ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕ್ ಅಮೆರಿಕಾ..ಪ್ರಶ್ನೋತ್ತರ ಮಾಲಿಕೆ

Last Updated 15 ಏಪ್ರಿಲ್ 2013, 13:12 IST
ಅಕ್ಷರ ಗಾತ್ರ

1. ಕೆ. ರಾಜೇಂದ್ರ ಕುಮಾರ್ ಡಿ. ಮುದ್ನಾಳ್,ಮುದ್ನಾಳ್ ತಾಲ್ಲೂಕು, ಯಾದಗಿರಿ, ಜಿಲ್ಲೆ
ಅಮೆರಿಕದ ಯಾವ ವಿಶ್ವವಿದ್ಯಾಲಯಗಳಲ್ಲಿಯಾದರೂ ಕನ್ನಡ ಅಧ್ಯಯನ ಪೀಠಗಳು ಇವೆಯೇ? ಅಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಲು ಬೇಕಾದ ಅರ್ಹತೆಗಳೇನು ? ಹಾಗೂ ಅಲ್ಲಿನ ಜನರಿಗೆ ಕನ್ನಡವನ್ನು ಐಚ್ಛಿಕವಾಗಿ ಕಲಿಯಲು ಅವಕಾಶವಿದೆಯೇ ?

ದಕ್ಷಿಣ ಏಷ್ಯಾ ಅಧ್ಯಯನದಲ್ಲಿ ಪದವಿ ನೀಡುವ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷಾ ಅಧ್ಯಯನಕ್ಕೆ ಅವಕಾಶ ನೀಡಬಹುದು. ದಕ್ಷಿಣ ಏಷ್ಯಾ ಅಧ್ಯಯನಕ್ಕೆ ಅವಕಾಶ ಇರುವ ವಿಶ್ವವಿದ್ಯಾಲಯಗಳನ್ನು ಗುರುತಿಸಲು ಈ ಮುಂದಿನ ವೆಬ್ ಸೈಟ್‌ಗೆ ಭೇಟಿ www.petersons.comನೀಡಿ. ಆದರೆ, ಕನ್ನಡದ ಪ್ರಾಧ್ಯಾಪಕರಾಗಿ ಕೆಲಸ ಮಾಡಲು ಇರುವ ಅವಕಾಶಗಳ ಕುರಿತ ಮಾಹಿತಿಗಾಗಿ ನೀವು ನೇರವಾಗಿ ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸಿ.

ಸಂಸ್ಥೆಗಳ ಆಯ್ಕೆಗೆ ನೆರವು ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನದ ವಿಶ್ವವಿದ್ಯಾಲಯಗಳ ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದ ಮಾರ್ಗದರ್ಶನ EducationUSA ಹಾಗೂ ಅಮೆರಿಕ-ಭಾರತ ಶೈಕ್ಷಣಿಕ ಪ್ರತಿಷ್ಠಾನದಲ್ಲಿ (USIEF) ಲಭ್ಯ. ಹೆಚ್ಚಿನ ನೆರವಿಗಾಗಿ ದಯವಿಟ್ಟು USIEFಅನ್ನು ದೂರವಾಣಿ 044-28574423/4134 ಅಥವಾ ಇಮೇಲ್-usiefchennai@usief.org.in. ನಮ್ಮನ್ನು ಫೇಸ್ ಬುಕ್ ನಲ್ಲಿಯೂwww.Facebook.com/EducationUSAChennai  ಸಂಪರ್ಕಿಸಬಹುದು ಅಥವಾ ಹೆಚ್ಚಿನ ಮಾಹಿತಿಯನ್ನು www.usief.org.in ನಿಂದಲೂ ಪಡೆಯಬಹುದು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿನ ಉದ್ಯೋಗಗಳಿಗೆ ನಾವು ಸಲಹೆ ನೀಡುವುದಿಲ್ಲ.

***************

2. ಟಿ.ಎಂ. ಪಲ್ಲವಿ/ಟಿ.ಎಂ.ಪ್ರತಿಭಾ, ದಾವಣಗೆರೆ
ನಾವೀಗ ಸದ್ಯ ಪ್ರೌಢಶಾಲಾ ಹಂತದಲ್ಲಿ ವ್ಯಾಸಂಗ ಮಾಡುತ್ತಿದ್ದೇವೆ. ನಮ್ಮ ಪದವಿ ಶಿಕ್ಷಣವನ್ನು ನಾವು ಅಮೆರಿಕದಲ್ಲಿ ಕೈಗೊಳ್ಳುವ ಸಾಧ್ಯತೆಗಳ ಕುರಿತು ಪರಿಶೀಲಿಸುತ್ತಿದ್ದೇವೆ. ಅಮೆರಿಕ ಶಿಕ್ಷಣ ಪದ್ಧತಿಯ ಕುರಿತು ದಯವಿಟ್ಟು ತಿಳಿಸಿ.

ಅಧ್ಯಯನದ ಅನೇಕ ಪ್ರಕಾರಗಳಲ್ಲಿ ಆಯ್ಕೆಗಳ ವೈವಿಧ್ಯವನ್ನು ವಿದ್ಯಾರ್ಥಿಗಳಿಗೆ ಅಮೆರಿಕನ್ ಶೈಕ್ಷಣಿಕ ವ್ಯವಸ್ಥೆಯು ಒದಗಿಸುತ್ತದೆ. ವಿಜ್ಞಾನ ಹಾಗೂ ಮಾನವಿಕ ವಿಭಾಗಗಳೆರಡರಲ್ಲೂ ವಿಶೇಷ ಆದ್ಯತೆ ನೀಡುವ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಿವೆ. ವಿದ್ಯಾರ್ಥಿಯೊಬ್ಬನು ಒಂದು ಪ್ರಮುಖ ವಿಭಾಗವನ್ನು (ಉದಾಹರಣೆಗಾಗಿ ಎಂಜಿನಿಯಿರಿಂಗ್) ಹಾಗೂ ಆನುಷಂಗಿಕ ವಿಷಯವಾಗಿ ತಮ್ಮ ಆಸಕ್ತಿಯ ಮತ್ತೊಂದು ವಿಭಾಗವನ್ನು (ಉದಾಹರಣೆಗಾಗಿ ಸೃಜನಶೀಲ ಬರೆವಣಿಗೆ) ಆಯ್ಕೆ ಮಾಡಿಕೊಳ್ಳಬಹುದು. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಪದವಿ ಹಂತವನ್ನು ಅಧ್ಯಯನ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಅನೇಕ ವಿದ್ಯಾರ್ಥಿಗಳು ಖಅ (ಸ್ಕಾಲಾಟಿಕ್ ಆಪ್ಟಿಟ್ಯೂಡ್ ಟೆಸ್ಟ್) ಎಂಬ ಪರೀಕ್ಷೆ ಬರೆಯುತ್ತಾರೆ.

ಇಂಗ್ಲಿಷ್ ಭಾಷೆಯಲ್ಲಿನ ನೈಪುಣ್ಯವನ್ನು ಪ್ರದರ್ಶಿಸಲು ವಿದೇಶಿ ವಿದ್ಯಾರ್ಥಿಗಳು ಅಥವಾ ಇಂಗ್ಲಿಷನ್ನು ಮೊದಲ ಭಾಷೆಯಾಗಿ ಅಧ್ಯಯನ ಮಾಡದ ವಿದ್ಯಾರ್ಥಿಗಳಿಗೆTOEFL (Test of English as Foreign Language) ಅಥವಾ IELTS (International English Language Testing System)ಪರೀಕ್ಷೆಗಳನ್ನು ಬರೆಯಲು ಕೇಳಬಹುದಾಗಿದೆ. ಶಿಕ್ಷಣ ಸಂಸ್ಥೆಗಳ ಆಯ್ಕೆ ಕುರಿತ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಪ್ರಕ್ರಿಯೆ ಕುರಿತ ಮಾರ್ಗದರ್ಶನಕ್ಕಾಗಿ EducationUSA  ಅನ್ನು ದೂರವಾಣಿ 044-28574423/4134 ಮುಖಾಂತರವಾಗಿಯಾಗಲಿ, ಇಮೇಲ್ ಮುಖಾಂತರವಾಗಿಯಾಗಲಿ usiefchennai@usief.org.in  ಈ ಮುಂದಿನ ವೆಬ್ ಸೈಟ್‌ನಲ್ಲಿ www.usief.org.in ವೆಬ್ ಚಾಟ್ ಮುಖಾಂತರವಾಗಿಯಾಗಲಿ ಅಥವಾ www.Facebook.com /EducationUSAChennai  ಪುಟದ ಮುಖಾಂತರವಾಗಿಯಾಗಲಿ ಸಂಪರ್ಕಿಸಬಹುದು. ಅಲ್ಲದೇ, ಬೆಂಗಳೂರಿನ EducationUSA ಕೇಂದ್ರವನ್ನು (ಯಾಶ್ನಾ ಟ್ರಸ್ಟ್, 102, ಪಾರ್ಕ್ ವ್ಯೆ ಕಾಂಪ್ಲೆಕ್ಸ್, 40, ಹೈನ್ಸ್ ರಸ್ತೆ, ಫ್ರೆಜರ್ ಟೌನ್, ಬೆಂಗಳೂರು, ದೂರವಾಣಿ: 080-41251922) ಸಂಪರ್ಕಿಸಬಹುದು. ಅವರ ವೆಬ್ ಸೈಟ್‌ಗೂ www.yashnatrust.org ಗೂ ಭೇಟಿ ನೀಡಬಹುದು.

3. ಕೆ. ಸತ್ಯನಾರಾಯಣ, ಬೆಂಗಳೂರು
ನನ್ನ ಅನುಭವದ ಪ್ರಕಾರ, ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಹೋಗಲು ವೀಸಾಗೆ ಅರ್ಜಿ ಹಾಕುವ ಅನೇಕರು ಅಲ್ಪಾವಧಿ ಪ್ರವಾಸಕ್ಕಾಗಿ ಹೋಗುತ್ತಾರೆ ಹಾಗೂ ಅವರು ತಮ್ಮ ಬಂಧುಗಳ ಮನೆ ಯಲ್ಲಿ ತಂಗುತ್ತಾರೆ. (ವಿದ್ಯಾರ್ಥಿ ವೀಸಾ ಬೇರೆಯದೇ ಆದ ವಿಚಾರ. ಅದರಲ್ಲಿ ನನಗೆ ಆಸಕ್ತಿಯಿಲ್ಲ) ಕೆಲ ವೀಸಾ ಅರ್ಜಿಗಳನ್ನು ಯಾವುದೇ ಕಾರಣ ನೀಡದೇ ನಿರಾಕರಿ ಸಲಾಗುತ್ತದೆ. ಅಲ್ಪಾವಧಿ ಪ್ರವಾಸಕ್ಕಾಗಿ ಅಲ್ಲದೇ, ಬಂಧುಗಳು, ಮಕ್ಕಳ ಭೇಟಿಗಾಗಿ ವೀಸಾ ಪಡೆಯಲು ಅಗತ್ಯವಾದ ಅಂಶಗಳನ್ನು ದಯವಿಟ್ಟು ತಿಳಿಸಿ. ಸಾಮಾನ್ಯವಾಗಿ ನಿವೃತ್ತರು ದೀರ್ಘಾವಧಿ ಯವರೆಗೆ ಅಲ್ಲಿ ನೆಲಸಲು ಸಾಧ್ಯವಿಲ್ಲ. ಏಕೆಂದರೆ, ಅವರು ತಮ್ಮ ನಿವೃತ್ತಿ ವೇತನವನ್ನು ಪಡೆಯಲು `ಜೀವಿಸಿರುವ ಪ್ರಮಾಣಪತ್ರ'ವನ್ನು ಕಾಲ ಕಾಲಕ್ಕೆ ಸಲ್ಲಿಸಬೇಕಾಗುತ್ತದೆ.

ಬಂಧುಗಳು ಹಾಗೂ ಗೆಳೆಯರ ಭೇಟಿಯೂ ಸೇರಿದಂತೆ ಅಲ್ಪಾವಧಿ ಪ್ರವಾಸಕ್ಕಾಗಿ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಭೇಟಿ ನೀಡಬಯಸುವವರು ಪ್ರವಾಸಿ ವೀಸಾಗಳಿಗೆ ಅರ್ಜಿ ಹಾಕಬಹುದು. ಅಮೆರಿಕ ಸಂಯುಕ್ತ ಸಂಸ್ಥಾನದ ವಲಸೆ ಕಾನೂನಿನ ಪ್ರಕಾರ, ಎಲ್ಲ ಪ್ರವಾಸಿ ಉದ್ದೇಶದ ಅರ್ಜಿದಾರರು ಈ ಮೂರು ಮುಖ್ಯ ಅಂಶಗಳನ್ನು ವೀಸಾ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು: ತಮ್ಮ ಪ್ರವಾಸ ಉದ್ದೇಶ ನ್ಯಾಯ ಸಮ್ಮತವಾದುದು; ತಾವು ಪ್ರವಾಸವನ್ನು ಕೈಗೊಳ್ಳಲು ಸಮರ್ಥರು; ಹಾಗೂ ತಮ್ಮ ಮಾತೃಭೂಮಿಯೊಂದಿಗೆ ಬಲವಾದ ಸಂಬಂಧ ಹೊಂದಿರುವುದು ಮಾತ್ರವಲ್ಲದೇ, ತಮ್ಮ ಪ್ರವಾಸದ ಬಳಿಕ ಸ್ವದೇಶಕ್ಕೆ ಹಿಂದಿರುಗುವ ಉದ್ದೇಶ ಹೊಂದಿರುವುದು. ಉದ್ಯೋಗ, ಆಸ್ತಿ ಹಾಗೂ ಕುಟುಂಬಗಳು `ಬಲವಾದ ಸಂಬಂಧ'ಕ್ಕೆ ಉದಾಹರಣೆಯಾಗಬಲ್ಲವು. ಅಮೆರಿಕನ್ ಪ್ರವಾಸಿ ವೀಸಾಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು http://www.travel.state.gov ವೆಬ್ ಸೈಟ್‌ಗೆ ಭೇಟಿ ನೀಡಿ.

4. ಡಾ. ಮಲ್ಲಿಕಾರ್ಜುನ ಕುಂಬಾರ, ರಾಜೂರ, ರೋಣ
ನಿಮ್ಮ ದೇಶದಲ್ಲಿ ಬಜೆಟ್ ಮಂಡನೆ ನಡೆಯುತ್ತದೆಯೇ? ಅದರ ಬಗ್ಗೆ ವಿವರಿಸಿರಿ.
ಮುಂದಿನ ಅಕ್ಟೋಬರ್ 1ರಿಂದ ಆರಂಭವಾಗುವ ಆರ್ಥಿಕ ವರ್ಷದೊಳಗೆ ಮಸೂದೆ ಅನುಮೋದಿಸಿ, ಶಾಸನವನ್ನಾಗಿ ರೂಪಿಸಲು ಅನುವಾಗುವಂತೆ ರಾಷ್ಟ್ರಾಧ್ಯಕ್ಷರು ಆಯಾ ವರ್ಷದ ಫೆಬ್ರುವರಿ ಮೊದಲ ಸೋಮವಾರದೊಳಗೆ ಆಯವ್ಯಯವನ್ನು ಮಂಡಿಸಬೇಕು ಎಂದು ಆಯವ್ಯಯ ಕಾಯ್ದೆ, 1974 ಹೇಳುತ್ತದೆ. ಅಧ್ಯಕ್ಷರು ಈ ಬಾರಿ ಮಂಡಿಸಿದ್ದ ಆಯವ್ಯಯವನ್ನು ಈ ಮುಂದಿನ ವೆಬ್ ಸೈಟ್‌ನಲ್ಲಿ www.whitehouse.gov/omb/budget ಪರಿಶೀಲಿಸಬಹುದು. ಪ್ರತಿನಿಧಿ ಸಭೆ ಹಾಗೂ ಸೆನೆಟುಗಳ ಆಯವ್ಯಯ ಸಮಿತಿಗಳು ವೆಚ್ಚ, ಆದಾಯ, ಉಳಿತಾಯ ಅಥವಾ ಕೊರತೆ ಹಾಗೂ ಸಾರ್ವಜನಿಕ ಸಾಲಗಳ ಸಮಗ್ರ ಮಟ್ಟವನ್ನು ನಿರ್ಧರಿಸುತ್ತವೆ. (ಹೆಚ್ಚಿನ ಮಾಹಿತಿಗೆ budget.house.gov ಹಾಗೂ budget.senate.gov ನೋಡಿ).

ಎರಡೂ ಸದನಗಳ ಮೇಲುಸ್ತುವಾರಿ ಸಮಿತಿಗಳು ದೃಢೀಕರಣ ಮಸೂದೆಗಳನ್ನು ರಚಿಸಿದರೆ, 12 ಲೇಖಾನುದಾನ ಉಪಸಮಿತಿಗಳು ಅಮೆರಿಕ ಸಂಯುಕ್ತ ಸಂಸ್ಥಾನದ ಸರ್ಕಾರಕ್ಕೆ ಹಣ ಒದಗಿಸುವ ವಿಧೇಯಕದ ಕರಡನ್ನು ಸಿದ್ಧಪಡಿಸುತ್ತವೆ. ಸಂಸತ್ತಿನ ಎರಡೂ ಸದನಗಳು ಆಯವ್ಯಯ ವಿಧೇಯಕಗಳ ಪ್ರತಿ ಕರಡಿಗೆ ಒಪ್ಪಿಗೆ ಸೂಚಿಸಿದ ಮೇಲೆ, ಅವಕ್ಕೆ ಅಧ್ಯಕ್ಷರು ಅಂಕಿತ ಹಾಕುತ್ತಾರೆ. ಆ ಬಳಿಕ ಅದು ಕಾಯ್ದೆಯಾಗಿ ಮಾರ್ಪಾಡಾಗುತ್ತದೆ. ಲೇಖಾನುದಾನದ ಮಸೂದೆ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನದ ಇತರ ವಿಧೇಯಕಗಳ ಸ್ಥಿತಿಗತಿಯನ್ನು ಲೈಬ್ರರಿ ಆಫ್ ಕಾಂಗ್ರೆಸ್ ವೆಬ್ ಸೈಟ್‌ನಲ್ಲಿ ಪರಿಶೀಲಿಸಲು ಈ ಮುಂದಿನ ವೆಬ್ ಸೈಟ್‌ಗೆ ಭೇಟಿ ನೀಡಿ thomas.loc.gov/home/thomas.php.

5. ಕುಬೇರಪ್ಪ ಎಂ. ವಿಭೂತಿ, ಹರಿಹರ
ನಮ್ಮ ದೇಶದ ಸಂವಿಧಾನಕ್ಕೂ, ಅಮೆರಿಕ ಸಂವಿಧಾನಕ್ಕೂ ಇರುವ ವ್ಯತ್ಯಾಸ ಯಾವ ರೀತಿಯದು ಎಂಬುದರ ಬಗ್ಗೆ ವಿವರಣೆ ಬೇಕಿತ್ತು
ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ಭಾರತದ ಸಂವಿಧಾನಗಳ ನಡುವೆ ಅನೇಕ ಸಾಮ್ಯತೆಗಳುಂಟು. ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಸಭೆ ನಡೆಸುವ ಹಕ್ಕುಗಳಂಥ ಮೂಲಭೂತ ಹಕ್ಕುಗಳನ್ನು ಹಾಗೂ ತಿದ್ದುಪಡಿಗೆ ಅವಕಾಶ ಕಲ್ಪಿಸುವ ನಿಬಂಧನೆಗಳನ್ನೂ ಎರಡೂ ಸಂವಿಧಾನಗಳು ಖಾತರಿ ಪಡಿಸುತ್ತವೆ. ಸರ್ಕಾರದ ಪ್ರಾಥಮಿಕ ಶಾಖೆಗಳಾದ -ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗಗಳ ನಡುವಿನ ಶ್ರಮ ಹಾಗೂ ಅಧಿಕಾರದ ವಿಭಜನೆಯನ್ನು ಎರಡೂ ದೇಶಗಳ ಸಂವಿಧಾನಗಳು ಗುರುತಿಸುತ್ತವೆ.

ಮೂಲಭೂತ ವ್ಯತ್ಯಾಸ ಎಂದರೆ, ಅಮೆರಿಕ ಸಂಯುಕ್ತ ಸಂಸ್ಥಾನದ ಸಂವಿಧಾನವು ರಾಜ್ಯಗಳ ನಡುವಿನ ಒಪ್ಪಂದ. ಆದರೆ, ಭಾರತದ ಸಂವಿಧಾನ ಹಾಗಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನವೂ ಸಹ “ದ್ವಿ” ಸರ್ಕಾರ -ಫೆಡರಲ್ ಹಾಗೂ ರಾಜ್ಯ ಸರ್ಕಾರಗಳನ್ನು ಹೊಂದಿದೆ. ಆದರೆ, ಸಿವಿಲ್ ಹಾಗೂ ಕ್ರಿಮಿನಲ್ ಕಾನೂನುಗಳನ್ನು ರೂಪಿಸಲು ಹಾಗೂ ಜಾರಿ ಮಾಡಲು ಅಮೆರಿಕದಲ್ಲಿನ ರಾಜ್ಯಗಳಿಗೆ ಗಣನೀಯ ಅಧಿಕಾರವುಂಟು. ಜನಸಂಖ್ಯೆ ಹಾಗೂ ಭೌಗೋಳಿಕ ಪ್ರಮಾಣಗಳೇನೇ ಇದ್ದರೂ, ಎಲ್ಲ ರಾಜ್ಯಗಳನ್ನೂ ಅಮೆರಿಕನ್ ಒಕ್ಕೂಟದಲ್ಲಿ ಸಮಾನ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ರಾಜ್ಯಗಳ ನಡುವಿನ ಸಮಾನತೆಯ ತತ್ವವನ್ನು ನಿರ್ದಿಷ್ಟವಾಗಿ ವ್ಯಾಖ್ಯಾನಿಸಲಾಗಿಲ್ಲ. ಎಲ್ಲ ರಾಜ್ಯಗಳ ಕಾನೂನುಗಳೂ ರಾಷ್ಟ್ರದ ಸಿವಿಲ್ ಹಾಗೂ ಕ್ರಿಮಿನಲ್ ಕಾನೂನುಗಳಿಗೆ ಅನುರೂಪವಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT