ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ ದಾಖಲೆ: ಬಂಡವಾಳ ಇಳಿಕೆ

Last Updated 27 ಜನವರಿ 2013, 19:59 IST
ಅಕ್ಷರ ಗಾತ್ರ

ಮುಂಬೈ ಷೇರು ವಿನಿಮಯ ಕೇಂದ್ರದ ಹೆಗ್ಗುರುತಾದ ಸೆನ್ಸೆಕ್ಸ್ ಕಳೆದ ವಾರದ ಆರಂಭದ ದಿನ (ಜ.21 ರಂದು) ಮಧ್ಯಂತರದಲ್ಲಿ 20163 ಅಂಶಗಳನ್ನು ತಲುಪಿ ವಾರ್ಷಿಕ ಗರಿಷ್ಠ ದಾಖಲಿಸಿತು. ಆದರೆ ನಂತರದ ದಿನಗಳಲ್ಲಿ ಏರಿಳಿತದ ಹಾವು - ಏಣಿಯಾಟವಾಡಿ ವಾರಾಂತ್ಯದಲ್ಲಿ ಒಟ್ಟು 64 ಅಂಶಗಳಷ್ಟು ಏರಿಕೆಯನ್ನು ಹಿಂದಿನ ವಾರದ ಅಂತ್ಯದಿಂದ, ದಾಖಲಿಸಿತು.

`ಹೆಸರು ಸಂಪತ್ತಯ್ಯ ಕಿಸೆಯಲ್ಲಿ ಕಾಸಿಲ್ಲಯ್ಯ' ಎಂಬಂತೆ ಸಂವೇದಿ ಸೂಚ್ಯಂಕ ಏರಿಕೆ ಕಂಡರೂ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕಗಳು ಷೇರುಗಳು ಹೆಚ್ಚಿನ ಮಾರಾಟದ ಒತ್ತಡವನ್ನೆದುರಿಸಿ ವಾತಾವರಣವನ್ನು ಕದಡಿದವು. ಫಲಿತಾಂಶದ ಪ್ರಭಾವದಿಂದ ಹಲವಾರು ಕಂಪೆನಿಗಳು ಏರಿಳಿತ ಪ್ರದರ್ಶಿಸಿದರೆ ಮತ್ತೆ ಕೆಲವು ಕಂಪೆನಿಗಳ ನೀತಿ ಪಾಲನೆಯಲ್ಲಿನ ರೀತಿ ಪ್ರಭಾವಿಯಾದವು. ಆಪ್ಟೋ ಸರ್ಕ್ಯುಟ್ಸ್, ಹೆಕ್ಸಾವೇರ್ ಟೆಕ್ನಾಲಜಿ ರ‌್ಯಾನಬಾಕಿಗಸಲ್ಯಾಬ್‌ಗಳು ಗಮನಾರ್ಹ ಇಳಿಕೆ ಕಂಡವು.

ಆದರೆ ಎಚ್.ಡಿ.ಐ.ಎಲ್. ಕಳೆದ ಒಂದು ವಾರದಲ್ಲಿರೂ.120ರ ಹಂತದಿಂದರೂ. 68/20ರ ವರೆಗೆ ಏಕಮುಖವಾಗಿ ಇಳಿಕೆ ಕಂಡಿತು. ಪ್ರವರ್ತಕರು ತಮ್ಮ ಭಾಗಿತ್ವದ ಷೇರನ್ನು ಮಾರಾಟ ಮಾಡಿದುದೇ ಮುಖ್ಯ ಕಾರಣ. ಹಾಗೆಯೇ ಐವಿಆರ್‌ಸಿರೂ.43 ರಿಂದರೂ. 30ರ ವರೆಗೂ ಕುಸಿದು ಚೇತರಿಸಿಕೊಂಡಿತು. ಎಕ್ಸೈಡ್ ಇಂಡಸ್ಟ್ರೀಸ್ ಕಂಪೆನಿ ಐಎನ್‌ಜಿ ಲೈಫ್‌ನ ಶೇ 50ರ ಭಾಗಿತ್ವ ಖರೀದಿಸುವ ನಿರ್ಧಾರದಿಂದ ಇಳಿದರೆ ಕೊರಮಂಡಲ್ ಇಂಟರ್‌ನ್ಯಾಶನಲ್ ಲಿಬರ್ಟಿ ಫಾಸ್ಪೇಟ್ ಕಂಪೆನಿ ಕೊಳ್ಳುವ ಕಾರಣ ಒತ್ತಡದಲ್ಲಿತ್ತು.

ಈ ಮಧ್ಯೆ ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್, ಕರ್ನಾಟಕ ಬ್ಯಾಂಕ್‌ಗಳ ಫಲಿತಾಂಶದ ನಂತರ ಕುಸಿದವು. ಟಾಟಾ ಮೋಟಾರ್, ಹಿಂದೂಸ್ಥಾನ್ ಯುನಿಲೀವರ್ ಕುಸಿತ ಕಂಡರೆ ಸಾರ್ವಜನಿಕ ತೈಲ ಕಂಪೆನಿಗಳು, ಮಾರುತಿ ಸುಜುಕಿ ಉತ್ತಮ ಏರಿಕೆ ಕಂಡವು. ಎಂದಿನಂತೆ ವಿದೇಶಿ ವಿತ್ತೀಯ ಸಂಸ್ಥೆಗಳುರೂ.4,305 ಕೋಟಿ ಹೂಡಿಕೆ ಮಾಡಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳುರೂ.3,682 ಕೋಟಿ ಮಾರಾಟ ಮಾಡಿದವು. ಪೇಟೆಯ ಬಂಡವಾಳ ಮೌಲ್ಯರೂ.71.12 ಲಕ್ಷ ಕೋಟಿಯಿಂದರೂ.70.39 ಲಕ್ಷ ಕೋಟಿಗೆ ಇಳಿದಿದೆ.

ಹೊಸ ಷೇರಿನ ವಿಚಾರ
*ವಿ- ಮಾರ್ಟ್ ರೀಟೇಲ್ ಲಿಮಿಟೆಡ್ ಕಂಪೆನಿಯು ಪ್ರತಿ ಷೇರಿಗೆರೂ. 195 ರಿಂದರೂ.215ರ ಅಂತರದಲ್ಲಿ ಷೇರುಗಳನ್ನು ಸಾರ್ವಜನಿಕ ವಿತರಣೆಗೆ ಫೆಬ್ರುವರಿ 1 ರಿಂದ 5ರ ವರೆಗೆ ಬಿಡುಗಡೆ ಮಾಡಲಿದೆ. 27.61 ಲಕ್ಷ ಹೊಸದಾಗಿ ಹಾಗು 17.35 ಲಕ್ಷ ಷೇರನ್ನು ನಮನ್ ಫೈನಾನ್ಸ್ ಅಂಡ್    ಇನ್ವೆಸ್ಟ್‌ಮೇಮಟ್ ಪ್ರೈ ಲಿ. ಪರವಾಗಿ ಮಾರಾಟ ಮಾಡಲಿದೆ.

*ಜಯ್ ಮಹೇಶ್ ಇನ್‌ಫ್ರಾವೆಂಚರ್ಸ್ ಲಿ. ಕಂಪೆನಿ ಕಲ್ಕತ್ತಾ ಸ್ಟಾಕ್ ಎಕ್ಸ್‌ಚೇಂಜ್ ಮತ್ತು ಅಹ್ಮದಾಬಾದ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ವಹಿವಾಟಾಗುತ್ತಿದ್ದು 23 ರಿಂದ `ಟಿ' ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಬಂಡವಾಳ ಕ್ರೋಡೀಕರಣ
ಗ್ಲೋಬಲ್ ಕ್ಯಾಪಿಟಲ್ ಮಾರ್ಕೆಟ್ಸ್ ಲಿ. ಕಂಪೆನಿಯರೂ.1ರ ಮುಖ ಬೆಲೆಯ 10 ಷೇರನ್ನುರೂ.10ರ ಒಂದು ಷೇರಾಗಿ ಕ್ರೋಡೀಕರಿಸಿ; ಹೊಸ ಅವತಾರದಲ್ಲಿ 25 ರಿಂದ ವಹಿವಾಟಿಗೆ ಬಿಡುಗಡೆಯಾಗಿದೆ.

ಬೋನಸ್ ಷೇರಿನ ವಿಚಾರ
* ಕನಾನಿ ಇಂಡಸ್ಟ್ರೀಸ್ ಕಂಪೆನಿ 1:10ರ ಅನುಪಾತದ ಬೋನಸ್ ಪ್ರಟಿಸಿ ಫೆಬ್ರುವರಿ 5ನ್ನು ನಿಗದಿತವಾಗಿಸಿದೆ.

*ಹಸ್ತಿ ಫೈನಾನ್ಸ್ 28 ರಂದು ಬೋನಸ್ ಷೇರು ಪ್ರಕಟಿಸಲಿದೆ.

*ವಾರನ್ ಟೀ ಕಂಪೆನಿ 30 ರಂದು ಬೋನಸ್ ಷೇರು ಪ್ರಕಟಿಸಲಿದೆ.

*ಟಿ ಗುಂಪಿನ ಅಸೀಮ್ ಗ್ಲೋಬಲ್ ಲಿ. ಕಂಪೆನಿಯು ಫೆಬ್ರುವರಿ 14 ರಂದು ಬೋನಸ್ ಷೇರು ಪ್ರಕಟಿಸಲಿದೆ.

ಲಾಭಾಂಶ ವಿಚಾರ
ಭಾರತ್ ಎಲೆಕ್ಟ್ರಾನಿಕ್ಸ್ ಶೇ 60, ಆಪ್‌ಟೆಕ್ ಶೇ 15, ಎಡೆಲ್‌ವಿಸ್ ಫೈನಾನ್ಶಿಯಲ್ ಸರ್ವಿಸಸ್ ಶೇ 55 (ಮು. ಬೆ.ರೂ.1), ಪ್ಯೆಸೆಕೊ ಶೇ 70, ಡಿಬಿ ಕಾರ್ಪ್ ಶೇ 20 (ನಿ. ದಿ. 31-10-13), ಆಟೊ ಮೊಬೈಲ್ ಕಾರ್ಪೊರೇಷನ್ ಆಫ್ ಗೋವಾ ಶೇ 25 (ನಿ. ದಿ. ಫೆಬ್ರುವರಿ 5), ಕಾರ್ ಮೊಬೈಲ್ಸ್ ಶೇ 20, ಇಂಡಿಯಾ ಬುಲ್ ಫೈನಾನ್ಶಿಯಲ್ ಸರ್ವಿಸಸ್ ಶೇ 275 (ಮು. ಬೆ.ರೂ.2), ಇಂಡಿಯಾ ಬುಲ್ ಸೆಕ್ಯುರಿಟೀಸ್ ಶೇ 50 (ಮು. ಬೆ.ರೂ.2) (ನಿ. ದಿ. ಫೆಬ್ರುವರಿ 1), ರಾಣಿ ಮದ್ರಾಸ್ ಶೇ 20 (ನಿ. ದಿ. ಫೆಬ್ರುವರಿ 2), ಸುಪ್ರೀಂ ಇಂಡಸ್ಟ್ರೀಸ್ ಶೇ 100 (ಮು. ಬೆ. ರೂ. 2), ಸನ್ ಟಿ ವಿ ನೆಟ್‌ವರ್ಕ್ ಶೇ 50 (ಮು. ಬೆ.ರೂ. 2), ಹೈದರಾಬಾದ್ ಇಂಡಸ್ಟ್ರೀಸ್ ಶೇ 75, ಎಲ್‌ಜೆಬಿ ಬ್ರದರ್ಸ್ 29 ರಂದು, ಇಂಡಿಯಾ ಇನ್‌ಪ್ಲೆ ಲೈವ್ ಮತ್ತು   ಗ್ರಿವ್ಸ್ ಕಾಟನ್ 30 ರಂದು, ಬಿ.ಎಚ್.ಇ.ಎಲ್. ಫೆ. 1 ರಂದು, ಇಐಡಿ ಪ್ಯಾರಿ 30 ರಂದು ಟ್ಯೂಬ್ ಇನ್ವೆಸ್ಟ್‌ಮೆಂಟ್ಸ್ 31 ರಂದು, ಎಂ.ಒ.ಐ.ಎಲ್. 6 ರಂದು ಲಾಭಾಂಶ ಪ್ರಕಟಿಸಲಿವೆ.

ಮುಖ ಬೆಲೆ ಸೀಳಿಕೆ ವಿಚಾರ
*ಶ್ರೀ ಶಾಲಿನ್ ಟೆಕ್ಸ್‌ಟೈಲ್ಸ್ ಕಂಪೆನಿಯು 28 ರಂದು ಮುಖ ಬೆಲೆ ಸೀಳಿಕೆ ಪರಿಶೀಲಿಸಲಿದೆ.
* ಶೇಖಾವತಿ ಪೊಲಿಯಾರ್ಸ್ ಲಿ. 31 ರಂದು ಮುಖ ಬೆಲೆ ಸೀಳಿಕೆ ಪರಿಶೀಲಿಸಲಿದೆ.
*ಸುಲಭ ಎಂಜಿನಿಯರ್ಸ್ ಅಂಡ್ ಸರ್ವಿಸಸ್ ಕಂಪೆನಿಯು ಷೇರಿನ ಮುಖ ಬೆಲೆಯನ್ನುರೂ. 10 ರಿಂದರೂ.1ಕ್ಕೆ ಸೀಳಲು ಫೆಬ್ರುವರಿ 5 ನಿಗದಿತ ದಿನವಾಗಿದೆ.

ಕಂಪೆನಿ ಸ್ವಾಧೀನ ವಿಚಾರ
ಇಪ್ಪತ್ತೆಂಟು ವೈವಿಧ್ಯಮಯ ಕಂಪೆನಿಗಳ ಸಮೂಹ ಮುರುಗಪ್ಪ ಗ್ರೂಪ್‌ನ ಕೋರಮಂಡಲ್ ಇಂಟರ್‌ನ್ಯಾಶನಲ್ ಕಂಪೆನಿಯು ಅನೇಕ ರೀತಿಯ ರಸಗೊಬ್ಬರ ಬೆಳೆ ರಕ್ಷಣೆ, ಮುಂತಾದ ವಲಯಗಳ ಚಟುವಟಿಕೆಗೆ ತೊಡಗಿಸಿ ಕೊಂಡಿದ್ದು ಈಗ ಎಸ್‌ಎಸ್‌ಪಿಯ ಪುಡಿ ಮತ್ತು ಗುಳಿಗೆಗಳ ತಯಾರಿಕೆಯ ಅತಿ ದೊಡ್ಡ ಕಂಪೆನಿ ಲಿಬರ್ಟಿ ಫಾಸ್ಪೇಟ್ ಲಿ. ಕಂಪೆನಿಯ ಶೇ 56.28ರ ಭಾಗಿತ್ವವನ್ನು ಪ್ರತಿ ಷೇರಿಗೆರೂ.241 ರಂತೆ ಕೊಳ್ಳುವ ಖಚಿತ ಒಪ್ಪಂದ ಮಾಡಿಕೊಂಡಿದೆ. ಹಾಗೂ ಸಾರ್ವಜನಿಕರಿಂದ ಇದೇ ದರದಲ್ಲಿ ಶೇ 26ರ ಭಾಗಿತ್ವ ಕೊಳ್ಳಲು ತೆರೆದ ಕರೆ ನೀಡಲು ಸಹ ಮುಂದಾಗಿದೆ. ಈ ಕಂಪೆನಿಯೊಂದಿಗೆ ಲಿಬರ್ಟಿ ಊರ್ವರಕ್, ತುಂಗಭದ್ರ ಫರ್ಟಿಲೈಜರ್ಸ್ ಅಂಡ್ ಕೆಮಿಕಲ್ಸ್ ಕಂಪೆನಿಗಳು ಸಂಪೂರ್ಣ ಭಾಗಿತ್ವವನ್ನು ತನ್ನದಾಗಿಸಿಕೊಳ್ಳಲಿದೆ. ಈ ಎಲ್ಲಾ ಸ್ವಾಧೀನ ಪ್ರಕ್ರಿಯೆಗೆ ಸುಮಾರು 348 ಕೋಟಿ ರೂಪಾಯಿಯಿಂದರೂ.375 ಕೋಟಿ ಹಣವನ್ನು ಆಂತರಿಕವಾಗಿ ವ್ಯವಸ್ಥೆ ಮಾಡಲಿದೆ. ಷೇರಿನ ಬೆಲೆಯು ಕಳೆದ ಒಂದು ವಾರದಲ್ಲಿರೂ.251ರ ಹಂತದಿಂದರೂ.224.30ರ ವರೆಗೆ ಕುಸಿದಿದ್ದು ವಾರ್ಷಿಕ ಕನಿಷ್ಠರೂ.210ರ ಹತ್ತಿರವಿದೆ. ಕಳೆದ ತ್ರೈಮಾಸಿಕ ಫಲಿತಾಂಶವು ಆಕರ್ಷಣೀಯವಾಗಿಲ್ಲ.

ಬಂಡವಾಳ ಕಡಿತ
*ಕೆಲ್‌ಟಾನ್ ಟೆಕ್‌ಸೊಲೂಷನ್ಸ್ ಕಂಪೆನಿಯಲ್ಲಿ ಟೆಕ್ರಿಟಿ ಸಾಪ್ಟ್‌ವೇರ್ ಕಂಪೆನಿ ವಿಲೀನಗೊಳಿಸಿದ ನಂತರ ಕಂಪೆನಿಯ ಬಂಡವಾಳವನ್ನು ಶೇ 90 ಕಡಿತಗೊಳಿಸಿಕೊಂಡು 24 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

*ಈ ಹಿಂದೆ ಪ್ರೈಂ ಈಸ್ಟ್ ಇನ್ವೆಸ್ಟ್‌ಮೆಂಟ್ಸ್ ಲಿ. ಎಂದಿದ್ದು 2007 ರಲ್ಲಿ ತ್ರೆಕಾಲ್ ಸರ್ವಿಸಸ್ ಲಿ. ಎಂದು ಹೆಸರು ಬದಲಿಸಿಕೊಂಡಿದ್ದು ಈಗ ಅಮಾನತ್ತಿನಲ್ಲಿರುವ ಈ ಕಂಪೆನಿಯ ಷೇರಿನ ಬಂಡವಾಳವನ್ನು ಶೇ 70 ರಷ್ಟು ಕಡಿತ ಮಾಡಿ, ರೂ. 3ರ ಮುಖ ಬೆಲೆಯ ಷೇರನ್ನು 28 ರಿಂದ ಬಾಂಬೆ ಷೇರು ವಿನಿಮಯ ಕೇಂದ್ರದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ವಾರದ ಪ್ರಶ್ನೆ
ಕರ್ನಾಟಕ ಬ್ಯಾಂಕ್‌ನ ಕಳೆದ ಡಿಸೆಂಬರ್ ಅಂತ್ಯದ ಫಲಿತಾಂಶವು ಪ್ರೋತ್ಸಾಹಕರವಾಗಿದೆ ಎಂದು ಅನಿಸಿದರೂ ಷೇರಿನ ಬೆಲೆ ಕುಸಿದಿದೆಯಲ್ಲಾ ಕಾರಣವೆನಿದೆ ದಯವಿಟ್ಟು ತಿಳಿಸಿರಿ.

ಉತ್ತರ: ಯಾವುದೇ ಕಂಪೆನಿಯ ಫಲಿತಾಂಶವನ್ನು ಪರಿಶೀಲಿಸುವಾಗ ಆ ಫಲಿತಾಂಶವು ಉತ್ತಮವಾಗಿದೆ ಎಂದು ನಿರ್ಧರಿಸಲು ಆ ಕಂಪೆನಿಯ ಹಿಂದಿನ ಫಲಿತಾಂಶದ ಅಂಕಿ ಅಂಶಗಳಿಗೆ ಹೋಲಿಸಬೇಕಾಗುತ್ತದೆ. ಈ ರೀತಿಯ ಹೋಲಿಕೆಯು ಹಿಂದಿನ ವರ್ಷದ ಅದೇ ಅವಧಿಯದಾಗಿರಬಹುದು ಅಥವಾ ಹಿಂದಿನ ತ್ರೈಮಾಸಿಕದ ಅಂಕಿ ಅಂಶಗಳಿರಬಹುದು.

ಕರ್ನಾಟಕ ಬ್ಯಾಂಕ್‌ನ ಡಿಸೆಂಬರ್ 2012ರ ತ್ರೈಮಾಸಿಕ ಫಲಿತಾಂಶವನ್ನು  ಡಿಸೆಂಬರ್ 2011ರ ತ್ರೈಮಾಸಿಕ ಫಲಿತಾಂಶಕ್ಕೆ ಹೋಲಿಕೆ ಮಾಡಿದಾಗ ಅದು ಉತ್ತಮವೆನಿಸುತ್ತದೆ. ಅಂದರೆ 2011ರ ಅಂತ್ಯದಲ್ಲಿ ರೂ.72.05 ಕೋಟಿ ಲಾಭಗಳಿಸಿತ್ತು. 2012ರ ಡಿಸೆಂಬರ್ ಅಂತ್ಯದಲ್ಲಿ ಅದು ್ಙ80.07 ಕೋಟಿಗೆ ಹೆಚ್ಚಾಗಿದೆ ಎಂಬ ಅಂಶವನ್ನು ಮಾಧ್ಯಮಗಳಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ವಿಶೇಷವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಹಾಗಾಗಿ ಹೂಡಿಕೆದಾರರು ಆನಂದ ಪಟ್ಟಿದ್ದರು. ಆದರೆ ಆ ಕ್ಷಣದಿಂದ ಷೇರಿನ ಬೆಲೆ ಕುಸಿಯ ತೊಡಗಿದೆ.

ಈ ಸಂದರ್ಭದಲ್ಲಿ ಒಂದು ಪ್ರಮುಖವಾದ ಅಂಶವನ್ನು ಗಮನಿಸಬೇಕಾಗಿದೆ ಅದೆಂದರೆ ಬ್ಯಾಂಕ್ ಸೆಪ್ಟೆಂಬರ್ 2012ರ ತ್ರೈಮಾಸಿಕದಲ್ಲಿ ರೂ.117.19 ಕೋಟಿ ಲಾಭಗಳಿಸಿತ್ತು. ಆದರೆ ನಂತರದ ತ್ರೈಮಾಸಿಕ ಡಿಸೆಂಬರ್ 2012 ರಲ್ಲಿ ಲಾಭಗಳಿಕೆಯು ರೂ.80.07 ಕೋಟಿಗೆ ಕುಸಿದಿದೆ. ಇದು ಮಾರಾಟದ ಒತ್ತಡಕ್ಕೆ ದಾರಿಯಾಗಿದೆ. ಸಾಮಾನ್ಯ ಹೂಡಿಕೆದರರ ಚಿಂತನೆಯನ್ನು ಬಂಡವಾಳವನ್ನಾಗಿಸಿಕೊಂಡು ಸಂದರ್ಭದ ಲಾಭ ಪಡೆದಂತಾಗಿದೆ.

ಮತ್ತೊಂದು ವಿಷಯವೆಂದರೆ ಈ ಬ್ಯಾಂಕ್ ಹಿಂದೆ ಹಕ್ಕಿನ ಷೇರು ಯೋಜನೆಯನ್ನು ಕೈಬಿಟ್ಟ ಸುದ್ದಿಯಿಂದ ್ಙ70ರ ಸುಮಾರಿನಿಂದ ರೂ.190ರ ವರೆಗೂ ಜಿಗಿದಿದ್ದು, ಈಗ ಫಲಿತಾಂಶ ಪ್ರಕಟಗೊಳ್ಳುತ್ತಿದ್ದ ಹಾಗೆ ಲಾಭದ ನಗದೀಕರಣಕ್ಕೆ ಮುಂದಾಗಿರುವುದು ಈ ಇಳಿಕೆಗೆ ಕಾರಣವಾಗಿರಲು ಸಾಧ್ಯವಿದೆ. ಒಟ್ಟಿನಲ್ಲಿ ಪ್ರಕಟವಾದ ಎಲ್ಲಾ ಆಂಶಗಳನ್ನು ತುಲನಾತ್ಮಕವಾಗಿ ಪರಿಶೀಲಿಸಿ ನಂತರ ಸೂಕ್ತವಾಗಿ ಸ್ಪಂದಿಸುವುದು ಇಂದಿನ ಅವಶ್ಯಕತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT