ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪತ್ತಿನಲ್ಲೂ ಹಲವು ಅವಕಾಶ..!

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕಳೆದ ವಾರ ಷೇರು ಪೇಟೆಯಲ್ಲಿನ ಬೆಳವಣಿಗೆಗಳು ಹೂಡಿಕೆದಾರರಿಗೆ ಹೊಸ ಬಗೆಯ ಸಿಹಿ ಕಹಿ ಅನುಭವವನ್ನು ಉಣಬಡಿಸಿದವು.  ಈ ವರ್ಷದ ಆರಂಭದಲ್ಲಿ ಸಂವೇದಿ ಸೂಚ್ಯಂಕವು ಈ ಬಾರಿ 25 ಸಾವಿರ ಅಂಶಗಳ ಗಡಿ ದಾಟಲಿದೆ ಎನ್ನುವ ವಿಶ್ಲೇಷಣೆಗಳು ನಡೆದಿದ್ದವು. ಆದರೆ, ಈಗಿನ ಪರಿಸ್ಥಿತಿ ಅದಕ್ಕೆ ವ್ಯತಿರಿಕ್ತವಾಗಿದೆ. ಈ ಸಂದರ್ಭದಲ್ಲಿ ಹೂಡಿಕೆದಾರರು ಪೇಟೆಯ ದಿಶೆಯನ್ನು ಅರಿತು ಚಟುವಟಿಕೆ ನಡೆಸಬೇಕು. ಮಾಧ್ಯಮ ವಿಶ್ಲೇಷಣೆಗಳಿಂದ ಭಯ ಬೀಳದೆ, ಸುಭದ್ರ ಕಂಪೆನಿಗಳನ್ನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬೇಕು.

ನಿಯಮಿತ ಲಾ

ಭ ದೊರೆತಾಗ ತಕ್ಷಣ ಹೊರಬರಬೇಕು. ಅವಧಿಗೆ ಅಂಟಿಕೊಳ್ಳಬಾರದು. ಕಳೆದ ಗುರುವಾರದ ಕುಸಿತವು `ರಕ್ತಪಾತ~ಎಂದು ಬಣ್ಣಿಸಲಾಗಿದೆ. ಆದರೂ, ಸಣ್ಣ ಹೂಡಿಕೆದಾರರು ಆಪತ್ತಿನಲ್ಲಿ ಅವಕಾಶವೆಂಬಂತೆ ಇದನ್ನು ಇದನ್ನು ಉಪಯೋಗಿಸಿಕೊಳ್ಳಬಹುದು. 

ಇತ್ತೀಚಿನ ಹಲವು ವರ್ಷಗಳಲ್ಲಿ ಬದಲಾವಣೆಯ ವೇಗ ತೀವ್ರವಾಗಿದೆ. ಚಿನಿವಾರ ಪೇಟೆಯಚಿನ್ನ-ಬೆಳ್ಳಿ ಮೇಲಿನ ಹೂಡಿಕೆ ಸುರಕ್ಷಿತ ಎಂಬ ಭಾವನೆ ಇತ್ತು. ಜಾಗತಿಕ ಆರ್ಥಿಕ ಅಸ್ಥಿರತೆಗಳು ಇದನ್ನೂ ಹುಸಿಯಾಗಿಸಿವೆ. ಬೆಳ್ಳಿಯ ಬೆಲೆ ಒಂದೇ ದಿನದಲ್ಲಿ 5 ಸಾವಿರ ಕುಸಿದಿದೆ.

ಹಿಂದಿನ ವಾರ ಸಂವೇದಿ ಸೂಚ್ಯಂಕವು ಒಟ್ಟಾರೆ 771 ಅಂಶಗಳ ಭಾರಿ ಕುಸಿತ ಕಂಡಿದೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ ಯೂರೋಪಿನ ಸಾಲದ ಬಿಕ್ಕಟ್ಟು ಮತ್ತು ಡಾಲರ್ ಎದುರು ರೂಪಾಯಿ ಅಪಮೌಲ್ಯ. ವಿದೇಶಿ ಸಾಂಸ್ಥಿಕ ಸಂಸ್ಥೆಗಳ ಮಾರಾಟದ ಒತ್ತಡವೂ ಕಾರಣವಾಗಿದೆ. ಕಳೆದ ವಾರಾಂತ್ಯದಲ್ಲಿ ಮಧ್ಯಮ ಶ್ರೇಯಾಂಕದ ಸೂಚ್ಯಂಕ 167 ಅಂಶಗಳಷ್ಟು ಮತ್ತು  ಕೆಳಮಧ್ಯಮ ಶ್ರೇಣಿಯ ಸೂಚ್ಯಂಕ 171 ಅಂಶಗಳಷ್ಟು  ಕುಸಿತ ಕಂಡವು. ವಿದೇಶೀ ವಿತ್ತೀಯ ಸಂಸ್ಥೆಗಳು ಒಟ್ಟಾರೆ ರೂ 2,188 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ, ಸ್ವದೇಶೀ ವಿತ್ತೀಯ ಸಂಸ್ಥೆಗಳು ಒಟ್ಟು ರೂ1,138 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದವು.

ಷೇರುಪೇಟೆಯ ಬಂಡವಾಳೀಕರಣ ಮೌಲ್ಯವು ಕಳೆದ ವಾರದ ರೂ61.78 ಲಕ್ಷ ಕೋಟಿಯಿಂದ ರೂ59.72 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಪ್ರಮುಖ ಕಂಪೆನಿಗಳಾದ, ಲಾರ್ಸನ್ ಅಂಡ್ ಟ್ಯೂಬ್ರೊ, ಬಿಎಚ್‌ಇಎಲ್, ಟಾಟಾ ಮೋಟಾರ್ಸ್, ಹಿಂಡಾಲ್ಕೊ, ಜಿಂದಾಲ್ ಪೊಲಿ, ಎಚ್‌ಸಿಎಲ್, ಇನ್ಫೋಸಿಸ್, ಓಎನ್‌ಜಿಸಿ ತೀವ್ರ ಏರಿಳಿತ ಪ್ರದರ್ಶಿಸಿದವು.

ಆರಂಭಿಕ ಷೇರಿನ ವಿಚಾರ
*ಎಂ ಅಂಡ್ ಬಿ ಸ್ವಿಚ್‌ಗೇರ್ಸ್‌ ಲಿಮಿಟೆಡ್ ಕಂಪೆನಿಯು ರೂ 180 ರಿಂದ ರೂ186ರ ಬೆಲೆಯ ಅಂತರದಲ್ಲಿ ಒಟ್ಟು 50 ಲಕ್ಷ ಷೇರುಗಳನ್ನು ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 5ರವರೆಗೆ ಸಾರ್ವಜನಿಕ ವಿತರಣೆ ಮಾಡಲಿದೆ.

*ಫೆಕ್ಸಿಟಪ್ ಇಂಟರ್‌ನ್ಯಾಶನಲ್ ಲಿ. ಕಂಪೆನಿಯು ರೂ145 ರಿಂದ ರೂ155ರ ಬೆಲೆಯ ಅಂತರದಲ್ಲಿ ಒಟ್ಟು 67.50 ಲಕ್ಷ ಷೇರುಗಳನ್ನು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 5ರವರೆಗೆ ಸಾರ್ವಜನಿಕ ವಿತರಣೆಗೆ ಮುಂದಾಗಿದೆ.

*ಸ್ವಜಾಸ್ ಏರ್ ಚಾರ್ಟರ್ಸ್ ಲಿಮಿಟೆಡ್ ಕಂಪೆನಿಯು ರೂ90 ರಿಂದ ರೂ100ರ ಅಂತರದಲ್ಲಿ ಸೆಪ್ಟೆಂಬರ್ 26 ರಿಂದ 28 ರವರೆಗೆ ಷೇರು ವಿತರಣೆ ಮಾಡಲಿದೆ.

*ತಿಜಾರಿಯಾ ಪೊಲಿಪೈಪ್ಸ್ ಲಿ. ಕಂಪೆನಿಯು ಸೆಪ್ಟೆಂಬರ್ 27 ರಿಂದ 29 ರವರೆಗೆ ಪ್ರತಿ ಷೇರಿಗೆ ರೂ60 ರಂತೆ ನಿಗದಿತ ಬೆಲೆಯ ಷೇರನ್ನು ಸಾರ್ವಜನಿಕ ವಿತರಣೆ ಮಾಡಲಿದೆ.

*ಕಳೆದ ಏಪ್ರಿಲ್‌ನಲ್ಲಿ ಪ್ರತಿ ಷೇರಿಗೆ ರೂ45 ರಂತೆ ಸಾರ್ವಜನಿಕ ವಿತರಣೆ ಮಾಡಿದ ವಾಸ್ವಾನಿ ಇಂಡಸ್ಟ್ರೀಸ್‌ಗೆ ಷರತ್ತು ಬದ್ದವಾದ ನೋಂದಾವಣೆಗೆ ಅವಕಾಶ ನೀಡಿದ್ದು 20 ರಿಂದ ಷೇರು ವಿನಿಮಯ ಕೇಂದ್ರದಲ್ಲಿ ನೋಂದಾಯಿಸಲಾಗಿದೆ.

*ಪಿ.ಜಿ. ಎಲೆಕ್ಟ್ರೊ ಪ್ಲಾಸ್ಟ್ ಲಿ. ಕಂಪೆನಿ ಇತ್ತೀಚೆಗೆ ರೂ 210 ರಂತೆ ಸಾರ್ವಜನಿಕ ವಿತರಣೆ ಮಾಡಿದ್ದು 26 ರಿಂದ `ಬಿ~ ಗುಂಪಿನಲ್ಲಿ ವಹಿವಾಟಾಗಲಿದೆ.

ಬೋನಸ್ ಷೇರಿನ ವಿಚಾರ
*ಝೊಡಿಯಕ್ ಕ್ಲಾತಿಂಗ್ ಕಂಪೆನಿ ವಿತರಿಸಲಿರುವ 1:2ರ ಅನುಪಾತದ ಬೋನಸ್‌ಗೆ ಸೆಪ್ಟಂಬರ್ 28 ನಿಗದಿತ ದಿನವಾಗಿದೆ.

*ಎಂಟೆಗ್ರಾ ಲಿ. ಕಂಪೆನಿ ವಿತರಿಸಲಿರುವ 4:13ರ ಅನುಪಾತದ ಬೋನಸ್‌ಗೆ ಸೆಪ್ಟೆಂಬರ್ 27 ನಿಗದಿತ ದಿನವಾಗಿದೆ.

ಮುಖಬೆಲೆ ಸೀಳಿಕೆ ವಿಚಾರ
*ಸಾರ್ವಜನಿಕ ವಲಯದ ಬಿಎಚ್‌ಇಎಲ್ ಕಂಪೆನಿಯ ಷೇರಿನ ಮುಖಬೆಲೆ ಸೀಳಿಕೆಗೆ ಅಕ್ಟೋಬರ್ 4 ನಿಗದಿತ ದಿನವಾಗಿದೆ. (ರೂ10 ರಿಂದ ರೂ2ಕ್ಕೆ ಸೀಳಲಿದೆ).

ಕಾರ್ಬೊರೆಂಡಂ ಯೂನಿವರ್ಸಲ್ ಲಿ. ಕಂಪೆನಿಯ ಷೇರಿನ ಮುಖಬೆಲೆ ರೂ2 ರಿಂದ ರೂ1ಕ್ಕೆ ಸೀಳಲು ಅಕ್ಟೋಬರ್ 7 ನಿಗದಿತ ದಿನವಾಗಿದೆ.
 

  98863-13380
 (ಮಧ್ಯಾಹ್ನ 4.30ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT