರದವರೆಗೂ ಏರಿಳಿತ ಕಾಣುತ್ತಿದೆ. ಇದರಿಂದ  ಇದನ್ನು ಸುರಕ್ಷಿತ ಹೂಡಿಕೆ ಎನ್ನಲಾಗದು. ಇತ್ತೀಚಿನ ದಿನಗಳಲ್ಲಿ ವಿದೇಶೀ ವಿತ್ತೀಯ ಸಂಸ್ಥೆಗಳು ಮಾರಾಟದ ಹಾದಿ ಹಿಡಿದಿರುವುದರಿಂದ ಪೇಟೆಗಳು ಆಳದ ಅರಿವಿಲ್ಲದೆ ಜಾರುತ್ತಿವೆ.
 
ಈ ಹಿಂದೆ ಇದೇ ರೀತಿಯ ಏರಿಕೆಯನ್ನು ಕಂಡಿದ್ದೇವೆ. ಷೇರಿನ ದರಗಳಲ್ಲಾಗುವ ಏರಿಳಿತಗಳು ಎಷ್ಟು ರಭಸವಾಗಿವೆ ಎಂದರೆ ಅದು ಕಂಪೆನಿಗಳ ಪ್ರವರ್ತಕರ ಆಸಕ್ತಿಯನ್ನು ದಾರಿ ತಪ್ಪಿಸುವಂತಾಗಿದೆ.

ಸುಭದ್ರವಾದ ಹಾಗೂ ಉತ್ತಮ ಚಾರಿತ್ರ್ಯವುಳ್ಳ ಕಂಪೆನಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಹೂಡಿಕೆಯನ್ನು ಸಾಧ್ಯವಾದಷ್ಟು ಹೆಚ್ಚಿನ ಕಂಪೆನಿಗಳಿಗೆ ಹರಡಬೇಕು. ಕೊಳ್ಳುವ ಪ್ರಮಾಣವು ಸಹ ಹಂತ ಹಂತವಾಗಿರಬೇಕು.

ಮುಖ್ಯವಾಗಿ ಅಲ್ಪ ಅವಧಿಯಲ್ಲೇ ಸುಮಾರು ಶೇ5ಕ್ಕೂ ಹೆಚ್ಚಿನ ಲಾಭ ದೊರೆಯುವುದಾದರೆ ನಗದೀಕರಿಸಿಕೊಂಡು ಹಣವನ್ನು ಮುಂದಿನ ಅವಕಾಶಕ್ಕೆ ಮೀಸಲಿಡಬೇಕು. ಇಲ್ಲಿ ಅವಧಿಗಿಂತ ಅವಕಾಶದ ಉಪಯೋಗ ಮುಖ್ಯ.

  98863-13380
 (ಮಧ್ಯಾಹ್ನ 4.30ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT