ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದುಬ್ಬರ ಮತ್ತು ಅನಿಶ್ಚಿತತೆ..!

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಷೇರುಪೇಟೆಯ ದೃಷ್ಟಿಯಿಂದ ಕಳೆದ ದೀಪಾವಳಿಯ ನಂತರ ಆರಂಭವಾದ `ಶೂನ್ಯಮಾಸ~ ಈ ದೀಪಾವಳಿಯವರೆಗೂ ಮುಂದುವರೆದಿದ್ದು, ನಕಾರಾತ್ಮಕ ಅಂಶಗಳಿಂದ ತುಳುಕುತ್ತಿದೆ. ಕಂಪೆನಿಗಳು ಪ್ರಕಟಿಸುತ್ತಿರುವ ಫಲಿತಾಂಶಗಳು ಆಶಾದಾಯಕವಾಗಿಲ್ಲದ ಕಾರಣ ಅಗ್ರಮಾನ್ಯ ಕಂಪೆನಿಗಳು ಸ್ಥಿರತೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.
 
ಈ ಮಧ್ಯೆ ಡಾಲರ್ ಬೆಲೆಯು ್ಙ50ನ್ನು  ದಾಟಿದೆ. ಹಣದುಬ್ಬರದ ಪ್ರಮಾಣ ದಾಖಲೆ ಮಟ್ಟಕ್ಕೆ ತಲುಪಿದ್ದು, ಅಕ್ಟೋಬರ್ 25 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಲಿರುವ ಹಣಕಾಸು ಪರಾಮರ್ಶೆಯ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಮತ್ತೊಮ್ಮೆ `ಆರ್‌ಬಿಐ~ ಬಡ್ಡಿ ದರ ಹೆಚ್ಚಿಸಿದರೂ ಅಚ್ಚರಿಯಲ್ಲ.

ಸಾಲದ ಮರುಪಾವತಿ ಮುಂಗಡವಾಗಿ ಮಾಡಿದರೆ ದಂಡ ವಿಧಿಸಬಾರದೆಂಬ ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನಿರ್ದೇಶನದ ಕಾರಣ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಮಾರಾಟದ ಒತ್ತಡವನ್ನೆದುರಿಸಿತು.

ಎಕ್ಸೈಡ್ ಇಂಡಸ್ಟ್ರೀಸ್ ಮತ್ತು ಕ್ರಾಂಪ್ಟನ್ ಗ್ರೀವ್ಸ್‌ಗಳು ಪ್ರಕಟಿಸಿದ ಕಳಪೆ ಫಲಿತಾಂಶ ಷೇರಿನ ಬೆಲೆಕುಸಿಯುವಂತೆ ಮಾಡಿತು. ಚಂಬಲ್ ಫರ್ಟಿಲೈಸರ್ಸ್ ಕಂಪೆನಿಯು ನೌಕಾ ವಿಭಾಗ ಬೇರ್ಪಡಿಸುವಿಕೆಯನ್ನು ಕೈಬಿಟ್ಟ ಕಾರಣ ಮಾರಾಟದ ಒತ್ತಡಕ್ಕೆ ಬಲಿಯಾಯಿತು. ರಾಜೇಶ್ ಎಕ್ಸ್‌ಪೋರ್ಟ್ ಸೋಮವಾರದಂದು, `ದಂತೆರಾಸ್~ದ ಕಾರಣ ಕರ್ನಾಟಕದಾದ್ಯಂತ 25 ಷೋರೂಂಗಳನ್ನಾರಂಭಿಸುವ ಕಾರಣ ಚುರುಕಾದ ಚಟುವಟಿಕೆಯಲ್ಲಿತ್ತು.

ಕಳೆದ ವಾರ ಸೂಚ್ಯಂಕ ಒಟ್ಟಾರೆ 297ಅಂಶಗಳಷ್ಟು ಕುಸಿತ ದಾಖಲಿಸಿತು. ಮಧ್ಯಮ ಶ್ರೇಣಿ ಸೂಚ್ಯಂಕ 78  ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕ 82 ಅಂಶಗಳಷ್ಟು ಇಳಿಕೆಯಾಗಿವೆ. ವಿದೇಶಿ  ವಿತ್ತೀಯ ಸಂಸ್ಥೆಗಳು ಒಟ್ಟಾರೆ ್ಙ626 ಕೋಟಿಯಷ್ಟು ಮಾರಾಟ ಮಾಡಿದರೆ, ಸ್ಥಳೀಯ ವಿತ್ತೀಯ ಸಂಸ್ಥೆಗಳೂ ಸಹ ್ಙ600 ಕೋಟಿ ಮೌಲ್ಯದ ಷೇರನ್ನು ಮಾರಾಟ ಮಾಡಿದವು.  ಇವೆರಡೂ ವಲಯಗಳು ಒಂದೇ ದಿಶೆಯಲ್ಲಿ ಸಾಗಿದ್ದು ವಿಶೇಷ. ಷೇರುಪೇಟೆಯ ಬಂಡವಾಳೀಕರಣ ಮೌಲ್ಯವು ್ಙ66.88 ಲಕ್ಷ ಕೋಟಿಯಿಂದ ್ಙ59.98 ಲಕ್ಷ ಕೋಟಿಗೆ ಕುಸಿದಿದೆ.

ಲಾಭಾಂಶ ವಿಚಾರ
ಕ್ರಿಸಿಲ್ ಶೇ 275 (ಮುಖಬೆಲೆ ್ಙ1), ಕ್ರಾಂಪ್ಟನ್ ಗ್ರೀವ್ಸ್ ಶೇ 40 (ಮುಖಬೆಲೆ ್ಙ 2), ಎಕ್ಸೈಡ್ ಇಂಡಸ್ಟ್ರೀಸ್ ಶೇ 90 (ಮುಖಬೆಲೆ ್ಙ1), ಹಿಂದೂಸ್ತಾನ್ ಝಿಂಕ್ ಶೇ 75 (ಮುಖಬೆಲೆ ್ಙ 2), ಹೆಕ್ಸಾವೇರ್ ಟೆಕ್ನಾಲಜಿ ಶೇ 50 (ಮುಖಬೆಲೆ ್ಙ2), ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 200 (ಮುಖಬೆಲೆ ್ಙ 2), ಕೇವಲ್ ಕಿರಣ್ ಕ್ಲಾತಿಂಗ್ ಶೇ 70, ಮೈಂಡ್ ಟ್ರೀ ಶೇ 25, ಎಂಆರ್‌ಎಫ್ ಶೇ 30, ನೆಲ್‌ಕ್ಯಾಸ್ಟ್ ಶೇ 50 (ಮು.ಬೆ. ್ಙ1),

 ನವೀನ್ ಪ್ಲೊರಿನ್ ಇಂಟರ್‌ನ್ಯಾಷನಲ್ ಶೇ 85, ರ‌್ಯಾಲೀಸ್ ಇಂಡಿಯಾ, ಶೇ 100 (ಮು.ಬೆ ್ಙ1), ಟಾಟಾ ಕನ್ಸಲ್ಟನ್ಸಿ ಶೇ 300 (ಮು.ಬೆ. ್ಙ1 ನಿಗದಿತ ದಿನ: 29.10.11), ಗೋದ್ರೇಜ್ ಕನ್ಸೂಮರ್ ಪ್ರಾಡಕ್ಟ್ಸ್ ಶೇ 100 (ಮು.ಬೆ. ್ಙ1), ಏಷಿಯನ್ ಪೇಂಟ್ಸ್ ಶೇ 95 ಓರಿಯಂಟಲ್ ಕಾರ್ಬನ್ ಶೇ 20 ಇಂಗರ್‌ಸಾಲ್ ರ‌್ಯಾಂಡ್ ಶೇ 30, ಗ್ರೀವ್ಸ್ ಕಾಟನ್ ಶೇ 20 (ಮು.ಬೆ. ್ಙ2), ಫೊಸೆಕೊ ಶೇ 50.

ಬೋನಸ್ ಡಿಬೆಂಚರ್ ವಿಚಾರ
ಕೋರಮಂಡಲ್ ಇಂಟರ್‌ನ್ಯಾಷನಲ್ ಕಂಪೆನಿಯು ತನ್ನ 50ನೇ ವರ್ಷ ಪೂರೈಸಿದ ಸಂದರ್ಭದಲ್ಲಿ ತನ್ನ ಷೇರುದಾರರಿಗೆ ್ಙ15 ಮುಖಬೆಲೆಯ ಡಿಬೆಂಚರ್‌ಗಳನ್ನು ಬೋನಸ್ ರೂಪದಲ್ಲಿ, 1:1ರ ಅನುಪಾತದಲ್ಲಿ ವಿತರಿಸಲಿದೆ. ಈ ಡಿಬೆಂಚರ್‌ಗಳು ಶೇ 9 ರವರೆಗೂ ಬಡ್ಡಿ ಗಳಿಸಲಿವೆ.

ಡಿಬೆಂಚರ್ ವಿತರಣೆಗೆ ಸಾಮಾನ್ಯ ಮೀಸಲು ನಿಧಿಯಿಂದ ಪಡೆಯುವ ಹಣಕ್ಕೆ ತಗಲುವ ಲಾಭಾಂಶ ವಿತರಣೆ ತೆರಿಗೆಯನ್ನೂ ಕಂಪೆನಿ ಭರಿಸಲಿದ್ದು ಒಟ್ಟು ್ಙ 495 ಕೋಟಿ ಹಣವನ್ನು ಮೀಸಲು ನಿಧಿಯಿಂದ ಭರಿಸಲಾಗುವುದು.

ಮುಖಬೆಲೆ ಸೀಳಿಕೆ ವಿಚಾರ
*ಕ್ರೊನಿಮೆಟ್ ಅಲಾಯ್ಸ ಷೇರಿನ ಮುಖಬೆಲೆಯನ್ನು ್ಙ10 ರಿಂದ ್ಙ 2ಕ್ಕೆ ಸೀಳಲು  ನವೆಂಬರ್ 4 ನಿಗದಿತ ದಿನವಾಗಿದೆ.

*ವಿಐಪಿ ಇಂಡಸ್ಟ್ರೀಸ್ ಷೇರಿನ ಮುಖಬೆಲೆಯನ್ನು ್ಙ10 ರಿಂದ ್ಙ2ಕ್ಕೆ ಸೀಳಲು ನವೆಂಬರ್ 1 ನಿಗದಿತ ದಿನವಾಗಿದೆ.

*ಸಿಂಫೋನಿ ಲಿ. ಕಂಪೆನಿ ಷೇರಿನ ಮುಖಬೆಲೆಯನ್ನು ್ಙ 10 ರಿಂದ ್ಙ2ಕ್ಕೆ ಸೀಳಲಿದೆ.

ಅಮಾನತು ತೆರವಿನ ನಂತರ ವಹಿವಾಟಿಗೆ ಬಿಡುಗಡೆ
*ಪ್ರೈಮ್ ಆಗ್ರೊ ಲಿ. ಕಂಪೆನಿಯು 2003ರ ಮಾರ್ಚ್‌ನಿಂದ ಅಮಾನತ್ತಿನಲ್ಲಿರುವ ಕಂಪೆನಿಯಾಗಿದ್ದು ಈಗ ಅಮಾನತ್ತನ್ನು ಹಿಂತೆಗೆದುಕೊಂಡ ಕಾರಣ 21 ರಿಂದ `ಟಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

*ಫೆಬ್ರುವರಿ 2003 ರಿಂದ ಅಮಾನತ್ತಿನಲ್ಲಿರುವ ಕೆನಾಲ್ ಆಯಿಲ್ ಅಂಡ್  ಎಕ್ಸ್‌ಪೋರ್ಟ್ ಇಂಡಸ್ಟ್ರೀಸ್ ಲಿ. ಕಂಪೆನಿಯ ಮೇಲಿನ ಅಮಾನತ್ತನ್ನು ತೆರವುಗೊಳಿಸಿದ ಕಾರಣ 21 ರಿಂದ `ಟಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

*ಮಲ್ಟಿಪರ್ಪಸ್ ಟ್ರೇಡಿಂಗ್ ಅಂಡ್ ಏಜೆನ್ಸೀಸ್ ಲಿ. ಕಂಪೆನಿಯ ಮೇಲೆ ಸೆಪ್ಟೆಂಬರ್ 2007 ರಿಂದ ವಿಧಿಸಿದ್ದ ಅಮಾನತ್ತು ತೆರವುಗೊಳಿಸಿದ ಕಾರಣ 28 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

*2002ರ ಅಕ್ಟೋಬರ್‌ನಿಂದ ಅಮಾನತ್ತಿನಲ್ಲಿರುವ ಅಡಿ ರಸಾಯನ್ ಲಿ. ಅಮಾನತು ತೆರವುಗೊಳಿಸಿದ ಕಾರಣ 28 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಹೊಸ ಷೇರಿನ ವಿಚಾರ
*ಎಂ ಅಂಡ್ ಬಿ. ಸ್ವಿಚ್‌ಗೇರ್ ಲಿ. ಕಂಪೆನಿಯು ಪ್ರತಿ ಷೇರಿಗೆ ್ಙ186 ರಂತೆ ಸಾರ್ವಜನಿಕ ವಿತರಣೆ ಮಾಡಿದ್ದು 20 ರಂದು `ಬಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ. ್ಙ118.65 ರಿಂದ ್ಙ356 ರವರೆಗೆ ಏರಿಳಿತ ಕಂಡು, ್ಙ380 ರಲ್ಲಿ ವಾರಾಂತ್ಯ ಕಂಡಿತು.

*ಇತ್ತೀಚೆಗೆ ಪ್ರತಿ ಷೇರಿಗೆ ್ಙ 100 ರಂತೆ ಸಾರ್ವಜನಿಕ ವಿತರಣೆ ಮಾಡಿದ ಒನ್‌ಲೈಫ್ ಕ್ಯಾಪಿಟಲ್ ಅಡ್ವೈಸರ್ಸ್ ಲಿ. ಕಂಪೆನಿಯು 17 ರಂದು `ಬಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿ ಆರಂಭದ ದಿನ ್ಙ114 ರಿಂದ ್ಙ173ರವರೆಗೂ ಏರಿಳಿತ ಕಂಡು ್ಙ199.60 ರಲ್ಲಿ ವಾರಾಂತ್ಯ ಕಂಡಿತು.

*ತಕ್ಷೀಲ್ ಸೊಲೂಷನ್ಸ್ ಲಿ. ಕಂಪೆನಿಯು ಪ್ರತಿ ಷೇರಿಗೆ ್ಙ 150 ರಂತೆ ಸಾರ್ವಜನಿಕ ವಿತರಣೆ ಆಡಿದ್ದು 19 ರಂದು ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿ ಆರಂಭದ ದಿನ ್ಙ38.50 ರಿಂದ ್ಙ185 ರವರೆಗೂ ಏರಿಳಿತ ಪ್ರದರ್ಶಿಸಿ ್ಙ 35.80 ರಲ್ಲಿ ವಾರಾಂತ್ಯ ಕಂಡಿತು.

  * ಫ್ಲೆಕ್ಸಿಟಫ್ ಇಂಟರ್‌ನ್ಯಾಷನಲ್ ಲಿ. ಕಂಪೆನಿಯು ಪ್ರತಿ ಷೇರಿಗೆ ್ಙ 155 ರಂತೆ ಸಾರ್ವಜನಿಕ ಷೇರು ವಿತರಣೆ ಮಾಡಿದ್ದು 19 ರಿಂದ ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿ ಆರಂಭದ ದಿನ ್ಙ 142 ರಿಂದ ್ಙ185.40 ರವರೆಗೂ ಏರಿಳಿತ ಕಂಡು ್ಙ159.35 ರಲ್ಲಿ ವಾರಾಂತ್ಯ ಕಂಡಿತು.

ವಾರದ ಪ್ರಶ್ನೆ

ಚಿಕ್ಕಬಳ್ಳಾಪುರದ ಜಿಲ್ಲೆಯವನಾದ ನನಗೆ, ನನ್ನ ಸ್ನೇಹಿತರೊಬ್ಬರು ಷೇರುಪೇಟೆಯಲ್ಲಿ ಹಣ ತೊಡಗಿಸಲು ಪ್ರೇರೇಪಿಸಿ ್ಙ 10  ಸಾವಿರ ತೊಡಗಿಸಿದಲ್ಲಿ ಒಂದೆರಡು ವರ್ಷಗಳಲ್ಲಿ ್ಙ1 ಲಕ್ಷವಾಗುವುದು ಎನ್ನುತ್ತಾರೆ. ಇದು ಸಾಧ್ಯವೆ ದಯವಿಟ್ಟು ವಿವರಿಸಿರಿ?ಉತ್ತರ: ಷೇರು ಪೇಟೆಯಲ್ಲಿನ ವಿಸ್ಮಯಕಾರಿ ಗುಣವೆಂದರೆ ಅನಿರೀಕ್ಷಿತವಾದ ರೀತಿಯಲ್ಲಿ ಘಟನೆಗಳು ಸಂಭವಿಸುವುದಾಗಿದೆ.

ಆದರೆ ಅದನ್ನು ಮೊದಲೇ ನಿರ್ಧರಿಸಿ ಪೇಟೆಯು ಇದೇ ದಿಶೆಯಲ್ಲಿ ಸಾಗುತ್ತದೆ ಎಂದು ನಿಖರವಾಗಿ ಅಂದಾಜಿಸುವುದು ಖಂಡಿತ ಸಾಧ್ಯವಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸುತ್ತಲೂ ನಕಾರಾತ್ಮಕ ಬೆಳವಣಿಗೆಗಳು ಆವರಿಸಿಕೊಂಡಿರುವುದು, ನಿಮ್ಮ ಆಸೆ ಈಡೇರುವುದು ಅಸಾಧ್ಯವೆನ್ನುವಂತಾಗಿದೆ.

ಈ ರೀತಿಯ ಆಸೆಗಳನ್ನು ತುಂಬಿಕೊಂಡು ಪೇಟೆ ಪ್ರವೇಶಿಸಿದಲ್ಲಿ ನಿರಾಶೆಯೇ ಹೆಚ್ಚಾಗುವುದು. ಮ್ಯೂಚುವಲ್ ಫಂಡ್‌ಗಳಾಗಲಿ, ವಿದೇಶಿ ವಿತ್ತೀಯ ಸಂಸ್ಥೆಗಳಾಗಲಿ ತಾವು ಹೊಂದಿರುವ ಸವಲತ್ತುಗಳು, ವಿಶ್ಲೇಷಕರ ಭಂಡಾರ, ಪಾರಿಭಾಷಿಕ ವಿಧಾನಗಳಿಂದ ಪೇಟೆಯ ದಿಶೆಯನ್ನು ಅರಿಯಲಾಗದೆ ಈಕ್ವಿಟಿಗಿಂತ ಸಾಲಪತ್ರಗಳೇ ಮೇಲು ಎಂದು ಅಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ಎಲ್‌ಐಸಿ ಮನಿಪ್ಲಸ್‌ನಲ್ಲಿ ಹೂಡಿಕೆ ಮಾಡುವಾಗ ತುಂಬಿದ್ದ ಆಸೆ ಇಂದು ಸಂಪೂರ್ಣ ನಿರಾಸೆಗೆ ತುತ್ತಾಗಬೇಕಿದೆ. ಅಂದರೆ ಪೇಟೆಯಲ್ಲಾಗುತ್ತಿರುವ ಬದಲಾವಣೆಗಳು ತೀರಾ ಅನಿಶ್ಚಿತ ಹಾಗೂ ಅನಪೇಕ್ಷಿತ ಮಟ್ಟದಲ್ಲಿರುವುದರಿಂದ ಹತ್ತು ಸಾವಿರವನ್ನು ಒಂದು ಲಕ್ಷ ಮಾಡಲು ಪ್ರಯತ್ನಿಸುವುದು ಅತಿಯಾಸೆ ಎನ್ನಬಹುದಾಗಿದೆ.

ಪರ್ಯಾಯವಾಗಿ ಒಂದು ಲಕ್ಷ ಹತ್ತು ಸಾವಿರವಾಗುವುದು ಅತಿ ಸುಲಭ ಎನ್ನುವ ರೀತಿ ಇಂದಿನ ಪೇಟೆಸಾಗಿದೆ. ಮುಖ್ಯವಾಗಿ ಷೇರುಪೇಟೆಯ ಚಟುವಟಿಕೆಯಲ್ಲಿ ಗ್ಯಾರಂಟಿಯಾಗಿ ಇಂತಿಷ್ಟೇ ಇಳುವರಿ ಗಳಿಸಿಕೊಡುತ್ತೇವೆಂದು ಆಶ್ವಾಸನೆ ಕೊಡುವುದು ನಿಯಮಬಾಹಿರವಾಗಿರುತ್ತದೆ.

ಸಹಜ ಇಳುವರಿ ದೃಷ್ಟಿಯಿಂದ ಸುರಕ್ಷಿತ ಮಾದರಿಯ ಹೂಡಿಕೆ ಮಾಡಿರಿ. ಪೇಟೆ ನಿಮ್ಮ ಆಸೆ ಈಡೇರಿಸಿದರೆ ಅವಕಾಶ ಉಪಯೋಗಿಸಿಕೊಳ್ಳಿ. ಆದರೆ, ಆ ಆಸೆ ಈಡೇರಿಕೆ ಉದ್ದೇಶಕ್ಕಾಗಿ ಹೂಡಿಕೆ ಮಾಡಬೇಡಿರಿ. ಇರುವ ಹಣವೂ ಕರಗಬಹುದು.
 

ಗೃಹ ಸಾಲದ ವಿಚಾರ

ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಗೃಹಸಾಲದ ಕಂಪೆನಿಗಳಿಗೆ, ಅವಧಿಗೆ ಮುನ್ನ ಸಾಲ ತೀರಿಸಿದಲ್ಲಿ ವಿಧಿಸಲಾಗುತ್ತಿದ್ದ ದಂಡವನ್ನು ಹಿಂತೆಗೆದುಕೊಳ್ಳಲು ನಿರ್ದೇಶಿಸಿದ ಕಾರಣ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಮತ್ತು ಹೆಚ್‌ಡಿಎಫ್‌ಸಿಗಳು ಗುರುವಾರದಂದು ಕುಸಿತ ಕಂಡವು. ಹಣದುಬ್ಬರದ ಕಾರಣ ಹೆಚ್ಚಾದ ಬಡ್ಡಿ ಹಣದ ಹೊರೆಯಿಂದ ಅಲ್ಪಮಟ್ಟಿಗೆ ಅನುಕೂಲಕರವಾಗಲೆಂಬ ಕಾರಣ ಎಸ್‌ಬಿಐ ಗೃಹಸಾಲದ ಅವಧಿಯನ್ನು 20 ವರ್ಷದಿಂದ 30 ವರ್ಷಗಳ ಗರಿಷ್ಠ ಅವಧಿಯವರೆಗೂ ವಿಸ್ತರಿಸಿದೆ.

98863-13380 
(ಮಧ್ಯಾಹ್ನ 4.30ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT