ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡೆ ಕಟ್ಟುವ ಕೆಲಸ ಏಕೆ?

Last Updated 20 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಮುಂಬೈನಲ್ಲಿ ಬಿಹಾರಿಗಳ ವಿರುದ್ಧ ಠಾಕ್ರೆ ಸಹೋದರರು ಸಿಡಿದೆದ್ದು ಅವರನ್ನು ರಾಜ್ಯದಿಂದ ಹೊರಗಟ್ಟುವ ಮಾತುಗಳನ್ನಾಡಿದ್ದಾರೆ. ಕರ್ನಾಟಕದಿಂದ ಈಶಾನ್ಯರಾಜ್ಯದ ಜನ ವದಂತಿಗಳಿಗೆ ಅಂಜಿ ವಲಸೆ ಹೋದ ಸಂಗತಿ ನಿಮಗೆಲ್ಲಾ ಗೊತ್ತಿರುವ ಸಂಗತಿಯೇ.

ಅಸ್ಸಾಂನಿಂದ ಎಷ್ಟೋ ಮಂದಿ ಬಾಂಗ್ಲಾದೇಶಕ್ಕೂ, ಪಶ್ಚಿಮ ಬಂಗಾಳಕ್ಕೂ ವಲಸೆ ಹೋದ ಸಂಗತಿಯೂ ಹೊಸತಲ್ಲ. ಒಂದೇ ರಾಷ್ಟ್ರದ ಅಣ್ಣತಮ್ಮಂದಿರು ಒಬ್ಬರನ್ನೊಬ್ಬರು ಹೊರಹಾಕುವ ಇತ್ತೀಚಿನ ಮನೋಭಾವ ವೈವಿಧ್ಯತೆಯಲ್ಲೂ ಏಕತೆ ಮೆರೆಯುವ ನಮ್ಮ ದೇಶಕ್ಕೆ ಗೌರವ ತರುವಂತಹ ವಿಷಯವೇ ಅಲ್ಲ.

ರಾಜ್ಯ-ರಾಜ್ಯಗಳ ನಡುವೆ ವೈಮನಸ್ಯ ಹುಟ್ಟಿಸುವ, ಅಂತರ ಹೆಚ್ಚಿಸುವ ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕುವುದು ಹೇಗೆ? ಸಿನಿಮಾದಿಂದ ಅದು ಸಾಧ್ಯವಾಗಬಹುದೇ? ರಾಜ್ಯ-ರಾಜ್ಯಗಳ ನಡುವೆ ಒಡೆದ ಮನಸ್ಸುಗಳಿಗೆ ಬೆಸುಗೆ ಹಾಕುವ ಕೆಲಸ ಸಿನಿಮಾದಿಂದ ಸಾಧ್ಯವಾಗಬಹುದು. ಮರಾಠಿ ಚಲನಚಿತ್ರವಾದ “ಮಧ್ಯಮವರ್ಗ್‌” ಚಿತ್ರದಲ್ಲಿ ಭೋಜಪುರಿ ಭಾಷೆಯ ಚಿತ್ರರಂಗದ ಸೂಪರ್‌ಸ್ಟಾರ್ ರವಿಕಿಷನ್ ಮುಖ್ಯಪಾತ್ರದಲ್ಲಿ ಅಭಿನಯಿಸುವ ಮೂಲಕ ಇಂತಹ ಕೆಲಸಕ್ಕೆ ಮುಂದಾಗುತ್ತಿದ್ದಾರಂತೆ.
 
ಈ ಪಾತ್ರಕ್ಕೆ ಮರಾಠಿ ನಟನೊಬ್ಬರನ್ನೇ ನಾಯಕ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಬಹುದಾಗಿತ್ತು, ಆದರೆ ಕಲಾವಿದನೊಬ್ಬನಿಗೆ ಭಾಷೆಯ ಅಡೆತಡೆ ಇರಬಾರದು. ಪ್ರಾಂತೀಯ ಮನೋಭಾವವೂ ಇರಬಾರದು ಎಂಬುದನ್ನು ಈ ಮೂಲಕ ಪ್ರತಿಪಾದಿಸುವುದು, ಅಂತಹ ಒಂದು ಸಂದೇಶವನ್ನು ರವಾನಿಸುವುದು ನನ್ನ ಉದ್ದೇಶ ಎಂದು ಚಿತ್ರದ ನಿರ್ದೇಶಕ ಹ್ಯಾರಿ ಫರ್ನಾಂಡಿಸ್ ಹೇಳಿಕೊಂಡಿದ್ದಾರೆ.
 
ಮರಾಠಿ ಚಿತ್ರಗಳಲ್ಲಿ ಮರಾಠಿ ನಟರೇ ಅಭಿನಯಿಸಬೇಕು ಎಂಬ ನಿಲುವು ತಪ್ಪು. ಕನ್ನಡ ಚಿತ್ರಗಳಲ್ಲಿ ಕನ್ನಡ ನಟ ನಟಿಯರೇ ಇರಬೇಕು, ತಮಿಳಿನಲ್ಲಿ ತಮಿಳರೇ ಇರಬೇಕು, ತೆಲುಗು ಚಿತ್ರಗಳಲ್ಲಿ ತೆಲುಗರೇ ಅಭಿನಯಿಸಬೇಕು ಎಂಬ ಅಡ್ಡಗೋಡೆಗಳಿರಬಾರದು ಎಂಬ ನಿಲುವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.

ಕಲಾವಿದ ತನ್ನ ಪ್ರತಿಭೆಗೆ ಎಲ್ಲಿ ಅವಕಾಶ ದೊರಕುತ್ತದೋ ಅಲ್ಲಿ ತೆರೆದುಕೊಳ್ಳಬೇಕು. ಕನ್ನಡ ನಟ ಸುದೀಪ್, “ಈಗ” ತೆಲುಗು ಚಿತ್ರದಲ್ಲಿ ಅಭಿನಯಿಸಿದ ನಂತರ ಹೇಳುತ್ತಿರುವುದೂ ಇದನ್ನೇ ತಾನೇ.

ಭೋಜಪುರಿ ನಟನೊಬ್ಬ ಮರಾಠಿ ಚಿತ್ರದಲ್ಲಿ ಅಭಿನಯಿಸುವುದು, ಕಲಾವಿದರಿಗೆ ಭಾಷಾ ಅಡ್ಡಗೋಡೆಗಳಿರಬಾರದು ಎಂದು ಹೇಳುವುದೆಲ್ಲಾ ಕೇಳಲು ಚೆನ್ನಾಗಿಯೇ ಇದೆ. ಆದರೆ ಶಿವಸೇನೆಯ ಉದ್ದವ್‌ಠಾಕ್ರೆಗಾಗಲಿ, ಎಂ.ಎನ್.ಎಸ್.ನ ರಾಜ್‌ಠಾಕ್ರೆ ಅವರಿಗಾಗಲೀ ಈ ಮಾತು ಪಥ್ಯವಾಗಬೇಕಲ್ಲ.
 
ಉತ್ತರಪ್ರದೇಶ, ಬಿಹಾರದಿಂದ ಬಂದ ಜನರ ಮೇಲೆ ಹಲ್ಲೆ ನಡೆಸುವ, ಅವರನ್ನು ಹೊರಗಟ್ಟುವ ಬಗ್ಗೆ ಮಾತನಾಡುವ ರಾಜ್‌ಠಾಕ್ರೆ, `ಕಲರ್ಸ್‌~ ಟೀವಿ ಚಾನಲ್‌ನಲ್ಲಿ ಪ್ರಸಾರವಾಗುವ ಪಾಕಿಸ್ತಾನಿ ಗಾಯಕ-ಗಾಯಕಿಯರ ರಿಯಾಲಿಟಿ ಶೋ “ಸುರ್‌ಕ್ಷೇತ್ರ”ದಲ್ಲಿ  ತೀರ್ಪುಗಾರರಾಗಿ ಭಾಗವಹಿಸದಂತೆ ಗಾಯಕಿ ಆಶಾಭೋಂಸ್ಲೆ ಅವರಿಗೆ ಹುಕುಂ ಹೊರಡಿಸಿತ್ತು. “

ಸುರ್‌ಕ್ಷೇತ್ರ”ದಲ್ಲಿ ಪಾಕಿಸ್ತಾನದ ಉದಯೋನ್ಮುಖ ಗಾಯಕ, ಗಾಯಕಿಯರು ಪಾಲ್ಗೊಳ್ಳುತ್ತಾರೆ. ಭಾರತದ ಜಾಹೀರಾತು ಮೂಲ
ಹುಡುಕಿಕೊಂಡು ಪಾಕಿಗಳು ಇಲ್ಲಿಗೆ ಬಂದು ರಿಯಾಲಿಟಿ ಶೋ ಮಾಡುತ್ತಾರೆ. ಭಾರತದ ಕಲಾವಿದರೇ ಇದರಲ್ಲಿ ಇಲ್ಲ. ಪಾಕಿಸ್ತಾನದಲ್ಲೇ ಇಂತಹ ಕಾರ‌್ಯಕ್ರಮ ಮಾಡಿ, ನಮ್ಮವರನ್ನು ಆಹ್ವಾನಿಸಲಿ ಎಂದು ರಾಜ್‌ಠಾಕ್ರೆ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ರಾಜ್‌ಠಾಕ್ರೆ ಅವರ ಧಮಕಿಗೆ ಆಶಾಭೋಂಸ್ಲೆ ಸೊಪ್ಪುಹಾಕಿಲ್ಲ.

“ಸಂಗೀತಕ್ಕೆ ಸಿರಿತನ, ಬಡತನ, ಭಾಷೆ, ಧರ್ಮ ಯಾವುದೂ ಅಡ್ಡಿಯಾಗಬಾರದು” ಎಂದು ಹೇಳಿದ್ದಾರೆ. “ನನಗೆ ರಾಜಕೀಯ ಗೊತ್ತಿಲ್ಲ. ಸಂಗೀತದ ಭಾಷೆ ಮಾತ್ರ ಗೊತ್ತು” ಎಂದೂ ರಾಜ್‌ಠಾಕ್ರೆ ಅವರಿಗೆ ಸೆಡ್ಡು ಹೊಡೆದಿರುವ ಆಶಾ, “ಸುರ್‌ಕ್ಷೇತ್ರ” ಕಾರ‌್ಯಕ್ರಮದ ತೀರ್ಪುಗಾರಳಾಗಿ ಭಾಗವಹಿಸಿಯೇ ತೀರುತ್ತೇನೆ ಎಂದು ಸವಾಲು ಹಾಕಿ ಗೆದ್ದರು.

ಕಲರ್ಸ್‌ ಟೀವಿ ಈ ಕಾರ‌್ಯಕ್ರಮವನ್ನು ಪ್ರಸಾರ ಮಾಡಕೂಡದು ಎಂಬ ಎಚ್ಚರಿಕೆಯನ್ನು ಶಿವಸೇನೆ ಕಾರ‌್ಯಕರ್ತರು ನೀಡಿದ್ದರು. ಕಲರ್ಸ್‌ ಚಾನಲ್‌ನವರೂ ಅದನ್ನು ಲೆಕ್ಕಿಸದೆ ಪ್ರಸಾರ ಮಾಡಿಯೇಬಿಟ್ಟರು. ಇದರಿಂದ ಕುಪಿತರಾದ ಶಿವಸೇನೆ ಮತ್ತು ಸ್ವರಾಜ್ ಸೇನೆಯ ಕಾರ‌್ಯಕರ್ತರು ಮುಂಬೈನ ಅಂಧೇರಿ ಮತ್ತು ವಿಲೆಪಾರ್ಲೆಯಲ್ಲಿರುವ ಕಲರ್ಸ್‌ ಚಾನಲ್‌ನ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದರು.

ಆದರೂ ಕಾರ‌್ಯಕ್ರಮ ಪ್ರಸಾರ ಆಗಿಯೇಬಿಟ್ಟಿತು. ಕಾರ‌್ಯಕ್ರಮದಲ್ಲಿ ಯುವ ಗಾಯಕ-ಗಾಯಕಿಯರ ತನ್ಮಯತೆ, ಅಭ್ಯಾಸದಲ್ಲಿ ಅವರು ತೋರಿದ ಶ್ರದ್ಧೆ, ತಮ್ಮ ಕಲಾಪ್ರತಿಭೆಯನ್ನು ಎಲ್ಲ ಭಾಗದ ಜನರ ಮುಂದೆ ಹಂಚಬೇಕು ಎಂಬ ತುಡಿತ ಎಲ್ಲವೂ ವ್ಯಕ್ತವಾಗುತ್ತಿತ್ತು. ಇದೇ ರೀತಿಯ ಕಾರ‌್ಯಕ್ರಮ ಬೇರೆ ಬೇರೆ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿದೆ. ಅಲ್ಲೆಲ್ಲಾ ಭಾರತೀಯ ಗಾಯಕರೇ ಇರುತ್ತಾರೆ.
 
ಸ್ಪರ್ಧೆಯಲ್ಲಿ, ಕಲಿಕೆಯಲ್ಲಿ ಯಾವ ವ್ಯತ್ಯಾಸವೂ ಇರಲಿಲ್ಲ. ಸಂಗೀತ ವಿಶ್ವಭಾಷೆ. ಅದನ್ನು ಅದೇ ರೀತಿಯ ಮನಸ್ಥಿತಿ ಇರುವವರು ಎಲ್ಲೇ ಇದ್ದರೂ ಆಸ್ವಾದಿಸುತ್ತಾರೆ. ಇದಕ್ಕೆ ದೇಶಭಾಷೆಗಳ ಗಡಿಯೇ ಇಲ್ಲ. ಆದರೂ ಭಾಷಾಂಧರಾಗಿ ರಾಜ್‌ಠಾಕ್ರೆ ಕಟ್ಟುವ ಗೋಡೆ ಸಂಗೀತ ಶಕ್ತಿಯ ಮುಂದೆ ಶಿಥಿಲ. ಠಾಕ್ರೆ ಅವರಂತಹವರ ಇಂತಹ ಆಲೋಚನೆ, ದೇಶದ ಏಕತೆಗೇ ಗಂಡಾಂತರ ತರುವಂತಹದ್ದು. 2008ರಲ್ಲಿ ಜಯಾಬಚ್ಚನ್ ಅವರು ತಾವು ಉತ್ತರಪ್ರದೇಶದವರು ಎಂದು ಹೇಳಿಕೊಂಡಿದ್ದರು.

ಅದನ್ನೂ ಈ ಠಾಕ್ರೆಗಳು ಗಭೀರವಾಗಿ ಪರಿಗಣಿಸಿದರು. ಮುಂಬೈ, ಬಾಲಿವುಡ್ ಸಿನಿಮಾಗಳಿಂದ ಹೆಸರು, ಹಣಗಳಿಸಿ ಈಗ ಉತ್ತರಪ್ರದೇಶದವರು ಎಂದು ಹೇಳಿದ್ದಾದರೂ ಏಕೆ? ಎಂದು ಕೆಂಡಾಮಂಡಲವಾಗಿ, ಅಮಿತಾಬ್‌ಬಚ್ಚನ್ ಚಿತ್ರಗಳನ್ನು ಬಹಿಷ್ಕರಿಸಿದರು. ಕೊನೆಗೆ ಜಯಾ ಹೇಳಿಕೆಗಾಗಿ, ಅಮಿತಾಬ್ ಕ್ಷಮೆ ಕೇಳಬೇಕಾಯಿತು. ಇಡೀ ಹಿಂದಿ ಚಿತ್ರರಂಗವನ್ನು ಠಾಕ್ರೆಗಳು ಹೀಗೆ ಮಣಿಸುತ್ತಿದ್ದಾರೆ.

ನಮ್ಮ ದೇಶದ ಸಿನಿಮಾ ಇತಿಹಾಸವನ್ನು ಅವಲೋಕಿಸಿದರೆ ದೇಶದ ಉದ್ದಗಲಕ್ಕೂ ಒಂದೇ ರೀತಿಯ ಮನಸ್ಥಿತಿ ಪ್ರವಹಿಸಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು. ಸ್ವಾತಂತ್ರ್ಯ ಹೋರಾಟದಲ್ಲಿ  ಅಂತಹ ಚಳವಳಿಗಳಿಗೆ ಪೂರಕವಾಗಿ ಸಿನಿಮಾ ಕೆಲಸ ಮಾಡಿತು. 1939-40ರ ಆರಂಭದ ಕಾಲದ ಚಲನಚಿತ್ರಗಳಲ್ಲಿ ಅದು ಯಾವುದೇ ಭಾಷೆಯ ಚಿತ್ರವಾಗಿರಲಿ ಅದರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಪೂರಕವಾದ ಅಂಶಗಳಿವೆ.

ಸ್ವಾತಂತ್ರ್ಯದ ಆರಂಭಕಾಲದಲ್ಲಿ ದೇಶ ಎದುರಿಸುತ್ತಿದ್ದ ಎಲ್ಲ ಸಮಸ್ಯೆಗಳೂ ಎಲ್ಲ ಭಾಷಾ ಚಿತ್ರರಂಗದಲ್ಲಿ ಚಿತ್ರಗಳ ವಸ್ತುವಾಗಿದೆ. ಆರಂಭಿಕ ಚಿತ್ರಗಳೆಲ್ಲಾ ಪೌರಾಣಿಕ ಚಿತ್ರಗಳು. ಪೌರಾಣಿಕ ಮಹಿಳಾ ಪಾತ್ರಗಳ ಸಾಮಾಜಿಕ ಮೌಲ್ಯವನ್ನು ಎತ್ತಿ ಹಿಡಿಯುವ ಮೂಲಕ ಅದಕ್ಕೊಂದು ಗೌರವ ತಂದುಕೊಡುವ ಕೆಲಸ ಮಾಡಿದವು. ಇಡೀ ದೇಶ ಒಂದು ಎನ್ನುವ ಮನೋಭಾವ ಎದ್ದು ಕಾಣುವ ಅಂಶವಾಗಿತ್ತು.

ಕನ್ನಡ ಚಿತ್ರಗಳು ಅಂದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಚಿತ್ರೀಕರಣವಾಗುತ್ತಿದ್ದವು. ಕೊಯಮತ್ತೂರಿನ ಪಕ್ಷಿರಾಜಾ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಹಿಂದಿ, ತೆಲುಗು, ತಮಿಳು ಚಿತ್ರಗಳು ಕೋಲ್ಕತ್ತಾದಲ್ಲಿನ ಸ್ಟುಡಿಯೋಗಳಲ್ಲೂ ತಯಾರಾಗುತ್ತಿದ್ದವು.

ಹಿಂದಿ ಗಾಯಕರು, ನಟಿಯರು ನಿರ್ದೇಶಕರು ಎಲ್ಲ ಭಾಷೆಗಳ ಚಿತ್ರಗಳಲ್ಲಿ ದುಡಿಯುವ ಸಂಪ್ರದಾಯ ಚಲನಚಿತ್ರ ಕಣ್ ಬಿಟ್ಟ ನೂರು ವರ್ಷಗಳ ಹಿಂದಿನಿಂದಲೂ ಇದೆ. ಎಂ.ಜಿ.ಆರ್. ಶ್ರೀಲಂಕಾದಿಂದ ಬಂದು, ಮಲಯಾಳಿಯಾಗಿದ್ದರೂ ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ಆಗಿದ್ದು ಹೇಗೆ? ಮೂಲ ಮರಾಠಿಯಾದರೂ ರಜನೀಕಾಂತ್ ಕನ್ನಡಿಗನಾಗಿ, ನಂತರ ತಮಿಳಿಗನಾಗಿ ಅಲ್ಲಿ ಸೂಪರ್ ಸ್ಟಾರ್ ಎಂದು ಜನರಿಂದ ಕರೆಯಿಸಿಕೊಂಡದ್ದು ಹೇಗೆ? ಅವೆಲ್ಲಾ ಬೇಡ, ಕನ್ನಡತಿಯಾಗಿ ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿಯೇ ಆದದ್ದು ಚೋದ್ಯವಲ್ಲವೇ? ಕನ್ನಡ ಚಿತ್ರಗಳಿಗೆ ಈಗ ಹಿನ್ನೆಲೆ ಗಾಯಕರಾಗಿರುವವರೆಲ್ಲ ಬಹುತೇಕರು ಹಿಂದಿಯವರೇ, ಮುಂಬೈನಿಂದಲೇ ಅವರ ಆಗಮನವಾಗುತ್ತದೆ. ಬಹುತೇಕ ನಾಯಕಿಯರು ಹಿಂದಿಯವರೇ. ರಾಜ್ ಠಾಕ್ರೆ ಅವರಿಗೆ ಇವೆಲ್ಲಾ ತಿಳಿಯುವುದಿಲ್ಲವೇ?

ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೊಳು - ಕೊಡು ಸಂಬಂಧಕ್ಕೆ ಇತಿಹಾಸವೇ ಇದೆ. ರಂಗಭೂಮಿಯಲ್ಲೂ ಇದು ಸಾರ್ವತ್ರಿಕವಾಗಿ ಕಾಣಿಸಿಕೊಳ್ಳುತ್ತದೆ. ಗುಬ್ಬಿ ಕಂಪೆನಿಯ ನಾಟಕಗಳು ದಕ್ಷಿಣ ಭಾರತದ ಬಹಳ ಕಡೆ ಪ್ರದರ್ಶನಗೊಂಡು ಜನಪ್ರಿಯವಾಗಿರುವ ಉದಾಹರಣೆಗಳಿವೆ. ಸಿನಿಮಾ ಎನ್ನುವುದು ಇಡೀ ಭಾರತದ ಮನಸ್ಸುಗಳನ್ನು ಬೆಸೆಯುವ ನಿಸ್ತಂತುವಾಹಿನಿಯಾಗಿದೆ.
 
ಏಕಕಾಲಕ್ಕೆ ಒಂದೇ ರೀತಿಯ ಟ್ರೆಂಡ್ ಸೃಷ್ಟಿಸುವ, ಆ ಮೂಲಕ ಒಂದು ಪೀಳಿಗೆಯ ಮನೋಭಾವದಲ್ಲಿ ಏಕರೂಪತೆಯನ್ನು ಸ್ಥಾಪಿಸುವ ಕೆಲಸ ಸಿನಿಮಾದಿಂದ ಆಗುತ್ತಿದೆ ಎನಿಸುತ್ತಿದೆ. ದಾದಾಸಾಹೇಬ್ ಫಾಲ್ಕೆ ಅವರು `ಸತ್ಯ ಹರಿಶ್ಚಂದ್ರ~ ಚಿತ್ರ ನಿರ್ಮಿಸಿ ಒಂದು ದಾರಿಯನ್ನು ತೋರಿಸಿಕೊಟ್ಟದ್ದೇ ತಡ, ಭಾರತದ ಬಹುತೇಕ ಭಾಷೆಗಳಲ್ಲಿ ಹರಿಶ್ಚಂದ್ರ ಕತೆ ಮೂಡಿ ಬಂತು.
 
ಎಲ್ಲವೂ ಜನರಿಗೆ ಒಪ್ಪಿಗೆಯಾಗಿ, ಜನ ಚಿತ್ರವನ್ನು ನೋಡಲು ತವಕಿಸುತ್ತಿದ್ದರು. ಪೌರಾಣಿಕ ಚಿತ್ರಗಳೇ ತಯಾರಾಗುತ್ತಿದ್ದ ಕಾಲದಲ್ಲಿ ಭಾರತದ ಉದ್ದಗಲಕ್ಕೂ ಅದೇ ಮಾದರಿಯ ಚಿತ್ರ ಸರಣಿಯೇ ನಿರ್ಮಾಣವಾಯಿತು. ಭಾರತದ ಯಾವುದೋ ಒಂದು ಮೂಲೆಯಲ್ಲಿ ಪೌರಾಣಿಕ, ಜಾನಪದ ಕತೆಯನ್ನು ಬಿಟ್ಟು ಸಾಮಾಜಿಕ ಚಿತ್ರ ನಿರ್ಮಾಣವಾದ ಕೂಡಲೇ ಆ ಐಡಿಯಾವನ್ನು ಇಡೀ ಭಾರತದ ಚಿತ್ರರಂಗ ಒಪ್ಪಿಕೊಂಡು ಪೌರಾಣಿಕದಿಂದ ಸಾಮಾಜಿಕಕ್ಕೆ ಹೊರಳಿತು.

ಅದೇ ರೀತಿ ದಶಕದಿಂದ ದಶಕಕ್ಕೆ ಪ್ರೇಮ, ಸೌಮ್ಯ ಚಿತ್ರಗಳ ಯುಗದಿಂದ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಟ್ರೆಂಡ್‌ನತ್ತ ಚಿತ್ರರಂಗ ಹೊರಳಿದ್ದೂ ಕೂಡ ಯಾವುದೇ ಒಂದು ಮೂಲೆಯಲ್ಲಿ ಚಿತ್ರರಂಗವೇ ರೂಪಿಸಿಕೊಟ್ಟ ಸೂತ್ರದ ಪ್ರಕಾರವೇ ಎನ್ನುವುದನ್ನು ಮರೆಯುವಂತಿಲ್ಲ.

ಇಂದಿಗೂ ಒಂದು ಚಿತ್ರ ಯಶಸ್ವಿಯಾದರೆ ಅದು ಭಾರತದ ಬಹುತೇಕ ಕಡೆ ಡಬ್ ಆಗಿಯೋ, ರೀಮೇಕಾಗಿಯೋ, ಯಥಾಪ್ರಕಾರವೋ ಪ್ರದರ್ಶನಗೊಳ್ಳುತ್ತದೆ. ಎಲ್ಲ ಕಡೆ ಜನ ಅದನ್ನು ಮೆಚ್ಚಿ ನೋಡುತ್ತಾರೆ. ಜನಸಾಮಾನ್ಯರ ಮನಸ್ಥಿತಿ ಏಕರೂಪವಾಗಿದೆ. ಕಲೆಯನ್ನು ಆಸ್ವಾದಿಸುವ ಗುಣ ಒಂದೇ ಆಗಿದೆ. ಅದರಲ್ಲಿ ಹುಳುಕು ಹುಡುಕುವವರೇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT