ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆಯ ನೆಲೆ ವಿಸ್ತರಿಸಲು ಮೀಸಲಾತಿ

Last Updated 9 ಜುಲೈ 2017, 19:30 IST
ಅಕ್ಷರ ಗಾತ್ರ

ಮಧ್ಯಮ ವರ್ಗದ ಜನ ಇಷ್ಟಪಡದ ವಿಚಾರವೊಂದನ್ನು ಈಚಿನ ಎರಡು ವಿದ್ಯಮಾನಗಳು ಮುನ್ನೆಲೆಗೆ ತಂದಿವೆ. ಅದು ಮೀಸಲಾತಿ ಕುರಿತ ವಿಚಾರ.

ಭಾರತೀಯ ಕ್ರಿಕೆಟ್ ತಂಡದ ಸಾಧನೆ ಚೆನ್ನಾಗಿಲ್ಲ, ಹಾಗಾಗಿ ಕ್ರಿಕೆಟ್‌ ತಂಡದಲ್ಲಿ ಮೀಸಲಾತಿ ಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಆಠವಲೆ ಆಗ್ರಹಿಸಿದ್ದಾರೆ. ಹೆಚ್ಚಿನ ಸಮುದಾಯಗಳನ್ನು ಕ್ರಿಕೆಟ್ ತಂಡ ಒಳಗೊಂಡಿದ್ದೇ ಆದಲ್ಲಿ, ಅದು ಇನ್ನೂ ಉತ್ತಮ ಸಾಧನೆ ತೋರಬಹುದು ಎಂದು ಆಠವಲೆ ಹೇಳಿದ್ದಾರೆ. ಈ ವಿಚಾರವನ್ನು ಪರಿಶೀಲಿಸುವ ಮುನ್ನ ನಾವು ಕ್ರಿಕೆಟ್ ತಂಡದ ಸಾಧನೆಗೆ ಸಂಬಂಧಿಸಿದ ಮಾಹಿತಿಯನ್ನು ನೋಡೋಣ. ಭಾರತೀಯ ಕ್ರಿಕೆಟ್ ತಂಡವು ಗೆಲ್ಲುವ ಪಂದ್ಯಗಳ ಸಂಖ್ಯೆಗಿಂತಲೂ ಸೋಲುವ ಸಂಖ್ಯೆಯೇ ಹೆಚ್ಚಾಗಿದೆ ಎಂದು ಆಠವಲೆ ಹೇಳಿರುವುದು ಸತ್ಯವೇ? ಇದಕ್ಕೆ ಉತ್ತರ: ಹೌದು.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯ ತಂಡ ಆಸ್ಟ್ರೇಲಿಯಾ (ಸೋಲು 41, ಗೆಲುವು 26), ಇಂಗ್ಲೆಂಡ್ (ಸೋಲು 43, ಗೆಲುವು 25), ಪಾಕಿಸ್ತಾನ (ಸೋಲು 12, ಗೆಲುವು 9), ವೆಸ್ಟ್‌ ಇಂಡೀಸ್ (ಸೋಲು 30, ಗೆಲುವು 18) ಮತ್ತು ದಕ್ಷಿಣ ಆಫ್ರಿಕಾ (ಸೋಲು 13, ಗೆಲುವು 10) ತಂಡಗಳ ವಿರುದ್ಧ ಸೋತಿರುವುದೇ ಹೆಚ್ಚು. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲೂ ಇದು ತೀರಾ ಭಿನ್ನವಾಗಿಲ್ಲ. ಆಸ್ಟ್ರೇಲಿಯಾ (ಸೋಲು 72, ಗೆಲುವು 41), ಪಾಕಿಸ್ತಾನ (ಸೋಲು 73, ಗೆಲುವು 52), ವೆಸ್ಟ್‌ ಇಂಡೀಸ್ (ಸೋಲು 61, ಗೆಲುವು 56) ಮತ್ತು ದಕ್ಷಿಣ ಆಫ್ರಿಕಾ (ಸೋಲು 45, ಗೆಲುವು 29) ತಂಡಗಳ ವಿರುದ್ಧ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ನಾವು ಸೋತಿರುವುದೇ ಹೆಚ್ಚು. ಪ್ರಮುಖ ತಂಡಗಳ ಪೈಕಿ ಇಂಗ್ಲೆಂಡ್ (ಸೋಲು 39, ಗೆಲುವು 52) ವಿರುದ್ಧ ಮಾತ್ರ ಸೋಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದೇವೆ. ಅಂದರೆ ಆಠವಲೆ ಹೇಳಿರುವುದು ಸರಿಯಾಗಿದೆ.

ನಮ್ಮ ಜನಸಂಖ್ಯೆ 130 ಕೋಟಿ (ಇದು ಕ್ರಿಕೆಟ್ ಆಟ ಆಡುವ ಉಳಿದೆಲ್ಲ ದೇಶಗಳ ಒಟ್ಟು ಜನಸಂಖ್ಯೆಯ ಎರಡರಷ್ಟಕ್ಕಿಂತ ಹೆಚ್ಚು). ಪ್ರತಿ
ಭೆಯನ್ನು ಆಧರಿಸಿದ ಪಂದ್ಯಗಳಲ್ಲಿ ನಮ್ಮ ಸಾಧನೆ ಹೀಗಿದೆ ಎಂದರೆ, ಪರಿಸ್ಥಿತಿ ಸುಧಾರಿಸಲು ಮಾರ್ಗ ಹುಡುಕುವುದು ಅಸಹಜವೇನೂ ಅಲ್ಲ. ಹೀಗೆ ಮಾಡುವ ದೇಶ ನಮ್ಮದೊಂದೇ ಆಗಿರುವುದಿಲ್ಲ.

ದಕ್ಷಿಣ ಆಫ್ರಿಕಾ ದೇಶವು ಕಳೆದ ವರ್ಷ ತನ್ನ ಕ್ರಿಕೆಟ್ ತಂಡದಲ್ಲಿ ಜನಾಂಗ ಆಧಾರಿತ ಮೀಸಲಾತಿಯನ್ನು ಜಾರಿಗೆ ತಂದಿತು. ಕ್ರಿಕೆಟ್ ತಂಡದ 11 ಜನ ಆಟಗಾರರ ಪೈಕಿ ಆರು ಜನ ಶ್ವೇತ ವರ್ಣೀಯರಲ್ಲದವರು ಇರಬೇಕು, ಇವರಲ್ಲಿ ಇಬ್ಬರು ಆಫ್ರಿಕನ್ ಕಪ್ಪುವರ್ಣೀಯರಾಗಿರಬೇಕು ಎಂಬ ನಿಯಮ ಅದು. ಇದರ ಅರ್ಥ, ಭಾರತ ಮೂಲದ ಅಥವಾ ಉಪಖಂಡ ಮೂಲದ ಹಶೀಂ ಆಮ್ಲಾ ಮತ್ತು ಇಮ್ರಾನ್ ತಾಹಿರ್ ಅವ
ರನ್ನು ಆರು ಜನರ ಕೋಟಾದ ಅಡಿ ಸೇರಿಸಿಕೊಳ್ಳಬಹುದು. ಆದರೆ ಇವರನ್ನು ಕೊನೆಯ ಇಬ್ಬರ ಕೋಟಾದಲ್ಲಿ ಸೇರಿಸಿಕೊಳ್ಳುವಂತಿಲ್ಲ. ಅವರು ಹೀಗೆ ಮಾಡಿದ್ದೇಕೆ? ಆಫ್ರಿಕನ್ ಕಪ್ಪು ವರ್ಣೀಯರು ಒಟ್ಟು ಜನಸಂಖ್ಯೆಯಲ್ಲಿ ಶೇಕಡ 80ರಷ್ಟು ಇದ್ದರೂ ಅವರಿಗೆ ಸಮಾನ ಪ್ರಾತಿನಿಧ್ಯ ಸಿಕ್ಕಿಲ್ಲ. ಅಲ್ಲಿ ಶ್ವೇತವರ್ಣೀಯರ ಪ್ರಮಾಣ ಶೇಕಡ 10ರಷ್ಟು ಮಾತ್ರವೇ ಆಗಿದ್ದರೂ ಕ್ರಿಕೆಟ್ ತಂಡದಲ್ಲಿ ಅವರ ಸಂಖ್ಯೆ ಹೆಚ್ಚು. ಇದು ಭಾರತದ ಕ್ರಿಕೆಟ್ ವೀಕ್ಷಕರಿಗೆ ಗೊತ್ತಿರುವ ಸಂಗತಿ. ಆಫ್ರಿಕಾದಲ್ಲಿ ಜನಾಂಗೀಯ ತಾರತಮ್ಯ ಇದ್ದ ಅವಧಿಯಲ್ಲಿ ಉನ್ನತ ಮಟ್ಟದ ಕ್ರಿಕೆಟ್ ತರಬೇತಿ, ಕ್ರೀಡಾ ಸೌಲಭ್ಯಗಳನ್ನು ಬಳಸಿಕೊಳ್ಳುವ ಅವಕಾಶ ಇದ್ದಿದ್ದು ಬಿಳಿಯರಿಗೆ ಮಾತ್ರ. ದಕ್ಷಿಣ ಆಫ್ರಿಕಾದ ಜನಸಂಖ್ಯೆಯಲ್ಲಿ ಶೇಕಡ 2ರಷ್ಟು ಮಾತ್ರ ಇರುವ ಭಾರತೀಯರಿಗೆ ಕೂಡ ಕ್ರಿಕೆಟ್ ತಂಡದಲ್ಲಿ ಸೂಕ್ತ ಪ್ರಾತಿನಿಧ್ಯ ಇದೆ. ಹಾಗಾಗಿ, ಅಲ್ಲಿ ಕಪ್ಪುವರ್ಣೀಯರಿಗೆ ಕೋಟಾ ಕಲ್ಪಿಸುವುದು ಅನಿವಾರ್ಯ
ವಾಗಿತ್ತು.

ಹೀಗೆ ಮೀಸಲಾತಿ ಕಲ್ಪಿಸಿದ್ದರಿಂದ ತಂಡದ ಪ್ರದರ್ಶನದ ಮೇಲೆ ಕೆಟ್ಟ ಪರಿಣಾಮ ಉಂಟಾಗಿದೆಯೇ? ಇಲ್ಲ. ದಕ್ಷಿಣ ಆಫ್ರಿಕಾ ತಂಡದವರನ್ನು ಸೋಲಿಸುವುದು ಬಹಳ ಕಷ್ಟ ಎಂಬುದನ್ನು ವಿಶ್ವದ ಇತರ ಕ್ರಿಕೆಟ್ ತಂಡಗಳು ಒಪ್ಪಿಕೊಳ್ಳುತ್ತವೆ. ದಕ್ಷಿಣ ಆಫ್ರಿಕಾ ಕ್ರಿಕೆಟ್  ತಂಡಕ್ಕೆ ನೈಜ ಪ್ರಯೋಜನ ದೊರೆಯುವುದು ಮುಂದಿನ ದಶಕಗಳಲ್ಲಿ. ಆಫ್ರಿಕನ್ ಯುವ ಕಪ್ಪುವರ್ಣೀಯರಿಗೆ ಕ್ರಿಕೆಟ್ ತಂಡದಲ್ಲಿ ರೋಲ್ ಮಾಡೆಲ್‌
ಗಳು ಸಿಗುತ್ತಾರೆ. ಈ ಯುವಕರು ಕ್ರಿಕೆಟ್‌ನತ್ತ ಆಕರ್ಷಿತರಾಗುತ್ತಾರೆ. ಇದರಿಂದಾಗಿ ಲಭ್ಯವಿರುವ ಪ್ರತಿಭಾವಂತರ ಸಂಖ್ಯೆ ಹೆಚ್ಚಾಗುತ್ತದೆ. ಮೊದಲು ಮೇಲ್ವರ್ಗದವರು ಮಾತ್ರ ಆಡುತ್ತಿದ್ದ ಕ್ರೀಡೆಯನ್ನು ಲಕ್ಷಾಂತರ ಜನ ಆಡುವಂತೆ ಆಗುತ್ತದೆ. ಇದರಿಂದಾಗಿ ರಾಷ್ಟ್ರೀಯ ತಂಡಕ್ಕೆ ಪ್ರಯೋಜನ ಸಿಗುತ್ತದೆ.

ಭಾರತದ ಒಟ್ಟು ಜನಸಂಖ್ಯೆಯಲ್ಲಿ ದಲಿತ ಹಾಗೂ ಆದಿವಾಸಿ ಸಮುದಾಯಗಳ ಪ್ರಮಾಣ ಶೇಕಡ 25ರಷ್ಟು. ಆದರೆ ಕ್ರಿಕೆಟ್ ತಂಡದಲ್ಲಿ ಅವರ ಪ್ರಾತಿನಿಧ್ಯ ಶೂನ್ಯಕ್ಕೆ ಸಮೀಪದಲ್ಲೇ ಇದೆ. ಭಾರತದ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದ ಬ್ರಾಹ್ಮಣ ಆಟಗಾರರ ಹೆಸರನ್ನು ನೆನಪಿಸಿಕೊ
ಳ್ಳುವುದು ಸುಲಭ (ಗಾವಸ್ಕರ್, ತೆಂಡೂಲ್ಕರ್, ದ್ರಾವಿಡ್,  ಶ್ರೀನಾಥ್, ಕುಂಬ್ಳೆ). ಆದರೆ, ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಆಡಿದ ಸಮಾಜದ ದುರ್ಬಲ ವರ್ಗಗಳ, ದಲಿತ ಹಾಗೂ ಆದಿವಾಸಿ ಸಮದಾಯಗಳ ಕ್ರಿಕೆಟ್ ಆಟಗಾರರನ್ನು ನೆನಪಿಸಿಕೊಳ್ಳುವುದು ಕಷ್ಟ. ಕ್ರಿಕೆಟ್ ತಂಡದಲ್ಲಿ ಶೇಕಡ 25ರಷ್ಟು ಮೀಸಲಾತಿ ಇರಬೇಕು ಎಂದು ಆಠವಲೆ ಅವರು ಹೇಳಿದ್ದಾರೆ. ಯಾವುದೋ ಕಾರಣಕ್ಕೆ ಇದನ್ನು ಒಪ್ಪಿಕೊಳ್ಳಲು ಆಗದಿದ್ದರೂ, ಈ ವಿಚಾರದ ಬಗ್ಗೆ ನಾವು ಆಲೋಚಿಸಬೇಕು, ಚರ್ಚಿಸಬೇಕು, ಮಾತುಕತೆ ನಡೆಸಬೇಕು. ಈ ವಿಚಾರವನ್ನು ಪಕ್ಕಕ್ಕೆ ತಳ್ಳುವುದಲ್ಲ.

ಎರಡನೆಯ ವಿಚಾರ ರಾಜಕೀಯದಲ್ಲಿ ಮೀಸಲಾತಿಗೆ ಸಂಬಂಧಿಸಿದ್ದು. ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯನ್ನಾಗಿ ಬಿಜೆಪಿಯು ದಲಿತ ಮುಖಂಡರೊಬ್ಬರನ್ನು ಹೆಸರಿಸಿದೆ. ಇದು ಜಾಣ ಹಾಗೂ ವಿವೇಕಯುತ ನಡೆ. ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಿರುವ ಬಿಹಾರದ ಮಾಜಿ ರಾಜ್ಯಪಾಲ ರಾಮನಾಥ್ ಕೋವಿಂದ್ ಅವರು ಈ ರಾಜಕೀಯ ನಡೆಯ ಕಾರಣದಿಂದಾಗಿ ವಿರೋಧಿ ವಿಚಾರಧಾರೆಯ ರಾಜಕೀಯ ಪಕ್ಷ
ಗಳಿಂದಲೂ ಬೆಂಬಲ ಪಡೆಯಲಿದ್ದಾರೆ. ಬೇರೆಯವರಿಗೆ ಹೋಲಿಸಿದರೆ ಅವರು ಬಿಜೆಪಿಗೆ ಬಂದಿದ್ದು ತಡವಾಗಿ (ಅವರು ತಮ್ಮ 40ರ ಪ್ರಾಯದಲ್ಲಿ ಬಿಜೆಪಿ ಸೇರಿದರು). ಬಿಜೆಪಿ ಹಾಗೂ ಆರ್‌ಎಸ್‌ಎಸ್‌, ದಲಿತರ ಜೊತೆ ಹೊಂದಿರುವ ಸುಮಧುರವಲ್ಲದ ಬಾಂಧವ್ಯವನ್ನು ಕೋವಿಂದ್ ಪ್ರತಿನಿಧಿಸುತ್ತಾರೆ. ಇದನ್ನು ಬಿಜೆಪಿಯ ದಲಿತ ಸಂಸದರಾದ ಉದಿತ್ ರಾಜ್ ಮತ್ತು ಅವರಂಥವರು ಹೇಳಬಲ್ಲರು. ಹಿಂದುತ್ವವಾದಿ ಪಕ್ಷವು ಮೀಸಲಾತಿ ಹಾಗೂ ಎಲ್ಲರನ್ನೂ ಒಳಗೊಳ್ಳುವಿಕೆಗೆ ಸಹಜವಾಗಿಯೇ ವಿರುದ್ಧವಾಗಿದೆ. ಇದನ್ನು ನಾವು ಆರ್‌ಎಸ್‌ಎಸ್‌ನ ಸರಸಂಘಚಾಲಕ ಆಗಿದ್ದವರ ಪಟ್ಟಿ ನೋಡಿ ಅರ್ಥ ಮಾಡಿಕೊಳ್ಳಬಹುದು (ಹೆಡಗೇವಾರ್,  ಗೊಳವಲ್ಕರ್, ದೇವರಸ್, ಸುದರ್ಶನ್ ಮತ್ತು ಈಗಿನ ಭಾಗ
ವತ್). ಇವರೆಲ್ಲರೂ ಬ್ರಾಹ್ಮಣರು. ಸರಸಂಘ ಚಾಲಕರಾಗಿದ್ದ ಏಕೈಕ ಬ್ರಾಹ್ಮಣೇತರ ವ್ಯಕ್ತಿ ರಾಜೇಂದ್ರ ಸಿಂಗ್ ಕೂಡ ಮೇಲ್ಜಾತಿಗೆ ಸೇರಿದವರು. ಹಿಂದುತ್ವಕ್ಕೆ ದಲಿತರೊಬ್ಬರನ್ನು ಭಾರತದ ರಾಷ್ಟ್ರಪತಿಯನ್ನಾಗಿಸುವುದು, ದಲಿತರನ್ನು ಆರ್‌ಎಸ್‌ಎಸ್‌ನ ಸರಸಂಘಚಾಲಕರನ್ನಾಗಿ
ಸುವುದಕ್ಕಿಂತ ಸುಲಭ ಎಂದು ಹೇಳಬೇಕು.

ಈ ವಾದಕ್ಕೆ ಆರ್‌ಎಸ್‌ಎಸ್‌ ಯಾವಾಗಲೂ ಮುಂದಿಡುವ ಪ್ರತಿವಾದ ಹೀಗಿದೆ: ‘ನಾವು ಜಾತಿಯನ್ನು ಕೇಳುವುದಿಲ್ಲ. ಅದನ್ನು ಗಮನಿ
ಸುವುದೂ ಇಲ್ಲ’. ‘ಒಳಗೊಳ್ಳುವಿಕೆ ನಿಮ್ಮಲ್ಲಿ ಯಾವ ಪ್ರಮಾಣದಲ್ಲಿ ಇದೆ’ ಎಂದು ಕೇಳಿದಾಗ ಕಾರ್ಪೊರೇಟ್ ವಲಯ ಹೇಳುವುದೂ ಇದೇ ಮಾತನ್ನು. ಈ ಮಾತನ್ನು ಭಾರತದ ಕ್ರಿಕೆಟ್ ತಂಡ ಕೂಡ ಹೇಳಲಿದೆ. ಆದರೆ ಇದು ತಾರತಮ್ಯದ ವಾಸ್ತವವನ್ನು, ಕೆಲವರನ್ನು ಒಳಗೊಳ್ಳದಿರು
ವುದನ್ನು ಮರೆಮಾಚುತ್ತದೆ.

ಒಳಗೊಳ್ಳುವಿಕೆ ಹಾಗೂ ವೈವಿಧ್ಯವು ದೇಶಕ್ಕೆ ಮತ್ತು ಕ್ರಿಕೆಟ್ ತಂಡಕ್ಕೆ ಮುಂದೊಂದು ಕಾಲದಲ್ಲಿ ಒಳ್ಳೆಯದನ್ನೇ ಮಾಡುತ್ತದೆ. ಹೀಗೆ ಮಾಡುವು
ದರಿಂದ ನಮ್ಮ ಕ್ರಿಕೆಟ್ ತಂಡದ ಸಾಧನೆ ಕುಸಿಯುತ್ತದೆ ಎನ್ನುವವರ ಬಳಿ ನಾನು, ‘ನಮ್ಮ ಸಾಧನೆ ಬಲಿಷ್ಠ ತಂಡಗಳ ಎದುರು ಅಷ್ಟೇನೂ ಉತ್ತಮವಾಗಿಲ್ಲ’ ಎಂದು ಅಂಕಿ-ಅಂಶಗಳ ಮೂಲಕ ಹೇಳುತ್ತೇನೆ. ಈ ವಾದಗಳನ್ನು ನಾವು ನೆಪವಾಗಿ ಬಳಸಬಾರದು. ಆಠವಲೆ ಹೇಳಿರು
ವುದನ್ನು ಗಂಭೀರವಾಗಿ ಪರಿಗಣಿಸಬೇಕು.

( ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT