ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನ್ಯವಾದಗಳು-ಅದ್ಭುತ ಪ್ರತಿಕ್ರಿಯೆ ನೀಡಿರುವ ಪ್ರಜಾವಾಣಿ ಓದುಗ ಸಮೂಹಕ್ಕೆ!

Last Updated 7 ಆಗಸ್ಟ್ 2011, 8:20 IST
ಅಕ್ಷರ ಗಾತ್ರ

ರಾಜ್ಯದ ಎಲ್ಲ ಭಾಗಗಳು, ಎಲ್ಲ ವಯೋಮಾನ ಹಾಗೂ ವೈವಿಧ್ಯಮಯ ಶೈಕ್ಷಣಿಕ ಹಿನ್ನೆಲೆಗಳನ್ನು ಪ್ರತಿನಿಧಿಸುವ ಓದುಗರಿಂದ ನೂರಾರು ಪ್ರಶ್ನೆಗಳು ಬಂದಿವೆ.  ವಿಶೇಷ ಎಂದರೆ, ಹೆಚ್ಚಿನ ಪ್ರಶ್ನೆಗಳು ಬಂದಿರುವುದು ರಾಜ್ಯದ ಗ್ರಾಮಾಂತರ ಪ್ರದೇಶ ಹಾಗೂ ಪುಟ್ಟ ಪಟ್ಟಣಗಳಿಂದ!

ಪ್ರಶ್ನೆಗಳೂ ವೈವಿಧ್ಯಮಯ, ಅವುಗಳ ವೈಶಾಲ್ಯ, ವ್ಯಾಪ್ತಿಯೂ ಅಗಾಧ. ಅಮೆರಿಕದಲ್ಲಿ ಶಿಕ್ಷಣ, ಎರಡೂ ದೇಶಗಳ ಸಮಾಜ, ಸಂಸ್ಕೃತಿ, ಸರ್ಕಾರ, ಸವಾಲುಗಳು, ವೀಸಾಗಳು, ಪ್ರವಾಸಿ ತಾಣಗಳು ಮುಂತಾದ ವಿಷಯಗಳನ್ನು ಓದುಗರು ಪ್ರಸ್ತಾಪಿಸಿದ್ದಾರೆ.

ಅಂತೆಯೇ, ಭಯೋತ್ಪಾದನೆಯ ಕುರಿತ ಆತಂಕಗಳನ್ನೂ ಓದುಗರು ಹಂಚಿಕೊಂಡಿದ್ದಾರೆ.  ಆದರೆ, ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವುದು ಸಾಧ್ಯವಾಗದ ಕಾರಣ, ನಾವು ಪ್ರಾತಿನಿಧಿಕವಾದ ಪ್ರಶ್ನೆಗಳನ್ನು ಆಯ್ದು, ಉತ್ತರಿಸಲು ಯತ್ನಿಸಿವೆ.

ಪ್ರತಿ ತಿಂಗಳೂ,  ಸಾಧ್ಯವಿದ್ದಷ್ಟೂ ವೈವಿಧ್ಯಮಯ ಪ್ರಶ್ನೆಗಳಿಗೆ ಉತ್ತರಿಸಲು ಯತ್ನಿಸುತ್ತೇವೆ.  ತಮ್ಮ ಪ್ರಶ್ನೆ,ಟಿಪ್ಪಣಿ ಅಥವಾ ಅನಿಸಿಕೆಗಳನ್ನು ನಮ್ಮಂದಿಗೆ ಹಂಚಿಕೊಳ್ಳಿ. ತಮ್ಮ ಪ್ರಶ್ನೆಗಳನ್ನುaskamerica@prajavani.co.in ಕಳುಹಿಸಿ.ನಮ್ಮ ವೆಬ್‌ಸೈಟ್‌ಗೆ    ˆ http://chennai.usconsulate.gov ಭೇಟಿ ನೀಡಿ, ಅಲ್ಲದೇ, ಫೇಸ್‌ಬುಕ್‌ನಲ್ಲೂ ನಮ್ಮ ಗೆಳೆಯರಾಗಿ http://www.facebook.com/chennai.usconsulate.

ಬಿ. ಎಂ. ಪಾರ್ಥಸಾರಥಿ, ಬೆಂಗಳೂರು
ಭಾರತ-ಪಾಕ್ ಬಾಂಧವ್ಯಕ್ಕೆ ಅಡ್ಡಿಯಾಗಿರುವ ಕಾಶ್ಮೀರ ಸಮಸ್ಯೆ ಬಗ್ಗೆ ನಿಮ್ಮ ದೇಶದ ನಿಲುವು ಏನು?
ಕಾಶ್ಮೀರದ ವಿಚಾರವೂ ಸೇರಿದಂತೆ, ಪರಸ್ಪರ ದೇಶಗಳ ನಡುವಿನ ಸಂಬಂಧ ವೃದ್ಧಿಗಾಗಿ ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಮಾತುಕತೆಯನ್ನು ಅಮೆರಿಕ ಸ್ವಾಗತಿಸುತ್ತದೆ. ಆದರೆ, ಮಾತುಕತೆಯ ಗತಿ, ಹರವು ಹಾಗೂ ಸ್ವರೂಪಗಳನ್ನು ಭಾರತ ಹಾಗೂ ಪಾಕಿಸ್ತಾನದ ನಾಯಕರುಗಳು ನಿರ್ಧರಿಸಬೇಕು.

1. ದಯಾನಂದ
ಪ್ರಶ್ನೆ: ಆರ್ಥಿಕ ಹಿಂಜರಿಕೆಯ ಉಪದ್ರವ ಇನ್ನೂ ಅಮೆರಿಕದ ಅರ್ಥ ವ್ಯವಸ್ಥೆಯನ್ನು ಕಾಡುತ್ತಿದೆಯೇ?  ಅಮೆರಿಕದಲ್ಲಿ  ಉದ್ಯೋಗಾವಕಾಶವನ್ನು ಅರಸಲು ಇದು ಸಕಾಲವೇ?
ಉತ್ತರ: ತಲೆತಲಾಂತರಗಳು ಕಂಡಿರದಿದ್ದ ಭಯಾನಕವಾದ ಆರ್ಥಿಕ ಕುಸಿತದಿಂದ ಅಮೆರಿಕ ಈಗ ಹೊರ ಬರುತ್ತಿದೆ. 

ಸತತವಾದ ಎರಡು ವರ್ಷಗಳ ಉದ್ಯೋಗ ನಷ್ಟ ಕಂಡಿದ್ದ ಅರ್ಥ ವ್ಯವಸ್ಥೆ, ಈ ಸಾಲಿನಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವ ಮೂಲಕ ಚೇತರಿಸಿಕೊಳ್ಳಲು ಆರಂಭಿಸಿದೆ. ಒಟ್ಟಾರೆಯಾಗಿ ಅರ್ಥ ವ್ಯವಸ್ಥೆಯು ಧನಾತ್ಮಕ ದಿಸೆಯಲ್ಲಿ ಸಾಗುತ್ತಿದೆ. 
 
ನಮ್ಮ ಅರ್ಥ ವ್ಯವಸ್ಥೆಯ ಆರೋಗ್ಯ ಸೂಚಿಯ ಮಹತ್ವದ ಮಾನದಂಡ ಎಂದರೆ ಸಾಮಾನ್ಯ ಪ್ರಜೆಯ ಪ್ರಗತಿಗೆ ಅವಕಾಶ. ಗೂಡಂಗಡಿ ಮಾಲೀಕನೊಬ್ಬನ ಕನಸೇ ಇರಬಹುದು ಅಥವಾ ಉದ್ಯಮಿಯೊಬ್ಬನ ಭಾರಿ ಆಲೋಚನೆಯ ಅನುಷ್ಠಾನವೇ ಆಗಬಹುದು, ಎಲ್ಲರಿಗೂ ಅಭಿವೃದ್ಧಿ ಹೊಂದುವ ಅವಕಾಶ ಕಲ್ಪಿಸುವುದು. 

ಅಮೆರಿಕ ಸರ್ಕಾರದ (ಫೆಡರಲ್) ಆಯವ್ಯಯವು ಹಲವು ಪರಿಣಾಮಕಾರಿಯಲ್ಲದ ಯೋಜನೆಗಳ ಮೇಲಿನ ವೆಚ್ಚವನ್ನು ಕಡಿತ ಮಾಡಿ, ಶಿಕ್ಷಣ ಕ್ಷೇತ್ರದ ಸುಧಾರಣೆ,ಉದ್ಯೋಗ ತರಬೇತಿ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕನ್ನರು ಉದ್ಯೋಗ ಗಿಟ್ಟಿಸಿಕೊಳ್ಳಲು ಅಗತ್ಯವಾದ ಕೌಶಲಗಳನ್ನು ರೂಢಿಸಿಕೊಳ್ಳಲು ತರಬೇತಿ ನೀಡಲೂ ಅಗತ್ಯ ಬಂಡವಾಳ ಹೂಡಲಾಗುತ್ತಿದೆ. 

ಆದರೆ, ಅರ್ಥ ವ್ಯವಸ್ಥೆಯ ವಾಸ್ತವ ಅರಿತಿರುವ ಅಮೆರಿಕನ್ನರು ಹಲವು ತ್ಯಾಗಗಳನ್ನು ಮಾಡಲೇಬೇಕಿದೆ.  ಸರಕಾರಿ ನೌಕರರ ವೇತನ ಹೆಚ್ಚಳದ ಮೇಲೆ ಎರಡು ವರ್ಷಗಳ ತಡೆ ಮುಂತಾದ ಕಠಿಣ ಕ್ರಮಗಳು, ದೀರ್ಘಾವಧಿಯಲ್ಲಿ ಅಮೆರಿಕವನ್ನು ಸದೃಢಗೊಳಿಸಿ, ಸಾಮಾನ್ಯ ಜನರಿಗೆ ಸಮೃದ್ಧಿ ತರುತ್ತವೆ.

2. ಪಿ.ಜಿ. ಕೌಶಿಕ್, ದಾವಣಗೆರೆ
ಪ್ರಶ್ನೆ: ಅಮೆರಿಕ ವೀಸಾ ಪಡೆಯುವುದು ಹೇಗೆ?
ಉತ್ತರ: ಅಮೆರಿಕಕ್ಕೆ ವಲಸೆ ಹೋಗಲು ಅಗತ್ಯವಾದ ಇಮಿಗ್ರೆಂಟ್ ವೀಸಾ ಪಡೆಯಲಿಚ್ಛಿಸುವ ವಿದೇಶಿ ನಾಗರಿಕರನ್ನು ಅವರ ಅಮೆರಿಕನ್ ನಾಗರಿಕ ಬಂಧುಗಳು,  ಅಥವಾ ಅಮೆರಿಕದ ಕಾನೂನುಬದ್ಧ ಶಾಶ್ವತ ನಿವಾಸಿ ಸ್ಥಾನಮಾನ ಹೊಂದಿರುವ ಅವರ ಬಂಧುಗಳು ಅಥವಾ ಉದ್ದೆೀಶಿತ ಉದ್ಯೋಗದಾತರು ಪ್ರಾಯೋಜಿಸಿರಲೇಬೇಕು.

ಅಲ್ಲದೆ, ಅವರು ಅಮೆರಿಕದ ನಾಗರಿಕತ್ವ ಹಾಗೂ ಸೇವೆ (USCIS) ವಿಭಾಗದ ಮಾನ್ಯತೆ ಪಡೆದ ಫಲಾನುಭವಿ ಅರ್ಜಿದಾರರಾಗಿರಬೇಕು. ಇಮಿಗ್ರೆಂಟ್ ವೀಸಾಗಳ ಕುರಿತು ಹೆಚ್ಚಿನ ಮಾಹಿತಿಗೆ  ಈ ವೆಬ್‌ಸೈಟ್‌ಗೆ ಭೇಟಿ ನೀಡಿ: http://www.travel.state.gov/visa/immigrants/immigrants_1340.html
1340.htmlಅಮೆರಿಕಕ್ಕೆ ತಾತ್ಕಾಲಿಕ ಭೇಟಿ ನೀಡಲು ಬಯಸುವಿರಾದಲ್ಲಿ ನೀವು ನಾನ್-ಇಮಿಗ್ರೆಂಟ್ ವೀಸಾ ಪಡೆಯಬೇಕು. ಪ್ರಯಾಣದ ಉದ್ದೆೀಶವನ್ನು ಆಧರಿಸಿ, ಸೂಕ್ತವಾದ ನಾನ್- ಇಮಿಗ್ರೆಂಟ್ ವೀಸಾ ಪಡೆಯಬಹುದು. 

ಮುಖ್ಯವಾದ ನಮೂನೆಗಳೆಂದರೆ, ಪ್ರವಾಸ/ವ್ಯವಹಾರದ ಉದ್ದೆೀಶವಾಗಿದ್ದರೆ ( B1/B2), ತಾತ್ಕಾಲಿಕ ಉದ್ಯೋಗಿಗಳಾಗಿದ್ದರೆ (H ಅಥವಾ L),  ವಿದ್ಯಾರ್ಥಿಗಳು ಅಥವಾ ವಿನಿಮಯ ಕಾರ್ಯಕ್ರಮಗಳ ಪ್ರವಾಸಿಗಳಾಗಿದ್ದರೆ (F, J, Mಮತ್ತು ), ವಿಮಾನ ಚಾಲಕರ ಅಥವಾ ನಾವಿಕರ ತಂಡದ ಸದಸ್ಯರಾಗಿದ್ದರೆ  (C1/D),  ಪತ್ರಕರ್ತರಾಗಿದ್ದರೆ (I), ಧಾರ್ಮಿಕ ಕಾರ್ಯಕರ್ತರಾಗಿದ್ದರೆ (R) ಮತ್ತು ಅವಲಂಬಿತರ ವೀಸಾಗಳಾಗಿದ್ದರೆ (H4, F2, J2, L2, ಮತ್ತು R2).  ವೀಸಾಗಳ ಅಗತ್ಯ, ಅರ್ಹತೆ ಕುರಿತ ಹೆಚ್ಚಿನ ವಿವರ ನಮ್ಮ ವೆಬ್‌ಸೈಟ್‌ನಲ್ಲಿ http://chennai.usconsulate.gov/temporary-visitors.htm ಲಭ್ಯ.

3. ರಾಘವೇಂದ್ರ ಹೆಗಡೆ, ಬೆಳಗಾವಿ
ಪ್ರಶ್ನೆ:
ಅಮೆರಿಕದ ರಾಷ್ಟ್ರಗೀತೆ ಯಾವುದು? ಅದನ್ನು ರಚಿಸಿದ್ದು ಯಾರು?
ಉತ್ತರ: ಅಮೆರಿಕದ ರಾಷ್ಟ್ರಗೀತೆಯನ್ನು “ದಿ ಸ್ಟಾರ್- ಸ್ಪಾಂಗಲ್ಡ್ ಬ್ಯಾನರ್‌” (The Star-Spangled Banner”))  ಎಂದು ಕರೆಯಲಾಗುತ್ತದೆ. 

ಇದನ್ನು ಫ್ರಾನ್ಸಿಸ್ ಸ್ಕಾಟ್ ಕೀ 1814ರಲ್ಲಿ ರಚಿಸಿದರು.  ಅಮೆರಿಕ ಹಾಗೂ ಗ್ರೇಟ್ ಬ್ರಿಟನ್ ಗಳ ನಡುವೆ 1812ರಲ್ಲಿ ನಡೆದ ಯುದ್ಧದ ಸನ್ನಿವೇಶವೊಂದನ್ನು ವರ್ಣಿಸುವ ದೀರ್ಘವಾದ ಕವನದಿಂದ ಆಯ್ದ ಭಾಗವನ್ನು ರಾಷ್ಟ್ರಗೀತೆಯೆಂದು ಪರಿಗಣಿಸಲಾಗಿದೆ. 

ವೈರಿ ಪಡೆಗಳು ಅಮೆರಿಕದ ಸೈನಿಕ ಶಿಬಿರದ ಮೇಲೆ ನಡೆಸಿದ ಅಹೋರಾತ್ರಿ ಬಾಂಬ್ ದಾಳಿಯ ನಂತರವೂ ನಸುಕಿನಲ್ಲಿ ಇನ್ನೂ ಅಮೆರಿಕದ ಬಾವುಟ ಆಗಸದಲ್ಲಿ ಹಾರುತ್ತಿದ್ದುದನ್ನು ಕಂಡು (ಶಿಬಿರ ಶತ್ರು ಸೈನಿಕರ ವಶವಾಗದಿರುವುದನ್ನು ಸಾರುವ) ರೋಮಾಂಚಿತರಾದ ಕೀ, ಈ ಕವನವನ್ನು ರಚಿಸಿದರು. ಅಮೆರಿಕದ ಸಂಸತ್ತು(ಕಾಂಗ್ರೆಸ್) 1931ರಲ್ಲಿ ಈ ಕವನದ ಆಯ್ದ ಭಾಗಗಳನ್ನು ರಾಷ್ಟ್ರಗೀತೆ ಎಂದು ಅಂಗೀಕರಿಸಿತು.

4. ಪೃಥ್ವಿ ವಿ.ಜೆ.
ಪ್ರಶ್ನೆ: ನಾನು ಎಂಜಿನಿಯರಿಂಗ್ (ಮೆಕಾನಿಕಲ್) ಅಂತಿಮ ವರ್ಷದ ವಿದ್ಯಾರ್ಥಿ.  ನಾನು GRE & TOEFL ಪರೀಕ್ಷೆಗಳನ್ನು ಇದೇ ಸೆಪ್ಟೆಂಬರ್ ತಿಂಗಳಲ್ಲಿ ತೆಗೆದುಕೊಳ್ಳುತ್ತಿದ್ದೆೀನೆ.
 
ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಸೆಪ್ಟೆಂಬರ್ 2012ರ ಕೋರ್ಸುಗಳಿಗೆ ಸೇರಲು ಗಡುವನ್ನು ತಿಳಿಯಬಹುದೇ?  ಅಮೆರಿಕದಲ್ಲಿ ವಿದ್ಯಾಭ್ಯಾಸ ಮುಗಿಸಿದ ಬಳಿಕ ಉದ್ಯೋಗ ವೀಸಾಕ್ಕಾಗಿ ಅರ್ಜಿ ಸಲ್ಲಿಸಬಹುದೇ?  ಹಾಗಿದ್ದಲ್ಲಿ ಯಾವ ಅಗತ್ಯಗಳನ್ನು ಪೂರೈಸಬೇಕು?
ನನ್ನ ವಿದ್ಯಾಭ್ಯಾಸದ ಬಳಿಕ, ಅಲ್ಲಿಯೇ  ನಾನು ಉದ್ಯೋಗಾವಕಾಶವನ್ನು ಕೈಗೆತ್ತಿಕೊಳ್ಳಲು ಆಸಕ್ತನಾಗಿರುವೆ. ಅಲ್ಲದೆ,  ನಿಮ್ಮ ದೇಶದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಯೊಬ್ಬನ ಜೀವನ ನಿರ್ವಹಣಾ ವೆಚ್ಚ ಎಷ್ಟು ಎಂಬುದನ್ನೂ ತಿಳಿಸಿ.  ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುವೆ.

ಉತ್ತರ: ಈಗಾಗಲೇ ಅಮೆರಿಕದಲ್ಲಿರುವ ಒಂದು ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳ ಗುಂಪನ್ನು ಸೇರಲು ಯೋಚಿಸುತ್ತಿರುವುದಕ್ಕೆ ಸ್ವಾಗತ.  ಪ್ರವೇಶಾರ್ಹತೆ ಮತ್ತಿತರ ಮಾಹಿತಿಗಾಗಿ ನೀವು ಆಯಾ ಕಾಲೇಜುಗಳ ವೆಬ್‌ಸೈಟ್‌ಗಳ ಮೊರೆ ಹೋಗಬೇಕು.

ಒಟ್ಟಾರೆಯಾಗಿ ಹೇಳುವುದಾದರೆ, ನೀವು GRE & TOEFL  ಪರೀಕ್ಷೆಗಳನ್ನು 2011ರ ಸೆಪ್ಟೆಂಬರ್‌ನಲ್ಲಿ ತೆಗೆದುಕೊಳ್ಳುತ್ತಿರುವುದರಿಂದ, ಸೆಪ್ಟೆಂಬರ್ 2012ರ ಶೈಕ್ಷಣಿಕ ವರ್ಷಕ್ಕೆ ಅರ್ಜಿ ಸಲ್ಲಿಸಲು ನಿಮಗೆ ಸಾಕಷ್ಟು (ಸುಮಾರು ಒಂದು ವರ್ಷ) ಸಮಯಾವಕಾಶವಂತೂ ಇದೆ.

  ಅಲ್ಲಿನ ವಿದ್ಯಾಭ್ಯಾಸದ ನಂತರ ಉದ್ಯೋಗಾವಕಾಶ ಕೈಗೆತ್ತಿಕೊಳ್ಳುವ ಕುರಿತಂತೆ ಹೇಳುವುದಾದರೆ, ಕೆಲ ಪ್ರಕರಣಗಳಲ್ಲಿ ಇದು ಸಾಧ್ಯ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ತಿಳಿಯಲುದಯವಿಟ್ಟುhttp://www.ice.gov/sevis/students/opt.htmವೆಬ್‌ಸೈಟ್‌ಗೆ ಭೇಟಿ ನೀಡಿ.  

 ಅಮೆರಿಕದಲ್ಲಿ ಉನ್ನತ ಶಿಕ್ಷಣದ ಕುರಿತ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರ ಹಾಗೂ ಮಹತ್ವದ ಮಾಹಿತಿ ಸಂಪನ್ಮೂಲಕ್ಕಾಗಿ  ಅಮೆರಿಕ- ಭಾರತ ಶಿಕ್ಷಣ ಪ್ರತಿಷ್ಠಾನದ ((U.S.-India Educational Foundation -USIEF)  www.usief.org.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT