ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವು ದೇವರನ್ನು ನಂಬುತ್ತಿರಾ? ನಿಮ್ಮ ದೇಶದ ಧರ್ಮ ಗ್ರಂಥ ಯಾವುದು?

Last Updated 3 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಡಾ.ಮಲ್ಲಿಕಾರ್ಜುನ ಕುಂಬಾರ ರಾಜೂರ, ಗಜೇಂದ್ರಗಡ
1. ನೀವು ದೇವರನ್ನು ನಂಬುತ್ತಿರಾ? ನಿಮ್ಮ ದೇಶದ ಧರ್ಮ ಗ್ರಂಥ ಯಾವುದು?
ಅಮೆರಿಕ ಸಂಯುಕ್ತ ಸಂಸ್ಥಾನವು ಯಾವ ಧಾರ್ಮಿಕ ಪಠ್ಯವನ್ನೂ ಅಧಿಕೃತವಾಗಿ ಹೊಂದಿಲ್ಲ. `ದೇವರಲ್ಲಿ ನಮ್ಮ ನಂಬಿಕೆ' ಎಂಬುದು ರಾಷ್ಟ್ರದ ಅಧಿಕೃತ ಧ್ಯೇಯವಾಕ್ಯ ವಾದರೂ, ಇದು ಯಾವುದೇ ನಿರ್ದಿಷ್ಟ ದೇವರನ್ನು ಉಲ್ಲೇಖಿಸುವುದಿಲ್ಲ. ಧರ್ಮದ ಆಯ್ಕೆಯ ಹಕ್ಕನ್ನು ಅಮೆರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ ಖಾತರಿಪಡಿಸುತ್ತದೆ. ಅಧಿಕಾರ ಗ್ರಹಣದ ಸಂದರ್ಭದಲ್ಲಿ ಸಾರ್ವಜನಿಕ ಅಧಿಕಾರಿ ಯೊಬ್ಬ, ತನ್ನ ಆಯ್ಕೆಯ ಧಾರ್ಮಿಕ ಗ್ರಂಥದ ಮೇಲೆ ಪ್ರಮಾಣ ವಚನವನ್ನು ಸ್ವೀಕರಿಸಬಹುದು. ಶ್ವೇತ ಭವನ, ರಾಜ್ಯಗಳು ಹಾಗೂ ಸ್ಥಳೀಯ ಅಧಿಕಾರಿಗಳು ಎಲ್ಲ ಧರ್ಮದವರ - (ಸಿಖ್ಖರು, ಹಿಂದೂಗಳು, ಮುಸ್ಲಿಮರು, ಯಹ್ಯೂದಿಗಳು, ಬೌದ್ಧರು ಹಾಗೂ ಇತರರು), ರಜೆ ದಿನಗಳನ್ನೂ ಗುರುತಿಸುತ್ತಾರೆ.

ಧಾರ್ಮಿಕ ಸ್ವಾತಂತ್ರ್ಯ ದಿನದಂದು (ಜನವರಿ 16, 2012) ಅಧ್ಯಕ್ಷ ಒಬಾಮ ಅವರು ಹೇಳಿದ್ದು ಹೀಗಿದೆ: “ನಮ್ಮ ಸಂವಿಧಾನದಲ್ಲಿ ರಕ್ಷಣೆಗಳನ್ನು ಖಾತರಿಗೊಳಿಸಲಾಗಿರುವುದರಿಂದ, ಮತಶ್ರದ್ಧೆಯನ್ನು ಮುಕ್ತವಾಗಿ ಆಚರಿಸುವ ಹಾಗೂ ಆಯ್ಕೆ ಮಾಡಿಕೊಳ್ಳುವ ಹಕ್ಕು ನಮ್ಮೆಲ್ಲರಿಗೂ ದೊರೆತಿದೆ. ಸ್ವತಂತ್ರ ರಾಷ್ಟ್ರವಾಗಿ, ಪ್ರತಿಯೊಂದು ಭಾಷೆಯಿಂದ ರೂಪಿತವಾಗಿ ಹಾಗೂ ಪ್ರತಿಯೊಂದು ಸಂಸ್ಕೃತಿಯಿಂದಲೂ ಸಮೃದ್ಧವಾಗಿದೆ ಎಂಬುದು ನಮ್ಮ ಕಥನವಾಗಿದೆ. ಕ್ರೈಸ್ತರು ಹಾಗೂ ಮುಸ್ಲಿಮರು, ಯಹ್ಯೂದಿಗಳು ಹಾಗೂ ಹಿಂದೂಗಳು, ಸಿಖ್ಖರು ಹಾಗೂ ಧರ್ಮಗಳಲ್ಲಿ ನಂಬಿಕೆಯಿಲ್ಲದವರ ದೇಶ ನಮ್ಮದು. ಮಿಶ್ರ ಪರಂಪರೆಯ ತಾಖತ್ತು ನಮಗೆ ದೊರೆಯಲು ಕಾರಣ ನಮ್ಮ ಧಾರ್ಮಿಕ ಸ್ವಾತಂತ್ರ್ಯ.“

ಅಧ್ಯಕ್ಷರ ಭಾಷಣದ ಪೂರ್ಣ ಪಠ್ಯಕ್ಕಾಗಿ ದಯವಿಟ್ಟು ಈ ಮುಂದಿನ ಕೊಂಡಿಯನ್ನು ಬಳಸಿ.
http://www.whitehouse.gov/the-press-office/2013/01/16/presidential-proclamation-religious-freedom-day

ಬಾಬು
2. ಅಮೆರಿಕ ಅಧ್ಯಕ್ಷರ ಸಂಬಳ ಹಾಗೂ ಭತ್ಯೆಗಳ ಕುರಿತು ಮಾಹಿತಿ ನೀಡಿ
ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರು ಜನವರಿ 20, 2001ರಿಂದ ಅನ್ವಯವಾಗುವಂತೆ ವಾರ್ಷಿಕ 4,00,000 ಡಾಲರ್ ಸಂಬಳವನ್ನು ಹಾಗೂ ಖಾಸಗಿ ವೆಚ್ಚಗಳಿಗಾಗಿ ವಾರ್ಷಿಕ 50 ಸಾವಿರ ಡಾಲರುಗಳ  (ತೆರಿಗೆಗಳಿಗೆ ಒಳಪಟ್ಟು) ಭತ್ಯೆಯನ್ನು ಪಡೆಯುತ್ತಾರೆ. ಅಮೆರಿಕ ಸಂಯುಕ್ತ ಸಂಸ್ಥಾನದ ಸಂಸತ್ತು ಅಧ್ಯಕ್ಷರ ವಾರ್ಷಿಕ ಸಂಬಳವನ್ನು ನಿಗದಿ ಪಡಿಸುತ್ತದೆ. ಆದರೆ ಅಧ್ಯಕ್ಷರ ಅವಧಿಯಲ್ಲಿ ಹೆಚ್ಚಿಸುವುದಾಗಿ ಅಥವಾ ಕಡಿಮೆ ಮಾಡುವುದಾಗಲಿ ಸಾಧ್ಯವಿಲ್ಲ.

ಶ್ವೇತಭವನದ ವಾಸ, ಅತಿ ದೊಡ್ಡ ಕಚೇರಿ ಹಾಗೂ ಸಿಬ್ಬಂದಿಯ ನಿರ್ವಹಣೆ, ಅಧ್ಯಕ್ಷೀಯ ವಿಹಾರ ನೌಕೆಯ ಯಾನ, ಅಧ್ಯಕ್ಷರ ಬಳಕೆಗೇ ಮೀಸಲಾದ 'ಏರ್ ಫೋರ್ಸ್ ಒನ್' ವಿಮಾನದಲ್ಲಿ ಹಾರಾಟ, ಮೇರಿಲ್ಯಾಂಡಿನಲ್ಲಿರುವ ಕ್ಯಾಂಪ್ ಡೇವಿಡ್ ವಿಹಾರಧಾಮದಲ್ಲಿ ಸಭೆಗಳನ್ನು ನಡೆಸುವಂಥ ಅನೇಕ ಸವಲತ್ತುಗಳನ್ನು ಅಧಿಕಾರಾವಧಿಯಲ್ಲಿ ಅಧ್ಯಕ್ಷರು ಹೊಂದಿರುತ್ತಾರೆ. 1959ರ ತರುವಾಯ, ಪ್ರತಿಯೊಬ್ಬ ಮಾಜಿ ಅಧ್ಯಕ್ಷರೂ ಜೀವನ ಪರ್ಯಂತ ನಿವೃತ್ತಿ ವೇತನವನ್ನು ಪಡೆಯುತ್ತಾರೆ.
ಶ್ವೇತ ಜೆ. ಪಾಟೀಲ್, ಗುಲ್ಬರ್ಗಾ

3. ನಾನು ಗುಲ್ಬರ್ಗದ ಅಪ್ಪಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿರುವೆ. ಏಳನೇ ಸೆಮಿಸ್ಟರನ್ನು ಡಿಸ್ಟಿಂಗ್ಷನ್ ನಲ್ಲಿ ಪೂರೈಸಿರುವೆ. ನಾನು ಅಮೆರಿಕದಲ್ಲಿ ಎಂ.ಎಸ್. ಪದವಿ ಅಧ್ಯಯನ ಮಾಡಲು ಬಯಸುತ್ತಿರುವೆ. ಅಮೆರಿಕದ ಉತ್ಕೃಷ್ಟ ದರ್ಜೆಯ 30 ವಿಶ್ವವಿದ್ಯಾಲಯಗಳು ಯಾವುವು ? ಅವುಗಳ ವಿಳಾಸಗಳು ಹಾಗೂ ಅಲ್ಲಿನ ಬೋಧನಾ ಶುಲ್ಕಗಳ ಕುರಿತು ಮಾಹಿತಿ ನೀಡಿ
ಕಾಲೇಜು ಅಥವಾ ವಿಶ್ವವಿದ್ಯಾಲಯದ ಆಯ್ಕೆಯು ಹಲವು ಹಂತಗಳನ್ನು ಹೊಂದಿದೆ ಹಾಗೂ ಇವುಗಳಲ್ಲಿ ನಿರ್ಣಾಯಕ ಅಂಶ ಎಂದರೆ ಕಾಲೇಜು ವೆಚ್ಚವನ್ನು ನಿಭಾಯಿಸುವ ಸಾಮರ್ಥ್ಯ. ಕಾಲೇಜುಗಳ ವೆಚ್ಚಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿ, ವಿದ್ಯಾರ್ಥಿ ಹಾಗೂ ಅವರ ಕುಟುಂಬಗಳಿಗೆ ನೆರವಾಗಲು ಅನುವಾಗುವಂತೆ, ಅಮೆರಿಕದ ಶಿಕ್ಷಣ ಇಲಾಖೆಯು ಕಾಲೇಜ್ ಅಫಾರ್ಡಬಿಲಿಟಿ ಹಾಗೂ ಟ್ರಾನ್ಸಪರೆನ್ಸಿ ಸೆಂಟರಿನಲ್ಲಿ ವಿವರ ನೀಡಿದೆ. ಇದು ಮುಂದಿನ ಕೊಂಡಿಯಲ್ಲಿ ಠhttp://collegecost.ed.gov/catc/Default.aspx ಭ್ಯ.
ಯು.ಎಸ್-ಭಾರತ ಶಿಕ್ಷಣ ಪ್ರತಿಷ್ಠಾನವು ಭಾರತದಲ್ಲಿ ಕಚೇರಿಗಳನ್ನು ಹೊಂದಿದ್ದು, ಅಂಥ ಒಂದು ಕಚೇರಿಯು ಚೆನ್ನೈನಲ್ಲಿರುವ ಅಮೆರಿಕನ್ ದೂತಾವಾಸದಲ್ಲಿರುವ ಗ್ರಂಥಾಲಯಕ್ಕೆ ಹೊಂದಿಕೊಂಡಿದೆ. ಅಮೆರಿಕದಲ್ಲಿ ಉನ್ನತ ಶಿಕ್ಷಣಾವಕಾಶಗಳನ್ನು ಅರಸುವ ತಮ್ಮಂಥವರಿಗೆ ಪ್ರತಿಷ್ಠಾನದ ಶೈಕ್ಷಣಿಕ ಸಲಹೆಗಾರರು ನೆರವು ನೀಡುತ್ತಾರೆ.

ನಿಖರ, ಸರಿಯಾದ ಹಾಗೂ ಸಮಗ್ರವಾದ ಮಾಹಿತಿಗಾಗಿ ದಯವಿಟ್ಟು ಯು.ಎಸ್.-ಭಾರತ ಶಿಕ್ಷಣ ಪ್ರತಿಷ್ಠಾನ (USIEF)ವನ್ನು ದೂರವಾಣಿ: (044) 2857 4423/4131 ಅಥವಾ ಈ ಮೇಲ್ usiefchennai@usief.org.in  ಮುಖಾಂತರವಾಗಿ ಸಂಪರ್ಕಿಸಬಹುದು.

ಸೈಮನ್ ಭಾಸ್ಕರ, ಬೀದರ್
4. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಅಮೆರಿಕ ದೇಶದ ಆಡಳಿತವು ಏನು ಕ್ರಮ ಕೈಗೊಳ್ಳುತ್ತದೆ ?
ದುರದೃಷ್ಟವಶಾತ್, ಮಹಿಳೆಯರ ಹಿಂಸಾತ್ಮಕ ಅಪರಾಧಗಳು, ಅಮೆರಿಕವೂ ಸೇರಿದಂತೆ, ಪ್ರತಿಯೊಂದು ದೇಶವನ್ನೂ ಬಾಧಿಸುತ್ತಿವೆ. ಅಮೆರಿಕದಲ್ಲಿ, ನಾಗರಿಕ ಸಮಾಜದ ಸಂಸ್ಥೆಗಳೂ ಸೇರಿದಂತೆ ಫೆಡರಲ್, ರಾಜ್ಯ ಹಾಗೂ ಸ್ಥಳೀಯ ಸರ್ಕಾರಗಳು ಮಹಿಳೆಯರ ವಿರುದ್ಧದ ಹಿಂಸೆ ಹಾಗೂ ಅಪರಾಧಗಳನ್ನು ತಡೆಯಲು ಸಕ್ರಿಯವಾಗಿ ತೊಡಗಿವೆ. ನೆರೆಹೊರೆ ಪೊಲೀಸಿಂಗ್, ಸಹಾಯವಾಣಿಗಳಿಗೆ ಉತ್ತರ, ಸಾರ್ವಜನಿಕ ಸ್ಥಳಗಳು ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಸುರಕ್ಷತೆಯ ಮಟ್ಟವನ್ನು ಹೆಚ್ಚಿಸುವಂಥ ಕಾರ್ಯಕ್ರಮಗಳೂ ಸೇರಿವೆ. ಅನೇಕ ಸಂಸ್ಥೆಗಳು ಹಿಂಸೆಗೆ ತುತ್ತಾದ ಮಹಿಳೆಯರಿಗೆ ಹಲವು ಬಗೆಗಳಲ್ಲಿ ನೆರವು ನೀಡುತ್ತವೆ.

ಇದಲ್ಲದೇ, ಪ್ರತಿರಾಜ್ಯವೂ, ಸೂಕ್ತ ತರಬೇತಿ ಪಡೆದ ಗೂಢಚಾರರು ಹಾಗೂ ವಕೀಲರನ್ನು ಒಳಗೊಂಡ ವಿಶೇಷ ಘಟಕಗಳನ್ನು ಹೊಂದಿದ್ದು, ಅವರಿಗೆ ಈ ಬಗೆಯ ಪ್ರಕರಣಗಳನ್ನು ನಿರ್ದಿಷ್ಟವಾಗಿ ನಿಭಾಯಿಸಲು ತರಬೇತಿ ನೀಡಲಾಗುತ್ತದೆ. ಇಂಥ ಪ್ರಕರಣಗಳ ಕುರಿತು ಅವರಿಗೆ ಕೇವಲ ಅಪಾರ ಅನುಭವ ಮಾತ್ರವಲ್ಲ, ಲೈಂಗಿಕ ದೌರ್ಜನ್ಯದಿಂದ ತುತ್ತಾದವರ ಆತಂಕ ಹಾಗೂ ಸೂಕ್ಷ್ಮತೆಗಳಿಗೆ ಸ್ಪಂದಿಸುವ ತರಬೇತಿಯನ್ನೂ ನೀಡಲಾಗುತ್ತದೆ. 

ಇನ್ನು ಇತರ ಪ್ರಕರಣಗಳಲ್ಲಿ, ಡಿಎನ್‌ಎ ತಂತ್ರಜ್ಞಾನ ಹಾಗೂ ಡಿಎನ್‌ಎ ಡೇಟಾ ಬ್ಯಾಂಕುಗಳ ನೆರವು ಪಡೆಯುವಂಥ ವಿನೂತನವಾದ ವೈಜ್ಞಾನಿಕ ತಂತ್ರಗಳು ಅಪರಾಧಿಗಳನ್ನು ಗುರುತಿಸಿ ಹಾಗೂ ಬಂಧಿಸಲು ಪತ್ತೆದಾರರಿಗೆ ನೆರವಾಗುತ್ತವೆ. ಪೊಲೀಸರು ಹಾಗೂ ಪತ್ತೆದಾರರ ಧ್ಯೇಯ ಎಂದರೆ, ಸಾಕ್ಷ್ಯಗಳ ಮೂಲಕ ಬಲವಾದ ಪ್ರಕರಣವನ್ನು ನಿರ್ಮಿಸಿ, ಸೂಕ್ತವಾದ ಆರೋಪಗಳನ್ನು ಸಲ್ಲಿಸಲು ಅಭಿಯೋಜಕರಿಗೆ ಶಿಫಾರಸು ಮಾಡುವುದು. ಈ ಬಗೆಯ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಂಗದ ದಂಡನೆಯ ಸ್ವರೂಪ ಪ್ರಕರಣದಿಂದ ಪ್ರಕರಣಕ್ಕೆ ಬೇರೆಯಾದರೂ, ಬಹುತೇಕ ದೀರ್ಘಾವಧಿ ಸೆರೆವಾಸದ ಶಿಕ್ಷೆ ಸಾಮಾನ್ಯ.

ಇಂದು, ತಿಪಟೂರು
5. ವಿಶ್ವದಾದ್ಯಂತ ಜಾಗತಿಕ ತಾಪಮಾನ ಹೆಚ್ಚಳ ಆಗುತ್ತಿರುವ ಬಗ್ಗೆ ಕಳವಳವನ್ನು ಎಲ್ಲ ದೇಶಗಳೂ ವ್ಯಕ್ತಪಡಿಸುತ್ತಿವೆ. ಜಾಗತಿಕ ತಾಪಮಾನ ಕಡಿಮೆ ಮಾಡಲು, ಅಮೆರಿಕ ತನ್ನ ದೇಶದ ಜನರಿಗೆ ಮತ್ತು ಜಗತ್ತಿನ ಇತರೆ ದೇಶಗಳಿಗೆ ಯಾವ ಸಲಹೆ, ಸಂದೇಶ ಕೊಟ್ಟಿದೆ? ಈ ನಿಟ್ಟಿನಲ್ಲಿ ಅಲ್ಲಿನ ಜನರ ಪ್ರತಿಕ್ರಿಯೆ ಏನು ?
ಭೂಮಿಯ ಹವಾಮಾನ ಅಪಾಯಕಾರಿಯಾಗಿ ಬದಲಾಗುವುದನ್ನು ತಡೆಯಲು ಎಲ್ಲ ದೇಶಗಳೂ ಹೊಗೆ ಹೊರಸೂಸುವ (ಉತ್ಸರ್ಜನೆ) ಪ್ರಮಾಣವನ್ನು ತಗ್ಗಿಸಲು ಕ್ರಮ ಕೈಗೊಳ್ಳಬೇಕಿದೆ. ಇವುಗಳಲ್ಲಿ ಇಂಗಾಲದ ಡೈ ಆಕ್ಸೈಡ್ (CO2) ಉತ್ಸರ್ಜನೆ ಮಾತ್ರವಲ್ಲದೆ, ಜಾಗತಿಕ ತಾಪಮಾನ ಏರಿಕೆಗೆ ಶೇ 30ರಷ್ಟು ಕಾಣಿಕೆ ನೀಡುವ ಕಡಿಮೆ ಆಯಸ್ಸಿನ ಹವಾಮಾನ ಮಾಲಿನ್ಯಕಾರಕಗಳಾದ (Short-Lived Climate Pollutants) ಮಿಥೇನ್, ಬ್ಲಾಕ್ ಕಾರ್ಬನ್ ಅಥವಾ ಹೈಡ್ರೋ ಫ್ರೋರೋ ಕಾರ್ಬನ್ನುಗಳೂ ಸೇರಿವೆ. ಇವುಗಳ ಉತ್ಸರ್ಜನೆಯನ್ನು ಕಡಿಮೆ ಮಾಡುವುದರಿಂದ 2050ರ ವೇಳೆಗೆ 0.5್ನ ಸೆಲ್ಸಿಯಸ್ ನಷ್ಟು ಕಡಿಮೆಯಾಗುವ ಶಕ್ತಿ ಹೊಂದಿದೆ  ಮತ್ತು 20 ಲಕ್ಷ ಅವಧಿಪೂರ್ವ ಮರಣಗಳು ಹಾಗೂ 2030ರ ವೇಳೆಗೆ 3 ಕೋಟಿ ಟನ್ನುಗಳಷ್ಟು ಬೆಳೆ ನಾಶವನ್ನು ತಪ್ಪಿಸಬಹುದು.

ಉತ್ಸರ್ಜನೆಯನ್ನು 2014ರ ವೇಳೆಗೆ ತಗ್ಗಿಸುವ ಮೂಲಕ ಆರ್ಥಿಕ ಹಾಗೂ ಸಮಾಜಿಕ ಅಭಿವೃದ್ಧಿಯ ಧ್ಯೇಯದೊಂದಿಗೆ 20 ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ನೆರವು ನೀಡಲು, ಅಮೆರಿಕ ಸಂಯುಕ್ತ ಸಂಸ್ಥಾನವು 'ಎನ್ಹಾನ್ಸಿಂಗ್ ಕ್ಯಾಪಾಸಿಟ್ ಫಾರ್ ಲೋ ಎಮಿಷನ್ ಡೆವಲಪ್ಮೆಂಟ್ ಸ್ಟ್ರಾಟೆಜಿಸ್'  (EC-LEDS) ಕಾರ್ಯಕ್ರಮವನ್ನು  ಆರಂಭಿಸಿದೆ. 

ಮಾರುಕಟ್ಟೆಯಲ್ಲಿ ಹೊಸತಂತ್ರಜ್ಞಾನಗಳಿಗೆ ಪ್ರೋತ್ಸಾಹ ನೀಡಲು ಅಧ್ಯಕ್ಷರು ಗಮನ ಹರಿಸಿದ್ದಾರೆ.  ಸ್ವಚ್ಛವಾದ ಶಕ್ತಿಯ ಗುಣಮಟ್ಟದ ಕುರಿತ ಅಧ್ಯಕ್ಷರ ಪ್ರಸ್ತಾವನೆಗಳು, ಶುದ್ಧವಾದ ಮೂಲಗಳಿಂದ ವಿದ್ಯುತ್ ಉತ್ಪಾದನೆಯ ಪ್ರಮಾಣಗಳನ್ನು 2035ರಲ್ಲಿ ದುಪ್ಪಟ್ಟು ಅಂದರೆ ಶೇ 80ಕ್ಕೆ ಏರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT