ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮೂನ ಪ್ಯಾಂಟು

Last Updated 16 ಜೂನ್ 2018, 9:20 IST
ಅಕ್ಷರ ಗಾತ್ರ

ಮನೆಯಲ್ಲಿ ಅವಸರವೋ ಅವಸರ. ಬೆಳಿಗ್ಗೆ ಎಲ್ಲ ಮನೆಗಳೂ ಹಾಗೇ ಅಲ್ಲವೇ? ಎಲ್ಲರೂ ಅವರವರ ಕೆಲಸಗಳಲ್ಲಿ ತೊಡಗಿದ್ದಾರೆ. ಬೇಗ ಬೇಗ ತಯಾರಾಗಿ ಕೆಲಸಕ್ಕೆ ಹೋಗಬೇಕಲ್ಲ?ಆದರೆ ಅಂದು ರಾಮೂಗೆ ಒಂದು ಕೆಲಸಕ್ಕೆ ಸಂದರ್ಶನಕ್ಕೆ ಆಹ್ವಾನ ಬಂದಿದೆ. ಅವನಿಗೆ ಅದರ ಸಂಭ್ರಮ. ತಯಾರಿ ಎಲ್ಲ ಆಗಿದೆ. ಚೆಂದವಾಗಿ ಕಾಣಲು ಹೊಸ ಶರ್ಟು, ಪ್ಯಾಂಟು ತಂದಿದ್ದಾನೆ. ಶರ್ಟಿನ ಬಣ್ಣವೇನೋ ತುಂಬ ಚೆನ್ನಾಗಿದೆ. ಒಂದು ಬಾರಿ ಹಾಕಿಕೊಂಡು ನೋಡಿದ, ಶರ್ಟು ಚೆನ್ನಾಗಿ ಒಪ್ಪುತ್ತಿತ್ತು. ಪ್ಯಾಂಟು ಹಾಕಿಕೊಂಡ. ಅಯ್ಯೋ, ಅದು ಸುಮಾರು ಎರಡು ಇಂಚು ಉದ್ದವಾಗಿದೆ! ಅಂದೇ ಅಂಗಡಿಯಲ್ಲಿ ನೋಡಿದ್ದರೆ ಅಲ್ಲಿಯೇ ಕತ್ತರಿಸಿ ಹೊಲಿಸಿಕೊಂಡು ಬರಬಹುದಿತ್ತು. ಈಗೇನು ಮಾಡುವುದು?

ರಾಮೂ ಪ್ಯಾಂಟು ಹಿಡಿದುಕೊಂಡು ಅಡುಗೆ ಮನೆಗೆ ಓಡಿದ.‘ಅಮ್ಮಾ, ಇಂದು ಮಧ್ಯಾಹ್ನ ನನಗೆ ಸಂದರ್ಶನ ಇದೆ.ಈ ಪ್ಯಾಂಟು ಎರಡು ಇಂಚು ಉದ್ದವಾಗಿದೆ. ಅದನ್ನು ಮಡಿಚಿ ಹೊಲಿದುಕೊಡುತ್ತೀಯಾ?’ ಒಗ್ಗರಣೆ ಹಾಕುತ್ತಿದ್ದ ತಾಯಿ, ‘ಈಗ ನನ್ನನ್ನು ಮಾತನಾಡಿಸಲೇ ಬೇಡ, ಒಂದು ಸ್ವಲ್ಪವೂ ಸಮಯವಿಲ್ಲ.ಅಲ್ಲಿಯೇ ಕೋಣೆಯಲ್ಲಿಟ್ಟರು. ಆಮೇಲೆ ಕತ್ತರಿಸಿ ಸರಿಮಾಡುತ್ತೇನೆ. ಈಗ ನಡೀ ಇಲ್ಲಿಂದ’ ಎಂದು ಹೊರಡಿಸಿಬಿಟ್ಟರು.

ರಾಮೂ ಪ್ಯಾಂಟು ತೆಗೆದುಕೊಂಡು ಅಕ್ಕನ ಕೋಣೆಗೆ ಹೋದ. ಆಕೆ ಎಲ್ಲಿಗೋ ಹೊರಟ ಹಾಗಿತ್ತು. ‘ಅಕ್ಕಾ, ನನಗೆ ಅರ್ಜೆಂಟಾಗಿ ಈ ಪ್ಯಾಂಟನ್ನು ಎರಡಿಂಚು ಗಿಡ್ಡ ಮಾಡಿ ಹೊಲಿದು ಕೊಡೇ. ಇಂದು ಮಧ್ಯಾಹ್ನ ನನಗೆ ಸಂದರ್ಶನ ಇದೆ, ನಿನಗೆ ಗೊತ್ತಲ್ಲ?’ ಎಂದು ಮೂತಿ ಉದ್ದ ಮಾಡಿದ. ಆಕೆ, ‘ಮಹಾರಾಯಾ, ನೀನು ಈಗಲೇ ಬಂದೆಯಾ? ಅಲ್ಲಿಯೇ ನಿನ್ನ ಕೋಣೆಯಲ್ಲಿ ಇಟ್ಟಿರು. ನಾನೀಗ ಬ್ಯೂಟಿ ಪಾರ್ಲರ್‌ಗೆ ಹೊರಟಿದ್ದೇನೆ. ಈಗ ಸಾಧ್ಯವಿಲ್ಲ. ಆಮೇಲೆ ಮಾಡುತ್ತೇನೆ’ ಎಂದು ಕೈ ಮಾಡಿ ಹೊರಟೇಬಿಟ್ಟಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT